NEWS

Bengaluru Weather: ರಾಜಧಾನಿ ಬೆಂಗಳೂರು ಬೆಳಗ್ಗೆ ಕೂಲ್‌, ಮಧ್ಯಾಹ್ನ ರಣಬಿಸಿಲು; ಮಿಕ್ಸ್ ವೆದರ್‌ಗೆ ಸಿಟಿ ಮಂದಿ ಹೈರಾಣ!

local 18 news ಬೆಂಗಳೂರು: ಚಳಿಗಾಲ (Winter Season) ಆರಂಭವಾಗಿದ್ದು ಸಿಟಿ ಮಂದಿ (Bengaluru City) ಥರಥರ ನಡುಗುವಂತಾಗಿದೆ. ಬೆಳಗ್ಗೆ, ರಾತ್ರಿ ವಿಪರೀತ ಚಳಿಯಿದ್ದರೆ, ಮಧ್ಯಾಹ್ನ ರಣಬಿಸಿಲಿಗೆ (Mixed Weather) ಕಂಗಾಲಾಗಿದ್ದಾರೆ. ಮಿಕ್ಸ್ ವೆದರ್‌‌‌ ಬೆನ್ನಲ್ಲೇ ಸಿಟಿ ಮಂದಿಗೆ ವೈದ್ಯರು (Doctor) ವಿಶೇಷ ಸಲಹೆ ನೀಡಿದ್ದಾರೆ. ರಾಜಧಾನಿ ಬೆಂಗಳೂರಲ್ಲಿ ಮೈಕೊರೆಯುವ ಚಳಿ ಇದೆ. ನಿನ್ನೆ ನಗರದಲ್ಲಿ 16 ಡಿಗ್ರಿ ಸೆಲ್ಸಿಯಸ್ ಚಳಿಯ ಪ್ರಮಾಣ ದಾಖಲಾಗಿದೆ. ಚಳಿಯ ಜೊತೆಗೆ ಬಿಸಿಲು ಕೂಡ ಸಿಟಿ ಮಂದಿಯನ್ನ ಕಂಗೆಡುವಂತೆ ಮಾಡಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ವಿಪರೀತ ಬಿಸಿಲು ಜನರನ್ನ ಕಾಡಿದರೆ, ಸಂಜೆ 5 ಗಂಟೆ ಬಳಿಕ ಚಳಿ ನಡುಕ ಹುಟ್ಟಿಸ್ತಿದೆ. ಇನ್ನು ಮುಂಜಾನೆ 4 ಗಂಟೆಯಿಂದ 7 ಗಂಟೆಯವರೆಗೂ ಚಳಿಗೆ ಗಢಗಢ ನಡುಗುವಂತಾಗಿದೆ. ಈ ಮಿಕ್ಸ್ ವೆದರ್‌ ಬೆಂಗಳೂರಿಗರನ್ನ ಹೈರಾಣಾಗಿಸಿದೆ. ಈ ಮೊದಲು ಕೂಡ ಚಳಿಗಾಲ ಬಂದಾಗ ಅಂದರೆ ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ಚಳಿ ಇರುತ್ತಿತ್ತು, ಆದರೆ ಈಗ ಬೆಳಗ್ಗೆ ಅವಧಿಯಲ್ಲಿ ಹೆಚ್ಚು ಚಳಿ ಇರುತ್ತೆ. ಸಂಜೆ ಕೂಡ ಇದೇ ಪರಿಸ್ಥಿತಿ ಆದರೆ ಮಧ್ಯಾಹ್ನದ ವೇಳೆಗೆ ಬಿಸಿಲು ಇರುತ್ತೆ. ಹವಾಮಾನ ಇಲಾಖೆ ಕೂಡ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ ಎಂದು ವಾಕರ್ ಜಗದೀಶ್ ಹೇಳಿದ್ದಾರೆ. ಇದನ್ನೂ ಓದಿ: Tumakuru: ರಾಷ್ಟ್ರಕೂಟರ ಅರಸ ಅಮೋಘವರ್ಷನ ಕಾಲದ ಶಿಲಾ ಶಾಸನ ಪತ್ತೆ; ಅಚ್ಚರಿ ಮಾಹಿತಿ ಬಹಿರಂಗ ಈ ರೀತಿಯಾದ ಬಿಸಿಲು ಹಾಗೂ ಚಳಿ ಇರೋದ್ರಿಂದ ಮಕ್ಕಳು, ವೃದ್ಧರು ಆರೋಗ್ಯದ ಬಗ್ಗೆ ಗಮನಹರಿಸಬೇಕಿದೆ. ಈ ವೇಳೆ ಸೈನಸ್, ಅಸ್ತಮಾ ಸೇರಿದಂತೆ ಹಲವು ಸಮಸ್ಯೆ ಕಾಡುವ ಸಾಧ್ಯತೆ ಇದೆ. ಮೈತುಂಬಾ ಬಟ್ಟೆ ಧರಿಸುವುದು, ಬಿಸಿನೀರು ಕುಡಿಯುವುದು ಹಾಗೂ ಬಿಸಿಯಾದ ಊಟ ಸೇವಿಸಿದ್ರೆ ಉತ್ತಮ ಅಂತಾರೆ ಡಾಕ್ಟರ್‌‌. ಇದನ್ನೂ ಓದಿ: Rental Fraud: ಬೆಂಗಳೂರಲ್ಲಿ ಮನೆ ಲೀಸ್​ ಪಡೆಯೋರೆ ಎಚ್ಚರ! ಒಂದೇ ಮನೆ ತೋರಿಸಿ ಲಕ್ಷ ಲಕ್ಷ ಹಣ ವಂಚನೆ ಚಳಿ ಜಾಸ್ತಿ ಇರುವ ಸಂದರ್ಭದಲ್ಲಿ ಮಕ್ಕಳನ್ನು ಜಾಗೃತಿ ಇಂದ ನೋಡಿಕೊಳ್ಳಬೇಕು, ಪೋಷಕರು ಕೂಡ ಎಚ್ಚರ ವಹಿಸಬೇಕು. ವೃದ್ಧರು ಹಾಗೂ ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ ಎಂದು ಕೆಸಿ ಜನರಲ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಮೋಹನ್ ತಿಳಿಸಿದ್ದಾರೆ. ಈ ಬಾರಿ ಫೆಬ್ರವರಿ ಎರಡನೇ ವಾರದವರೆಗೂ ಚಳಿ ಹೆಚ್ಚಾಗಲಿದ್ದು, ಡಿಸೆಂಬರ್ ಅಂತ್ಯದ ವೇಳೆಗೆ 12 ಅಥವಾ 11.5 ಸೆಲ್ಸಿಯಸ್‌‌‌ ತಾಪಮಾನ ಇರಲಿದೆ. ಹೀಗಾಗಿ ಸಿಟಿ ಮಂದಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದೆ. (ವರದಿ: ಹಂಸ ಶ್ಯಾಮಲ, ನ್ಯೂಸ್ 18, ಬೆಂಗಳೂರು) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.