NEWS

Syria Crisis: ದೇಶದಿಂದ ಪಲಾಯನಗೈಯುವಾಗ ಹತ್ಯೆಯಾದ್ರಾ ಸಿರಿಯಾದ ಅಧ್ಯಕ್ಷ? ಅಸ್ಸಾದ್ ವಿಮಾನ ನಿಗೂಢವಾಗಿ ನಾಪತ್ತೆ!

ಪಶ್ಚಿಮ-ಮಧ್ಯ ನಗರವಾದ ಹಮಾದಲ್ಲಿ ಮುನ್ಸಿಪಲ್ ಕಟ್ಟಡದ ಮುಂಭಾಗದಲ್ಲಿ ನೇತಾಡುತ್ತಿರುವ ಸಿರಿಯಾದ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಅವರ ಚಿತ್ರವನ್ನು ಹೊಂದಿರುವ ದೊಡ್ಡ ಬ್ಯಾನರ್ ವಿರುದ್ಧ ಬಂಡುಕೋರನೊಬ್ಬ ಗುಂಡು ಹಾರಿಸಿದ ಡಮಾಸ್ಕಸ್‌: ಸಿರಿಯಾ (Syria) ದೇಶದ ರಾಜಧಾನಿಯಾದ ವಿಶ್ವದ ಪುರಾತನ ನಗರಗಳಲ್ಲಿ ಒಂದಾದ ಡಮಾಸ್ಕಸ್‌ಗೆ (Damascus) ಬಂಡುಕೋರರು ದಾಳಿ ಮಾಡಿದ ನಂತರ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ (President Bashar al-Assad) ಅವರು ಭಾನುವಾರ ಬೆಳಿಗ್ಗೆ ದೇಶದಿಂದ ಪಲಾಯನ ಮಾಡಿದ್ದು, ಅಧ್ಯಕ್ಷ ಅಸ್ಸಾದ್ ಎಲ್ಲಿಗೆ ಹೋದ, ಏನಾದ ಎನ್ನುವ ಮಾಹಿತಿ ಇಲ್ಲ ಎನ್ನಲಾಗಿದೆ. ಇನ್ನೊಂದೆಡೆ ಅಸ್ಸಾದ್​​ ಅವರು ವಿಮಾನ ಅಪಘಾತದಲ್ಲಿ (Plane Crash) ಸಾವನ್ನಪ್ಪಿರಬಹುದು ಎಂದು ರಾಯಿಟರ್ಸ್‌ (Reuters) ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದರೊಂದಿಗೆ ಅಸ್ಸಾದ್ ಅವರ 24 ವರ್ಷಗಳ ಆಳ್ವಿಕೆಯ ಅಂತ್ಯವಾಯಿತ್ತಾ ಎನ್ನುವ ಅನುಮಾನ ಮೂಡುತ್ತಿದೆ. ಯಾಕೆಂದರೆ ಫ್ಲೈಟ್‌ರಾಡಾರ್ ಡೇಟಾದ ಪ್ರಕಾರ ರಾಜಧಾನಿಯಿಂದ ಅಸ್ಸಾದ್ ಹಾರಾಟದ ಕುರಿತು “ವಿವರಿಸಲಾಗದ ಯು-ಟರ್ನ್ ಮತ್ತು ಕಣ್ಮರೆ” ಎಂದು ಉಲ್ಲೇಖಿಸಿದೆ. ಅಸ್ಸಾದ್ ಸಾವಿನ ಊಹಾಪೋಹಗಳಿಗೆ ಕಾರಣವೇನು? ಫ್ಲೈಟ್‌ರಾಡಾರ್ ವೆಬ್‌ಸೈಟ್‌ನ ಡೇಟಾವನ್ನು ರಾಯಿಟರ್ಸ್ ಉಲ್ಲೇಖಿಸಿದ್ದು, ಬಂಡುಕೋರ ಪಡೆಗಳಿಂದ ರಾಜಧಾನಿ ಡಮಾಸ್ಕಸ್‌ ನಗರವು ದಾಳಿಗೊಳಗಾದ ಸಮಯದಲ್ಲಿ ಸಿರಿಯನ್ ವಿಮಾನವೊಂದು ಡಮಾಸ್ಕಸ್ ವಿಮಾನ ನಿಲ್ದಾಣದಿಂದ ಹೊರಟಿದೆ ಎಂದು ವರದಿ ಮಾಡಿತ್ತು. ಇನ್ನು ವಿಮಾನವು ಪ್ರಾರಂಭದಲ್ಲಿ ಅಧ್ಯಕ್ಷ ಅಸ್ಸಾದ್ ಅವರ ಭದ್ರಕೋಟೆ ಎಂದು ನಂಬಲಾದ ಸಿರಿಯಾದ ಕರಾವಳಿ ಪ್ರದೇಶತ್ತ ಚಲಿಸಿತ್ತು ಎನ್ನಲಾಗಿದೆ. ಆದರೆ, ವಿಮಾನವು ಏಕಾಏಕಿ ಯು-ಟರ್ನ್ ಮಾಡುವುದರೊಂದಿಗೆ ಸ್ವಲ್ಪ ಸಮಯದವರೆಗೆ ವಿರುದ್ಧ ದಿಕ್ಕಿನಲ್ಲಿ ಹಾರಿ, ನಂತರ ಹಠಾತ್ ರಾಡಾರ್‌ಗಳಿಂದ ಕಣ್ಮರೆಯಾಗಿದೆ. ಇದರಿಂದ ಅಸ್ಸಾದ್ ಅವರು ಆಕಾಶದಲ್ಲೆ ಕೊಲ್ಲಲ್ಪಟ್ಟಿರಬಹುದು ಎಂಬ ಊಹಾಪೋಹ ಹರಡಿದೆ. ಇದನ್ನು ಓದಿ: 24 ವರ್ಷಗಳ ಅಸ್ಸಾದ್ ಆಡಳಿತ ಅಂತ್ಯ! ಸಿರಿಯಾವನ್ನು ಸಂಪೂರ್ಣ ಹಿಡಿತಕ್ಕೆ ತೆಗೆದುಕೊಂಡ ಬಂಡುಕೋರರು! ಮುಂದೇನು? ಇನ್ನು ಕಣ್ಮರೆಯಾಗುವ ಕೆಲವೇ ನಿಮಿಷಗಳ ಮೊದಲು ವಿಮಾನವು ಆಕಾಶದ 3,650 ಮೀಟರ್‌ಗಳಿಂದ 1,070 ಮೀಟರ್‌ಗೆ ತೀವ್ರವಾಗಿ ಇಳಿದಿದೆ ಎಂದು ವಿಮಾನದ ಹಾರಾಟ ಮಾಹಿತಿಯು ಸೂಚಿಸುತ್ತದೆ. ಹಾಗೂ ಅಸ್ಸಾದ್​​ ಅವರ ವಿಮಾನವು ಪತನ ವಾಗಿರಬಹುದಾದ ಸ್ಥಳವು ಬಂಡುಕೋರರ ಹಿಡಿತದಲ್ಲಿರುವ ಹೋಮ್ಸ್ ಪ್ರದೇಶವಾಗಿದೆ ಎನ್ನಲಾಗಿದ್ದು, ಈ ಮಾಹಿತಿಯು ಹಲವು ಊಹಾಪೋಹಗಳನ್ನು ಸೃಷ್ಠಿಸಿದೆ. ಮತ್ತೊಂದೆಡೆ ಅಧ್ಯಕ್ಷ ಅಸ್ಸಾದ್ ಅವರ ಕಣ್ಮರೆಯ ಕುರಿತು ಶನಿವಾರ ರಾತ್ರಿ ಸೌದಿ ಟೆಲಿವಿಷನ್ ನೆಟ್‌ವರ್ಕ್ ಅಲ್-ಅರೇಬಿಯಾಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೊಹಮ್ಮದ್ ಘಾಜಿ ಅಲ್-ಜಲಾಲಿ ಅವರು ಅಧ್ಯಕ್ಷ ಅಸ್ಸಾದ್ ಮತ್ತು ಅವರ ಪತ್ನಿ ಅಸ್ಮಾ ಹಾಗೂ ಇಬ್ಬರು ಮಕ್ಕಳೂ ಎಲ್ಲಿದ್ದಾರೆಂದು ನನಗೆ ತಿಳಿದಿಲ್ಲ ಹಾಗೂ ಅವರು ಸರ್ಕಾರದೊಂದಿಗೆ ಸಂಪೂರ್ಣ ಸಂವಹನವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದ್ದರು. ಇದನ್ನು ಓದಿ: ಬಂಡುಕೋರರ ಬಲೆಯಲ್ಲಿ ಡಮಾಸ್ಕಸ್; ಅಧಿಕಾರ ಹಸ್ತಾಂತರಕ್ಕೆ ಸಿದ್ಧ ಎಂದ ಸಿರಿಯಾ ಪ್ರಧಾನಿ! ಸಿರಿಯಾದ ರಾಯಿಟರ್ಸ್ಗೆ ಸಂಸ್ಥೆಯ ಮೂಲಗಳು ಅಧ್ಯಕ್ಷ ಅಸ್ಸಾದ್ ಅವರು ಪಲಾಯನ ಮಾಡಿದ ಕೇಲವೆ ಕ್ಷಣಗಳಲ್ಲಿ ಕೊಲ್ಲಲ್ಪಟ್ಟಿರುವ ಹೆಚ್ಚಿನ ಸಾಧ್ಯತೆಗಳಿದ್ದು, ಅವರು ವಿಮಾನದಿಂದ ಕೆಳಗಿಳಿದರಬಹುದಾದ ಸಾಧ್ಯತೆಗಳು ಅತಿ ಕಡಿಮೆ ಅಥವಾ ಟ್ರಾನ್ಸ್‌ಪಾಂಡರ್ ಸ್ವಿಚ್ ಆಫ್ ಮಾಡಿರುವ ಸಾಧ್ಯತೆಗಳು ಇದೆ ಎಂದು ಹೇಳಿರುವುದಾಗಿ ವರದಿ ಮಾಡಿದೆ. ಮಾಸ್ಕೋದಲ್ಲಿ ಆಶ್ರಯ ಪಡೆದಿದ್ದಾರ ಅಸ್ಸಾದ್? ಬಂಡುಕೋರರು ಮುಂದುವರೆದಂತೆ, ಅವರು ರಷ್ಯಾ ಅಥವಾ ಇರಾನ್‌ನಲ್ಲಿ ಆಶ್ರಯ ಪಡೆದಿರಬಹುದು ಎಂಬ ಊಹಾಪೋಹಗಳು ಇದ್ದವು. ವರದಿಗಳ ಪ್ರಕಾರ, ಅಸ್ಸಾದ್ ಅವರು ರಾಜಧಾನಿಗೆ ಬಂಡುಕೋರರ ಆಕ್ರಮಣಕ್ಕೂ ಸ್ವಲ್ಪ ಮೊದಲು ಮಾಸ್ಕೋಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ಇದರ ನಡುವೆ ಇರಾನ್ ಸುದ್ದಿ ಸಂಸ್ಥೆಗಳು ಡಮಾಸ್ಕಸ್‌ನಲ್ಲಿ ಅಸ್ಸಾದ್​ ಅವರು ಇರಾನ್‌ನ ಉನ್ನತ ಅಧಿಕಾರಿಗಳನ್ನು ಭೇಟಿಯಾಗುತ್ತಿರುವ ಚಿತ್ರಗಳನ್ನು ಪ್ರಕಟಿಸಿದವು. ಒಂದು ವಾರದ ಹಿಂದೆ ಬಂಡುಕೋರರು ಮುನ್ನಡೆದ ನಂತರ ಅಸ್ಸಾದ್ ಸಾರ್ವಜನಿಕವಾಗಿ ಮಾತನಾಡಲಿಲ್ಲ, ದಂಗೆಕೋರರು ಉತ್ತರ ಅಲೆಪ್ಪೊವನ್ನು ಹಠಾತ್ ದಾಳಿಯಲ್ಲಿ ವಶಪಡಿಸಿಕೊಂಡಾಗ ಮುಂಚೂಣಿಗಳು ಕುಸಿಯುತ್ತಿದ್ದಂತೆ ನಗರಗಳ ಉತ್ತರಾಧಿಕಾರಕ್ಕೆ ತೆರಳಿದರು. ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿ, ಸಿರಿಯಾವನ್ನು ಅವ್ಯವಸ್ಥೆ ಎಂದು ಬಣ್ಣಿಸಿದ್ದು, ಹಾಗೂ ಯುನೈಟೆಡ್ ಸ್ಟೇಟ್ಸ್ ಆಫ್​ ಅಮೆರಿಕವು ಸಿರಿಯಾದಲ್ಲಿನ ಯುದ್ದದಿಂದ ದೂರವಿರಬೇಕು ಎಂದು ಹೇಳಿದರು. ಅಸ್ಸಾದ್‌ನ ಪದಚ್ಯುತಿಯು ದೀರ್ಘಾವಧಿಯ ಅಂತರ್ಯುದ್ಧವನ್ನು ಕಂಡಿರುವ ದೇಶಕ್ಕೆ “ಆಗಬಹುದಾದ ಅತ್ಯುತ್ತಮ ವಿಷಯ” ಎಂದು ಅವರು ಹೇಳಿದರು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.