ಸಿಟಿ ರವಿ ವಿಧಾನ ಪರಿಷತ್‌ನಲ್ಲಿ ಚರ್ಚೆಯ ಸಂದರ್ಭದಲ್ಲಿ ಗದ್ದಲ ಉಂಟಾಗಿ, ಬೆಜೆಪಿ ಪರಿಷತ್ ಸದಸ್ಯ ಸಿ ಟಿ ರವಿ (CT Ravi) ತಮ್ಮ ವಿರುದ್ಧ ಅವಾಚ್ಯ ಶಬ್ಧಗಳಿಂದ (Unparliamentary) ನಿಂದಿಸಿದ್ದಾರೆ ಎಂದು ಆರೋಪಿಸಿ ಸಚಿವೆ ಹೆಬ್ಬಾಳಕರ್ ಅವರು ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಸಿಟಿ ರವಿ ಅವರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದರು. ಸದ್ಯ ಘಟನೆಗೆ ಕುರಿತಂತೆ ವಿಚಾರಣೆ ನಡೆಸಿದ ಹೈಕೋರ್ಟ್ ಅವರನ್ನು ಕೂಡಲೆ ಎಲ್ಲಿದ್ದಾರೆ ಅಲ್ಲಿಯೇ ಬಂಧನಮುಕ್ತ (Release) ಮಾಡುವಂತೆ ಆದೇಶಿಸಿದೆ. ಇದಾದ ಬೆನ್ನಲ್ಲೆ ಸಿಟಿ ರವಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಪೊಲೀಸರು ನಡೆಸಿಕೊಂಡ ರೀತಿಗೆ ಬೇಸರ ಬಂಧನದ ಬಳಿಕ ಪೊಲೀಸರು ನಡೆಸಿಕೊಂಡ ವರ್ತನೆ ಕುರಿತು ತೀವ್ರ ಬೇಸರ ಹೊರಹಾಕಿದ ಪರಿಷತ್ ಸದಸ್ಯ ಸಿಟಿ ರವಿ ಅವರು, ಪೊಲೀಸ್ ಠಾಣೆಯ ಪರೀಧಿಗೆ ಬರದಂತಹ ಪ್ರಕರಣವನ್ನು ನನ್ನ ಮೇಲೆ ಹಾಕಿದ್ದರು. ನನ್ನನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಿಸುವ ಪ್ರಯತ್ನ ನಡೆಯಿತು. ದೈಹಿಕವಾಗಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ರಾತ್ರಿ ಸುಮಾರು 4 ಜಿಲ್ಲೆಗಳನ್ನು ಸತತ 11 ಗಂಟೆಗಳ ಕಾಲ ಸುತ್ತಾಡಿಸಿದ್ದಾರೆ. ಇದರಿಂದ ನಾನು ಕುಗ್ಗುವುದಿಲ್ಲ ಎಂದು ಭಾವುಕರಾದರು. ಸತ್ಯಕ್ಕೆ ಜಯ ಸಿಕ್ಕಿದೆ ಕೋರ್ಟ್ ಆದೇಶಕ್ಕೆ ಪ್ರತಿಕ್ರಿಯೆ ನೀಡಿದ ಅವರು ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಹೇಳಿದರು. ನೀವು ನಿನ್ನೆ ನನಗೆ ಕೊಟ್ಟಿರುವ ಹಿಂಸೆಯನ್ನು 30 ವರ್ಷದ ಹಿಂದೆಯೇ ಅನುಭವಿಸಿದ್ದೇನೆ. ಈ ಪ್ರಕರಣದಿಂದ ನಾನು ಕುಗ್ಗಿಲ್ಲ ಇನ್ನಷ್ಟು ಬಲ ಬಂದಿದೆ. ನಿಮ್ಮ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ನುಡಿದರು. ಇದನ್ನೂ ಓದಿ: CT Ravi Reaction: ನನ್ನನ್ನು ಉಗ್ರನಂತೆ ನಡೆಸಿಕೊಂಡ್ರು, ಊಟಕ್ಕೂ ಬಿಟ್ಟಿಲ್ಲ! ನ್ಯೂಸ್ 18ಗೆ ಸಿ.ಟಿ. ರವಿ ಫಸ್ಟ್ ರಿಯಾಕ್ಷನ್ ನಿನ್ನೆ ಅರೆಸ್ಟ್, ಇಂದು ಸಿ.