NEWS

Ramanagara-Bengaluru South: ರಿಯಲ್ ಎಸ್ಟೇಟ್ ಆದ್ರೆ ಭೂಮಿ ಬೆಲೆ ಜಾಸ್ತಿಯಾಗುತ್ತೆ! 'ರಾಮನಗರ' ಶಾಸಕ ಇಕ್ಬಾಲ್ ಹುಸೇನ್ ಪ್ರತಿಕ್ರಿಯೆ

ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಬೆಂಗಳೂರು: ರಾಮನಗರ (Ramanagara) ಜಿಲ್ಲೆ ಇನ್ಮುಂದೆ ಬೆಂಗಳೂರು ದಕ್ಷಿಣ (Bengaluru South) ಜಿಲ್ಲೆ ಅಂತ ಕರೆಸಿಕೊಳ್ಳಲಿದೆ. ರಾಮನಗರ ಹೆಸರು ಬದಲಾಯಿಸಿ, ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಮರುನಾಮಕರಣ ಮಾಡಲು ರಾಜ್ಯ ಸಚಿವ ಸಂಪುಟ ಇಂದು ಒಪ್ಪಿಗೆ ನೀಡಿದೆ. ಈ ಸಂಬಂಧ ರಾಮನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ (Congress MLA) ಇಕ್ಬಾನ್ ಹುಸೇನ್ (Iqbal Hussain) ಪ್ರತಿಕ್ರಿಯೆ ನೀಡಿದ್ದಾರೆ. ವಿಧಾನಸೌಧದಲ್ಲಿ (Vidhanasoudha) ಮಾತನಾಡಿದ ಅವರು, ನಾವು ರಾಮನಗರದವರಲ್ಲ, ಮೂಲತಃ ಬೆಂಗಳೂರಿನವರು (Bengaluru) ಎಂದಿದ್ದಾರೆ. ಅಲ್ಲದೇ ರಿಯಲ್ ಎಸ್ಟೇಟ್ (Real Estate) ಆದರೇ ನಮ್ಮ ಭೂಮಿ ಬೆಲೆ ಜಾಸ್ತಿ ಆಗುತ್ತದೆ ಅಂತ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಹೆಚ್‌ಡಿ ಕುಮಾರಸ್ವಾಮಿಗೆ ಪರೋಕ್ಷ ಟಾಂಗ್ ಕೆಲವು ವರ್ಷಗಳ ಹಿಂದೆ ಕೆಲವರು, ತಮ್ಮ ಅಧಿಕಾರ ಮತ್ತೆ ಸ್ವಾರ್ಥಕ್ಕಾಗಿ ರಾಮನಗರವನ್ನು ಜಿಲ್ಲೆಯಾಗಿ ಘೋಷಣೆ ಮಾಡಿಕೊಂಡ್ರು ಅಂತ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿಗೆ ಶಾಸಕ ಇಕ್ಬಾಲ್ ಹುಸೇನ್ ಪರೋಕ್ಷವಾಗಿ ಟಾಂಗ್ ಕೊಟ್ರು. ಜಿಲ್ಲೆ ಆದಮೇಲೆ ಜಿಲ್ಲೆಯಾಗಿ ಅಭಿವೃದ್ಧಿ ಕಂಡಿಲ್ಲ. ಹೀಗಾಗಿ ಅಭಿವೃದ್ಧಿ ಆಗಬೇಕು ಎಂದು ಬೆಂಗಳೂರು ದಕ್ಷಿಣ ಜಿಲ್ಲೆ ಮಾಡಿ ಎಂದು ಮನವಿ ಮಾಡಿದ್ದೆವು ಅಂತ ಅವರು ಹೇಳಿದ್ರು. ರಿಯಲ್ ಎಸ್ಟೇಟ್ ಆದ್ರೆ ಭೂಮಿ ಬೆಲೆ ಜಾಸ್ತಿಯಾಗುತ್ತದೆ ರಾಮನಗರ ಬೆಂಗಳೂರಿಗೆ ಬಹಳ ಹತ್ತಿರ ವಾಗಿದೆ ಅಂತ ಇಕ್ಬಾಲ್ ಹುಸೇನ್ ಹೇಳಿದ್ದಾರೆ. ನಾವು ರಾಮನಗರದವರಲ್ಲ, ಮೂಲತಃ ಬೆಂಗಳೂರಿನವರು. ನಮ್ಮ ಜಿಲ್ಲೆ ಬಹಳ ಶೀಘ್ರವಾಗಿ ಅಭಿವೃದ್ಧಿ ಕಾಣಬೇಕು. ರಿಯಲ್ ಎಸ್ಟೇಟ್ ಆದರೆ ನಮ್ಮ ಭೂಮಿ ಬೆಲೆ ಜಾಸ್ತಿ ಆಗುತ್ತದೆ. ಯಾರು ವ್ಯಾಪಾರ ಮಾಡ್ತಾರೋ ಅವರಿಗೆ ಅನುಕೂಲ ಆಗುತ್ತದೆ. ಆದರೆ ರೈತರಿಗೆ ಅನುಕೂಲ ಆಗಬೇಕು ಅಲ್ವಾ? ಅಂತ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: