ಸಾಂದರ್ಭಿಕ ಚಿತ್ರ ಅಹಮದಾಬಾದ್(ಡಿ.24): ಗುಜರಾತ್‌ನ ಭರೂಚ್‌ನಲ್ಲಿ 10 ವರ್ಷದ ಬಾಲಕಿಯೊಂದಿಗೆ ನಿರ್ಭಯಾ ರೀತಿಯ ಘಟನೆ ನಡೆದಿದೆ. ಜಾರ್ಖಂಡ್‌ನ ಬುಡಕಟ್ಟು ಸಮುದಾಯದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ ಆಕೆಯನ್ನು ಹೊಡೆದು ಜೀವನ್ಮರಣ ಸ್ಥಿತಿಯಲ್ಲಿ ಬಿಟ್ಟಿದ್ದಾನೆ. ಈ ಘಟನೆಯ ನಂತರ ಹುಡುಗಿ ಎರಡು ಬಾರಿ ಹೃದಯಾಘಾತಕ್ಕೆ ಒಳಗಾಗಿದ್ದಳು. ಅಂತಿಮವಾಗಿ, ಎಂಟು ದಿನಗಳ ನಂತರ, ಆಕೆ ವಡೋದರಾದ ಆಸ್ಪತ್ರೆಯಲ್ಲಿ ನಿಧನಳಾಗಿದ್ದಾಳೆ ಅತ್ಯಂತ ದುಃಖದ ಸಂಗತಿಯೆಂದರೆ, ಸುಮಾರು ಒಂದು ತಿಂಗಳ ಹಿಂದೆಯೂ ಈ ದುರುಳ ಅದೇ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದ. ಆಗ ಸಮಾಜದಲ್ಲಿ ಮಾನಹಾನಿಯಾಗುತ್ತದೆ ಎಂದು ತಾಯಿ ಮಗಳ ಬಾಯಿ ಮುಚ್ಚಿಸಿದ್ದರೂ. ಆಂತರಿಕ ಗಾಯಗಳಿಂದ ಬಾಲಕಿಗೆ ಎರಡು ಬಾರಿ ಹೃದಯಾಘಾತವಾಗಿದೆ ಎಂದು ವಡೋದರಾ ಆಸ್ಪತ್ರೆ ತಿಳಿಸಿದೆ. ಇದಲ್ಲದೆ, ಅವಳು ಸೆಪ್ಸಿಸ್ಗೆ ಬಲಿಯಾಗಿದ್ದಾಳೆ. ಇದು ಸೋಂಕಿಗೆ ದೇಹವು ತಪ್ಪಾಗಿ ಪ್ರತಿಕ್ರಿಯಿಸುವ ಕಾಯಿಲೆಯಾಗಿದೆ. ಸೋಂಕಿನ ವಿರುದ್ಧ ಹೋರಾಡುವ ಪ್ರಕ್ರಿಯೆಗಳು ದೇಹದಲ್ಲಿ ಪ್ರಾಬಲ್ಯ ಸಾಧಿಸುತ್ತವೆ, ಇದರಿಂದಾಗಿ ಯಕೃತ್ತು, ಶ್ವಾಸಕೋಶಗಳು ಮತ್ತು ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ. ಇದನ್ನೂ ಓದಿ: Cancer Vaccine: ಗುಡ್‌ನ್ಯೂಸ್! ಕೊನೆಗೂ ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಗೆ ಬಂತು ಔಷಧ; ಕ್ಯಾನ್ಸರ್ ಲಸಿಕೆ ಕಂಡುಹಿಡಿದ ರಷ್ಯಾ! ಆರೋಪಿಯೂ ಜಾರ್ಖಂಡ್ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ಬಂಧಿಸಲಾಗಿದೆ. ವಡೋದರಾ ಆಸ್ಪತ್ರೆಯಿಂದ ಸಾವನ್ನು ದೃಢಪಡಿಸಿದಾಗಿನಿಂದ ಹುಡುಗಿಯ ಕುಟುಂಬವು ಅಳಲು ತೋಡಿಕೊಳ್ಳುತ್ತಿದೆ. ಕಳೆದ 8 ದಿನಗಳಿಂದ ಪೋಷಕರು ಐಸಿಯು ಹೊರಗೆ ಮಗಳಿಗಾಗಿ ಕಾಯುತ್ತಿದ್ದರು. ಕುಟುಂಬದವರೊಂದಿಗೆ ಮಾತುಕತೆ ನಡೆಸಿದ ಹೇಮಂತ್ ಸೊರೇನ್ ಡಿಸೆಂಬರ್ 16 ರಂದು ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಬಳಿಕ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಮರುದಿನವೇ ಭರೂಚ್ ಪೊಲೀಸರು ಆರೋಪಿ ಯುವಕನನ್ನು