NEWS

Singer: ಪ್ರೈವೇಟ್ ಟ್ರೈನ್​ ಹೊಂದಿದ್ದ ಈಕೆಯೇ ಭಾರತದ ಮೊದಲ ಕೋಟ್ಯಾಧಿಪತಿ ಗಾಯಕಿ! 600 ಹಾಡು ಹಾಡಿದ ಈ ಸಿಂಗರ್​ ಇದ್ದಿದ್ದು ವೇಶ್ಯಾಗೃಹದಲ್ಲಿ!

ಹಲವು ದಶಕಗಳ ಹಿಂದೆ ಕೋಟಿ ಸಂಭಾವನೆ (Remuneration) ಪಡೆಯುತ್ತಿದ್ದ ಗಾಯಕಿ (Singer) ಬಗ್ಗೆ ನಿಮಗೆ ತಿಳಿದಿದೆಯೇ? ಆಕೆ ವೇಶ್ಯೆ ಆಗಿಯೂ ಕೂಡ ಸಂಗೀತದಲ್ಲಿ ಮಹಾನ್‌ ಸಾಧನೆ ಮಾಡಿರುವುದು ಅಪರೂಪದಲ್ಲಿ ಅಪರೂಪ ಎಂದೇ ಹೇಳಬಹುದು. ಈ ಸಂಗೀತ ಎನ್ನುವುದು ಕೇವಲ ಮಡಿವಂತರಿಗೆ ಮಾತ್ರ ಎನ್ನುವ ಭ್ರಮೆಯ ಕಾಲದಲ್ಲಿ ಈ ಗಾಯಕಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಠುಮ್ರಿ, ದಾದ್ರಾ ಮತ್ತು ಕಜ್ರಿಯಲ್ಲಿ ತನ್ನ ಅಪಾರ ಪ್ರತಿಭೆಯ ಮೂಲಕ ಖ್ಯಾತಿಯನ್ನು ಪಡೆದಳು. ಭಾರತೀಯ ಶಾಸ್ತ್ರೀಯ ಸಂಗೀತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಗೌಹರ್ ಜಾನ್ ಅವರು ಕೇವಲ 13 ವರ್ಷದವಳಿದ್ದಾಗ ಲೈಂಗಿಕ ದೌರ್ಜನ್ಯವನ್ನು ಎದುರಿಸಿದರು ಎಂಬುದು ಗಮನಿಸಬೇಕಾದ ಸಂಗತಿ. ಗೌಹರ್, ಈ ಆಘಾತದಿಂದ ಚೇತರಿಸಿಕೊಂಡು ಸಂಗೀತ ಜಗತ್ತಿನಲ್ಲಿ ತನ್ನದೇ ಆದ ಹೆಸರನ್ನು ಗಳಿಸುವಲ್ಲಿ ಯಶಸ್ವಿಯಾದರು. ಗೌಹರ್ ಜಾನ್ ಅವರ ಬಾಲ್ಯವು ಬಹಳ ಹೋರಾಟದಿಂದ ಮತ್ತು ಕಷ್ಟದಿಂದ ತುಂಬಿತ್ತು. ತನ್ನ ಬಾಲ್ಯವನ್ನು ಅವರು ವೇಶ್ಯಾಗೃಹದಲ್ಲಿ ಕಳೆದರು. ಭಾರತದ ಮೊದಲ ಧ್ವನಿಮುದ್ರಣ ಕಲಾವಿದೆ ಇವರು ಭಾರತದಲ್ಲಿ ಗ್ರಾಮಫೋನ್ ಕಂಪನಿಯೊಂದಿಗೆ ಅವರ ಮೊದಲ ಧ್ವನಿಮುದ್ರಣವು ಧ್ವನಿಮುದ್ರಿತ ಸಂಗೀತದ ಉದಯವನ್ನು ಗುರುತಿಸುವ ಮೂಲಕ ಆಕೆಯ ಸಂಗೀತ ಜ್ಞಾನವನ್ನು ಎಲ್ಲೆಡೆ ಹರಡಿಸಿತು