NEWS

Dog Meat: ಬೆಂಗಳೂರಲ್ಲಿ ನಾಯಿ ಮಾಂಸ ಮಾರಾಟ ಆಗ್ತಿದ್ಯಾ? ನಾನ್‌ವೆಜ್‌ ಪ್ರಿಯರೇ, ನೀವು ಈ ಸುದ್ದಿ ಓದಲೇಬೇಕು

ನಾಯಿ ಮಾಂಸ ಮಾರಾಟ? ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ನಾಯಿ ಮಾಂಸ (Dog meat) ಮಾರಾಟ ಮಾಡಲಾಗ್ತಿದ್ಯಾ? ಇಂಥದ್ದೊಂದು ಗಂಭೀರ ಆರೋಪ ಇದೀಗ ಬೆಂಗಳೂರಿನ ನಾನ್ ವೆಜ್‌ (Non-Veg) ಪ್ರಿಯರ ಆತಂಕಕ್ಕೆ ಕಾರಣವಾಗಿದೆ. ಯಾಕೆಂದ್ರೆ ಬೆಂಗಳೂರಿನಲ್ಲಿ ನಾಯಿ ಮಾಂಸ ಮಾರಾಟವಾಗ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ಸಂಬಂಧ ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ (Majestic Railway Station) ಬಳಿ ಭಾರೀ ಗಲಾಟೆ ನಡೆದಿದೆ. ನಾಯಿ ಮಾಂಸ ಮಾರಾಟ ಶಂಕಿಸಿ ಹಿಂದೂ ಪರ ಸಂಘಟನೆಗಳ ದಾಳಿ ಮಾಡಿವೆ. ಅಬ್ದುಲ್ ರಜಾಕ್ ಎಂಬುವರ ವಿರುದ್ಧ ಹಿಂದೂ ಪರ ಸಂಘಟನೆ ಮುಖ್ಯಸ್ಥ ಪುನೀತ್ ಕೆರೆಹಳ್ಳಿ (Puneeth Kerehalli) ಆ್ಯಂಡ್ ಟೀಂ ಗಂಭೀರ ಆರೋಪ ಮಾಡಿದ್ದಾರೆ. ಇದೇ ವಿಚಾರಕ್ಕೆ ಪುನೀತ್ ಕೆರೆಹಳ್ಳಿ ಮತ್ತು ಅಬ್ದುಲ್ ರಜಾಕ್ (Abdul Razak) ನಡುವೆ ಭಾರೀ ಜಟಾಪಟಿ ನಡೆದಿದೆ. ರೆಲ್ವೆ ನಿಲ್ದಾಣದ ಬಳಿ ನಾಯಿ ಮಾಂಸದ ಗಲಾಟೆ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದ ಹಿಂಬದಿ ಗೇಟ್ ಬಳಿ ನಾಯಿ ಮಾಂಸ ವಿಚಾರಕ್ಕೆ ಅಬ್ದುಲ್ ರಜಾಕ್ ಹಾಗೂ ಪುನೀತ್ ಕೆರೆಹಳ್ಳಿ ನಡುವೆ ಗಲಾಟೆ ನಡೆದಿದೆ. ರಾಜಸ್ಥಾನದ ಜೈಪುರದಿಂದ ಜೈಪುರದಿಂದ ಆಮದಾಗಿದ್ದ ಮಾಂಸ ತುಂಬಿದ್ದ ಬಾಕ್ಸ್ ಗಳಲ್ಲಿ ನಾಯಿ ಮಾಂಸ ಇದೆ ಅಂತ ಪುನೀತ್ ಕೆರೆಹಳ್ಳಿ ಆರೋಪಿಸಿದ್ದಾರೆ. ಜೈಪುರದಿಂದ ಬಂದಿರೋ ಮಾಂಸದಲ್ಲಿ ನಾಯಿ ಮಾಂಸ? ಅಬ್ದುಲ್ ರಜಾಕ್ ಮಾಲೀಕತ್ವದ ಮಾಂಸದ ಅಂಗಡಿಗಳಲ್ಲಿ ನಾಯಿ ಮಾಂಸ ಮಾರಾಟ ಮಾಡಲಾಗುತ್ತಿದೆ ಅಂತ ಪುನೀತ್ ಕೆರೆಹಳ್ಳಿ ಗಂಭೀರ ಆರೋಪ ಮಾಡಿದ್ದಾರೆ. ಜೈಪುರದಿಂದ ತರಿಸಿರೋ ಬಾಕ್ಸ್‌ಗಳಲ್ಲಿ ನಾಯಿ ಮಾಂಸ ಇದೆ ಅಂತ ಪುನೀತ್ ಕೆರೆಹಳ್ಳಿ ಆರೋಪಿಸಿದ್ದಾರೆ. ಇದನ್ನೂ ಓದಿ: Marriage: ಗೆಳೆಯನ ‘ಆತ್ಮ’ದ ಜೊತೆ ಮದುವೆಯಾದ ಯುವತಿ! ಸತ್ತು ಹೋದವನ ಜೊತೆ ಶುರುವಾಯ್ತು