NEWS

CT Ravi Reaction: ನನ್ನನ್ನು ಉಗ್ರನಂತೆ ನಡೆಸಿಕೊಂಡ್ರು, ಊಟಕ್ಕೂ ಬಿಟ್ಟಿಲ್ಲ! ನ್ಯೂಸ್ 18ಗೆ ಸಿ.ಟಿ. ರವಿ ಫಸ್ಟ್‌ ರಿಯಾಕ್ಷನ್

ಸಿಟಿ ರವಿ ವಿಧಾನ ಪರಿಷತ್‌ನಲ್ಲಿ ಚರ್ಚೆಯ ಸಂದರ್ಭದಲ್ಲಿ ಗದ್ದಲ ಉಂಟಾಗಿದೆ. ಬೆಜೆಪಿ ಪರಿಷತ್ ಸದಸ್ಯ ಸಿ ಟಿ ರವಿ (CT Ravi) ತಮ್ಮ ವಿರುದ್ಧ ಅವಾಚ್ಯ ಶಬ್ಧಗಳಿಂದ (Unparliamentary) ನಿಂದಿಸಿದ್ದಾರೆ ಎಂದು ಆರೋಪಿಸಿ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಸಚಿವೆ ಹೆಬ್ಬಾಳಕರ್ ಅವರು ದೂರು ದಾಖಲಿಸಿದ್ದರು. ಲಕ್ಷ್ಮಿ ಹೆಬ್ಬಾಳ್ಕರ್ ದೂರಿನ ಅನ್ವಯ ಸಿಟಿ ರವಿ ಅವರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದರು. ಸದ್ಯ ಘಟನೆಗೆ ಕುರಿತಂತೆ ವಿಚಾರಣೆ ನಡೆಸಿದ ಹೈಕೋರ್ಟ್ (High Court) ಅವರನ್ನು ಕೂಡಲೆ ಬಂಧನಮುಕ್ತ (Release) ಮಾಡುವಂತೆ ಆದೇಶ ಹೊರಡಿಸಿದೆ. ನನ್ನನ್ನು ಟೆರರಿಸ್ಟ್ ಅಂತೆ ನಡೆಸಿಕೊಂಡರು ಸಿಟಿ ರವಿ ಅವರನ್ನು ಬಂಧನ ಮುಕ್ತ (ಬಿಡುಗಡೆ) ಮಾಡುವಂತೆ ಹೈ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೆ ಹಾವೇರಿ ಸಮೀಪ ನ್ಯೂಸ್18 ಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನನ್ನು ಟೆರರಿಸ್ಟ್‌ರಂತೆ ನಡೆಸಿಕೊಂಡರು, ಊಟಕ್ಕೂ ಬಿಟ್ಟಿಲ್ಲ ಎಂದು ಆಕ್ರೋಶ ಹೊರಹಾಕಿದರು. ಸತ್ಯಕ್ಕೆ ಜಯ ಸಿಕ್ಕಿದೆ, ನನ್ನ ವಿರುದ್ಧ ಸದನದಲ್ಲೇ ದೌರ್ಜನ್ಯ ನಡೆದಿದೆ. ನಾನು ಬಹಳ ಸಂಕಟ ಅನುಭವಿಸಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದರು. ನಿನ್ನೆಯಿಂದ ಊಟ ಮಾಡಿಲ್ಲ ನಿನ್ನೆ ಸಮಹೆಯಿಂದ ನಾನು ಊಟ ಮಾಡಿಲ್ಲ, ಇದು ಸತ್ಯಕ್ಕೆ ಸಂದ ಜಯ, ಸರ್ಕಾರ ನನ್ನನ್ನು ಟೆರರಿಸ್ಟ್‌ರಂತೆ ನಡೆಸಿಕೊಂಡಿದೆ. ವೈಯಕ್ತಿಕವಾಗಿ ನಾನು ಹೆಣ್ಣನ್ನು ನಿಂದಿಸುವವನಲ್ಲ, ಡಿಕೆ ಶಿವಕುಮಾರ್ ಏನು ಅಂತಾ ಕನಕಪುರ ಜನತೆಗೆ ಗೊತ್ತು ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಕಾಂಗ್ರೆಸ್‌ಗೆ ಮುಖಭಂಗ ಇನ್ನೊಂದೆಡೆ, ಹೈಕೋರ್ಟ್ ಆದೇಶದಂತೆ ಸಿಟಿ ರವಿ ಅವರನ್ನು ಕರೆತರುತ್ತಿರುವ ಮಾರ್ಗ ಮಧ್ಯೆಯೇ ಬಿಡುಗಡೆ ಮಾಡಲಾಗಿದೆ. ಹಾವೇರಿ ಸಮೀಪ ಬರುತ್ತಿದ್ದಾಗ ಅವರನ್ನು ಬಿಡುಗಡೆ ಮಾಡಲಾಗಿದೆ. ಈ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ ಅವರು, ಇದು ಸತ್ಯಕ್ಕೆ ಸಂದ ಜಯ ಎಂದು ಹೇಳಿದರು. ಇನ್ನೊಂದೆ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಕಾಂಗ್ರೆಸ್‌ಗೆ ತೀವ್ರ ಮುಖಭಂಗ ಕೂಡ ಉಂಟಾಗಿದೆ. ಇದನ್ನೂ ಓದಿ: CT Ravi: ಬಂಧನವಾದ 24 ಗಂಟೆಯೊಳಗೆ ಸಿಟಿ ರವಿ ಬಿಡುಗಡೆ! ರಾಜ್ಯ ಸರ್ಕಾರಕ್ಕೆ ಭಾರೀ ಮುಖಭಂಗ! ಎಲ್ಲಿದ್ದಾರೋ ಅಲ್ಲಿಂದಲೇ ಬಿಡುಗಡೆ ಮಾಡಿ! ಹೈಕೋರ್ಟ್‌ನಲ್ಲಿ ಸಿಟಿ ರವಿಗೆ ಬಿಗ್ ರಿಲೀಫ್ ಸಿಕ್ಕಿದೆ. ಸಿಟಿ ರವಿ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶಿಸಿದೆ. ಸಿಟಿ ರವಿ ಎಲ್ಲಿದ್ದಾರೋ ಅಲ್ಲಿಂದಲೇ ಬಿಡುಗಡೆ ಮಾಡುವಂತೆ ಹೈಕೋರ್ಟ್ ನ್ಯಾಯಪೀಠ ಆದೇಶಿಸಿದೆ. ಅತ್ತ ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ವಿಚಾರಣೆ ಮುಂದೂಡಿಕೆ ಮತ್ತೊಂದೆಡೆ ಸಿಟಿ ರವಿ ಅರ್ಜಿ ವಿಚಾರಣೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲೂ ಕೂಡ ನಡೆಯಿತು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ದೂರಿನ ಅನ್ವಯ ಸಿಟಿ ರವಿ ಅವರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದರು. ಪ್ರಕರಣದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಬೇಲ್ ಅರ್ಜಿ ವಿಚಾರಣೆಯನ್ನು ನಾಳೆಗೆ (ಡಿಸೆಂಬರ್ 21) ಮುಂದೂಡಿತ್ತು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.