ಟಿ. ರವಿ ರಿಲೀಸ್! ಪರಿಷತ್ ಸದಸ್ಯ ಸಿಟಿ ರವಿ ಬಂಧನ ಪ್ರಕರಣಕ್ಕೆ ಮಧ್ಯಂತರ ಟ್ವಿಸ್ಟ್ ಸಿಕ್ಕಿದೆ. ಸಿಟಿ ರವಿಯನ್ನು ರಿಲೀಸ್ ಮಾಡುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಎಲ್ಲಿದ್ದಾರೋ ಅಲ್ಲಿಂದಾನೇ ಅವರನ್ನು ರಿಲೀಸ್ ಮಾಡಿ ಅಂತ ಕೋರ್ಟ್ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಬೆಳಗಾವಿ ಪೊಲೀಸರು ಅವರನ್ನು ದಾವಣಗೆರೆಯಲ್ಲಿ ರಿಲೀಸ್ ಮಾಡಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಹೇಳಿದ್ದೇನು? ಹೈಕೋರ್ಟ್‌ನಲ್ಲಿ ಸಿಟಿ ರವಿಗೆ ಬಿಗ್ ರಿಲೀಫ್ ಸಿಕ್ಕಿದೆ. ಸಿಟಿ ರವಿ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶಿಸಿದೆ. ಸಿಟಿ ರವಿ ಎಲ್ಲಿದ್ದಾರೋ ಅಲ್ಲಿಂದಲೇ ಬಿಡುಗಡೆ ಮಾಡುವಂತೆ ಹೈಕೋರ್ಟ್ ನ್ಯಾಯಪೀಠ ಆದೇಶಿಸಿತ್ತು. ಸಿಟಿ ರವಿ ಬಿಡುಗಡೆಗೆ ಆದೇಶ ನೀಡಿರುವ ಹೈಕೋರ್ಟ್, ಕೆಲವೊಂದು ಷರತ್ತು ವಿಧಿಸಿತ್ತು. ತನಿಖೆಗೆ ಸಹಕರಿಸಬೇಕು ಅಂತ ಸೂಚನೆ ನೀಡಿ, ಮಧ್ಯಂತರ ಆದೇಶ ನೀಡಿತ್ತು. ಅತ್ತ ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ವಿಚಾರಣೆ ಮುಂದೂಡಿಕೆ ಮತ್ತೊಂದೆಡೆ ಸಿಟಿ ರವಿ ಅರ್ಜಿ ವಿಚಾರಣೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲೂ ಕೂಡ ನಡೆಯಿತು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ದೂರಿನ ಅನ್ವಯ ಸಿಟಿ ರವಿ ಅವರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದರು. ಪ್ರಕರಣದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಬೇಲ್ ಅರ್ಜಿ ವಿಚಾರಣೆಯನ್ನು ನಾಳೆಗೆ (ಡಿಸೆಂಬರ್ 21) ಮುಂದೂಡಿತ್ತು. None
Popular Tags:
Share This Post:
What’s New
Spotlight
Today’s Hot
-
- December 20, 2024
-
- December 20, 2024
-
- December 20, 2024
CT Ravi Release: ಈಗ ಎಲ್ಲಿದ್ದಾರೆ ಸಿಟಿ ರವಿ? ಅಲ್ಲಿಂದಲೇ ರಿಲೀಸ್ ಆಗ್ತಾರಾ?
- By Sarkai Info
- December 20, 2024
Featured News
CT Ravi: ಬಂಧನವಾದ 24 ಗಂಟೆಯೊಳಗೆ ಸಿಟಿ ರವಿ ಬಿಡುಗಡೆ! ರಾಜ್ಯ ಸರ್ಕಾರಕ್ಕೆ ಭಾರೀ ಮುಖಭಂಗ!
- By Sarkai Info
- December 20, 2024
Latest From This Week
Max Movie: ಕಿಚ್ಚನ ಮ್ಯಾಕ್ಸ್ ಚಿತ್ರದಲ್ಲಿ ಲೇಡಿ ವಿಲನ್! ಯಾರು ಆ ಖಳ ನಾಯಕಿ?
NEWS
- by Sarkai Info
- December 20, 2024
Subscribe To Our Newsletter
No spam, notifications only about new products, updates.
Popular News
Top Picks
CT Ravi: ಸಿಟಿ ರವಿಗೆ ಮುಂದುವರೆದ ಸಂಕಷ್ಟ! ಬೇಲ್ ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್
- December 20, 2024