NEWS

CT Ravi Release: ಸಿ.ಟಿ. ರವಿ ರಿಲೀಸ್! ಹೈಕೋರ್ಟ್ ಆದೇಶದ ಬಳಿಕ ಬಿಡುಗಡೆ ಮಾಡಿದ ಪೊಲೀಸರು

ಸಿ.ಟಿ. ರವಿ ದಾವಣಗೆರೆ: ಬಿಜೆಪಿ ವಿಧಾನ ಪರಿಷತ್ ಸದಸ್ಯ (BJP MLC), ಮಾಜಿ ಸಚಿವ ಸಿ.ಟಿ. ರವಿ (CT Ravi) ರಿಲೀಸ್ ಆಗಿದ್ದಾರೆ. ಸಿಟಿ ರವಿ ರಿಲೀಸ್ ಮಾಡಿ ಅಂತ ಹೈಕೋರ್ಟ್ (High Court) ಆದೇಶ ನೀಡಿತ್ತು. ಎಲ್ಲಿದ್ದಾರೋ, ಅಲ್ಲಿಂದಲೇ ಅವರನ್ನು ಬಿಡುಗಡೆ ಮಾಡುವಂತೆ ಹೈಕೋರ್ಟ್ ನ್ಯಾಯಪೀಠ ಆದೇಶಿಸಿತ್ತು. ಇದೀಗ ಹೈಕೋರ್ಟ್ ಆದೇಶದ ಪ್ರತಿ ಪೊಲೀಸರಿಗೆ ತಲುಪಿದ್ದು, ದಾವಣಗೆರೆಯಲ್ಲಿ (Davanagere) ಸಿಟಿ ರವಿಯವರನ್ನು ಪೊಲೀಸರು ರಿಲೀಸ್ ಮಾಡಿದ್ದಾರೆ. ನಿನ್ನೆ ಅರೆಸ್ಟ್, ಇಂದು ಸಿ.ಟಿ. ರವಿ ರಿಲೀಸ್! ಪರಿಷತ್ ಸದಸ್ಯ ಸಿಟಿ ರವಿ ಬಂಧನ ಪ್ರಕರಣಕ್ಕೆ ಮಧ್ಯಂತರ ಟ್ವಿಸ್ಟ್ ಸಿಕ್ಕಿದೆ. ಸಿಟಿ ರವಿಯನ್ನು ರಿಲೀಸ್ ಮಾಡುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಎಲ್ಲಿದ್ದಾರೋ ಅಲ್ಲಿಂದಾನೇ ಅವರನ್ನು ರಿಲೀಸ್ ಮಾಡಿ ಅಂತ ಕೋರ್ಟ್ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಬೆಳಗಾವಿ ಪೊಲೀಸರು ಅವರನ್ನು ದಾವಣಗೆರೆಯಲ್ಲಿ ರಿಲೀಸ್ ಮಾಡಿದ್ದಾರೆ.‘ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಹೇಳಿದ್ದೇನು? ಹೈಕೋರ್ಟ್‌ನಲ್ಲಿ ಸಿಟಿ ರವಿಗೆ ಬಿಗ್ ರಿಲೀಫ್ ಸಿಕ್ಕಿದೆ. ಸಿಟಿ ರವಿ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶಿಸಿದೆ. ಸಿಟಿ ರವಿ ಎಲ್ಲಿದ್ದಾರೋ ಅಲ್ಲಿಂದಲೇ ಬಿಡುಗಡೆ ಮಾಡುವಂತೆ ಹೈಕೋರ್ಟ್ ನ್ಯಾಯಪೀಠ ಆದೇಶಿಸಿತ್ತು. ಸಿಟಿ ರವಿ ಬಿಡುಗಡೆಗೆ ಆದೇಶ ನೀಡಿರುವ ಹೈಕೋರ್ಟ್, ಕೆಲವೊಂದು ಷರತ್ತು ವಿಧಿಸಿತ್ತು. ತನಿಖೆಗೆ ಸಹಕರಿಸಬೇಕು ಅಂತ ಸೂಚನೆ ನೀಡಿ, ಮಧ್ಯಂತರ ಆದೇಶ ನೀಡಿತ್ತು. ಇದನ್ನೂ ಓದಿ: CT Ravi: ಸಿ.ಟಿ. ರವಿಗೆ ಹೈಕೋರ್ಟ್‌ನಿಂದ ಬಿಗ್ ರಿಲೀಫ್, ಎಲ್ಲಿದ್ದಾರೋ ಅಲ್ಲಿಂದಲೇ ತಕ್ಷಣ ಬಿಡುಗಡೆಗೆೆ ಆದೇಶ! ಅತ್ತ ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ವಿಚಾರಣೆ ಮುಂದೂಡಿಕೆ ಮತ್ತೊಂದೆಡೆ ಸಿಟಿ ರವಿ ಅರ್ಜಿ ವಿಚಾರಣೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲೂ ಕೂಡ ನಡೆಯಿತು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ದೂರಿನ ಅನ್ವಯ ಸಿಟಿ ರವಿ ಅವರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದರು. ಪ್ರಕರಣದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಬೇಲ್ ಅರ್ಜಿ ವಿಚಾರಣೆಯನ್ನು ನಾಳೆಗೆ (ಡಿಸೆಂಬರ್ 21) ಮುಂದೂಡಿತ್ತು. ಸರ್ಕಾರದ ವಿರುದ್ಧ ವಿಜಯೇಂದ್ರ ಆಕ್ರೋಶ ಸಿ.ಟಿ. ರವಿ ಬಂಧನಕ್ಕೆ (CT Ravi Arrest) ಬಿಜೆಪಿ ರಾಜ್ಯಾಧ್ಯಕ್ಷ (BJP State President) ಬಿ.ವೈ. ವಿಜಯೇಂದ್ರ (BY Vijayendra) ಕಿಡಿ ಕಾರಿದ್ದಾರೆ. ಕಾಂಗ್ರೆಸ್ ಸರ್ಕಾರ (Congress Government) ದೌರ್ಜನ್ಯ ಮಾಡಿದೆ, ಸಿ.ಟಿ. ರವಿ ಮೇಲೆ ದೌರ್ಜನ್ಯವಾಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರ ಹೇಗೆ ದುರುಪಯೋಗ ಮಾಡಿದೆ ಅನ್ನೋದನ್ನ ನೋಡ್ತಿದ್ದೇವೆ ಅಂತ ಕಿಡಿಕಾರಿದ್ರು. ರೈತರ ಮೇಲೆ ಲಾಠಿ ಚಾರ್ಜ್, ಪಂಚಮಸಾಲಿ (Panchamasali) ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡ್ತಾರೆ. ಇದೀಗ ವಿಧಾನಸೌಧದ ಒಳಗೆ ಬಂದು ಸಿಟಿ ರವಿ ಮೇಲೆ ಹಲ್ಲೆ ಮಾಡ್ತಾರೆ. ಅದಕ್ಕೆ ಅವಕಾಶವನ್ನ ಕೊಡ್ತಾರೆ ಅಂತ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿ.ಟಿ. ರವಿಗೆ ರಕ್ತ ಬಂದರೂ ಆಸ್ಪತ್ರೆಗೆ ಸೇರಿಸಿಲ್ಲ ಸಿ.ಟಿ. ರವಿಯನ್ನು 500 ಕಿಮಿ ಸುತ್ತಿಸಿದ್ದಾರೆ. ಇದು ಹಿಟ್ಲರ್ ಸರ್ಕಾರವೋ? ಕಾಂಗ್ರೆಸ್ ಸರ್ಕಾರವೋ? ಅಂತ ವಿಜಯೇಂದ್ರ ಪ್ರಶ್ನಿಸಿದ್ರು. ತುರ್ತು ಪರಿಸ್ಥಿತಿ ಹೇರಿರುವ ಕುಖ್ಯಾತಿ ಕಾಂಗ್ರೆಸ್ ಪಕ್ಷದ್ದು. ನೆತ್ತಿಯ ಮೇಲೆ ರಕ್ತ ಬಂದ್ರೂ ಆಸ್ಪತ್ರೆಗೆ ಕರೆದುಕೊಂಡು ಹೋಗಿಲ್ಲ ಅಂತ ಆರೋಪಿಸಿದ್ರು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.