NEWS

Special Trains: ಕ್ರಿಸ್​ಮಸ್ ಹಬ್ಬ; ಬೆಂಗಳೂರು-ತಿರುವನಂತಪುರಂ, ಕಲಬುರಗಿಗೆ ವಿಶೇಷ ರೈಲು

ರೈಲ್ವೆ ನಿಲ್ದಾಣ (ಸಾಂದರ್ಭಿಕ ಚಿತ್ರ) ಹುಬ್ಬಳ್ಳಿ : ಕ್ರಿಸ್ ಮಸ್ ಹಬ್ಬದ (Christmas Festival) ಸಂದರ್ಭದಲ್ಲಿ ಪ್ರಯಾಣಿಕರ (Railway Passengers) ಹೆಚ್ಚುವರಿ ದಟ್ಟಣೆಯನ್ನು ಪೂರೈಸಲು ನೈಋತ್ಯ ರೈಲ್ವೆಯು (South Western Railway) ಬೆಂಗಳೂರಿನ (Bengaluru) ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (Sir M. Visvesvaraya Terminal) - ತಿರುವನಂತಪುರಂ ನಾರ್ತ್ ನಿಲ್ದಾಣಗಳ ನಡುವೆ ಪ್ರತಿ ದಿಕ್ಕಿನಲ್ಲಿ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು (Express Trains) ಓಡಿಸಲಿದೆ. SMVT ಬೆಂಗಳೂರು - ತಿರುವನಂತಪುರಂನಾರ್ತ್ ಮಧ್ಯೆ ಒಂದು ಟ್ರಿಪ್ ವಿಶೇಷ ರೈಲು (06557/06558) ಸಂಚಾರ ರೈಲು ಸಂಖ್ಯೆ 06557 ಎಸ್ಎಂವಿಟಿ ಬೆಂಗಳೂರು - ತಿರುವನಂತಪುರಂ ನಾರ್ತ್ ವಿಶೇಷ ಎಕ್ಸ್ ಪ್ರೆಸ್ ರೈಲು ಡಿಸೆಂಬರ್ 24 ರಂದು ಮಧ್ಯಾಹ್ನ 03:50 ಗಂಟೆಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 10:05ಕ್ಕೆ ತಿರುವನಂತಪುರಂ ನಾರ್ತ್ ತಲುಪಲಿದೆ. ರೈಲು ಸಂಖ್ಯೆ 06558 ತಿರುವನಂತಪುರಂ ನಾರ್ತ್ - ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಎಕ್ಸ್ ಪ್ರೆಸ್ ವಿಶೇಷ ರೈಲು ಡಿಸೆಂಬರ್ 25ರಂದು ತಿರುವನಂತಪುರಂ ನಾರ್ತ್ ನಿಲ್ದಾಣದಿಂದ ಮಧ್ಯಾಹ್ನ 12:35 ಕ್ಕೆ ಹೊರಟು, ಮರುದಿನ ಬೆಳಿಗ್ಗೆ 05:00 ಗಂಟೆಗೆ ಸರ್ ಎಂ. ವಿಶ್ವೇಶ್ವರಯ್ಯ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ. ಎರಡೂ ಮಾರ್ಗಗಳಲ್ಲಿ ಈ ರೈಲು ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರ್, ಪೊದನೂರು, ಪಾಲಕ್ಕಾಡ್, ತ್ರಿಶೂರ್, ಅಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಿಂಗವನಂ, ತಿರುವಲ್ಲಾ, ಚೆಂಗನ್ನೂರು, ಮಾವೇಲಿಕರ, ಕಾಯಂಕುಲಂ ಮತ್ತು ಕೊಲ್ಲಂ ನಿಲ್ದಾಣಗಳಲ್ಲಿ ನಿಲ್ಲಲಿದೆ. ಈ ರೈಲುಗಳ ಆಗಮನ ಮತ್ತು ನಿರ್ಗಮನದ ಸಮಯವನ್ನು ತಿಳಿಯಲು, ಪ್ರಯಾಣಿಕರು ಭಾರತೀಯ ರೈಲ್ವೆಯ ವೆಬ್ ಸೈಟ್ ( www.enquiry.indianrail.gov.in ) ಭೇಟಿ ನೀಡಿ, 139 ಸಂಖ್ಯೆಗೆ ಡಯಲ್ ಮಾಡಿ ಅಥವಾ NTES ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಮಾಹಿತಿ ಪಡೆದುಕೊಳ್ಳಬಹುದು. ಇದನ್ನೂ ಓದಿ: Koppal: ಕರ್ನಾಟಕದಲ್ಲಿ ಮತ್ತೊಂದು ಅಣುಸ್ಥಾವರ ಸ್ಥಾಪನೆಗೆ ಸಿದ್ಧತೆ; ಪರಿಸರ ಪ್ರಿಯರು, ಗ್ರಾಮಸ್ಥರ ವಿರೋಧ! ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಬೆಂಗಳೂರು - ಕಲಬುರಗಿ ನಡುವೆ ವಿಶೇಷ ರೈಲು ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ನೈಋತ್ಯ ರೈಲ್ವೆಯು ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು - ಕಲಬುರಗಿ ನಿಲ್ದಾಣಗಳ ನಡುವೆ ಪ್ರತಿ ದಿಕ್ಕಿನಲ್ಲಿ ಎರಡು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲಿದೆ. ವಿವರಗಳು ಈ ಕೆಳಗಿನಂತಿವೆ: SMVT ಬೆಂಗಳೂರು - ಕಲಬುರಗಿ ನಡುವೆ 2 ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ (06589/06590) ರೈಲು ಸಂಚಾರ ರೈಲು ಸಂಖ್ಯೆ 06533 ಎಸ್ಎಂವಿಟಿ ಬೆಂಗಳೂರು - ಕಲಬುರಗಿ ವಿಶೇಷ ಎಕ್ಸ್ ಪ್ರೆಸ್ ರೈಲು ಡಿಸೆಂಬರ್ 22 ಮತ್ತು 24 ರಂದು ರಾತ್ರಿ 9:15ಕ್ಕೆ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಹೊರಡಲಿರುವ ಈ ರೈಲು ಯಲಹಂಕ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯಂ ರೋಡ್, ರಾಯಚೂರು, ಕೃಷ್ಣಾ, ಯಾದಗಿರಿ, ಶಹಾಬಾದ್ ನಿಲ್ದಾಣಗಳ ಮೂಲಕ ಮರುದಿನ ಬೆಳಗ್ಗೆ 7:40ಕ್ಕೆ ಕಲಬುರಗಿ ತಲುಪಲಿದೆ. ಪುನಃ ಇದೇ ರೈಲು (06590) ಕಲಬುರಗಿಯಿಂದ ಡಿಸೆಂಬರ್ 23 ಮತ್ತು 25ರಂದು ಬೆಳಿಗ್ಗೆ 9:34ಕ್ಕೆ ಹೊರಡಲಿರುವ ರೈಲು ಇದೇ ಮಾರ್ಗವಾಗಿ, ಅದೇ ದಿನ ರಾತ್ರಿ 8 ಗಂಟೆಗೆ ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ತಲುಪಲಿದೆ. ಈ ವಿಶೇಷ ರೈಲಿನಲ್ಲಿ ಒಂದು ಎಸಿ ಟು ಟೈರ್ ಬೋಗಿ, ಎರಡು ಎಸಿ ತ್ರಿ ಟೈರ್ ಬೋಗಿಗಳು, ಒಂಬತ್ತು ಸ್ಲೀಪರ್ ಕ್ಲಾಸ್ ಬೋಗಿಗಳು, ನಾಲ್ಕು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು ಎರಡು ಎಸ್ಎಲ್ಆರ್/ಡಿ ಬೋಗಿಗಳು ಸೇರಿದಂತೆ 18 ಬೋಗಿಗಳು ಇರಲಿವೆ. ಇದನ್ನೂ ಓದಿ: Bellary: ಪ್ರಾಧ್ಯಾಪಕಿಯಾಗಿ ತೃತೀಯ ಲಿಂಗಿ ನೇಮಕ; ಬಳ್ಳಾರಿ ವಿವಿಯಲ್ಲಿ ರೇಣುಕಾ ಟೀಚಿಂಗ್​​ಗೆ ಸ್ಟೂಡೆಂಟ್ಸ್​​ ಫಿದಾ! ಈ ರೈಲುಗಳ ಪ್ರತಿ ನಿಲ್ದಾಣದ ಆಗಮನ, ನಿರ್ಗಮನ ಸಮಯಕ್ಕಾಗಿ, ಪ್ರಯಾಣಿಕರು ಭಾರತೀಯ ರೈಲ್ವೆ ಜಾಲತಾಣ www.enquiry.indianrail.gov.in ಗೆ ಭೇಟಿ ನೀಡಿ ಅಥವಾ ಸಹಾಯವಾಣಿ 139 ನಂಬರಗೆ ಕರೆ ಮಾಡುವ ಮೂಲಕ ಮಾಹಿತಿ ಪಡೆದುಕೊಳ್ಳಬಹುದು. ಹಬ್ಬದ ಅವಧಿಯಲ್ಲಿ ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಈ ವಿಶೇಷ ರೈಲುಗಳನ್ನು ನಿರ್ವಹಿಸಲಾಗುತ್ತಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.