NEWS

DK Shivakumar: ರಾಜ್ಯದಲ್ಲಿ ಏನೇ ಆದ್ರೂ ನಾವೇ ಅಂತಾರೆ! ಬಿಜೆಪಿ ಆರೋಪಕ್ಕೆ ಡಿಕೆ ಶಿವಕುಮಾರ್ ವ್ಯಂಗ್ಯ

ಡಿಕೆ ಶಿವಕುಮಾರ್ | ಸಿಟಿ ರವಿ ಬೆಜೆಪಿ ಪರಿಷತ್ ಸದಸ್ಯ ಸಿ ಟಿ ರವಿ (CT Ravi) ತಮ್ಮ ವಿರುದ್ಧ ಅವಾಚ್ಯ ಶಬ್ಧಗಳಿಂದ (Unparliamentary) ನಿಂದಿಸಿದ್ದಾರೆ ಎಂದು ಆರೋಪಿಸಿ ಸಚಿವೆ ಹೆಬ್ಬಾಳಕರ್ ಅವರು ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಸಿಟಿ ರವಿ ಅವರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದರು. ಸದ್ಯ ಘಟನೆಗೆ ಕುರಿತಂತೆ ವಿಚಾರಣೆ ನಡೆಸಿದ ಹೈಕೋರ್ಟ್ ಅವರನ್ನು ಕೂಡಲೆ ಬಂಧನಮುಕ್ತ (Release) ಮಾಡುವಂತೆ ಆದೇಶಿಸಿದೆ. ಇದರ ಬೆನ್ನಲ್ಲೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ಅವರು ಪ್ರತಿಕ್ರಿಯೆ ನೀಡಿದ್ದಾರೆ. ನನಗೂ ಇದಕ್ಕೂ ಸಂಬಂಧವಿಲ್ಲ ಸಿಟಿ ರವಿ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಾನು ಕೋರ್ಟ್ ಅಲ್ಲ, ಏನು ಸೆಕ್ಷನ್ ಹಾಕಿದ್ದಾರೆ, ಸರ್ಕಾರ ಹಾಗೂ ಪೊಲೀಸರು ಏನ್ ಸೆಕ್ಷನ್ ಹಾಕಿದ್ದಾರೆ ಗೊತ್ತಿಲ್ಲ. ನನಗೆ ಯಾವುದೂ ಗೊತ್ತಿಲ್ಲ, ನನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ಪೊಲೀಸರು ಉಂಟು, ಕಾನೂನು ಉಂಟು ಎಂದರು. ಇದರಲ್ಲಿ ನನ್ನ ಇನ್ವಾಲ್ಮೆಂಟ್ ಇಲ್ಲ ಸಿಟಿ ರವಿ ಬಂಧನದ ಹಿಂದೆ ಡಿಕೆ ಶಿವಕುಮಾರ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಸಂಚು ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮದು ಇದರಲ್ಲಿ ಯಾವುದೂ ಇನ್ವಾಲ್ಮೆಂಟ್ ಇಲ್ಲ. ರಾಜ್ಯದಲ್ಲಿ ಏನಾದರೂ ನಾವೇ, ಸಿಎಂ ಹಾಗೂ ನಾನೇ ಹೊಣೆ ಅಂತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಮೊದಲು ಹೆಣ್ಣಿಗೆ ಗೌರವ ಕೊಡಲಿ ಗೆಲುವು ನಮ್ಮದೇ ಆಗಿದೆ ಎಂಬಂತೆ ಬಿಜೆಪಿಗರು ಸಂಭ್ರಮಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ನೋಡ್ರೀ, ಮೊದಲು ಈ ತಾಯಿಗೆ, ಹೆಣ್ಣಿಗೆ, ಮಕ್ಕಳಿಗೆ ಆಗಿರೋ ಅವಮಾನ. ಈ ಸಂಸ್ಕೃತಿಗೆ ಮೊದಲು ಅದಕ್ಕೆ ಮಾತಾಡೋಕೆ ಹೇಳಿ ಎಂದು ಬಿಜೆಪಿ ನಾಯಕರನ್ನು ಕುಟುಕಿದರು. ಇದನ್ನೂ ಓದಿ: CT Ravi Reaction: ನನ್ನನ್ನು ಉಗ್ರನಂತೆ ನಡೆಸಿಕೊಂಡ್ರು, ಊಟಕ್ಕೂ ಬಿಟ್ಟಿಲ್ಲ! ನ್ಯೂಸ್ 18ಗೆ ಸಿ.