NEWS

Max Movie: ಕಿಚ್ಚನ ಫ್ಯಾನ್ಸ್‌ಗೆ ಖುಷಿಯ 'ಮ್ಯಾಕ್ಸ್‌' ನ್ಯೂಸ್, ಸುದೀಪ್ ಸಿನಿಮಾ ಟ್ರೇಲರ್ ರಿಲೀಸ್‌ ಡೇಟ್ ಅನೌನ್ಸ್!

ಸ್ಯಾಂಡಲ್​​ವುಡ್ ನಟ ಕಿಚ್ಚ ಸುದೀಪ್ (Kichcha Sudeep)​ ಅಭಿನಯದ ಮ್ಯಾಕ್ಸ್ ಸಿನಿಮಾ (Max Movie) ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಡಿಸೆಂಬರ್​ 25ರಂದು ಕ್ರಿಸ್​ಮಸ್ ಗಿಫ್ಟ್ ಆಗಿ ಮ್ಯಾಕ್ಸ್ ಸಿನಿಮಾ ಬಿಡುಗಡೆ ಆಗಲಿದೆ. ಎರಡೂವರೆ ವರ್ಷಗಳ ಬಳಿಕ ನಟ ಸುದೀಪ್ ತೆರೆ ಮೇಲೆ ಅಬ್ಬರಿಸಲು ಬರ್ತಿದ್ದು, ಕಿಚ್ಚನ ಆರ್ಭಟ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಪೋಸ್ಟರ್​, ಟೀಸರ್ ಹಾಗೂ ಗಿಂಪ್ಸ್​ ವಿಡಿಯೋ ಝಲಕ್ ಕೊಟ್ಟು ಸಿನಿಮಾ ಮೇಲಿನ ನಿರೀಕ್ಷೆಯನ್ನ ದುಪ್ಪಟ್ಟಾಗಿಸಿದ್ದ ಮ್ಯಾಕ್ಸ್ ಟೀಮ್​, ಸಿನಿಮಾ ರಿಲೀಸ್ ಡೇಟ್ ಹತ್ತಿರ ಬರ್ತಿದ್ದಂತೆ​ ಟ್ರೇಲರ್ (Max Movie Trailer) ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಮ್ಯಾಕ್ಸ್ ಸಿನಿಮಾ ರಿಲೀಸ್ ಡೇಟ್ ಹತ್ತಿರ ಬರ್ತಿದ್ದಂತೆ ನಟ ಸುದೀಪ್​ ಅಬ್ಬರದ ಪ್ರಚಾರ ಮಾಡಿದ್ದಾರೆ. ಇದರ ನಡುವೆ ಮ್ಯಾಕ್ಸ್​ ಸಿನಿಮಾ ಟ್ರೇಲರ್​ ಗಾಗಿ ಕಾಯ್ತಿದ್ದ ಫ್ಯಾನ್ಸ್​ಗೆ ಕಿಚ್ಚ ಗುಡ್ ನ್ಯೂಸ್ ನೀಡಿದ್ದಾರೆ. ಟ್ರೇಲರ್ ರಿಲೀಸ್ ಡೇಟ್​ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದಾರೆ. ಮ್ಯಾಕ್ಸ್ ಸಿನಿಮಾ ಟ್ರೇಲರ್ ರಿಲೀಸ್ ಡೇಟ್ ಅನೌನ್ಸ್​! ಒಂದು ರಾತ್ರಿಯಲ್ಲಿ ನಡೆಯೋ ರೋಚಕ ಕಥೆಯೇ ಮ್ಯಾಕ್ಸ್ ಸಿನಿಮಾ ಆಗಿದೆ. ಮ್ಯಾಕ್ಸ್ ಸಿನಿಮಾ ಡಿಸೆಂಬರ್ 25ಕ್ಕೆ ಅದ್ಧೂರಿಯಾಗಿ ತೆರೆಗೆ ಬರಲಿದೆ. ಟೀಸರ್ ಮೂಲಕ ಹೊಸ ಕಿಚ್ಚು ಹೊತ್ತಿಸಿದ್ದ ಕಿಚ್ಚ ಇದೀಗ ಟ್ರೇಲರ್ ಡೇಟ್​ ಅನೌನ್ಸ್ ಮಾಡಿದ್ದಾರೆ. ಡಿಸೆಂಬರ್ 22 ಅಂದ್ರೆ ಮ್ಯಾಕ್ಸ್​ ಸಿನಿಮಾ ರಿಲೀಸ್​ಗೆ ಕೇವಲ ಮೂರು ದಿನ ಇರುವಾಗ ಸಿನಿಮಾ ಟ್ರೇಲರ್​ ಕೂಡ ರಿಲೀಸ್ ಆಗಲಿದೆ. ಡಿಸೆಂಬರ್ 22 ಬೆಳಗ್ಗೆ 11.08ಕ್ಕೆ ಟ್ರೇಲರ್ ರಿಲೀಸ್ ಔಟ್ ಆಗಲಿದೆ. The time has come!!! ✨ For the Pre-MAX to flourish!! 