NEWS

Kanguva Movie: ಕಂಗುವಾ ಚಿತ್ರದ ಫಸ್ಟ್ ಕಾಪಿ ನೋಡಿ ಸೂರ್ಯ ಫುಲ್ ಖುಷ್; ಡಬಲ್ ರೋಲ್ ಸೀಕ್ರೆಟ್ ಬಿಚ್ಚಿಟ್ಟ ಸಿನಿಮಾ ಡೈರೆಕ್ಟರ್!

ಕಂಗುವಾ ಚಿತ್ರದ ಫಸ್ಟ್ ಕಾಪಿ ನೋಡಿ ಸೂರ್ಯ ಫುಲ್ ಖುಷ್; ಡಬಲ್ ರೋಲ್ ಸೀಕ್ರೆಟ್ ಬಿಚ್ಚಿಟ್ಟ ಸಿನಿಮಾ ಡೈರೆಕ್ಟರ್! ಕಾಲಿವುಡ್‌ನ ಕಂಗುವಾ ಸಿನಿಮಾದಲ್ಲಿ (Kanguva Movie) ಸೂರ್ಯ ಎರಡು ಗೆಟಪ್‌ನಲ್ಲಿ (Suriya Double Getup) ಕಾಣಿಸಿಕೊಂಡಿದ್ದಾರೆ. ಒಂದು ಹಿಸ್ಟೋರಿಕಲ್ ಕ್ಯಾರೆಕ್ಟರ್ ಇದೆ. ಮತ್ತೊಂದು ಸ್ಟೈಲಿಶ್ ರೋಲ್ ಇದೆ. ಅಲ್ಲಿಗೆ ಬಹುಶಃ ಡಬಲ್ ರೋಲ್ ಅಲ್ಲಿಯೇ ಸೂರ್ಯ (Suriya) ಕಾಣಿಸುತ್ತಿದ್ದಾರೆ ಅನ್ನೋ ಡೌಟ್ ಕೂಡ ಇದೆ. ಆದರೆ, ಫ್ಯಾಂಟಸಿ ಆ್ಯಕ್ಷನ್ ಚಿತ್ರದಲ್ಲಿ ಈ ಮಾಡ್ರನ್ ಲುಕ್ ಯಾಕೆ ಅನ್ನೊ ಪ್ರಶ್ನೆ ಕೂಡ ಇದೆ. ಆದರೆ, ಇಡೀ ಸಿನಿನಿಮಾದಲ್ಲಿ ಮಾಡ್ರನ್ ಲುಕ್ (Modern Look) ಎಷ್ಟು ಸಮಯ ಇರುತ್ತದೆ. ಹಿಸ್ಟೋರಿಕಲ್ ರೋಲ್ ಎಷ್ಟು ಇರುತ್ತದೆ ಅನ್ನೋ ಪ್ರಶ್ನೆ ಸಹ ಇದೆ. ಅದಕ್ಕೆ ಡೈರೆಕ್ಟರ್ ಉತ್ತರ ಕೊಟ್ಟಿದ್ದಾರೆ. ಅದರ ಸುತ್ತ ಒಂದು ಸ್ಟೋರಿ ಇಲ್ಲಿದೆ ಓದಿ. 2 ಗಂಟೆ 26 ನಿಮಿಷ ಸಿನಿಮಾ ಕಂಗುವಾ ಸಿನಿಮಾ ರನ್ ಟೈಮ್ ರಿವೀಲ್ ಆಗಿದೆ. 2 ಗಂಟೆ 26 ನಿಮಿಷ ಈ ಚಿತ್ರದ ರನ್ ಟೈಮ್ ಆಗಿದೆ. ಇದರಲ್ಲಿ ಸೂರ್ಯ ನಿರ್ವಹಿಸಿರೋ ಹಿಸ್ಟೋರಿಕಲ್ ಪಾತ್ರ ಎಷ್ಟಿರುತ್ತದೆ. ಮಾಡ್ರನ್ ಲುಕ್ ಎಷ್ಟು ಸಮಯ ಇರುತ್ತದೆ. ಈ ಪ್ರಶ್ನೆಗೆ ಡೈರೆಕ್ಟರ್ ಶಿವ ಉತ್ತರ ಕೊಟ್ಟಿದ್ದಾರೆ. ಹಿಸ್ಟೋರಿಕಲ್ ರೋಲ್ ಒಟ್ಟು ಸಮಯ ಎರಡು ಗಂಟೆ ಆಗಿರುತ್ತದೆ. ಮಾಡ್ರನ್ ಪೋರ್ಷನ್ ಕೇವಲ 25 ನಿಮಿಷ ಇರುತ್ತದೆ. ಎರಡೂ ಪಾತ್ರಗಳಲ್ಲಿ ಸಾಕಷ್ಟು ವ್ಯತ್ಯಾಸ ಇದೆ. ಅದೇನೂ ಅನ್ನೋದನ್ನ ಕೂಡ ಶಿವ ಹೇಳಿಕೊಂಡಿದ್ದಾರೆ. ಮಾಡ್ರನ್ ರೋಲ್‌ನಲ್ಲಿ ಫನ್ ಸೂರ್ಯ ಈ ಚಿತ್ರದಲ್ಲಿ ಡಬಲ್ ರೋಲ್ ಮಾಡಿದ್ದಾರೆ. ಕಂಗುವಾ ಅನ್ನೋದು ಹಿಸ್ಟೋರಿಕಲ್ ರೋಲ್ ಆಗಿದೆ. ಫ್ರಾನ್ಸಿಸ್ ಅನ್ನೋದು ಮಾಡ್ರನ್ ರೋಲ್ ಆಗಿದೆ. ಈ ಎರಡೂ ಪಾತ್ರಗಳಲ್ಲಿ ಫ್ರಾನ್ಸಸ್ ರೋಲ್‌ ಅಲ್ಲಿ ಜಾಸ್ತಿ ಫನ್ ಇದೆ. ಆದರೆ, ಅದು ಕೇವಲ 25 ನಿಮಿಷ ಇರುತ್ತದೆ. ಇದನ್ನೂ ಓದಿ: Bigg Boss 11: ಜಗದೀಶ್‌ ವಿರುದ್ಧ ಮುಗಿಬಿದ್ದ ಮನೆಮಂದಿ! ಸ್ಪರ್ಧಿಗಳ ಮಿತಿ ಮೀರಿದ ವರ್ತನೆಗೆ ತಾಳ್ಮೆ ಕಳೆದುಕೊಂಡ ಬಿಗ್‌ಬಾಸ್! ಆದರೆ, ಇಡೀ ಸಿನಿಮಾ ಹಿಸ್ಟೋರಿಕಲ್ ರೋಲ್‌ ಮೇಲೆ ಇದೆ. ಕಂಗುವಾ ಪಾತ್ರದ ಮೂಲ ಸೂರ್ಯ ಜನಕ್ಕೆ ಹೊಸ ಲೋಕವನ್ನೆ ತೋರಲಿದ್ದಾರೆ. ಈ ಪಾತ್ರ ನಿಜಕ್ಕೂ ಸ್ಪೆಷಲ್ ಆಗಿಯೇ ಇದೆ. ಕಥೆ ಕೇಳಿ ಕಳೆದು ಹೋದ ಸೂರ್ಯ ಡೈರೆಕ್ಟರ್ ಶಿವ ಈ ಚಿತ್ರದ ಒಂದೊಂದು ಸೀನ್‌ ಅನ್ನ ಹೇಳ್ತಾ ಹೋದಂತೆ ಸೂರ್ಯ ಥ್ರಿಲ್ಲ್ ಆಗಿದ್ದಾರೆ. ಕಥೆ ಕೇಳ್ತಾನೇ ಕಳೆದು ಹೋಗಿದ್ದಾರೆ. ಅದನ್ನ ಅಷ್ಟೇ ನೀಟಾಗಿಯೇ ಅಭಿನಯಿಸಿದ್ದಾರೆ. ಅಷ್ಟೂ ಹೆಚ್ಚಾಗಿ ಇಡೀ ಸಿನಿಮಾದ ಫೈನಲ್ ಕಾಪಿ ನೋಡಿದ್ಮೇಲೆ ಸೂರ್ಯನ ಕಾನ್ಫಿಡೆನ್ಸ್ ಇನ್ನೂ ಹೆಚ್ಚಾಗಿದೆ. ಹೀಗಂತ ಸ್ವತಃ ಡೈರೆಕ್ಟರ್ ಸೂರ್ಯ ಹೇಳಿಕೊಂಡಿದ್ದಾರೆ. ಸಿನಿಮಾದ ಬಗ್ಗೆ ಭಾರೀ ಕಾನ್ಫಿಡೆನ್ಸ್ ಇದೆ. ಹಾಗಾಗಿಯೇ ಸರಿಯಾದ ಟೈಮ್‌ಗೆ ಈ ಚಿತ್ರವನ್ನ ರಿಲೀಸ್ ಮಾಡಲಾಗುತ್ತಿದೆ. ನವೆಂಬರ್-14 ರಂದು ಚಿತ್ರ ರಿಲೀಸ್ ಕಂಗುವಾ ಸಿನಿಮಾ ಇದೇ ವರ್ಷ ನವೆಂಬರ್-14 ರಂದು ರಿಲೀಸ್ ಆಗುತ್ತಿದೆ. ದೊಡ್ಡಮಟ್ಟದಲ್ಲಿಯೇ ಈ ಚಿತ್ರ ಬಿಡುಗಡೆ ಆಗುತ್ತಿದೆ. ತಮಿಳು, ತೆಲುಗು, ಕನ್ನಡ, ಹಿಂದಿ, ಇಂಗ್ಲೀಷ್ ಸೇರಿದಂತೆ ಹೆಚ್ಚು ಕಡಿಮೆ ಈ ಚಿತ್ರ ೮ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಸಿನಿಮಾದಲ್ಲಿ ಬಾಬಿ ಡಿಯೋಲ್ ವಿಲನ್ ರೋಲ್ ಮಾಡಿದ್ದಾರೆ. ದಿಶ ಪಟಾನಿ ಇಲ್ಲಿ ಸೂರ್ಯನಿಗೆ ಜೊಡಿ ಆಗಿದ್ದಾರೆ. ದೇವಿ ಶ್ರೀ ಪ್ರಸಾದ್ ಸಂಗೀತ ಕೊಟ್ಟಿದ್ದಾರೆ. 300 ರಂದ 350 ಕೋಟಿ ಬಜೆಟ್‌ನಲ್ಲಿ ಈ ಚಿತ್ರ ರೆಡಿ ಆಗಿದೆ. ಈ ಮೂಲಕ ತಮಿಳು ಚಿತ್ರರಂಗದಲ್ಲಿ ಈ ಸಿನಿಮಾ ಹೊಸ ಭರವಸೆ ಮೂಡಿಸಿದೆ ಅಂತಲೂ ಹೇಳಬಹುದು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.