NEWS

Allu Arjun-RVG: ಆ ನಟಿಯನ್ನು ಅರೆಸ್ಟ್​ ಮಾಡಲು ಸ್ವರ್ಗಕ್ಕೆ ಹೋಗ್ತೀರಾ? ತೆಲಂಗಾಣ ಪೊಲೀಸರ ಬಗ್ಗೆ ರಾಮ್ ಗೋಪಾಲ್ ವರ್ಮಾ ವ್ಯಂಗ್ಯ!

ಸಂಧ್ಯಾ ಥಿಯೇಟರ್​ ಕಾಲ್ತುಳಿತದಲ್ಲಿ ನಟ ಅಲ್ಲು ಅರ್ಜುನ್ (Actor Allu Arjun)​ ಬಂಧನವಾದ ವಿಚಾರಕ್ಕೆ ಸಂಬಂಧಿಸಿದಂತೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ತೆಲಂಗಾಣ ಪೊಲೀಸರನ್ನ ಟೀಕೆ ಮಾಡ್ತಾನೆ ಇದ್ದಾರೆ. ಪುಷ್ಪ 2 (Pushpa 2) ಸಿನಿಮಾ ಟೀಮ್​ ಬೆಂಬಲಕ್ಕೆ ನಿಂತ ಆರ್​ಜಿವಿ ಸಿನಿಮಾ ಬೆಲೆ ಟಿಕೆಟ್ ಬೆಲೆ ಏರಿಯನ್ನು ಕೂಡ ಸಮರ್ಥಿಸಿಕೊಂಡಿದ್ರು. ಮಹಿಳಾ ಅಭಿಮಾನಿ ಸಾವಿನ ಕೇಸ್​ನಲ್ಲಿ ಅಲ್ಲು ಅರ್ಜುನ್ ಬಂಧನವಾದಾಗ್ಲು, ಇದೆಂಥಾ ಅನ್ಯಾಯ ಎಂದು ಟಾಲಿವುಡ್ ನಿರ್ದೇಶಕ್​ ರಾಮ್ ಗೋಪಾಲ್ ವರ್ಮಾ ಧ್ವನಿ ಎತ್ತಿದ್ರು. ಇದೀಗ ಮತ್ತೊಂದು ಟ್ವೀಟ್ ಮೂಲಕ ತೆಲಂಗಾಣ ಸರ್ಕಾರದ (Telangana Government) ವ್ಯಂಗ್ಯ ಮಾಡ್ತಿದ್ದಾರೆ. ತೆಲಂಗಾಣ ಪೊಲೀಸರ ವಿರುದ್ಧ ವರ್ಮಾ ಟ್ವೀಟ್ ಸಿನಿಮಾಗಳ ಜೊತೆಗೆ ಅವರ ನೇರ ನುಡಿಗಳಿಂದಳು ರಾಮ್​ ಗೋಪಾಲ್ ವರ್ಮಾ ಸದಾ ಸುದ್ದಿಯಲ್ಲಿರುತ್ತಾರೆ. ಈಗಾಗಲೇ ಹಲವು ವಿವಾದಗಳಲ್ಲಿ ಸಿಲುಕಿರುವ ರಾಮ್ ಗೋಪಾಲ್ ವರ್ಮಾ ಇದೀಗ ಮತ್ತೊಮ್ಮೆ ಸೆನ್ಸೇಷನಲ್ ಕಮೆಂಟ್ ಮಾಡಿದ್ದಾರೆ. ತೆಲಂಗಾಣ ಪೊಲೀಸರ ವಿರುದ್ಧ ವರ್ಮಾ ಮಾಡಿರುವ ಟ್ವೀಟ್ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲು ಅರ್ಜುನ್​ನನ್ನು ಬಂಧಿಸಿದ್ದ ಪೊಲೀಸರು ಡಿಸೆಂಬರ್ 4ರಂದು ಪುಷ್ಪ 2 ಪ್ರೀಮಿಯರ್ ವೇಳೆ ಸಂಧ್ಯಾ ಥಿಯೇಟರ್ ನಲ್ಲಿ ನಡೆದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು ಗೊತ್ತೇ ಇದೆ. ಇದೇ ವಿಚಾರಕ್ಕೆ ಪೊಲೀಸರು ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲಿಸಿದ್ರು. ಥಿಯೇಟರ್ ಮಾಲೀಕರ ಜೊತೆಗೆ ಅಲ್ಲು ಅರ್ಜುನ್ ಅವರನ್ನ ಕೂಡ ಪೊಲೀಸರು ಬಂಧಿಸಿದ್ರು. ಅಲ್ಲು ಅರ್ಜುನ್ ಬಂಧಿಸಿದ್ದು ಸರೀನಾ!? ಪೊಲೀಸರು ಅಲ್ಲು ಅರ್ಜುನ್‌ನನ್ನು ಬಂಧಿಸಿ ಜೈಲಿಗೆ ಹಾಕಿದ್ರು. ಬಂಧಿಸಿದ ದಿನವೇ ನಟ ಅಲ್ಲು ಅರ್ಜುನ್​ಗೆ ಬೇಲ್ ಸಿಕ್ಕಿತ್ತು. ಒಂದು ರಾತ್ರಿ ಜೈಲಿನಲ್ಲಿದ್ದ ಅಲ್ಲು ಅರ್ಜುನ್ ಜಾಮೀನಿನ ಮೇಲೆ ರಿಲೀಸ್ ಆದ್ರು. ಪೊಲೀಸರ ಕ್ರಮದ ಬಗ್ಗೆ ರಾಮ್ ಗೋಪಾಲ್ ವರ್ಮಾ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ. ಅಲ್ಲು ಅರ್ಜುನ್ ಬಂಧನವನ್ನು ಪ್ರತಿ ಸ್ಟಾರ್​ಗಳು ಕೂಡ ತೀವ್ರವಾಗಿ ಪ್ರತಿಭಟಿಸಬೇಕು ಎಂದಿದ್ದಾರೆ. ಶ್ರೀದೇವಿಯನ್ನ ಅರೆಸ್ಟ್ ಮಾಡಲು ಸ್ವರ್ಗಕ್ಕೆ ಹೋಗ್ತೀರಾ? ‘‘ಅಲ್ಲು ಅರ್ಜುನ್ ಬಂಧನದ ವಿರುದ್ಧ ಎಲ್ಲಾ ಚಿತ್ರ ನಿರ್ಮಾಪಕರು ಪ್ರತಿಭಟನೆ ನಡೆಸಬೇಕು. ಯಾಕೆಂದರೆ ಯಾವುದೇ ಸೆಲೆಬ್ರಿಟಿಗಳು, ಸಿನಿಮಾ ತಾರೆಯಾಗಲಿ, ರಾಜಕೀಯ ನಾಯಕರಾಗಲಿ, ಭಾರೀ ಜನಪ್ರಿಯತೆ ಗಳಿಸುವುದು ಅಪರಾಧವೇ? ನಾ ಸಂಶಂ ಚಿತ್ರದ ಶೂಟಿಂಗ್ ವೇಳೆ ಶ್ರೀದೇವಿಯನ್ನು ನೋಡಲು ಬಂದಿದ್ದ ಲಕ್ಷ ಲಕ್ಷ ಜನರಲ್ಲಿ ಮೂವರು ಸಾವನ್ನಪ್ಪಿದ್ದರು. ಆದ್ರೆ ಶ್ರೀದೇವಿಯನ್ನು ಬಂಧಿಸಲು ತೆಲಂಗಾಣ ಪೊಲೀಸರು ಈಗ ಸ್ವರ್ಗಕ್ಕೆ ಹೋಗ್ತಾರಾ ಎಂದು ರಾಮ್ ಗೋಪಾಲ್ ವರ್ಮಾ ಎಕ್ಸ್ (ಟ್ವಿಟ್ಟರ್) ನಲ್ಲಿ ಬರೆದಿದ್ದಾರೆ. Every STAR should STRONGLY protest against @alluarjun ‘s ARREST because for any celebrity whether it’s a FILM STAR or a POLITICAL STAR , is it a crime for them to be ENORMOUSLY POPULAR??? 3 people died in the lakhs of crowd who came to see SRIDEVI in the shooting of my film… ಇದನ್ನೂ ಓದಿ: Pushpa Movie: ಬಾಕ್ಸ್​ ಆಫೀಸ್ ಕೊಳ್ಳೆ ಹೊಡೀತಿರೋ ಪುಷ್ಪ 2ಗೆ ಬಿಗ್ ಶಾಕ್​! PVR ಐನಾಕ್ಸ್​​ನಿಂದ ಸಿನಿಮಾ ಎತ್ತಂಗಡಿ ಮಾಡಿದ್ರಾ? ಅಲ್ಲು ಅರ್ಜುನ್ ಸದ್ಯ ಬೇಲ್ ಮೇಲೆ ಹೊರಗಿದ್ದಾರೆ. ಇತ್ತ ಬೇಲ್ ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ತೆಲಂಗಾಣ ಪೊಲೀಸರು ತಯಾರಿ ನಡೆಸಿದ್ದಾರೆ ಎನ್ನಲಾಗ್ತಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.