NEWS

Pushpa Movie: ಬಾಕ್ಸ್​ ಆಫೀಸ್ ಕೊಳ್ಳೆ ಹೊಡೀತಿರೋ ಪುಷ್ಪ 2ಗೆ ಬಿಗ್ ಶಾಕ್​! PVR ಐನಾಕ್ಸ್​​ನಿಂದ ಸಿನಿಮಾ ಎತ್ತಂಗಡಿ ಮಾಡಿದ್ರಾ?

ಟಾಲಿವುಡ್​ ಅಲ್ಲು ಅರ್ಜುನ್ (Actor Allu Arjun) ಅಭಿನಯ ಪುಷ್ಪ 2 ಸಿನಿಮಾ (Pushpa 2 Movie) ಹಲವು ದಾಖಲೆಗಳನ್ನು ಮುರಿದು ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆದಿದೆ. ದಕ್ಷಿಣ ಭಾಗದಲ್ಲಿ ಅಷ್ಟೇ ಅಲ್ಲದ ಉತ್ತರ ಭಾಗದಲ್ಲೂ ಪುಷ್ಪರಾಜ್ ಅಬ್ಬರ ಜೋರಾಗಿಯೇ ಇದೇ. ಸಿನಿಮಾ ರಿಲೀಸ್​ (Movie Release) ಆಗಿ 20 ದಿನಗಳೇ ಕಳೆದ್ರೂ ಕ್ರೇಜ್ ಕಡಿಮೆ ಆಗಿಲ್ಲ. ಗಳಿಕೆ ಕೂಡ ನಿಂತಿಲ್ಲ. ಥಿಯೇಟರ್​ಗಳು (Theaters) ಹೌಸ್ ಫುಲ್​ ಆಗ್ತಿದ್ರೂ, ಪುಷ್ಪ 2 ಸಿನಿಮಾವನ್ನು ಈ ಮಲ್ಟಿಫೆಕ್ಸ್​ನಲ್ಲಿ ಎತ್ತಂಗಡಿ ಮಾಡಲಾಗಿದೆ. ಕಾರಣ ಏನು? ಉತ್ತರ ಭಾರತದ PVR ಐನಾಕ್ಸ್​​ನಿಂದ ಪುಷ್ಪ 2 ಸಿನಿಮಾ ಪ್ರದರ್ಶನವನ್ನು ನಿಲ್ಲಿಸಿದ್ದಾರೆ. ಹೈದರಾಬಾದ್ ಕಾಲ್ತುಳಿತ ಪ್ರಕರಣದಿಂದಾಗಿ ‘ಪುಷ್ಪ 2: ದಿ ರೂಲ್’ ಪ್ರದರ್ಶನವನ್ನು ನಿಷೇಧಿಸಲಾಗಿದೆ ಎನ್ನಲಾಗ್ತಿದೆ. ಇದೇ ವಿಚಾರಕ್ಕೆ ಚಿತ್ರದ ನಿರ್ಮಾಪಕ ಮತ್ತು ಪಿವಿಆರ್ ಐನಾಕ್ಸ್ ನಡುವೆ ವಾಗ್ವಾದ ನಡೆದಿದೆಯಂತೆ ಈ ಗದ್ದಲ ಬಳಿಕ ನಾರ್ತ್​ನ ಪಿವಿಆರ್ ಐನಾಕ್ಸ್​ಗಳಲ್ಲಿ ಪುಷ್ಪ 2 ಸಿನಿಮಾವನ್ನು ಎತ್ತಂಗಡಿ ಮಾಡಲಾಗಿದೆ ಎನ್ನಲಾಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್! ಸಿನಿಮಾ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಅವರು ಡಿಸೆಂಬರ್ 19ರ ಗುರುವಾರ ರಾತ್ರಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ, ‘ಬ್ರೇಕಿಂಗ್: ನಾಳೆಯಿಂದ ಉತ್ತರ ಭಾರತದಲ್ಲಿ PVR ಐನಾಕ್ಸ್‌ ನಲ್ಲಿ ಪುಷ್ಪ 2 ಪ್ರದರ್ಶನಗೊಳ್ಳೋದಿಲ್ಲ’ ಎಂದು ಬರೆದಿದ್ದಾರೆ. ಮತ್ತೆ ವಿವರಣೆ ಕೊಟ್ಟ ವಿಶ್ಲೇಷಕ ಈ ಪೋಸ್ಟ್ ಹಾಕಿದ ಕೆಲವೇ ಗಂಟೆಗಳ ನಂತ್ರ ವ್ಯಾಪಾರ ವಿಶ್ಲೇಷಕರು ಈ ವಿವಾದ ಬಗೆಹರಿದಿದೆ. ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ. ‘ಪುಷ್ಪ 2 ಮತ್ತು PVR ಐನಾಕ್ಸ್ ನಡುವಿನ ಒಪ್ಪಂದ ಮುಂದುವರೆದಿದ್ದು, ಒಂದರ ಹಿಂದೆ ಒಂದರಂತೆ ಶೋಗಳು ಪ್ರದರ್ಶನ ಕಾಣ್ತಿದೆ. ‘ಪುಷ್ಪ 2’ ಹಿಂದಿ ಭಾಷೆಯಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಿಂದಿಯಲ್ಲಿ ‘ಪುಷ್ಪ 2’ ಬಿಡುಗಡೆಯಾದ 2 ವಾರಗಳಲ್ಲೇ 600 ಕೋಟಿ ಗಳಿಸಿದೆ. 1500 ಕೋಟಿ ದಾಟಿದೆ ‘ಪುಷ್ಪ 2’ ಕಲೆಕ್ಷನ್ ‘ಪುಷ್ಪ 2’ ಚಿತ್ರದ ವರ್ಲ್ಡ್ ವೈಡ್ ಕಲೆಕ್ಷನ್ 1500 ಕೋಟಿ ದಾಟಿದೆ ಎಂದು ಪ್ರೊಡಕ್ಷನ್ ಹೌಸ್ ಅಧಿಕೃತವಾಗಿ ಅನೌನ್ಸ್ ಮಾಡಿದೆ. ಪುಷ್ಪ 2 ಚಿತ್ರ 1508 ಕೋಟಿ ಗಳಿಸಿದೆ ಎಂದು ವರದಿಯಾಗಿದೆ. ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್​​ನನ್ನು ಕೆಲವು ದಿನಗಳ ಹಿಂದೆ ಬಂಧಿಸಲಾಗಿತ್ತು. ಪೊಲೀಸರು ಆತನನ್ನು ಮನೆಯಿಂದ ಬಂಧಿಸಿದ್ರು. 14 ದಿನಗಳ ಕಾಲ ನ್ಯಾಯಾಂಗ ಬಂಧನದ ಆದೇಶ ನೀಡಿದ್ರು. ಅರೆಸ್ಟ್ ಆದ ಒಂದೇ ದಿನಕ್ಕೆ ಅಲ್ಲು ಅರ್ಜುನ್ ರಿಲೀಸ್​ ಆದ್ರು. 50 ಸಾವಿರ ವೈಯಕ್ತಿಕ ಬಾಂಡ್ ಮೇಲೆ 4 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಇದನ್ನೂ ಓದಿ: Pushpa 2: ತೆರೆ ಕಂಡ ಏಳೇ ದಿನಕ್ಕೆ 1000 ಕೋಟಿ ಕ್ಲಬ್​ ಸೇರಿದ ಪುಷ್ಪ 2​! ಅಲ್ಲು ಅರ್ಜುನ್ ಸಿನಿಮಾ ಸಕ್ಸಸ್​ ಪಾರ್ಟಿ ಜೋರೋ ಜೋರು ಪುಷ್ಪ.. ಪುಷ್ಪ.. ಪುಷ್ಪ.. ತೆರೆ ಮೇಲೆ ಪುಷ್ಪರಾಜನ ಅಬ್ಬರ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಪ್ಯಾನ್​ ಇಂಡಿಯಾ ಸಿನಿಮಾ ಪುಷ್ಪ 2 ದಿ ರೂಲ್ ಡಿ.5ರಂದು ತೆರೆಕಂಡು ಭರ್ಜರಿ ಪ್ರದರ್ಶನ ಕಾಣ್ತಿದೆ. ಸಿನಿಮಾ ಸೂಪರ್ ಡೂಪರ್​ ಹಿಟ್ ಆಗಿದೆ. ಸುಮಾರು 3 ವರ್ಷಗಳಿಂದ ಪುಷ್ಪ ಬ್ಲಾಕ್‌ ಬಸ್ಟರ್ ಹಿಟ್​ನ ಸೀಕ್ವೆಲ್‌ ಗಾಗಿ ದೇಶಾದ್ಯಂತ ಸಿನಿ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ರು. ಪುಷ್ಪ 2 ಸಿನಿಮಾ ತೆರೆಗೆ ಬಂದಿದ್ದು, ಪುಷ್ಪರಾಜ್ ಮ್ಯಾನರಿಸಂ ಮತ್ತು ಡೈಲಾಗ್‌ಗಳು ಮಾಸ್, ಕ್ಲಾಸ್ ಹಾಗೂ ಯೂತ್ ಎಲ್ಲರಿಗೂ ಇಷ್ಟವಾಗಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.