NEWS

Positivity: ಜೀವನದಲ್ಲಿ ಎಷ್ಟೇ ಏಳು-ಬೀಳು ಬಂದ್ರೂ ಖುಷಿಯಾಗಿರಬೇಕೇ? ಈ 8 ಗುಣಗಳನ್ನು ನೆನಪಿಸಿಕೊಳ್ಳಿ

ಸಾಂದರ್ಭಿಕ ಚಿತ್ರ ಜೀವನದಲ್ಲಿ ನಾವು ಸಂತೋಷವಾಗಿರುವುದಕ್ಕೆ ಯಾವುದೇ ದಾಖಲೆಗಳು ಬೇಕಾಗಿರುವುದಿಲ್ಲ. ನಮ್ಮಲ್ಲಿರುವ ಕೆಲವೊಂದು ನಡವಳಿಕೆ, ಗುಣ ಸ್ವಭಾವಗಳೇ ಅದನ್ನು ಪ್ರದರ್ಶಿಸುತ್ತದೆ ಎಂದು ಮನಃಶಾಸ್ತ್ರ ಹೇಳುತ್ತದೆ. ಸಣ್ಣ ಸಣ್ಣ ವಿಷಯಗಳಲ್ಲೂ ಖುಷಿ ಕಾಣುವುದು, ತೃಪ್ತಿ ಸಾರ್ಥಕತೆಯ ಭಾವನೆಗಳೇ ನಾವು ಖುಷಿಯಾಗಿದ್ದೇವೆ ಎಂಬುದನ್ನು ಸೂಚಿಸುತ್ತದೆ. ಹಾಗಿದ್ದರೆ ಮನಸ್ಫೂರ್ತಿಯಾಗಿ ಖುಷಿಯಾಗಿರುವವರು ಪ್ರದರ್ಶಿಸುವ ಸ್ವಭಾವಗಳೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ. ಸಣ್ಣ ಸಣ್ಣ ಕ್ಷಣಗಳನ್ನು ಆನಂದಿಸುವುದು ಸಂತೋಷವಾಗಿರುವವರು ಸಣ್ಣ ಸಣ್ಣ ಕ್ಷಣಗಳನ್ನು ಆನಂದಿಸಲು ಅವರು ಹಿಂಜರಿಯುವುದಿಲ್ಲ. ಅವರಿಗೆ ಸಣ್ಣ ಸಣ್ಣ ವಿಷಯಗಳು ಕೂಡ ಆನಂದವನ್ನುಂಟು ಮಾಡುತ್ತದೆ. ಇದುವೇ ನಿಜವಾದ ಖುಷಿಯ ಕ್ಷಣಗಳು ಎಂಬುದು ಅವರ ವಾದವಾಗಿದೆ. ನಿತ್ಯವೂ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ ನಿಜವಾಗಿಯೂ ಸಂತೋಷವಾಗಿರುವ ಜನರು, ಕೃತಜ್ಞತೆಯನ್ನು ಅರ್ಪಿಸುತ್ತಾರೆ. ತಮ್ಮ ದಿನವನ್ನು ಆನಂದಮಯವಾಗಿಸಿದ್ದಕ್ಕೆ ಅವರು ದೇವರಿಗೆ, ಹಿರಿಯರಿಗೆ ತಮ್ಮ ಜೀವನದಲ್ಲಿರುವ ವ್ಯಕ್ತಿಗಳಿಗೆ ಕೃತಜ್ಞರಾಗಿರುತ್ತಾರೆ. ಕೃತಜ್ಞತೆ ಎಂಬುದು ಇವರ ಪ್ರಕಾರವಾಗಿ ಸಂತೋಷಮಯವಾಗಿರುವ ಕ್ಷಣವಾಗಿದೆ. ತಮ್ಮ ಸುತ್ತಲೂ ಧನಾತ್ಮಕ ಶಕ್ತಿಯನ್ನು ಆವರಿಸಿಕೊಂಡಿರುತ್ತಾರೆ ಧನಾತ್ಮಕವಾಗಿ ಯೋಚಿಸುವುದು, ಧನಾತ್ಮಕ ಕೆಲಸಗಳನ್ನೇ ಮಾಡುವುದು ಇವರ ಆದ್ಯ ಕರ್ತವ್ಯವಾಗಿರುತ್ತದೆ. ನಿಜವಾದ ಖುಷಿ ಎಂಬುದು ಇತರರಿಗೆ ಸಹಾಯ ಮಾಡುವುದರಿಂದ ದೊರೆಯುತ್ತದೆ ಎಂಬುದನ್ನು ಇವರು ಮನವರಿಕೆ ಮಾಡಿಕೊಂಡಿರುತ್ತಾರೆ. ಅವರು ಸಕಾರಾತ್ಮಕತೆಯ ಕಡೆಗೆ ಆಕರ್ಷಿತರಾಗುತ್ತಾರೆ ಮತ್ತು ಆಗಾಗ್ಗೆ ಆಶಾವಾದಿ ಮತ್ತು ಉನ್ನತಿಗೇರಿಸುವ ಸ್ನೇಹಿತರ ವಲಯವನ್ನು ಹೊಂದಿರುತ್ತಾರೆ. ಸ್ನೇಹಿತರ ಮೂಲಕ ಇವರು ಬೆಂಬಲ ಪಡೆದುಕೊಂಡು ತಮ್ಮ ಜೀವನವನ್ನು ಖುಷಿಯಾಗಿರಿಸಿಕೊಂಡಿರುತ್ತಾರೆ. ತಮ್ಮ ಬಗ್ಗೆ ಕರುಣೆ ಹೊಂದಿರುತ್ತಾರೆ ಜೀವನದಲ್ಲಿ ಖುಷಿಯಾಗಿರುವ ಜನರು ತಮ್ಮ ಬಗ್ಗೆ ಕರುಣೆ ಹೊಂದಿರುತ್ತಾರೆ. ಇತರರೊಂದಿಗೆ ಹೋಲಿಕೆ ಮಾಡಿಕೊಂಡು ತಮ್ಮನ್ನು ತಾವು ದೂಷಿಸಿಕೊಳ್ಳುವ ಸ್ವಭಾವ ಇವರದ್ದಾಗಿರುವುದಿಲ್ಲ. ತಮ್ಮ ಮೇಲೆ ಕಠೋರತೆ ಪ್ರದರ್ಶಿಸುವ ಬದಲಿಗೆ ಸ್ವಯಂ ಸಹಾನುಭೂತಿಯನ್ನು ಅಭ್ಯಸಿಸುತ್ತಾರೆ. ಜೀವನದಲ್ಲಿ ತಪ್ಪು ಮಾಡುವುದು ಸಹಜ ಇದು ಕಲಿಕೆಯ ಭಾಗವಾಗಿದೆ ಎಂದು ತಮ್ಮನ್ನು ತಾವು ಕ್ಷಮಿಸುತ್ತಾರೆ. ತಮ್ಮ ತಪ್ಪಿನಿಂದ ಅವರು ಕಲಿಯುತ್ತಾರೆ. ತಾವು ತಪ್ಪನ್ನು ಮಾಡಿದ್ದರೂ ಆ ತಪ್ಪು ತಮ್ಮಿಂದ ಇನ್ನು ಮುಂದೆ ಘಟಿಸದಂತೆ ಎಚ್ಚರವಹಿಸುತ್ತಾರೆ. ತಮ್ಮನ್ನು ತಾವು ಒಳ್ಳೆಯ ಸ್ನೇಹಿತರಂತೆ ಅವರು ಸ್ವೀಕರಿಸಿರುತ್ತಾರೆ. ಸಮತೋಲನದ ಮಹತ್ವವನ್ನು ತಿಳಿದುಕೊಂಡಿರುತ್ತಾರೆ ಎಷ್ಟೇ ಒತ್ತಡದಲ್ಲೂ ತಮ್ಮ ಆದ್ಯತೆಗಳಿಗೆ ಅವರು ಪ್ರಾಶಸ್ತ್ಯ ನೀಡುತ್ತಾರೆ. ಪ್ರಯತ್ನಪಟ್ಟು ಕೆಲಸ ಮಾಡುವುದರ ಜೊತೆಗೆ ಸಮತೋಲನವನ್ನು ಕಾಯ್ದುಕೊಳ್ಳುತ್ತಾರೆ. ಕಷ್ಟಪಟ್ಟು ಕೆಲಸ ಮಾಡುವುದರ ಜೊತೆಗೆ ವಿಶ್ರಾಂತಿಗೆ ಆದ್ಯತೆ ನೀಡುತ್ತಾರೆ. ಮಿತಿಯೊಳಗೆ ಕೆಲಸ ಮಾಡುತ್ತಾರೆ ಹಾಗೂ ತಮ್ಮ ಯೋಗಕ್ಷೇಮಕ್ಕೂ ಪ್ರಾಶಸ್ತ್ಯ ನೀಡುತ್ತಾರೆ. ಆರಾಮವಾಗಿಲ್ಲದ ಸ್ಥಳದಲ್ಲಿ ಕೂಡ ಆರಾಮವನ್ನು ಕಂಡುಕೊಳ್ಳುತ್ತಾರೆ ಪ್ರತಿಯೊಂದು ಸ್ಥಳ ಕೂಡ ತಮಗೆ ಬೇಕಾದಂತಿರುವುದಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಂಡಿರುತ್ತಾರೆ. ಹಾಗಾಗಿ ಆರಾಮವಾಗಿಲ್ಲದ ಸ್ಥಳದಲ್ಲಿ ಕೂಡ ಅನುಕೂಲತೆಯನ್ನು ಕಂಡುಕೊಳ್ಳುತ್ತಾರೆ. ಯಾವುದಕ್ಕೂ ಕೊರತೆ ಹೇಳುವುದಿಲ್ಲ. ಹೊಂದಿಸಿಕೊಂಡು ಮುನ್ನಡೆಯುತ್ತಾರೆ. ಸವಾಲಿನ ಯೋಜನೆಯನ್ನು ತೆಗೆದುಕೊಳ್ಳುತ್ತಿರಲಿ, ಹೊಸ ಕೌಶಲ್ಯವನ್ನು ಕಲಿಯುತ್ತಿರಲಿ ಅಥವಾ ಕಠಿಣ ಸಂಭಾಷಣೆಯನ್ನು ಎದುರಿಸುತ್ತಿರಲಿ ಯಾವುದಕ್ಕೂ ಅವರು ಹಿಂದೇಟು ಹಾಕುವುದಿಲ್ಲ. ಯಾವುದೇ ಸವಾಲು, ಅಡೆತಡೆಗಳನ್ನು ಅವರು ಕಲಿಕೆಯ ಒಂದು ವಿಧವಾಗಿ ಕಾಣುತ್ತಾರೆ. ತಾವಾಗಿಯೇ ಇರಲು ಹಿಂಜರಿಯುವುದಿಲ್ಲ ತಮ್ಮಲ್ಲಿರುವ ಗುಣಗಳು, ಋಣಾತ್ಮಕ ಅಂಶಗಳನ್ನು ಸ್ವೀಕರಿಸುತ್ತಾರೆ. ಇನ್ನೊಬ್ಬರಿಗಾಗಿ ಬದಲಾಗುವುದಿಲ್ಲ. ತಮ್ಮನ್ನು ತಾವಿದ್ದಂತೆಯೇ ಸ್ವೀಕರಿಸುತ್ತಾರೆ. ಪ್ರತಿಯೊಬ್ಬರೂ ಅನನ್ಯರು ಎಂದು ಅವರು ಅರ್ಥಮಾಡಿಕೊಳ್ಳುತ್ತಾರೆ, ಮತ್ತು ಅದು ನಮ್ಮನ್ನು ವಿಶೇಷವಾಗಿಸುತ್ತದೆ ಎಂಬ ಅಂಶವನ್ನು ಮನಗಾಣುತ್ತಾರೆ. ಸಂಬಂಧಗಳಿಗೆ ಆದ್ಯತೆ ನೀಡುವುದು ನಮ್ಮ ಸಂಬಂಧಗಳನ್ನು ನಾವು ಹೇಗೆ ಪೋಷಿಸಿಕೊಂಡು ಬಂದಿದ್ದೇವೆ ಎಂಬುದು ಅವರಿಗೆ ಮುಖ್ಯವಾಗಿರುತ್ತದೆ. ಕುಟುಂಬ, ಸ್ನೇಹಿತರು, ಸಹೋದ್ಯೋಗಿಗಳೊಂದಿಗೆ ಸಮಯ ಕಳೆಯುವುದು, ಅವರಿಗೆ ಗೌರವ ನೀಡುವುದು ಮುಖ್ಯವೆಂಬುದನ್ನು ಕಾಣುತ್ತಾರೆ. ಸಂಬಂಧಗಳಲ್ಲಿನ ಶ್ರೀಮಂತಿಕೆಯ ಮೌಲ್ಯ ಅವರಿಗೆ ಮುಖ್ಯವಾಗಿರುತ್ತದೆ. ಆದಷ್ಟು ಕುಟುಂಬ, ಸ್ನೇಹಿತರೊಂದಿಗೆ ಕಳೆಯುವುದು ನಿಜವಾಗಿಯೂ ಸಂತೋಷವಾಗಿರುವ ವ್ಯಕ್ತಿಗಳು ಹೊಂದಿರುವ ಗುಣವಾಗಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.