🔥 Watch out for the #MaxTrailer on Dec 22, 11:08 am! #MaxTheMovie storms into theaters on Dec 25! @Kichchacreatiin @theVcreations @vijaykartikeyaa @AJANEESHB @shekarchandra71 @ganeshbaabu21 @shivakumarart @dhilipaction … pic.twitter.com/7oZ3QuaLyv ಕಿಚ್ಚ ಸುದೀಪ್ ಟ್ರೇಲರ್ ರಿಲೀಸ್​ ಡೇಟ್ ಕೇಳಿದ ಅಭಿಮಾನಿಗಳು ಸಿನಿಮಾದ ಝಲಕ್ ನೋಡಲು ಕಾಯ್ತಿದ್ದೇವೆ ಎಂದಿದ್ದಾರೆ. ಒಂದು ರಾತ್ರಿಯಲ್ಲಿ ನಡೆಯೋ ಕಥೆ! ಮ್ಯಾಕ್ಸ್ ಒಂದು ರಾತ್ರಿಯ ಸಿನಿಮಾ ಆಗಿದೆ. ಈ ವಿಚಾರವೇ ಪ್ರೇಕ್ಷಕರಲ್ಲಿ ದೊಡ್ಡ ಕುತೂಹಲ ಮೂಡಿಸಿದೆ. ಸಂದರ್ಶನವೊಂದರಲ್ಲಿ ಇದೊಂದು ಸಣ್ಣ ಕಥೆ ಎಂದ ಸುದೀಪ್​, ಒಂದು ರಾತ್ರಿಯಲ್ಲಿ ಏನೆಲ್ಲಾ ನಡೆದೋಯ್ತು ಅನ್ನೋದು ಕೂಡ ಮುಖ್ಯವೇ ಅಂದ್ರು. ಕಥೆ ಎಣೆದ ರೀತಿ ತುಂಬಾ ಚೆನ್ನಾಗಿದೆ ಎಂದು ಹೇಳಿದ್ದಾರೆ. ವಿಕ್ರಾತ್ ರೋಣ ಸಿನಿಮಾ ಬಳಿಕ ಒಂದು ಸಿಂಪಲ್ ಸ್ಟೋರಿ ಮಾಡ್ಬೇಕು ಅಂತ ನನಗೆ ಅನಿಸಿತ್ತು. ಹೀಗಾಗಿ ಮ್ಯಾಕ್ಸ್ ಚಿತ್ರ ಒಪ್ಪಿಕೊಂಡೆ ಎಂದು ಸುದೀಪ್ ಹೇಳಿದ್ರು. ಇದನ್ನೂ ಓದಿ: Max-Sudeep: ರಾಜಮೌಳಿನ ಫಾಲೋ ಮಾಡ್ತಾರಾ ಸುದೀಪ್? ಇದೇ ಕಾರಣಕ್ಕೆ ಮ್ಯಾಕ್ಸ್ ಆಯ್ಕೆ ಮಾಡಿದ್ರಾ ಕಿಚ್ಚ? ಕಿಚ್ಚ ಸುದೀಪ್​ ಅವರ ಮ್ಯಾಕ್ಸ್ ಸಿನಿಮಾವನ್ನ ಹೊಸಪ್ರತಿಭೆ ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ 46ನೇ ಚಿತ್ರ ಇದಾಗಿದ್ದು, ಸಂಯುಕ್ತ ಹೊರನಾಡು, ವರಲಕ್ಷ್ಮೀ ಶರತ್‌ಕುಮಾರ್, ರವಿಶಂಕರ್ ಪಿ, ಪ್ರಮೋದ್ ಶೆಟ್ಟಿ, ಶರತ್ ಲೋಹಿತಾಶ್ವ, ಅರ್ಜುನ್ ಬಿ.ಆರ್, ಸುಕೃತಾ ವಾಗ್ಲೆ ಮುಂತಾದವರ ತಾರಾಗಣವಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.