ಎಂದೇ ಹೇಳಬಹುದು. ಅವರ ವೃತ್ತಿಗೆ ಸಾಮಾಜಿಕ ಕಳಂಕಗಳ ಹೊರತಾಗಿಯೂ, ಅವರು ಆ ಸಮಯದಲ್ಲಿ ಅತ್ಯಂತ ಜನಪ್ರಿಯ ಮತ್ತು ಬೇಡಿಕೆಯ ಪ್ರದರ್ಶಕ ಸಂಗೀತಗಾರ ಒಬ್ಬರಾಗಿ, ದೊಡ್ಡ ಮೊತ್ತದ ಹಣವನ್ನು ಗಳಿಸಿದರು ಮತ್ತು ಭಾರತದ ಮೊದಲ ಧ್ವನಿಮುದ್ರಣ ಕಲಾವಿದೆ ಮತ್ತು ಆರಂಭಿಕ ಸಂಗೀತದ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರಾದರು. ಕುತೂಹಲ ಹೆಚ್ಚಾಗುತ್ತಿದೆ ಅಲ್ಲವೇ? ಯಾರು ಇರಬಹುದು ಇವರು ಅಂತ. ಅವರೇ ಪ್ರಸಿದ್ಧ ಗಾಯಕಿ ಹೆಸರು ಗೌಹರ್ ಜಾನ್. 1902 ರಲ್ಲಿ ಹಾಡನ್ನು ರೆಕಾರ್ಡ್ ಮಾಡಿದ ಮೊದಲ ಭಾರತೀಯ ಗಾಯಕಿ ಗೌಹರ್ ಭಾರತೀಯ ಸಂಗೀತದ ಇತಿಹಾಸದಲ್ಲಿ ಅತ್ಯಂತ ಅಪ್ರತಿಮ ಗಾಯಕಿ. 1902 ರಲ್ಲಿ ಹಾಡನ್ನು ರೆಕಾರ್ಡ್ ಮಾಡಿದ ಮೊದಲ ಭಾರತೀಯ ಗಾಯಕಿ. ಆಕೆಯ ಜೀವನ ಕಥೆಯು ತುಂಬಾ ಇಂಟ್ರೆಸ್ಟಿಂಗ್‌ ಆಗಿದೆ. ಇವರು ಭಾರತೀಯ ಸಮಾಜದಲ್ಲಿ ವೇಶ್ಯೆಯರ ಹೋರಾಟಗಳು ಮತ್ತು ಧ್ವನಿಮುದ್ರಿತ ಸಂಗೀತದ ಕಡೆಗೆ ಗಮನಾರ್ಹ ಬದಲಾವಣೆಯನ್ನು ಪ್ರತಿನಿಧಿಸುವ ಕೆಲಸವನ್ನು ಮಾಡಿದ್ದಾರೆ. ಇದು ಅಂತಿಮವಾಗಿ ಭಾರತೀಯ ಸಂಗೀತ ಉದ್ಯಮವನ್ನು ಕ್ರಾಂತಿಗೊಳಿಸಿತು. ಗೌಹರ್‌ ಜಾನ್‌ ಅವರ ಹಿನ್ನೆಲೆ ಹೀಗಿದೆ: ಇವರು ಕಲ್ಕತ್ತಾದಲ್ಲಿ ರಾಬರ್ಟ್ ವಿಲಿಯಂ ಯೆವಾರ್ಡ್ ಮತ್ತು ಅಡೆಲಿನ್ ವಿಕ್ಟೋರಿಯಾ ಹೆಮಿಂಗ್ಸ್ ದಂಪತಿಗೆ ಜನಿಸಿದರು. ಇವರ ತಂದೆ ತನ್ನ ಹೆಂಡತಿಯ ಗಾಯನ ವೃತ್ತಿಯನ್ನು ಒಪ್ಪಲಿಲ್ಲ ಮತ್ತು ಗೌಹರ್ ಮಗುವಾಗಿದ್ದಾಗಲೇ ಇಬ್ಬರನ್ನೂ ತ್ಯಜಿಸಿದರು. ಆಗ ಗೌಹರ್ ಅವರು ಕಾರಣಾಂತರಗಳಿಂದ ವೇಶ್ಯಾಗೃಹದಲ್ಲಿ ಬೆಳೆಯಬೇಕಾಯಿತು. ಅಲ್ಲಿ ಅವರು ಹಾಡುಗಾರಿಕೆ ಮತ್ತು ನೃತ್ಯವನ್ನು ಕಲಿತರು. ಇವರ ತಾಯಿ ಮಲ್ಕಾ ಜಾನ್ ಎಂಬ ಹೆಸರನ್ನು ಇರಿಸಿಕೊಂಡು, ಅಲ್ಲಿ ಪ್ರಸಿದ್ಧ ನೃತ್ಯ ಪಟುವಾದರು ಮತ್ತು ಶೀಘ್ರದಲ್ಲೇ ಗೌಹರ್ ಅವರು ಸಹ ಅದನ್ನು ಅನುಸರಿಸಿದರು. ಗೌಹರ್ ಜಾನ್ ಅಮೂಲ್ಯವಾದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಧರಿಸುತ್ತಿದ್ದುದು ಮಾತ್ರವಲ್ಲದೆ ಎಂದಿಗೂ ತಮ್ಮ ಆಭರಣಗಳನ್ನು ಪುನರಾವರ್ತಿಸಿಲ್ಲ. ಗೌಹರ್ ಜಾನ್ ಭಾರತದ ಮೊದಲ ಕೋಟ್ಯಾಧಿಪತಿ ಗಾಯಕಿ ಎನಿಸಿಕೊಂಡಿದ್ದಾರೆ. ಬಾಲ್ಯದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿದ ಗೌಹರ್‌ ಜಾನ್‌, ಪ್ರಸಿದ್ದ ಗಾಯಕಿಗಾಗಿ ಹೊರಹೊಮ್ಮಿದ್ದು ಹೀಗೆ! ಗೌಹರ್ ಬಾಲ್ಯದಲ್ಲಿ ಲೈಂಗಿಕ ಕಿರುಕುಳಕ್ಕೊಳಗಾದರು. 1902 ಮತ್ತು 1920 ರ ನಡುವೆ, ಗೌಹರ್ ಜಾನ್ ಹತ್ತು ಭಾಷೆಗಳಲ್ಲಿ ಸುಮಾರು 600 ಹಾಡುಗಳನ್ನು ಧ್ವನಿಮುದ್ರಣ ಮಾಡಿದರು. ಆ ದಿನಗಳಲ್ಲಿ ಒಂದು ಹಾಡಿಗೆ 3000 ರೂ. ತೆಗೆದುಕೊಳ್ಳುತ್ತಿದ್ದರು. ಈಗೀನ ಹಣಕ್ಕೆ ಹೋಲಿಸಿದರೆ ಅದು ಬರೋಬ್ಬರಿ 1 ಕೋಟಿ ರೂ. ಅಷ್ಟು ಸಂಭಾವನೆ ಪಡೆಯುತ್ತಿದ್ದ ಗಾಯಕಿ ಇವರು. ಗೌಹರ್ ಅವರು ತಮ್ಮ ವೈಯಕ್ತಿಕ ರೈಲು ಸಹ ಹೊಂದಿದ್ದರು. ಆ ರೈಲಿನಲ್ಲಿಯೇ ರಾಜರು ಆಹ್ವಾನಿಸಿದ ಕಡೆ ಪ್ರಯಾಣಿಸುತ್ತಿದ್ದರು. ಅಲ್ಲಿ ಗೌಹರ್‌ ಅವರು ಮೈಸೂರಿನ ಕೃಷ್ಣ ರಾಜ ಒಡೆಯರ್ IV ರಿಂದ ‘ಅರಮನೆ ಸಂಗೀತಗಾರ’ರಾಗಿ ನೇಮಕಗೊಂಡರು. ಆದರೆ ಕೊನೆಯ ಕಾಲದಲ್ಲಿ ಬಡತನದ ಜೀವನ ನಡೆಸಬೇಕಾಯ್ತು. ಮೈಸೂರಿನಲ್ಲಿಯೇ ನಿಧನರಾದರು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.