ಟಿ. ರವಿ ಫಸ್ಟ್‌ ರಿಯಾಕ್ಷನ್ ಪೊಲೀಸರು ನಡೆಸಿಕೊಂಡ ರೀತಿಗೆ ಬೇಸರ ವ್ಯಕ್ತಪಡಿಸಿದ ಸಿಟಿ ರವಿ ಬಂಧನದ ಬಳಿಕ ಪೊಲೀಸರು ನಡೆಸಿಕೊಂಡ ವರ್ತನೆ ಕುರಿತು ತೀವ್ರ ಬೇಸರ ಹೊರಹಾಕಿದ ಪರಿಷತ್ ಸದಸ್ಯ ಸಿಟಿ ರವಿ ಅವರು, ಪೊಲೀಸ್ ಠಾಣೆಯ ಪರೀಧಿಗೆ ಬರದಂತಹ ಪ್ರಕರಣವನ್ನು ನನ್ನ ಮೇಲೆ ಹಾಕಿದ್ದರು. ನನ್ನನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಿಸುವ ಪ್ರಯತ್ನ ನಡೆಯಿತು. ದೈಹಿಕವಾಗಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ರಾತ್ರಿ ಸುಮಾರು 4 ಜಿಲ್ಲೆಗಳನ್ನು ಸತತ 11 ಗಂಟೆಗಳ ಕಾಲ ಸುತ್ತಾಡಿಸಿದ್ದಾರೆ. ಇದರಿಂದ ನಾನು ಕುಗ್ಗುವುದಿಲ್ಲ ಎಂದು ಭಾವುಕರಾದರು. ಸತ್ಯಕ್ಕೆ ಜಯ ಸಿಕ್ಕಿದೆ ಕೋರ್ಟ್ ಆದೇಶಕ್ಕೆ ಪ್ರತಿಕ್ರಿಯೆ ನೀಡಿದ ಅವರು ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಹೇಳಿದರು. ನೀವು ನಿನ್ನೆ ನನಗೆ ಕೊಟ್ಟಿರುವ ಹಿಂಸೆಯನ್ನು 30 ವರ್ಷದ ಹಿಂದೆಯೇ ಅನುಭವಿಸಿದ್ದೇನೆ. ಈ ಪ್ರಕರಣದಿಂದ ನಾನು ಕುಗ್ಗಿಲ್ಲ ಇನ್ನಷ್ಟು ಬಲ ಬಂದಿದೆ. ನಿಮ್ಮ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ನುಡಿದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಹೇಳಿದ್ದೇನು? ಹೈಕೋರ್ಟ್‌ನಲ್ಲಿ ಸಿಟಿ ರವಿಗೆ ಬಿಗ್ ರಿಲೀಫ್ ಸಿಕ್ಕಿದೆ. ಸಿಟಿ ರವಿ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶಿಸಿದೆ. ಸಿಟಿ ರವಿ ಎಲ್ಲಿದ್ದಾರೋ ಅಲ್ಲಿಂದಲೇ ಬಿಡುಗಡೆ ಮಾಡುವಂತೆ ಹೈಕೋರ್ಟ್ ನ್ಯಾಯಪೀಠ ಆದೇಶಿಸಿತ್ತು. ಸಿಟಿ ರವಿ ಬಿಡುಗಡೆಗೆ ಆದೇಶ ನೀಡಿರುವ ಹೈಕೋರ್ಟ್, ಕೆಲವೊಂದು ಷರತ್ತು ವಿಧಿಸಿತ್ತು. ತನಿಖೆಗೆ ಸಹಕರಿಸಬೇಕು ಅಂತ ಸೂಚನೆ ನೀಡಿ, ಮಧ್ಯಂತರ ಆದೇಶ ನೀಡಿತ್ತು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.