ಬಂಧಿಸಿದ್ದರು. ಬಾಲಕಿಯ ದೇಹದ ಮೇಲೆ ಆಂತರಿಕ ಗಾಯಗಳಿಂದಾಗಿ, ಆಕೆ ಭರೂಚ್‌ನಲ್ಲಿ ಎರಡು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ನಂತರ ಅಕೆಯನ್ನು ವಡೋದರಾದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಚಿಕಿತ್ಸೆ ವೇಳೆ ಬಾಲಕಿ ಸಾವನ್ನಪ್ಪಿದ್ದಾಳೆ. ಆಕೆಯ ಪ್ರಾಣ ಉಳಿಸಲಾಗಲಿಲ್ಲ. ಪೊಲೀಸರ ಪ್ರಕಾರ, ಹುಡುಗಿ ತನ್ನ ಕುಟುಂಬದೊಂದಿಗೆ ಭರೂಚ್‌ನ ವಲಸೆ ಕಾಲೋನಿಯಲ್ಲಿ ವಾಸಿಸುತ್ತಿದ್ದಳು. ಕುಟುಂಬ ಇಲ್ಲಿ ಕೂಲಿ ಕೆಲಸ ಮಾಡುತ್ತಿತ್ತು. ಈ ವಿಚಾರವಾಗಿ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಕೂಡ ಬಾಲಕಿಯ ಕುಟುಂಬದವರೊಂದಿಗೆ ಮಾತುಕತೆ ನಡೆಸಿದ್ದಾರೆ. ತಾಯಿಯ ಅಳಲು ಒಂದು ತಿಂಗಳ ಹಿಂದೆಯೇ ತನ್ನ ಮಗಳ ಮೇಲೆ ಈ ರಕ್ಕಸ ಅತ್ಯಾಚಾರ ನಡೆಸಿದ್ದಾನೆ ಎಂದು ತಾಯಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ ಈ ವಿಷಯ ಸಾರ್ವಜನಿಕರಿಗೆ ತಿಳಿದರೆ ಕುಟುಂಬಕ್ಕೆ ದೊಡ್ಡ ಅಪಖ್ಯಾತಿ ಬರುತ್ತದೆ ಎಂದು ಬಾಲಕಿಯನ್ನು ಸುಮ್ಮನಿರಲು ಹೇಳಿದ್ದೆವು ಎಂದಿದ್ದಾರೆ. ಆದರೆ ಈ ತಾಯಿಯ ಮೌನವು ಆ ಕಾಮುಕನಿಗೆ ತನ್ನ ಯೋಜನೆಯನ್ನು ಮತ್ತೆ ಕಾರ್ಯಗತಗೊಳಿಸುವ ಶಕ್ತಿಯನ್ನು ನೀಡಿತು ಮತ್ತು ಅದರ ಲಾಭವನ್ನು ಪಡೆದುಕೊಂಡು ಅವನು ಅದೇ ರೀತಿಯ ದೊಡ್ಡ ಅಪರಾಧವನ್ನು ಮಾಡಿದ್ದಾನೆ. ಆತ ಬಾಲಕಿಯನ್ನು ಮನೆಯಿಂದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಈ ಕೃತ್ಯ ಎಸಗಿದ್ದಾನೆ. 35ರ ಹರೆಯದ ಆರೋಪಿ ಹಾಗೂ ಮೃತ ಬಾಲಕಿಯ ತಂದೆಗೆ ಈಗಾಗಲೇ ಪರಿಚಯವಿದೆ. None
Popular Tags:
Share This Post:
Chaithra Kundapur: ಚೈತ್ರಾ ಕಣ್ಣೀರಿಗೆ ದೊಡ್ಮನೆ ದೇವರು ಸ್ಪಂದಿಸಿದ್ರಾ? ಬಲಗಡೆಯಿಂದ ಹೂ ಬಿದ್ದೇ ಬಿಡ್ತು
December 24, 2024What’s New
Spotlight
Today’s Hot
CT Ravi Release: ಸಿ.ಟಿ. ರವಿ ರಿಲೀಸ್! ಹೈಕೋರ್ಟ್ ಆದೇಶದ ಬಳಿಕ ಬಿಡುಗಡೆ ಮಾಡಿದ ಪೊಲೀಸರು
- By Sarkai Info
- December 20, 2024
Featured News
Latest From This Week
Subscribe To Our Newsletter
No spam, notifications only about new products, updates.