ಜೈಪುರ ಟ್ಯಾಂಕರ್ ದುರಂತ (ಫೋಟೋ ಕೃಪೆ; PTI) ಜೈಪುರ: ಇಂದು (ಡಿ.20) ಮುಂಜಾನೆ ಸಿಎನ್‌ಜಿ ಗ್ಯಾಸ್ ಟ್ಯಾಂಕರ್ (CNG Gas Tanker) ಮತ್ತು ಇನ್ನೊಂದು ಟ್ರಕ್ ನಡುವೆ ಭೀಕರ ರಸ್ತೆ ಅಪಘಾತ (Road Accident) ಉಂಟಾಗಿ ಭಾರೀ ಸ್ಫೋಟ ಸಂಭವಿಸಿದ ಘಟನೆ ರಾಜಸ್ಥಾನದಲ್ಲಿ (Rajasthan Jaipur Accident) ನಡೆದಿತ್ತು. ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಅಪಘಾತದ ತೀವ್ರತೆಗೆ ಸಿಎನ್‌ಜಿ ಗ್ಯಾಸ್ ತುಂಬಿದ್ದ ಟ್ರಕ್ ಸ್ಫೋಟಗೊಂಡಿದ್ದು, ಬಳಿಕ ಬೆಂಕಿ ಹತ್ತಿಕೊಂಡು ಕನಿಷ್ಟ 11ಕ್ಕೂ ಹೆಚ್ಚು ಮಂದಿ ಸುಟ್ಟು ಕರಕಲಾಗಿದ್ದಾರೆ ಎಂದು ತಿಳಿದು ಬಂದಿದೆ. ಸಿಎನ್‌ಜಿ ಟ್ರಕ್ ಮತ್ತು ಇನ್ನೊಂದು ಟ್ರಕ್ ನಡುವೆ ನಡೆದ ಡಿಕ್ಕಿಯ ತೀವ್ರತೆಗೆ ಸ್ಫೋಟ ಸಂಭವಿಸಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಇತರ ವಾಹನಗಳಿಗೂ ಬೆಂಕಿ ಆವರಿಸಿ ಸುಟ್ಟು ಹೋಗಿದೆ ಎನ್ನಲಾಗಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಡಿಸೆಂಬರ್ 20) ಜೈಪುರ ಅಗ್ನಿ ದುರಂತದಿಂದ ಸಾವನ್ನಪ್ಪಿದ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಜೈಪುರ ಭೀಕರ ದುರಂತದಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ಪ್ರಧಾನಿ ಮೋದಿ ಸಾಂತ್ವನ ತಿಳಿಸಿದ್ದು, 2 ಲಕ್ಷ ಪರಿಹಾರ ಧನವನ್ನೂ ಘೋಷಿಸಿದ್ದಾರೆ. ಮೋದಿಯಿಂದ 2 ಲಕ್ಷ ಪರಿಹಾರ ಘೋಷಣೆ! ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಡಿಸೆಂಬರ್ 20) ಜೈಪುರ ಅಗ್ನಿ ದುರಂತದಿಂ ಸಾವನ್ನಪ್ಪಿದವರ ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಘಟನೆಯಲ್ಲಿ ಮೃತರ ಕುಟುಂಬಗಳಿಗೆ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ 50,000 ರೂಪಾಯಿ ಪರಿಹಾರವನ್ನು ಪ್ರಧಾನಿ ಘೋಷಿಸಿದ್ದಾರೆ. ಇದನ್ನೂ ಓದಿ: ಕೇಳಿದ್ದು ಎಲೆಕ್ಟ್ರಾನಿಕ್ಸ್ ಸಾಧನ, ಬಂದಿದ್ದು ಮೃತದೇಹ! ಅಷ್ಟಕ್ಕೂ ಆಗಿದ್ದೇನು? ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, “ರಾಜಸ್ಥಾನದ ಜೈಪುರ-ಅಜ್ಮೀರ್ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಪ್ರಾಣಹಾನಿಯಿಂದ ತೀವ್ರ ದುಃಖವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸಿ, ಗಾಯಾಳುಗಳು ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ಬರೆದಿದ್ದಾರೆ” “ಪ್ರತಿಯೊಬ್ಬ ಮೃತರ ಸಂಬಂಧಿಕರಿಗೆ PMNRF ನಿಂದ 2 ಲಕ್ಷ ರೂ.ಗಳ ಪರಿಹಾರವನ್ನು ನೀಡಲಾಗುವುದು. ಗಾಯಗೊಂಡವರಿಗೆ 50,000 ರೂ.ಗಳನ್ನು ನೀಡಲಾಗುವುದು” ಎಂದು ಪೋಸ್ಟ್‌ನಲ್ಲಿ ಸೇರಿಸಿಕೊಂಡಿದ್ದಾರೆ. Deeply saddened by the loss of lives in the accident on Jaipur-Ajmer highway in Rajasthan. Condolences to those who lost their loved ones. May the injured recover soon. The local administration is assisting those affected. An ex-gratia of Rs. 2 lakh from PMNRF would be given to… ಏನಿದು ಘಟನೆ? ಇಂದು ಮುಂಜಾನೆ ಜೈಪುರದ ಭಂಕ್ರೋಟಾ ಪ್ರದೇಶದಲ್ಲಿನ ಅಜ್ಮೀರ್ ರಸ್ತೆಯಲ್ಲಿ ಈ ಭೀಕರ ದುರಂತ ಸಂಭವಿಸಿದೆ. ಇಲ್ಲಿನ ಪೆಟ್ರೋಲ್ ಪಂಪ್ ಬಳಿ ಒಂದರ ಮೇಲೆ ಒಂದು ಹಲವು ವಾಹನಗಳು ಸರಣಿ ಡಿಕ್ಕಿ ಹೊಡೆದಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ನಂದಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಮಿತ್ ಕುಮಾರ್, “ಜೈಪುರದ ಭಂಕ್ರೋಟಾ ಪ್ರದೇಶದಲ್ಲಿ ಪೆಟ್ರೋಲ್ ಪಂಪ್ ಬಳಿ ಭೀಕರ ಅಪಘಾತ ಮತ್ತು ಬೆಂಕಿ ಸಂಭವಿಸಿದೆ. ಅಜ್ಮೀರ್ ಮುಖ್ಯ ರಸ್ತೆಯಲ್ಲಿ ಇಂದು ಮುಂಜಾನೆ ಅಪಘಾತ ಸಂಭವಿಸಿದೆ. ಸುಮಾರು ಎರಡು ಡಜನ್ ವಾಹನಗಳು ಬೆಂಕಿಗೆ ಆಹುತಿಯಾಗಿವೆ ಮತ್ತು ಅನೇಕ ಟ್ರಕ್‌ಗಳು ಮತ್ತು ಟ್ರಾಲಿಗಳು ಸುಟ್ಟು ಬೂದಿಯಾಗಿದೆ’ ಎಂದು ಹೇಳಿದ್ದಾರೆ. ‘ಈ ಅಪಘಾತದಲ್ಲಿ ಗ್ಯಾಸ್ ಟ್ಯಾಂಕರ್ ಕೂಡ ಇದ್ದಿದ್ದರಿಂದ ಅದು ಬೆಂಕಿಯನ್ನು ತೀವ್ರಗೊಳಿಸಿರಬಹುದು ಎಂದಿರುವ ಎಸ್ಪಿ ಅಮಿತ್ ಕುಮಾರ್, ಇದರಿಂದ ಅಕ್ಕಪಕ್ಕದ ಹಲವು ವಾಹನಗಳಿಗೂ ಬೆಂಕಿ ಹೊತ್ತಿಕೊಂಡಿದೆ. ಪೊಲೀಸರು, ನಾಗರಿಕ ರಕ್ಷಣಾ ದಳ, ಅಗ್ನಿಶಾಮಕ ದಳದವರು ಪರಿಸ್ಥಿತಿ ನಿಯಂತ್ರಿಸಲು ಅವಿರತ ಶ್ರಮಿಸುತ್ತಿದ್ದಾರೆ. ಕೆಲವು ಸಾವುನೋವುಗಳು ಸಂಭವಿಸಿದೆ. ನಾವು ವಿವರಗಳನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೆಟ್ರೋಲ್ ಪಂಪ್ ಉದ್ಯೋಗಿ ಮೋತಿ ಸಿಂಗ್, ನಾನು ಹಣವನ್ನು’ಲೆಕ್ಕಾಚಾರ ಮಾಡುವಾಗ ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಇದ್ದಕ್ಕಿದ್ದಂತೆ ಎಲ್ಲಾ ಟ್ರಕ್‌ಗಳು ಸುಟ್ಟುಹೋದವು. ನಮ್ಮೆದುರು ನಾಯರಾ ಪಂಪ್ ಇತ್ತು, ಅದಕ್ಕೂ ಬೆಂಕಿ ಹತ್ತಿಕೊಂಡಿತು. ಇಲ್ಲಿ ಬೆಂಕಿಯನ್ನು ಸಿಲಿಂಡರ್ ಬಳಸಿ ನಿಯಂತ್ರಿಸಿದ್ದೇವೆ ಎಂದು ಹೇಳಿದ್ದಾರೆ. ಈ ಸಂಬಂಧ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿದ್ದು, ಜೈಪುರ-ಅಜ್ಮೀರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೆಟ್ರೋಲ್ ಪಂಪ್ ಮತ್ತು ರಾಸಾಯನಿಕ ಟ್ಯಾಂಕರ್‌ನಲ್ಲಿ ಬೆಂಕಿಯ ಘಟನೆಯು ತುಂಬಾ ಕಳವಳಕಾರಿಯಾಗಿದೆ. ಈ ಅವಘಡದಲ್ಲಿ ಹಲವರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಎಲ್ಲಾ ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. None
Popular Tags:
Share This Post:
What’s New
Spotlight
Today’s Hot
-
- December 20, 2024
-
- December 20, 2024
-
- December 20, 2024
CT Ravi Release: ಈಗ ಎಲ್ಲಿದ್ದಾರೆ ಸಿಟಿ ರವಿ? ಅಲ್ಲಿಂದಲೇ ರಿಲೀಸ್ ಆಗ್ತಾರಾ?
- By Sarkai Info
- December 20, 2024
Featured News
CT Ravi: ಬಂಧನವಾದ 24 ಗಂಟೆಯೊಳಗೆ ಸಿಟಿ ರವಿ ಬಿಡುಗಡೆ! ರಾಜ್ಯ ಸರ್ಕಾರಕ್ಕೆ ಭಾರೀ ಮುಖಭಂಗ!
- By Sarkai Info
- December 20, 2024
Latest From This Week
Max Movie: ಕಿಚ್ಚನ ಮ್ಯಾಕ್ಸ್ ಚಿತ್ರದಲ್ಲಿ ಲೇಡಿ ವಿಲನ್! ಯಾರು ಆ ಖಳ ನಾಯಕಿ?
NEWS
- by Sarkai Info
- December 20, 2024
Subscribe To Our Newsletter
No spam, notifications only about new products, updates.
Popular News
Top Picks
CT Ravi: ಸಿಟಿ ರವಿಗೆ ಮುಂದುವರೆದ ಸಂಕಷ್ಟ! ಬೇಲ್ ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್
- December 20, 2024