ಶ್ಯಾಮ್ ಬೆನೆಗಲ್ ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ (Shyam Benegal) ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಅಧ್ಯಕ್ಷ ದ್ರೌಪದಿ ಮುರ್ಮಾ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಶ್ಯಾಮ್ ಬೆನಗಲ್ ಅವರ ನಿರ್ದೇಶನವನ್ನು ಮನಸಾರೆ ಹೊಗಳಿದ್ದಾರೆ. ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ನಿಧನ ಕಿಡ್ನಿಗೆ ಸಂಬಂಧಿಸಿದಂತೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶ್ಯಾಮ್ ಬೆನಗಲ್ ಅವರು ಚಿಕಿತ್ಸೆ ಫಲಿಸದೇ ನಿನ್ನೆ ಅಂದರೆ ಡಿಸೆಂಬರ್ 23, ಸೋಮವಾರ ಸಂಜೆ 6:38ಕ್ಕೆ ಮುಂಬೈ ಸೆಂಟ್ರಲ್‌ನ ವೊಕಾರ್ಡ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಅಂಕುರ್, ದಿ ಸೀಡ್ಲಿಂಗ್, ಮಂಥನ್, ಮಂಡಿ, ಜುನೂನ್‌ನಂತಹ ಮಹತ್ವದ ಸಿನಿಮಾ ಕೊಟ್ಟ ಶ್ಯಾಮ್ ಬೆನಗಲ್ ನಿಧನಕ್ಕೆ ರಾಜಕೀಯ ಗಣ್ಯರಿಂದ ಹಿಡಿದು ಸಿನಿಮಾ ದಿಗ್ಗಜರು, ಅಭಿಮಾನಿಗಳು ಎಲ್ಲರೂ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಶ್ಯಾಮ್ ಬೆನಗಲ್ ನಿಧನಕ್ಕೆ ಪ್ರಧಾನಿ, ರಾಷ್ಟ್ರಪತಿ ಸಂತಾಪ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ದ್ರೌಪದಿ ಮುರ್ಮು ಕೂಡ ಶ್ಯಾಮ್ ಬೆನಗಲ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. Deeply saddened by the passing of Shri Shyam Benegal Ji, whose storytelling had a profound impact on Indian cinema. His works will continue to be admired by people from different walks of life. Condolences to his family and admirers. Om Shanti. ಪೋಸ್ಟ್‌ನಲ್ಲಿ, ಪ್ರಧಾನಮಂತ್ರಿಯವರು, “ಶ್ರೀ ಶ್ಯಾಮ್ ಬೆನಗಲ್ ಜಿ ಅವರ ನಿಧನದಿಂದ ತೀವ್ರ ದುಃಖವಾಗಿದೆ, ಅವರ ಕಥೆ ಹೇಳುವಿಕೆಯು ಭಾರತೀಯ ಚಿತ್ರರಂಗದ ಮೇಲೆ ಆಳವಾದ ಪ್ರಭಾವವನ್ನು ಬೀರಿತ್ತು. ಅವರ ಕಥೆಗಳು ಜೀವನದ ವಿವಿಧ ಹಂತಗಳ ಜನರ ಮೆಚ್ಚುಗೆ ಪಡೆದಿದ್ದವು. ಇದು ಭರಿಸಲಾಗದ ನಷ್ಟ” ಎಂದು ಸಂತಾಪ ಸೂಚಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ, ಶ್ರೀ ಶ್ಯಾಮ್ ಬೆನಗಲ್ ಅವರ ನಿಧನವು ಭಾರತೀಯ ಚಿತ್ರರಂಗ ಮತ್ತು ದೂರದರ್ಶನದ ಅದ್ಭುತ ಅಧ್ಯಾಯದ ಅಂತ್ಯವನ್ನು ಸೂಚಿಸುತ್ತದೆ. ಅವರು ಹೊಸ ರೀತಿಯ ಸಿನಿಮಾವನ್ನು ಪ್ರಾರಂಭಿಸಿದ್ದರು ಮತ್ತು ಹಲವಾರು ಶ್ರೇಷ್ಠತೆಯನ್ನು ರಚಿಸಿದರು. ದೇವರು ಕುಟುಂಬಕ್ಕೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪೋಸ್ಟ್ ಮಾಡಿದ್ದಾರೆ. ಶ್ಯಾಮ್ ಬೆನಗಲ್ ನಿಧನಕ್ಕೆ ಮಹಾರಾಷ್ಟ್ರ ಸಿಎಂ ಕಂಬನಿ ಭಾರತೀಯ ಚಿತ್ರರಂಗಕ್ಕೆ ರಿಯಲಿಸ್ಟ್ ಚಿತ್ರ ನಿರ್ಮಾಣದ ಸಮಾನಾಂತರ ಯುಗವನ್ನು ತಂದ ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಅವರು ಅಮರರಾಗಿ ಉಳಿಯುತ್ತಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೂಡ ಶ್ರದ್ಧಾಂಜಲಿ ಸಲ್ಲಿಸಿದರು. ಇದನ್ನೂ ಓದಿ: Shiva Rajkumar: ನಾಳೆ ಅಮೆರಿಕದಲ್ಲಿ ಶಿವಣ್ಣಗೆ ಸರ್ಜರಿ! ಕಾರ್ ಡ್ರೈವರ್ ಗೋವಿಂದಣ್ಣನಿಂದ ವಿಶೇಷ ಪೂಜೆ “ಚಲನಚಿತ್ರ ಮಾಧ್ಯಮದ ಶಕ್ತಿಯನ್ನು ಗುರುತಿಸಿ ಭಾರತೀಯ ಚಿತ್ರರಂಗದ ಬೆಳವಣಿಗೆ ಮತ್ತು ವೈಭವಕ್ಕೆ ಅವರು ನೀಡಿದ ಕೊಡುಗೆ ಅಮೂಲ್ಯವಾಗಿದೆ. ಅವರ ಕೆಲಸಗಳು ಭಾರತೀಯ ಚಲನಚಿತ್ರಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿವೆ. ಕರ್ನಾಟಕ ಕೊಂಕಣಿ ಕುಟುಂಬದಿಂದ ಬಂದ ಇವರು ಕೇವಲ; 12ನೇ ವಯಸ್ಸಿನಲ್ಲಿ ತಂದೆಯವರು ಉಡುಗೊರೆಯಾಗಿ ನೀಡಿದ ಕ್ಯಾಮೆರಾ ಹಿಡಿದು ಸಿನಿಮಾ ಮಾಡಲು ಆರಂಭಿಸಿದರು. ಇವರ ಸಿನಿಮಾಗಳು ಭಾರತೀಯರಿಗೆ ನೈಜ ನಿರ್ಮಾಣದ ಯುಗವನ್ನು ನೀಡಿವೆ” ಎಂದು ಸಿಎಂ ಫಡ್ನವೀಸ್ ಹೇಳಿದ್ದಾರೆ. “ಕಲಾ ಪ್ರಕಾರಕ್ಕೆ ಇವರದ್ದು ಅದ್ಭುತ ಕೊಡುಗೆಗಳು” ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶ್ಯಾಮ್ ಬೆನಗಲ್ ಅವರ ಕುಟುಂಬ, ಸ್ನೇಹಿತರು ಮತ್ತು ಅನುಯಾಯಿಗಳಿಗೆ ಸಾಂತ್ವನ ಹೇಳಿದರು. ತಮ್ಮ X ಹ್ಯಾಂಡಲ್‌ನಲ್ಲಿ ಮಮತಾ “ನಮ್ಮ ಅಪ್ರತಿಮ ಚಿತ್ರನಿರ್ಮಾಪಕ ಶ್ಯಾಮ್ ಬೆನಗಲ್ ಅವರ ನಿಧನದಿಂದ ದುಃಖವಾಗಿದೆ. ಭಾರತೀಯ ಸಮಾನಾಂತರ ಸಿನೆಮಾದ ಆಧಾರಸ್ತಂಭವಾಗಿದ್ದರು. ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ” ಎಂದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: Shyam Benegal: ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಇನ್ನಿಲ್ಲ, 18 ರಾಷ್ಟ್ರೀಯ ಪ್ರಶಸ್ತಿ ಪಡೆದ ಡೈರೆಕ್ಟರ್ ಇನ್ನು ನೆನಪು ಮಾತ್ರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಈ ಸಂದರ್ಭದಲ್ಲಿ ಸಂತಾಪ ಸೂಚಿಸಿದರು. “ಭಾರತೀಯ ಚಿತ್ರರಂಗದ ಅತ್ಯುನ್ನತ ವ್ಯಕ್ತಿ ಮತ್ತು ಸಮಾನಾಂತರ ಸಿನಿಮಾ ಚಳುವಳಿಯ ನಿಜವಾದ ಪ್ರವರ್ತಕ, ಪೌರಾಣಿಕ ಚಿತ್ರನಿರ್ಮಾಪಕ ಶ್ಯಾಮ್ ಬೆನಗಲ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಕಲಾ ಪ್ರಕಾರಕ್ಕೆ ಅವರ ಅದ್ಭುತ ಕೊಡುಗೆಗಳು, ಚಿಂತನಶೀಲ ಕಥೆ ಹೇಳುವಿಕೆ ಮತ್ತು ಆಳವಾದ ಬದ್ಧತೆಯಿಂದ ಗುರುತಿಸಲ್ಪಟ್ಟಿದೆ” ಎಂದು ಪೋಸ್ಟ್ ಮಾಡಿದ್ದಾರೆ. ಒಟ್ಟಿನಲ್ಲಿ ಭಾರತೀಯ ಚಲನಚಿತ್ರ ರಂಗಕ್ಕೆ ಮಹತ್ವದ ಕೊಡುಗೆ ನೀಡಿದ್ದ ಹಿರಿಯ ಚಲನಚಿತ್ರ ನಿರ್ದೇಶಕ ಶ್ಯಾಮ್ ಬೆನಗಲ್ ಅವರ ನಿಧನದಿಂದ ನಿಜಕ್ಕೂ ಚಿತ್ರರಂಗ ಬಡವಾಗಿದೆ. None
Popular Tags:
Share This Post:
Chaithra Kundapur: ಚೈತ್ರಾ ಕಣ್ಣೀರಿಗೆ ದೊಡ್ಮನೆ ದೇವರು ಸ್ಪಂದಿಸಿದ್ರಾ? ಬಲಗಡೆಯಿಂದ ಹೂ ಬಿದ್ದೇ ಬಿಡ್ತು
December 24, 2024What’s New
Spotlight
Today’s Hot
CT Ravi Release: ಸಿ.ಟಿ. ರವಿ ರಿಲೀಸ್! ಹೈಕೋರ್ಟ್ ಆದೇಶದ ಬಳಿಕ ಬಿಡುಗಡೆ ಮಾಡಿದ ಪೊಲೀಸರು
- By Sarkai Info
- December 20, 2024
Featured News
Latest From This Week
Subscribe To Our Newsletter
No spam, notifications only about new products, updates.