NEWS

Rental Fraud: ಬೆಂಗಳೂರಲ್ಲಿ ಮನೆ ಲೀಸ್​ ಪಡೆಯೋರೆ ಎಚ್ಚರ! ಒಂದೇ ಮನೆ ತೋರಿಸಿ ಲಕ್ಷ ಲಕ್ಷ ಹಣ ವಂಚನೆ

local 18 news ಬೆಂಗಳೂರು: ಅವರೆಲ್ಲಾ ನಗರದಲ್ಲಿ (Bengaluru City) ಒಳ್ಳೇ ಮನೆ ಲೀಸ್‌ಗೆ (Home Lease) ಪಡೆದು ಆರಾಮಾಗಿ ಇದ್ದರಾಯಿತು ಅಂದುಕೊಂಡಿದ್ದರು. ಇಂಥವರನ್ನೇ ಟಾರ್ಗೆಟ್‌ ಮಾಡಿದ್ದ ಆ ಗ್ಯಾಂಗ್‌‌ ಒಂದೇ ಮನೆಯನ್ನ ಎಲ್ಲರಿಗೂ ತೋರಿಸಿ ಮಕ್ಮಲ್‌ ಟೋಪಿ (Rental Fraud) ಹಾಕಿದ್ದಾರೆ. ಇದರಿಂದ ಹಣ (Money Fraud) ಕಳೆದುಕೊಂಡವರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಬದುಕು ಸಾಗಿಸೋದಕ್ಕೆ ಹುಟ್ಟೂರು ಬಿಟ್ಟು ಕೋಟ್ಯಂತರ ಜನ ಬೆಂಗಳೂರಿಗೆ ಆಗಮಿಸ್ತಾರೆ. ದುಡಿಯೋದಕ್ಕೆ ಬಂದ ಕುಟುಂಬಗಳಿಗೆ ಸೂರು ಬಹಳ ಮುಖ್ಯ. ಹೀಗಾಗಿ ಬಾಡಿಗೆ, ಪಡೆಯೋದು, ಲೀಸ್‌ಗೆ ಪಡೆಯೋದು ಕಾಮನ್‌‌. ಆದರೆ ಇದನ್ನೇ ಬಂಡವಾಳ ಮಾಡ್ಕೊಂಡ ಕೆಲ ಕಿಡಿಗೇಡಿಗಳು ನಂಬಿಸಿ ವಂಚನೆ ಮಾಡಿದ್ದಾರೆ. ಮನೆ ಲೀಸ್‌‌ಗೆ ಕೊಡೋದಾಗಿ ಮೋಸ ಹೀಗೆ ಸೆಲ್ಫೀಗೆ ಪೋಸ್‌‌ ಕೊಟ್ಟಿರೋ ಇವನ ಹೆಸರು ಗಿರೀಶ್‌. ಹೆಬ್ಬಾಳದ ಚೋಳನಾಯಕನಹಳ್ಳಿ ನಿವಾಸಿ. ಈತನ ಪತ್ನಿ ಹೆಸರಲ್ಲಿ ಮೂರು ಅಂತಸ್ತಿನ ಕಟ್ಟಡವಿದೆ. ಈಗಾಗಲೇ ಮೂರೂ ಮನೆಗಳನ್ನ ಲೀಸ್‌ ಕೊಟ್ಟಿದ್ದಾರಂತೆ. ಬಂದಷ್ಟ ಹಣ ಇಟ್ಕೊಂಡು ತೆಪ್ಪಗೆ ಇರೋದನ್ನ ಬಿಟ್ಟು ಹಣದ ಆಸೆಗೆ ಬಿದ್ದ ಗಿರೀಶ್‌‌‌ ಅಡ್ಡದಾರಿ ಹಿಡಿದಿದ್ದಾನಂತೆ, ಎಲ್ಲಾ ಮನೆ ಬಾಡಿಗೆ ಕೊಟ್ಟಿದ್ದರೂ ನೋ ಬ್ರೋಕರ್‌ ಆ್ಯಪ್‌ನಲ್ಲಿ ಮನೆ ಖಾಲಿ ಇದೆ ಅಂತ ಜಾಹೀರಾತು ಕೊಡ್ತಿದ್ನಂತೆ. ಅದನ್ನ ನೋಡಿ ಕಾಂಟ್ಯಾಕ್ಟ್‌‌‌ ಮಾಡ್ತಿದ್ದವರಿಗೆ ಮಕ್ಮಲ್‌ ಟೋಪಿ ಹಾಕಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: Tumakuru: ರಾಷ್ಟ್ರಕೂಟರ ಅರಸ ಅಮೋಘವರ್ಷನ ಕಾಲದ ಶಿಲಾ ಶಾಸನ ಪತ್ತೆ; ಅಚ್ಚರಿ ಮಾಹಿತಿ ಬಹಿರಂಗ ಮೊದಲು ಮನೆ ತೋರಿಸ್ತಿದ್ದ ಗಿರೀಶ್ ಲೀಸ್‌ ಹಣ ಎಷ್ಟು ಅಂತ ಮಾತಾಡಿ ಡೀಲ್‌ ಮಾಡ್ತಿದ್ದನಂತೆ. ಬಳಿಕ ಹಣ ಅಕೌಂಟ್‌‌ಗೆ ಬೀಳ್ತಿದ್ದಂತೆ ಮನೆ ಕೊಡದೇ ಹೊಸ ಹೊಸ ಕಥೆ ಕಟ್ತಿದ್ದನಂತೆ. ಮನೆ ರಿನೋವೇಶನ್ ಆಗ್ತಿದೆ, ಈಗಿರುವ ಬಾಡಿಗೆದಾರರ ಜೊತೆ ಸಮಸ್ಯೆ ಆಗಿದೆ ಅಂತ ಸುಳ್ಳು ಹೇಳ್ತಿದ್ನಂತೆ. ನಂತರ ಕಾಲ್ ರಿಸೀವ್‌ ಮಾಡದೇ ಯಾಮಾರಿಸ್ತಿದ ಎಂದು ವಂಚನೆ ಒಳಗಾದವರು ಆರೋಪ ಮಾಡಿದ್ದಾರೆ. ಸುಮಾರು 12 ಮಂದಿಯಿಂದ 50 ಲಕ್ಷ ಹಣ ರೂಪಾಯಿ ಪೀಕಿ ವಂಚನೆ ಮಾಡಿದ ಆರೋಪ ಕೇಳಿ ಬಂದಿದ್ದು, ಮೋಸ ಹೋದವರು ಹಣವೂ ಇಲ್ಲದೇ, ಮನೆಯೂ ಇಲ್ಲದೇ ಪರದಾಡ್ತಿದ್ದಾರೆ. ಈ ಸಂಬಂಧ ಹೆಬ್ಬಾಳ ಠಾಣೆಗೆ ದೂರು ಕೊಟ್ಟಿದ್ದು, ನಮಗೆ ನ್ಯಾಯ ಕೊಡಿಸಿ ಅಂತ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: Bengaluru Airport: ಕೆಂಪೇಗೌಡ ಏರ್​​ಪೋರ್ಟ್​ಗೆ ಮತ್ತೊಂದು ಹಿರಿಮೆ; ಟರ್ಮಿನಲ್ 2ನ 080 ಲಾಂಜ್​​ಗೆ ಪ್ರಶಸ್ತಿ ಪೊಲೀಸ್‌‌ ತನಿಖೆ ವೇಳೆ ಈ ಹಿಂದೆ ಕೂಡ ಇದೇ ರೀತಿ ವಂಚನೆ ಎಸಗಿ ಗಿರೀಶ್‌ ಜೈಲಿಗೂ ಹೋಗಿ ಬಂದಿದ್ನಂತೆ. ಜಾಮೀನಿನ ಮೇಲೆ ಬಿಡುಗಡೆಯಾಗಿ ಪುನಃ ಕುಟುಂಬದವರ ಜೊತೆಗೂಡಿ ಮೋಸ ಮಾಡಿದ್ದಾನೆ ಎಂದು ಆರೋಪಿಸಳಾಗಿದೆ. ಸದ್ಯ ಗಿರೀಶ್ ಮತ್ತು ಮನೆಯವರ ಮೇಲೆ 3 ಪ್ರತ್ಯೇಕ ಎಫ್ಐಆರ್ ದಾಖಲಾಗಿದ್ದು, ಹೆಬ್ಬಾಳ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಒಟ್ಟಿನಲ್ಲಿ ನೀವೇನಾದರೂ ಬೆಂಗಳೂರಲ್ಲಿ ಮನೆ ಬಾಡಿಗೆ, ಲೀಸ್‌ಗೆ ಪಡೆಯೋ ಮುನ್ನ ಎಚ್ಚರವಾಗಿರಿ. ಇಂಥ ವಂಚಕರಿಂದ ಮೋಸ ಹೋಗದಿರಿ. (ವರದಿ: ಮುನಿರಾಜು, ಕ್ರೈಮ್ ಬ್ಯೂರೋ, ನ್ಯೂಸ್ 18, ಬೆಂಗಳೂರು) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.