NEWS

Sea Turtle: ಕಡಲಜೀವಿಯ ಬಾಣಂತನಕ್ಕೆ ಸಜ್ಜಾದ ಅರಣ್ಯ ಇಲಾಖೆ- ಈವರೆಗೆ 310 ಕಡಲಾಮೆ ಮೊಟ್ಟೆಗಳ ಸಂರಕ್ಷಣೆ

ವಿಡಿಯೋ ಇಲ್ಲಿ ನೋಡಿ ಗೋಕರ್ಣ: ಕಡಲಾಮೆಗಳು(Sea Turtle) ಮೊಟ್ಟೆ(Egg) ಇಡುವ ಹಂಗಾಮ ಪ್ರಾರಂಭವಾಗಿದೆ. ಹೀಗಾಗಿ ಕಡಲಜೀವಿಯ ಬಾಣಂತನಕ್ಕೆ ಅರಣ್ಯ ಇಲಾಖೆ ಸಜ್ಜಾಗಿದ್ದು, ಮೊಟ್ಟೆ ಸಂರಕ್ಷಣೆಯ ಕಾರ್ಯ ಪ್ರಾರಂಭಿಸಿದೆ. ಗುರುವಾರ ರಾತ್ರಿ ದುಬ್ಬನಸಸಿಯ ಕಡಲತೀರದಲ್ಲಿ ಅರಣ್ಯ ಇಲಾಖೆಯವರು(Forest Department Staff) ಗಸ್ತು ತಿರುಗಾಡುತ್ತಿರುವಾಗ ಆಮೆ ಮೊಟ್ಟೆ ಇಡುತ್ತಿರುವುದನ್ನ ಗಮನಿಸಿದ್ದಾರೆ. ಕೂಡಲೇ ಉಪವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಒಟ್ಟು 130 ಮೊಟ್ಟೆಗಳನ್ನು ಸುರಕ್ಷಿತವಾಗಿ(Safety) ತೆಗೆದು ಸಂರಕ್ಷಣಾ ಕೇಂದ್ರದಲ್ಲಿ ಇಟ್ಟಿದ್ದಾರೆ. ಕಡಲ ತೀರದಲ್ಲಿ ಮೊಟ್ಟೆ ಇಡುವ ಕಡಲಾಮೆಗಳು ಡಿಸೆಂಬರ್ ತಿಂಗಳಿಂದ ಮೇ ತಿಂಗಳವರೆಗೆ ಅಂದರೆ ಆರು ತಿಂಗಳ ಕಾಲ ಕಡಲಾಮೆಯ ಸಂತಾನೋತ್ಪತ್ತಿ ಅವಧಿಯಾಗಿದೆ. ಇಲ್ಲಿನ ಮುಖ್ಯ ಕಡಲತೀರದಿಂದ ರುದ್ರಪಾದ, ಗಂಗೆಕೊಳ್ಳ, ದುಬ್ಬನಸಸಿ, ಗಂಗಾವಳಿಯವರೆಗಿನ ಐದು ಕಿ.ಮೀ. ವಿಸ್ತಾರದ ಕಡಲತಟದಲ್ಲಿ ಮೊಟ್ಟೆ ಇಡುತ್ತವೆ. ಸಾಮಾನ್ಯವಾಗಿ ರಾತ್ರಿ ವೇಳೆ ಬರುವ ಆಮೆ ಮರಳಿನಲ್ಲಿ ಮೊಟ್ಟೆ ಇಟ್ಟು ಮುಚ್ಚಿ ತೆರಳುತ್ತದೆ. ಮರಳಿನ ಕಾವಿನಿಂದ ಮರಿ ಹೊರಬರುವ ಬಹು ವಿಶಿಷ್ಟ ವಂಶವೃದ್ದಿಯ ಈ ನೈಸರ್ಗಿಕ ಪ್ರಕ್ರಿಯೆಗೆ ಯಾರಿಂದಲೂ ತೊಂದರೆಯಾಗಬಾರದೆಂದು ಅರಣ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ. ಇದನ್ನೂ ಓದಿ: Dakshina Kannada: ಎಳೆ ವಯಸ್ಸಿನಲ್ಲೇ ದೈವಗ‌ಳ‌ ಸೇವೆಗೆ ಇಳಿದ ಯುವಕ! 45 ದಿನಗಳ ಬಳಿಕ ಸಮುದ್ರಕ್ಕೆ ಬಿಡುವ ಕಾರ್ಯ ಅಂದರೆ ನಾಯಿ ಮತ್ತಿತರ ಪ್ರಾಣಿ ಹಾಗೂ ಮನುಷ್ಯರು ತೊಂದರೆ ನೀಡಬಾರದೆಂದು ಈ ಕ್ರಮ ವಹಿಸಲು ಮುಂದಾಗಿದೆ. ಹೀಗಾಗಿ ಅರಣ್ಯ ಇಲಾಖೆ ಮೊಟ್ಟೆ ಗೂಡನ್ನು ಗುರುತಿಸಿ, ಮೊಟ್ಟೆ ತೆಗೆದು ಗಂಗೆಕೊಳ್ಳದಲ್ಲಿರುವ ಆಮೆ ಮೊಟ್ಟೆ ಸಂರಕ್ಷಣಾ ಕೇಂದ್ರದಲ್ಲಿ ಹುಗಿದಿಟ್ಟು, ಮರಿ ಹೊರ ಬರಲು ಬೇಕಾಗುವ 45 ದಿನಗಳ ಅವಧಿಯವರೆಗೆ ನಿಗಾವಹಿಸಿ, ಮರಿಯನ್ನು ಸಮುದ್ರಕ್ಕೆ ಬಿಡುತ್ತಾರೆ. ಕಳೆದ ವರ್ಷ 8,000 ಮೊಟ್ಟೆಗಳ ಸಂರಕ್ಷಣೆ ಕಳೆದ ವರ್ಷ ಆಮೆಗಳು ಅತಿ ಹೆಚ್ಚು ಮೊಟ್ಟೆ ಇಟ್ಟು ದಾಖಲೆ ನಿರ್ಮಿಸಿದ್ದವು. ಒಟ್ಟು 104 ಗೂಡು ದೊರೆತಿದ್ದವು, ಒಟ್ಟು 8 ಸಾವಿರ ಮೊಟ್ಟೆಯನ್ನು ಸಂರಕ್ಷಿಸಿ, 7200 ಮರಿಯನ್ನ ಕಳೆದ ಅವಧಿಯಲ್ಲಿ ಕಡಲ ಒಡಲಿಗೆ ಬಿಡಲಾಗಿತ್ತು. ಈ ಮರಿ ಬಿಡುವ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು, ಗಣ್ಯ ವ್ಯಕ್ತಿಗಳು, ಸಾರ್ವಜನಿಕರು ಸೇರಿರುತ್ತಾರೆ. ಇವರೆಲ್ಲರ ಸಮ್ಮುಖದಲ್ಲಿ ಹಬ್ಬದ ಸಂಭ್ರಮದಂತೆ ಈ ಜೀವಿಗಳನ್ನು ಬೀಳ್ಕೊಡುವುದು ಬಹು ವಿಶೇಷವಾಗಿರುತ್ತದೆ. ಈ ವರ್ಷ ಈವರೆಗೆ ಮೂರು ಗೂಡು ದೊರೆತಿದ್ದು, 310 ಮೊಟ್ಟೆಗಳನ್ನು ಸಂರಕ್ಷಿಸಲಾಗಿದೆ. ಒಟ್ಟಾರೆ ಮಾನವನ ಸಹಕಾರ ಕೇಳುತ್ತಾ, ಮುಗ್ದ ಪ್ರಾಣಿಯ ಪ್ರಸವ ಕಾರ್ಯಕ್ಕೆ ಕಡಲ ತೀರ ಅಣಿಯಾಗಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.