NEWS

Aishwarya-Abhishek: ಅಬ್ಬಬ್ಬಾ ಐಶ್ ಅಂದ್ರೆ ಅಭಿಷೇಕ್​ಗೆ ಅದೆಷ್ಟು ಪ್ರೀತಿ! ವಿಡಿಯೋ ನೋಡಿ ಕೇರಿಂಗ್ ಹಸ್ಬೆಂಡ್​ ಅಂತಿದ್ದಾರೆ ನೆಟ್ಟಿಗರು!

ಬಾಲಿವುಡ್ ಬಿಗ್ ಬಿ ಅಮಿತಾಬ್​ ಬಚ್ಚನ್ (Amithab Bachchan) ಮನೆಯಲ್ಲಿ ಏನೂ ಸರಿಯಿಲ್ಲ ಎಂಬ ಗಾಳಿ ಸುದ್ದಿ ಹಬ್ಬಿತ್ತು. ನಟ ಅಭಿಷೇಕ್ ಬಚ್ಚನ್ (Abhishek Bachchan)​ ಹಾಗೂ ನಟಿ ಐಶ್ವರ್ಯಾ ರೈ (Aishwarya Rai) ವಿಚ್ಛೇದನದ ಸುದ್ದಿ ಕಳೆದ ಎರಡು ತಿಂಗಳಿಂದ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಡಿವೋರ್ಸ್ ರೂಮರ್ಸ್​ಗಳಿಗೆ (Divorce Rumors) ಐಶ್ವರ್ಯಾ ಹಾಗೂ ಅಭಿಷೇಕ್ ಬಚ್ಚನ್ ಬ್ರೇಕ್​ ಹಾಕಿದ್ದಾರೆ. ಮಗಳ ಶಾಲಾ ಕಾರ್ಯಕ್ರಮಕ್ಕೆ ಒಟ್ಟಾಗಿ ಬಂದು ಡಿವೋರ್ಸ್ ಪಕ್ಕಾ ಎಂದವರಿಗೆ ಶಾಕ್ ಕೊಟ್ಟಿದ್ದಾರೆ. ಇದೇ ವೇಳೆ ಐಶ್ ಮೇಲೆ ಅಭಿಷೇಕ್​ಗೆ ಎಷ್ಟು ಪ್ರೀತಿ, ಕಾಳಜಿ ಇದೆ ಅನ್ನೋದು ಈ ಒಂದು ವಿಡಿಯೋದಿಂದ ರಿವೀಲ್ ಆಗಿದೆ. ಒಟ್ಟಿಗೆ ಕಾಣಿಸಿಕೊಂಡ್ರು ಐಶ್-ಅಭಿಷೇಕ್​! ಐಶ್ವರ್ಯಾ ರೈ ಮಗಳ ಶಾಲಾ ಕಾರ್ಯಕ್ರಮವನ್ನು ಎಂದಿಗೂ ಮಿಸ್ ಮಾಡೋದೇ ಇಲ್ಲ. ಮಗಳ ಶೋ ನೋಡಲು ನಟಿ ಐಶ್ವರ್ಯಾ ರೈ, ಅಮಿತಾಬ್​ ಹಾಗೂ ಅಭಿಷೇಕ್ ಜೊತೆ ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್ ನ್ಯಾಷನಲ್ ಸ್ಕೂಲ್​ಗೆ ಬಂದಿದ್ರು. ಈ ವೇಳೆ ನಟಿ ಪತಿಯೊಂದಿಗೆ ನಗು ನುಗುತ್ತಾ ಮಾತಾಡುತ್ತಾ ಕಾರ್ಯಕ್ರಮಕ್ಕೆ ತೆರಳಿದ್ರು. ಪತ್ನಿ ಐಶ್ವರ್ಯಾ ರಕ್ಷಣೆಗೆ ನಿಂತ ಅಭಿಷೇಕ್ ಬಚ್ಚನ್​! ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ವಿಡಿಯೋದಲ್ಲಿ ಅಭಿಷೇಕ್ ತನ್ನ ಪತ್ನಿ ಐಶ್ವರ್ಯಾಳನ್ನು ಪ್ರೊಟೆಕ್ಟ್ ಮಾಡುವುದನ್ನ ಕಾಣಬಹುದು. ಐಶ್ವರ್ಯಾಳ ಬೆನ್ನ ಮೇಲೆ ಕೈಯಿಟ್ಟು ಮೊದಲು ನೀನು ಒಳಗೆ ಹೋಗು ಎಂಬಂತೆ ಸೇಫ್​ ಆಗಿ ಕಳಿಸಿದ್ದಾರೆ. ಕೇರಿಂಗ್​ ಹಸ್ಬೆಂಡ್ ಎಂದ ನೆಟ್ಟಿಗರು ಐಶ್ವರ್ಯಾ ಮತ್ತು ಅಭಿಷೇಕ್ ಒಟ್ಟಿಗೆ ಇರುವ ವಿಡಿಯೋ ನೋಡಿದ ನೆಟ್ಟಿಗರು ಕೇರಿಂಗ್​ ಹಸ್ಬೆಂಡ್ ಅಂತ ಕಮೆಂಟ್ ಮಾಡ್ತಿದ್ದಾರೆ. ಈಗ ಖುಷಿಯಾಯ್ತು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ರೆ. ದೇವರು ಈ ದಂಪತಿಯನ್ನ ಖುಷಿಯಾಗಿಡಲಿ ಎಂದು ಮತ್ತೊಬ್ಬರು ಕಮೆಂಟ್ ಮಾಡ್ತಿದ್ದಾರೆ. ಅಭಿಷೇಕ್​ಗೆ ಐಶ್ವರ್ಯಾ ಮೇಲೆ ಎಷ್ಟು ಪ್ರೀತಿ ಅಂತ ಜನರು ಕೊಂಡಾಡ್ತಿದ್ದಾರೆ. ಬ್ಯಾಕ್​ ಡ್ರೆಸ್​ನಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ಮಿಂಚುತ್ತಿದ್ರು. ಅತಿಥಿಗಳೊಂದಿಗೆ ನಗುತ್ತಾ ಪ್ರೀತಿಯಿಂದ ಮಾತಾಡಿಸಿದ್ರು. ಅಭಿಷೇಕ್ ಬಚ್ಚನ್ ಕೂಡ ಬ್ಲ್ಯಾಕ್ ಕಲರ್ ಟೀ ಶರ್ಟ್ ಧರಿಸಿದ್ರು. ಅಮಿತಾಬ್​ ಬಚ್ಚಮ್​ ಗ್ರೇ ಕಲರ್ ಸೂಟ್‌ನಲ್ಲಿ ಸೂಪರ್ ಡ್ಯಾಪರ್ ಆಗಿ ಕಾಣುತ್ತಿದ್ರು. ಮತ್ತೊಂದು ಕ್ಲಿಪ್‌ನಲ್ಲಿ, ಐಶ್ವರ್ಯ ಅವರು ಅಮಿತಾಬ್ ಅವರನ್ನು ಶಾಲೆಯ ಆವರಣಕ್ಕೆ ಕರೆದೊಯ್ಯುತ್ತಿರುವುದ್ರು. ಇದು ಐಶ್ವರ್ಯಾ ರೈಗೆ ಮಾವನ ಮೇಲಿರುವ ಪ್ರೀತಿಯನ್ನು ಸಾರಿ ಹೇಳ್ತಿತ್ತು. ಇದನ್ನೂ ಓದಿ: Aishwarya-Abhishek: ಡಿವೋರ್ಸ್​, ಜಗಳ ಎಲ್ಲಾ ಬರೀ ರೂಮರ್ಸ್​!​ ಒಟ್ಟಾಗಿ ಬಂದ್ರು ನೋಡಿ ಅಮಿತಾಬ್, ಐಶ್ವರ್ಯಾ, ಅಭಿಷೇಕ್​! ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್​ ನ್ಯಾಷನಲ್ ಸ್ಕೂಲ್ ಗುರುವಾರ ಆನುವಲ್ ಡೇ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲೆಂದೆ ಬಿಗ್ ಬಿ ಅಮಿತಾಬ್​, ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಂದಿದ್ರು. ಈವೆಂಟ್‌ ಗೆ ಬಾಲಿವುಡ್‌ ನ ದೊಡ್ಡ ಸ್ಟಾರ್​ಗಳು ಕೂಡ ಆಗಮಿಸಿದ್ರು. ಶಾರುಖ್ ಖಾನ್ ಮತ್ತು ಗೌರಿ ಖಾನ್, ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್, ಕರಣ್ ಜೋಹರ್ ಮತ್ತು ಶಾಹಿದ್ ಕಪೂರ್ ಅವರು ಮೀರಾ ರಜಪೂತ್ ಕೂಡ ಕಾರ್ಯಕ್ರಮಕ್ಕೆ ಬಂದಿದ್ರು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.