NEWS

Renukaswamy: ರೇಣುಕಾಸ್ವಾಮಿ ಪತ್ನಿಗೆ ಗಂಡು ಮಗು ಜನನ, ಮಗನಿಲ್ಲದ ನೋವಿನಲ್ಲಿದ್ದ ಮನೆಯಲ್ಲೀಗ ಸಂತಸ

ಕೊಲೆ ಕೇಸ್ ನಲ್ಲಿ ದರ್ಶನ್ ಬಂಧಿಯಾಗಿ (darshan Case) 4 ತಿಂಗಳೇ ಕಳೆದಿದೆ. ಬೆಂಗಳೂರಿನ 57 ಸಿಸಿಎಚ್ ನ್ಯಾಯಾಲಯ ದರ್ಶನ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಈ ಸುದ್ದಿ ಬೆನ್ನಲ್ಲೇ ಇದೀಗ ರೇಣುಕಾ ಸ್ವಾಮಿ ಕುಟುಂಬದಲ್ಲಿ (Renukaswamy) ಸಂಭ್ರಮ. ಇಂದು ರೇಣುಕಸ್ವಾಮಿ ಪತ್ನಿ ಗಂಡು ಮಗುವಿಗೆ (boy) ಜನ್ಮ ನೀಡಿದ್ದಾರೆ. ಬೆಳಗ್ಗೆ ಜಾವ 7ಗಂಟೆ 1 ನಿಮಿಷಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಸಹನಾ (Sahana). ನಗರದ ಕೀರ್ತಿ ಆಸ್ಪತ್ರೆಯಲ್ಲಿ (Keerthi hospital) ಸಹನಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಕೀರ್ತಿ ಆಸ್ಪತ್ರೆ ನಗರದ ಜೆಸಿಆರ್ ಜೆಸಿಆರ್ ಬಡಾವಣೆಯಲ್ಲಿದೆ. ನಿಗದಿತ ದಿನಾಂಕಕ್ಕಿಂತ ಒಂದು ವಾರ ಮೊದಲೇ ಮಗು ಜನನವಾಗಿದೆ ಎನ್ನಲಾಗಿದೆ. ಮಗುವನ್ನು ಅಬ್ಜರ್ವೇಶನ್ ನಲ್ಲಿ ಸದ್ಯ ವೈದ್ಯರು ಇಟ್ಟಿದ್ದಾರೆ. ಮಗನನ್ನು ಕಳೆದುಕೊಂಡ ಮೃತ ರೇಣುಕಾಸ್ವಾಮಿ ಕುಟುಂಬಸ್ಥರಲ್ಲಿ ಈಗ ಸಂಭ್ರಮ ಮೂಡಿದೆ. ದರ್ಶನ್‌ ಕೇಸ್‌! ಇನ್ನು ಕೇಸ್‌ಗೆ ಸಂಬಂಧಪಟ್ಟಂತೆ ಬೇಲ್ ಚಿಂತೆಯಲ್ಲೇ ರಾತ್ರಿಯೆಲ್ಲಾ ನಿದ್ದೆ ಮಾಡದೆ ದರ್ಶನ್ ಒದ್ದಾಡಿದ್ದಾರೆ ಎನ್ನಲಾಗ್ತಿದೆ. ಸರಿಯಾಗಿ ಊಟ ಇಲ್ಲ, ನಿದ್ದೆ ಇಲ್ಲ, ಬೆನ್ನು ನೋವಿನಿಂದ ನರಳುತ್ತಿರುವ ದರ್ಶನ್ ಸೆರೆಮನೆ ವಾಸದಿಂದ ಮುಕ್ತಿ ಸಿಗುವ ದಿನಕ್ಕಾಗಿ ಕಾಯ್ತಿದ್ದಾರೆ. ಸಿಬ್ಬಂದಿ ಬಳಿ ಬೇಲ್ ಅರ್ಜಿ ವಜಾಗೊಂಡ ವಿಚಾರದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಬೇಲ್ ರಿಜೆಕ್ಟ್ ಆದ ಸುದ್ದಿ ಕೇಳಿ ಶಾಕ್ ಆದ ದರ್ಶನ್, ಸೆಲ್​ನಲ್ಲಿ ಕುಳಿತು ಕಣ್ಣೀರು ಹಾಕಿದ್ದಾರಂತೆ. Bigg Boss 11: ಜಗದೀಶ್‌ ವಿರುದ್ಧ ಮುಗಿಬಿದ್ದ ಮನೆಮಂದಿ! ಸ್ಪರ್ಧಿಗಳ ಮಿತಿ ಮೀರಿದ ವರ್ತನೆಗೆ ತಾಳ್ಮೆ ಕಳೆದುಕೊಂಡ ಬಿಗ್‌ಬಾಸ್! ಜೈಲಿನಲ್ಲಿರುವ ಪತಿ ದರ್ಶನ್ ನೋಡಲು ಪ್ರತಿ ವಾರ ವಿಜಯಲಕ್ಷ್ಮಿ ಬರ್ತಿದ್ರು. ಆದ್ರೆ ನಿನ್ನೆ (ಅ.14) ವಿಜಯಲಕ್ಷ್ಮಿ ಅವರು ಬಳ್ಳಾರಿಯಲ್ಲೇ ಇದ್ರು. ಪತಿಯನ್ನು ನೋಡಲು ಬಳ್ಳಾರಿ ಜೈಲಿಗೆ ಬಂದಿಲ್ಲ. ದರ್ಶನ್ ನೋಡಲೇಂದೆ ಬಳ್ಳಾರಿಗೆ ಬಂದ ವಿಜಯಲಕ್ಷ್ಮಿ ದಿಢೀರ್ ಅಂತ ಕೊನೆ ಕ್ಷಣದಲ್ಲಿ ಜೈಲು ಭೇಟಿಯನ್ನು ರದ್ದು ಮಾಡಿದ್ದು ಯಾಕೆ ಎನ್ನುವ ಪ್ರಶ್ನೆ ಜನರನ್ನು ಕಾಡಿತ್ತು. ವಜಾ ಬೆನ್ನಲ್ಲೇ ಪವಿತ್ರಾ ಗೌಡ ಕಣ್ಣೀರು! ಜಾಮೀನು ಅರ್ಜಿ ವಜಾ ಆಗುತ್ತಿದ್ದಂತೆ ಪವಿತ್ರಾಗೌಡ ಕಣ್ಣೀರಿ ಹಾಕಿದ್ರಂತೆ. ಜೈಲಿನಲ್ಲಿನ ಟಿವಿ ನೋಡುತ್ತಾ ಜಾಮೀನು ಸಿಗದ ಹಿನ್ನೆಲೆ ಪವಿತ್ರಾ ಗೌಡ ಕಣ್ಣೀರು ಹಾಕಿದ್ರು. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾ ಗೌಡ ದುಃಖ ಹೆಚ್ಚಾಗಿದೆ. ಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ ಕಳೆದ ರಾತ್ರಿಯಿಂದಲೂ ಪವಿತ್ರಾ ಗೌಡ ಟೆನ್ಷನ್ ನಲ್ಲಿದ್ದರು ಎಂದು ಜೈಲಿನ ಮೂಲಗಳು ತಿಳಿಸಿವೆ. ಸರಿಯಾಗಿ ಊಟ ನಿದ್ದೆ ಮಾಡದೆ ಟೆನ್ಷನ್ ನಲ್ಲಿದ್ದ ಪವಿತ್ರಾಗೆ ಬ್ಯಾಡ್ ನ್ಯೂಸ್ ಸಿಕ್ಕಿದೆ. ವರದಿ: ವಿನಾಯಕ, ನ್ಯೂಸ್ 18 ಕನ್ನಡ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.