ದಾಂಪತ್ಯ ಜೀವನ! ಮಾರುಕಟ್ಟೆಗೆ ಕೊಡೋ ವೇಳೆ ನಾಯಿ ಮಾಂಸ ಮಿಕ್ಸ್ ಪ್ರತಿ ದಿನ ಇಂಥಾ ಬಾಕ್ಸ್‌ನಲ್ಲಿ ಮಾಂಸ ತರಲಾಗ್ತಿದೆ. ಎಲ್ಲಿಂದಲೋ ಮಾಂಸ ತರಲಾಗ್ತಿದೆ, ಇದಕ್ಕೆ ಯಾವ ಲೈಸನ್ಸೂ ಇಲ್ಲ ಅಂತ ಪುನೀತ್ ಕೆರೆಹಳ್ಳಿ ಆರೋಪಿಸಿದ್ದಾರೆ. ಮಾರುಕಟ್ಟೆಗೆ ಕೊಡುವ ವೇಳೆ ಇದಕ್ಕೆ ನಾಯಿ ಮಾಂಸ ಸೇರಿಸ್ತಾರೆ ಅಂತ ಗಂಭೀರ ಆರೋಪ ಮಾಡಿದ್ದಾರೆ. ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ ಇಲ್ಲಿ ತಂದಿರುವ ಎಲ್ಲಾ ಬಾಕ್ಸ್ ಗಳನ್ನೂ ಓಪನ್ ಮಾಡಬೇಕು ಅಂತ ಪುನೀತ್ ಕೆರೆಹಳ್ಳಿ ಆಗ್ರಹಿಸಿದ್ರು. ನಮ್ಮ ಕಾರ್ಯಕರ್ತ ಮೇಲೆ ಹಲ್ಲೆ ಮಾಡಿದ್ದಾರೆ ಅಂತ ಪುನೀತ್ ಕೆರೆಹಳ್ಳಿ ಆರೋಪಿಸಿದ್ರು. ಪುನೀತ್ ಕೆರೆಹಳ್ಳಿ ರೋಲ್‌ಕಾಲ್‌ಗೆ ಬಂದಿದ್ದ ಇದು ಪುನೀತ್ ಕೆರೆಹಳ್ಳಿ ಆರೋಪವಾದ್ರೆ, ಮಾಲೀಕ ಅಬ್ದುಲ್ ರಜಾಕ್ ಹೇಳೋದೇ ಬೇರೆ. ಪುನೀತ್ ಕೆರೆಹಳ್ಳಿ ಈ ಮೊದಲು ರೋಲ್ ಕಾಲ್ ಮಾಡಲು ಬಂದಿದ್ದ. ನಯಾಪೈಸೆ ಕೊಡಲ್ಲ ಎಂದು ಹೇಳಿ ಕಳಿಸಿದ್ದೆ. ಅದಕ್ಕೆ ಈ ರೀತಿ ತಲಹರಟೆ ಮಾಡೋಕೆ ಬಂದಿದ್ದಾರೆ ಅಂತ ಪ್ರತ್ಯಾರೋಪ ಮಾಡಿದ್ದಾರೆ. ನಮ್ಮ ಬಳಿ ಲೈಸೆನ್ಸ್ ಇದೆ, ಚೆಕ್ ಮಾಡಿ ನಮ್ಮ ಬಳಿ ಲೈಸೆನ್ಸ್ ಇದೆ. ಕಳೆದ 12 ವರ್ಷದಿಂದ ಈ ಬ್ಯುಸಿನೆಸ್ ಮಾಡ್ತಿದ್ದೇನೆ. ಬೆಂಗಳೂರಲ್ಲಿರುವ ಕಸಾಯಿ ಖಾನೆಯಲ್ಲಿ ಸಿಗುವ ಮಾಂಸ ನಗರಕ್ಕೆ ಸಾಕಾಗಲ್ಲ. ಈ ಕಾರಣಕ್ಕೆ ಬೇರೆ ಕಡೆಯಿಂದ ನ್ಯಾಯ ಬದ್ಧವಾಗಿ ತರಿಸ್ತೇವೆ. ನಮ್ಮ ಬಳಿ ಎಲ್ಲಾ ರೀತಿಯ ಲೈಸೆನ್ಸ್ ಇದೆ. ಯಾರು ಬೇಕಾದರು ಚೆಕ್ ಮಾಡಬಹುದು ಅಂತ ಅಬ್ದುಲ್ ರಜಾಕ್ ಹೇಳಿದ್ರು. ಆಹಾರ ಅಧಿಕಾರಿಗಳಿಂದ ಸ್ಯಾಂಪಲ್ ಕಲೆಕ್ಟ್ ಇನ್ನು ವಿಚಾರ ತಿಳಿದು ಸ್ಥಳಕ್ಕೆ ಆಹಾರ ಇಲಾಖೆ ಅಧಿಕಾರಿಗಳು ಆಗಮಿಸಿದ್ರು. ಬಾಕ್ಸ್ ನಲ್ಲಿದ್ದ ಮಾಂಸದ ಸ್ಯಾಂಪಲ್‌ ಪಡೆದಿದ್ದಾರೆ. ಮಾಂಸದ ಗುಣಮಟ್ಡ ಹಾಗೂ ಮಾಂಸ ದೃಢೀಕರಣಕ್ಕಾಗಿ ಸ್ಯಾಂಪಲ್ ಪಡೆದಿದ್ದು, ರಾಜ್ಯ ಆಹಾರ ಸುರಕ್ಷಿತೆ ಹಾಗೂ ಗುಣಮಟ್ಟ ಪ್ರಾಧಿಕಾರಿ ಅಧಿಕಾರಿಗಳಿಂದ ಪರಿಶೀಲನೆ ನಡೆಸಿದ್ರು. (ವರದಿ: ಆಶಿಕ್ ಮುಲ್ಕಿ, ನ್ಯೂಸ್ 18 ಕನ್ನಡ, ಬೆಂಗಳೂರು) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.