NEWS

Vaazhai OTT: ಮಹರಾಜ ಸಿನಿಮಾ ಇಷ್ಟ ಆಗಿತ್ತಾ? ಹಾಗಿದ್ರೆ ಈ ಮೂವಿನೂ ನೋಡಿ ಫಿದಾ ಆಗ್ತೀರಾ! ಈ ಒಟಿಟಿಯಲ್ಲಿದೆ!

ಮಾರಿ ಸೆಲ್ವರಾಜ್ (Mari Selvaraj) ನಿರ್ದೇಶನದ ಕಡಿಮೆ-ಬಜೆಟ್ ತಮಿಳು ಚಿತ್ರ ವಾಜೈ (vaazhai) ರಿಲೀಸ್‌‌ ಕಂಡಿತ್ತು. ಮಕ್ಕಳ ಸಿನಿಮಾವಾದ ಈ ಸಿನಿಮಾ ಬ್ಲಾಕ್ಬಸ್ಟರ್ ಆಯಿತು. ತಮಿಳುನಾಡು (Tamilnadu) ಬಾಕ್ಸ್ ಆಫೀಸ್‌ನಲ್ಲಿ 30 ಕೋಟಿ ರೂ. ಗಳಿಕೆ ಕಂಡರೆ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ, ವಾಜೈ ರೂ. ಒಟ್ಟು 40 ಕೋಟಿ ರೂ. ಗಳಿಕೆ ಕಂಡಿದೆ. ದಳಪತಿ ವಿಜಯ್(thalapathy vijay) ಅವರ ದಿ GOAT ಗೆ ಒಂದು (vaazhai OTT) ವಾರದ ಮೊದಲು ವಾಜೈ ತೆರೆಗೆ ಬಂದಿತು. ಆದ್ದರಿಂದ, ಅದರ ಬಾಕ್ಸ್ ಆಫೀಸ್ ನಿರೀಕ್ಷೆಗಳು ಸ್ವಲ್ಪ ಮಟ್ಟಿಗೆ ಪರಿಣಾಮ ಬೀರಿತು. ದಳಪತಿ ವಿಜಯ್ ಅವರ ದಿ GOAT ಗೆ ಒಂದು ವಾರದ ಮೊದಲು ವಾಜೈ ತೆರೆಗೆ ಬಂದಿತು. ಆದ್ದರಿಂದ, ಅದರ ಬಾಕ್ಸ್ ಆಫೀಸ್ ನಿರೀಕ್ಷೆಗಳು ಸ್ವಲ್ಪ ಮಟ್ಟಿಗೆ ಪರಿಣಾಮ ಬೀರಿತು. ಬೇರೆ ಸಮಯದಲ್ಲಿ ಚಿತ್ರ ಬಿಡುಗಡೆಯಾಗಿದ್ದರೆ, ಅದು ಸುಲಭವಾಗಿ ರೂ. 50 ಕೋಟಿ ಗಳಿಕೆ ಕಾಣುತ್ತಿತ್ತು. ವಾಜೈ ಚಿತ್ರದಲ್ಲಿ ಪೊನ್ವೆಲ್ ಮತ್ತು ರಘುಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, ಜೊತೆಗೆ ಕಲೈಯರಸನ್, ನಿಖಿಲಾ ವಿಮಲ್, ಜೆ. ಸತೀಶ್ ಕುಮಾರ್, ದಿವ್ಯ ದುರೈಸಾಮಿ, ಜಾನಕಿ, ಪ್ರಿಯಾಂಕಾ ನಾಯರ್ ಮತ್ತು ನಿವೇದಿತಾ ರಾಜಪ್ಪನ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಸಂತೋಷ್ ನಾರಾಯಣನ್ ರಾಗ ಸಂಯೋಜನೆ ಮಾಡಿದ್ದಾರೆ. ಸ್ಟ್ರೀಮಿಂಗ್‌ ಎಲ್ಲಿ? ಈ ಚಲನಚಿತ್ರ ಅಕ್ಟೋಬರ್ 11 ರಿಂದ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗುತ್ತಲೇ ಇದೆ. ಮಾರಿ ಸೆಲ್ವರಾಜ್ ಅವರು ‘ವಾಝೈ,’ ಸಿನಿಮಾ ನಿರ್ದೇಶನ ಮಾಡಿದ್ದಾರೆ, ಸಹ-ನಿರ್ಮಾಣ ಕೂಡ ಮಾಡಿದ್ದಾರೆ. ಆಗಸ್ಟ್ 23ರಂದು ಚಿತ್ರ ತೆರೆ ಕಂಡಿತ್ತು. ಈ ಚಿತ್ರದಲ್ಲಿ ಹೊಸಬರಾದ ಪೊನ್ವೆಲ್ ಎಂ. ಮತ್ತು ರಘುಲ್ ಆರ್. ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಕಲೈಯರಸನ್ ಮತ್ತು ನಿಖಿಲಾ ವಿಮಲ್ ಪ್ರಮುಖ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಸೆಲ್ವರಾಜ್ ಅವರ ಯಶಸ್ವಿ ಚಿತ್ರಗಳಾದ ‘ಪರಿಯೆರುಮ್ ಪೆರುಮಾಳ್,’ ‘ಕರ್ಣನ್,’ ಮತ್ತು ‘ಮಾಮನ್ನನ್’ ನಂತರ ಅವರ ನಾಲ್ಕನೇ ನಿರ್ದೇಶನದ ಪ್ರಯತ್ನವಾಗಿದೆ. ಇದನ್ನೂ ಓದಿ: Richest Producer: 30 ಸಾವಿರ ಕೋಟಿ ಒಡೆಯ ಈ ನಿರ್ಮಾಪಕ! ಕರಣ್‌ ಜೋಹರ್‌ ಕೂಡ ಇವ್ರ ಮುಂದೆ ಡಲ್ಲು! ಕಥೆ ಏನು? ‘ವಾಝೈ’ ಚಿತ್ರದ ಕಥೆಯು ತಮಿಳುನಾಡಿನ ಬಡ ಹಳ್ಳಿಯ ಶಿವನೈಂದನ್ ಎಂಬ ಯುವಕನ ಸುತ್ತ ಸುತ್ತುತ್ತದೆ, ಅವನು ಬಾಳೆ ಗದ್ದೆಗಳಲ್ಲಿ ಕೆಲಸ ಮಾಡುವ ಮೂಲಕ ತನ್ನ ಕುಟುಂಬಕ್ಕೆ ಸಹಾಯ ಮಾಡುತ್ತಾನೆ. ಒಂದು ಲಾರಿ ಒಳಗೊಂಡ ದುರಂತ ಅಪಘಾತವು ಗ್ರಾಮದಲ್ಲಿ ಹಲವಾರು ಜೀವಗಳನ್ನು ಬಲಿ ತೆಗೆದುಕೊಂಡಾಗ, ಶಿವನೈಂದನ ಜೀವನವು ಅನಿರೀಕ್ಷಿತ ತಿರುವು ಪಡೆಯುತ್ತದೆ, ಅವನ ಭವಿಷ್ಯವನ್ನು ಬದಲಾಯಿಸುತ್ತದೆ. ಚಲನಚಿತ್ರವು ಬಡತನ, ಕುಟುಂಬ ಬಗ್ಗೆ ಇದೆ. ಈ ಚಿತ್ರವು ಸೆಲ್ವರಾಜ್ ಅವರ ಸ್ವಂತ ಜೀವನದ ಅನುಭವಗಳಿಂದ ಪ್ರೇರಿತವಾಗಿದೆ, ಆಕರ್ಷಕ ನಿರೂಪಣೆಯ ಜೊತೆಗೆ, ‘ವಾಝೈ’ ಪ್ರಭಾವಶಾಲಿ ತಾಂತ್ರಿಕ ಸಿಬ್ಬಂದಿಯನ್ನು ಹೊಂದಿದೆ. ತೇನಿ ಈಶ್ವರ್ ಅವರ ಛಾಯಾಗ್ರಹಣವನ್ನು ಒಳಗೊಂಡಿದೆ, ಈ ಹಿಂದೆ ‘ಕರ್ಣನ್’ ಮತ್ತು ‘ಮಾಮನ್ನನ್’ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.