Ramanagara-Bengaluru South: ‘ರಾಮನಗರ’ ಇನ್ನು ‘ಬೆಂಗಳೂರು ದಕ್ಷಿಣ’ ಜಿಲ್ಲೆ! ಡಿಕೆಶಿ ಕನಸಿಗೆ ಸಚಿವ ಸಂಪುಟ ಅಸ್ತು! ಸಿದ್ದರಾಮಯ್ಯ ಅವರನ್ನು ಅಭಿನಂದಿಸುತ್ತೇನೆ ಡಾ ಮಂಜುನಾಥ್ ಅವ್ರು ಈಗ ತಾನೇ ಸಂಸದರಾಗಿದ್ದಾರೆ. ಮೊದಲು ಅವ್ರು ನಮ್ಮ ಕ್ಷೇತ್ರ ವನ್ನು ಒಂದು ಸಾರಿ ಹೋಗಿ ನೋಡಲಿ. ಏನ್ ಮಾಡಬಹುದು ಎಂದು ಅವರು ಸಂಸದನಾಗಿ ತಿಳಿದುಕೊಂಡರೆ ಸಾಕು ಅಂತ ಇಕ್ಬಾಲ್ ಹುಸೇನ್ ಹೇಳಿದ್ದಾರೆ. ಜಿಲ್ಲೆಯ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಈ ತೀರ್ಮಾನ ಮಾಡಿದೆ. ಅದಕ್ಕಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ನಾನು ಅಭಿನಂದಿಸುತ್ತೇನೆ ಅಂತ ಅವರು ಹೇಳಿದ್ದಾರೆ. ನಮ್ಮಲ್ಲಿ ಶಾಲೆ ಇಲ್ಲ, ಕಾಲೇಜ್‌ ಇಲ್ಲ! ನಮ್ಮಲ್ಲಿ ಮೂಲಭೂತ ಸೌಕರ್ಯಗಳು ಇಲ್ಲ. ನಾವು ಒಳಚರಂಡಿ ನೀರನ್ನೇ ಫಿಲ್ಟರ್ ಮಾಡಿ ಕುಡಿಯುತ್ತಿದ್ದೇವೆ. ನಮಗೆ ಒಂದು ಸರಿಯಾದ ರಸ್ತೆಗಳಿಲ್ಲ. ಬಡವರಿಗೆ ಮನೆ ಇಲ್ಲ, ಒಳ್ಳೆ ಶಾಲೆಗಳಿಲ್ಲ, ಪಾರ್ಕ್‌ಗಳಿಲ್ಲ, ಕಾಲೇಜುಗಳಿಲ್ಲ. ಇದನ್ನು ಇನ್ನೂ ಯಾವಾಗ ನೋಡೋದು? ಅಂತ ಇಕ್ಬಾಲ್ ಹುಸೇನ್ ಇಲ್ಲಗಳ ಪಟ್ಟಿಯನ್ನೇ ಇಟ್ಟಿದ್ದಾರೆ. ನೀವು ಯಾಕೆ ಇದಕ್ಕೆ ಅಡ್ಡಗಾಲು ಹಾಕ್ತೀರಿ? ಬೆಂಗಳೂರು ದಕ್ಷಿಣ ಮಾಡೋಕೆ ಬಿಡಲ್ಲ ಅಂತಾ ಅಂದರೆ ಕುಮಾರಸ್ವಾಮಿ ಏನು ಹಿಡಿದುಕೊಳ್ತಾರೆ? ಏನ್ ಗಾಡಿನಾ‌ ನೀವು ಬ್ರೇಕ್ ಹಾಕಿಬಿಡೋಕೆ? ಕುದುರೆನಾ ಲಗಾಮು ಹಾಕೋಕೆ? ಅಂತ ಹೆಚ್‌ಡಿಕೆ ವಿರುದ್ಧ ಕಿಡಿ ಕಾರಿದ್ದಾರೆ. ನೀವು ಎರಡು ಬಾರಿ ಸಿಎಂ ಆದಂತವರು, ಇದಕ್ಕೆ ಸಹಕಾರ ಕೊಡಿ. ನಿಮ್ಮ ಅಧಿಕಾರ ಇದ್ದಾಗ ತೀರಿಸೋಕೆ ಆಗಿಲ್ಲ, ಈಗ ನೀವು ಯಾಕೆ ಅದಕ್ಕೆ ಅಡ್ಡಗಾಲು ಹಾಕ್ತೀರಾ..? ಅಂತ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ. ಎಲೆಕ್ಷನ್ ಮಾಡಿ, ಗೆದ್ದು ತೋರಿಸ್ತೀವಿ ನಾವು ಏನು ಬೈ ಎಲೆಕ್ಷನ್ ನೋಡಿ ಜಿಲ್ಲೆ ಮಾಡ್ತಿದ್ಸೀವಾ? ಎಲೆಕ್ಷನ್‌ಗೂ ಇದಕ್ಕೂ ಏನು ಸಂಬಂಧ? ನಿಮಗೆ ರಾಜಕಾರಣಬೇಕು ಮಾಡಿ, ನಾವು ಬೇಡ ಎನ್ನಲ್ಲ. ನಾವು ಎಲೆಕ್ಷನ್ ಮಾಡಿ ಗೆದ್ದು ತೋರಿಸ್ತೀವಿ ಅಂತ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿಗೆ ಟಾಂಗ್ ಇಕ್ಸಾಲ್ ಹುಸೇನ್ ಟಾಂಗ್ ಕೊಟ್ಟಿದ್ದಾರೆ. (ವರದಿ: ಕೃಷ್ಣ ಜಿ.ವಿ., ನ್ಯೂಸ್ 18 ಕನ್ನಡ, ಬೆಂಗಳೂರು) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.