NEWS

Bengaluru: ನಾಯಿ ಮಾಂಸ ಕೇಸ್! ಅರೆಸ್ಟ್ ವೇಳೆ ಪುನೀತ್ ಕೆರೆಹಳ್ಳಿ ತೀವ್ರ ಅಸ್ವಸ್ಥ, ವೀಲ್ ಚೇರ್ ನಲ್ಲಿ ಆಸ್ಪತ್ರೆಗೆ!

ಪುನೀತ್ ಕೆರೆಹಳ್ಳಿ ಬಂಧನ ಬೆಂಗಳೂರು: ರಾಜಸ್ತಾನದಿಂದ ಬೆಂಗಳೂರಿನ (Bengaluru) ಮೆಜೆಸ್ಟಿಕ್ ರೈಲ್ವೆ ಸ್ಟೇಷನ್‌ಗೆ (Majestic Railway Station ) ಬಂದಿದ್ದ 90 ಮಾಂಸದ ಬಾಕ್ಸ್‌ಗಳಲ್ಲಿ ನಾಯಿ ಮಾಂಸ ಇದೆ ಎಂಭ ಆರೋಪ ಕೇಳಿ ಬಂದಿದೆ. ಹಿಂದೂಪರ ಸಂಘಟನೆಗಳ (Pro-Hindu organisations) ಆರೋಪದ ಮೇಲೆ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಮಾಂಸವನ್ನ ಸೀಜ್ ಮಾಡಿ ಲ್ಯಾಬ್‌ಗೆ ಕಳಿಸಿದ್ದಾರೆ. ಉದ್ಯಮಿ ಅಬ್ದುಕ್ ರಜಾನ್ (Businessman Abdul Razan) ಅನ್ನೋರು ಈ ನಾಯಿ ಮಾಂಸವನ್ನ ತರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಅರು ನಾಯಿ ಮಾಂಸವಲ್ಲ, ಕುರಿ ಮಾಂಸ (Meat) ಎಂದು ಅಬ್ದುಲ್ ರಜಾಕ್ ಹೇಳಿದ್ದಾರೆ. ಇದೇ ವಿಚಾರಕ್ಕೆ ಒಂದಿಷ್ಟು ಮಾತಿನ ಚಕಮಕಿ ಆಗಿದೆ. ಲ್ಯಾಬ್ ರಿಪೋರ್ಟ್ ಬಂದ ಬಳಿಕ ಮಾಂಸದ ಅಸಲಿಯತ್ತು ಬಯಲಾಗಲಿದೆ. ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ಒಟ್ಟು 90 ಥರ್ಮಾಕೋಲ್ ಬಾಕ್ಸ್ ಗಳು ಸೀಜ್ ಮಾಡಲಾಗಿದೆ. ಒಂದೊಂದರಲ್ಲಿ 30ರಿಂದ 40ಕೆಜಿ ಮಾಂಸ ತರಿಸಲಾಗಿತ್ತು ಎನ್ನಲಾಗಿದ್ದು, ಒಂದೊಂದು ಬಾಕ್ಸ್ ಗಳಲ್ಲಿ ಒಂದೊಂದು ರೀತಿಯ ಮಾಂಸ ಪಾರ್ಸೆಲ್ ಮಾಡಲಾಗಿದೆಯಂತೆ. ಒಂದು ಬಾಕ್ಸ್ ನಲ್ಲಿ ತಲೆ, ಮತ್ತೊಂದು ಬಾಕ್ಸ್ ನಲ್ಲಿ ದೇಹ, ಒಂದೊಂದು ಬಾಕ್ಸ್ ನಲ್ಲಿ ಕಾಲು ಗಳು ಪತ್ತೆಯಾಗಿದೆ. ಎಲ್ಲದರ ಬಗ್ಗೆ ಮಾಹಿತಿ ಪಡೆದಿರುವ ಆಹಾರ ಇಲಾಖೆ, ಪೊಲೀಸರ ಭದ್ರತೆಯಯಲ್ಲಿ ಕೋಲ್ಡ್ ಸ್ಟೋರೇಜ್ ಗೆ ನಾಲ್ಕು ವಾಹನಗಳ ಮೂಲಕ ರವಾನೆ ಮಾಡಲಾಗಿದೆ. ಪೊಲೀಸರ ವಶದಲ್ಲಿದ್ದ ಮಾಂಸ ಸಾಗಾಟದ ನಾಲ್ಕು ವಾಹನಗಳನ್ನು ಮೆಜೆಸ್ಟಿಕ್ ನಿಂದ ಕೋಲ್ಡ್ ಸ್ಟೋರೇಜ್ ಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: Success Story: ಒಂದೇ ಜಿಲ್ಲೆಯಲ್ಲಿ IAS, IPS; ಜನ ಸೇವೆಯೇ ಮೂಲಕ ಖ್ಯಾತಿ ಪಡೆದ ದಂಪತಿಯ ಕ್ಯೂಟ್ ಲವ್ ಸ್ಟೋರಿ ಬೇರೆ ರಾಜ್ಯದಿಂದ ಬೆಂಗಳೂರಿಗೆ ಮಾಂಸ ಸಾಗಾಟ ಪ್ರಕರಣದ ಸಂಬಂಧ ಕಾಟನ್ ಪೇಟೆ ಪೊಲೀಸರು ಬಿಎನ್ಎಸ್ 132 ಆ್ಯಕ್ಟ್ (ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿ), 351 (2) ಅಡಿಯಲ್ಲಿ ಪುನೀತ್ ಕೆರೆಹಳ್ಳಿ ಬಂಧನ ಮಾಡಿದ್ದಾರೆ. ಈ ನಡುವೆ ಪೊಲೀಸ್ ಠಾಣೆಯಲ್ಲಿ ಅಸ್ವಸ್ಥಗೊಂಡಿದ್ದ ಪುನೀತ್ ನನ್ನು ತಕ್ಷಣ ಪೊಲೀಸ್ ಠಾಣೆಯಿಂದ ಕೆ.ಸಿ.ಜನರಲ್ ಆಸ್ಪತ್ರೆಗೆ ವೀಲ್ ಚೇರ್ ನಲ್ಲಿ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಈ ವೇಳೆ ಪುನೀತ್ ಕೆರೆಹಳ್ಳಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು ಎನ್ನಲಾಗಿದೆ. (ವರದಿ: ಆಶಿಕ್ ಮುಲ್ಕಿ, ನ್ಯೂಸ್ 18 ಕನ್ನಡ, ಬೆಂಗಳೂರು) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.