NEWS

DK Shivakumar: ಸಿ ಟಿ ರವಿ ಕೇಸ್, ಕೊಲೆಗೆ ಯತ್ನ ಸ್ವಾಭಾವಿಕ ಎಂದ ನೀನು ರಾಜಕಾರಣಿಯೋ? ರೌಡಿಯೋ? ಡಿಕೆಶಿಗೆ JDS ಖಾರವಾದ ಪ್ರಶ್ನೆ!

ಡಿಕೆಶಿಗೆ JDS ಖಾರವಾದ ಪ್ರಶ್ನೆ ಬೆಂಗಳೂರು: ಸಿಟಿ ರವಿ (CT Ravi) ಮೇಲಿನ ಹಲ್ಲೆ ಯತ್ನಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ ಕೆ ಶಿವಕುಮಾರ್ (DK Shivakumar) ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು ಜೆಡಿಎಸ್ ಪಕ್ಷ (JDS Party) ಕಿಡಿ ಕಾರಿದೆ. ಬೆಳಗಾವಿಯಲ್ಲಿ (Belagavi) ಮಾಧ್ಯಮಗಳ ಜೊತೆ ಮಾತನಾಡಿದ್ದ ಡಿ ಕೆ ಶಿವಕುಮಾರ್, ಹೆಣ್ಣು ಮಗಳ ಬಗ್ಗೆ 12 ಬಾರಿ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂದು ಡಿಸಿಎಂ ಆರೋಪ ಮಾಡಿದ್ರು. ಇದು ಚಿಕ್ಕಮಗಳೂರು ಸಂಸ್ಕೃತಿನಾ? ಭಾರತದ ಸಂಸ್ಕೃತಿನಾ? ಬಿಜೆಪಿ ಸಂಸ್ಕೃತಿನಾ? ಎಂದು ಪ್ರಶ್ನೆ ಮಾಡಿದರು. ಇನ್ನು ಸಿಟಿ ರವಿ ಅವರ ಮೇಲೆ ಹಲ್ಲೆಗೆ ಯತ್ನ ಮಾಡಿದ್ದಾರೆ ಎಂಬ ವಿಚಾರದ ಕುರಿತು ಮಾತನಾಡಿದ್ದ ಅವರು, ಪುಣ್ಯ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಉಳಿದಿರೋದು, ತಮ್ಮ ಪ್ರತಿನಿಧಿಯ ಬಗ್ಗೆ ಕೀಳಾಗಿ ಮಾತಾಡಿದರೆ ಜನ ಹೇಗೆ ಸಹಿಸಿಕೊಳ್ಳುತ್ತಾರೆ? ರವಿಯ ಕೊಳಕು ಬಾಯಿ ಹೊಸದೇನಲ್ಲ ಎಂದು ಹೇಳಿದ್ದರು. ಇದನ್ನೂ ಓದಿ: ದಾಖಲೆ ಇದೆ, ವಿಡಿಯೋ ಬಿಡುಗಡೆ ಮಾಡುತ್ತೇನೆ; ಸಿ ಟಿ ರವಿ ಕೇಸ್​ಗೆ ಡಿ ಕೆ ಶಿವಕುಮಾರ್ ಹೊಸ ಟ್ವಿಸ್ಟ್! ರೌಡಿ ಗ್ಯಾಂಗ್‌ನ ಮುಖ್ಯಸ್ಥನೋ? ಡಿ ಕೆ ಶಿವಕುಮಾರ್ ಮಾತನಾಡಿದ ವಿಡಿಯೋ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ನೀವು ಜವಾಬ್ದಾರಿ ಉಪಮುಖ್ಯಮಂತ್ರಿಯೋ ? ರೌಡಿ ಗ್ಯಾಂಗ್‌ನ ಮುಖ್ಯಸ್ಥನೋ? ಕೊಲೆಗೆ ಪರೋಕ್ಷವಾಗಿ ಕುಮ್ಮಕ್ಕು ಕೊಡುತ್ತಿರುವ ನೀನು ಯಾವ ಸೀಮೆ ಉಪಮುಖ್ಯಮಂತ್ರಿ. ರೌಡಿ ಕೊತ್ವಾಲ್‌ನ ಶಿಷ್ಯ ಡಿ ಕೆ ಶಿವಕುಮಾರ್ ಬೆಳೆದು ಬಂದಿರುವ ಕರಾಳ ಇತಿಹಾಸವೇ ಇಂತಹದ್ದು. ಕೊಲೆಗೆ ಯತ್ನ ಸ್ವಾಭಾವಿಕ ಎಂದು ಹೇಳಿಕೆ ನೀಡಿರುವ ನೀನು ರಾಜಕಾರಣಿಯೋ ? ರೌಡಿಯೋ? ಎಂದು ಖಾರವಾಗಿ ಪ್ರಶ್ನೆ ಮಾಡಿದೆ. ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಕೈ-ಕಮಲ ಜಟಾಪಟಿ; ಪ್ರತಿಭಟನಾಕಾರರ ಗಲಾಟೆ ವೇಳೆ ಪೊಲೀಸರಿಂದ ಲಾಠಿಚಾರ್ಜ್! ‘ಯಾವುದರಲ್ಲೂ ಇಂಟರ್​ಫಿಯರ್ ಆಗಿಲ್ಲ’ ಪೊಲೀಸರು ನಡತೆನೂ ಸರಿ ಇಲ್ಲ. ನಾನು ಯಾವುದರಲ್ಲೂ ಇಂಟರ್​ಫಿಯರ್ ಆಗಿಲ್ಲ. ಯಾರೋ ಒಬ್ರು ಇಬ್ರೋ ಮೀಟ್ ಮಾಡಬೇಕಿತ್ತು. ಅದನ್ನು ಬಿಟ್ಟು ಬಿಜೆಪಿ ಮೀಟಿಂಗ್ ಮಾಡಿದ್ದಾರೆ. ಇದು ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಇರೋದು ಸಜಹವಾಗಿಯೇ ಕಾಂಗ್ರೆಸ್ ಕಾರ್ಯಕರ್ತರು ಬಂದಿದಾರೆ. ಈ ಕೊಳಕಬಾಯಿ ಹೊಸದಲ್ಲ ಸಿದ್ದರಾಮಯ್ಯ ಅವರನ್ನು ಸಿದ್ದರಾಮುಲ್ಲ ಖಾನ್ ಎಂಬ ಪದ ಬಳಸಿದ್ದಾರೆ. ಇವರೊಬ್ಬರದ್ದೇ ಹರಕಲು ಬಾಯಿ ಎಂದು ಡಿ ಕೆ ಶಿವಕುಮಾರ್ ಕಿಡಿ ಕಾರಿದ್ದರು. ನೀವು ಜವಾಬ್ದಾರಿ ಉಪಮುಖ್ಯಮಂತ್ರಿಯೋ ? ರೌಡಿ ಗ್ಯಾಂಗ್‌ನ ಮುಖ್ಯಸ್ಥನೋ ? ಕೊಲೆಗೆ ಪರೋಕ್ಷವಾಗಿ ಕುಮ್ಮಕ್ಕು ಕೊಡುತ್ತಿರುವ ನೀನು ಯಾವ ಸೀಮೆ ಉಪಮುಖ್ಯಮಂತ್ರಿ ! ರೌಡಿ ಕೊತ್ವಾಲ್‌ನ ಶಿಷ್ಯ @DKShivakumar ಬೆಳೆದು ಬಂದಿರುವ ಕರಾಳ ಇತಿಹಾಸವೇ ಇಂತಹದ್ದು. ಕೊಲೆಗೆ ಯತ್ನ ಸ್ವಾಭಾವಿಕ ಎಂದು ಹೇಳಿಕೆ ನೀಡಿರುವ ನೀನು ರಾಜಕಾರಣಿಯೋ ?… pic.twitter.com/8bQfYG2VZh ವಿಡಿಯೋನ ನಾನೇ ಬೇಕಿದ್ರೆ ರಿಲೀಸ್‌ ಮಾಡುತ್ತೇನೆ’ ಸಿಟಿ ರವಿ ಅಶ್ಲೀಲ ಪದ ಬಳಸಿದ ಬಗ್ಗೆ ದಾಖಲೆ ನಿಮ್ಮ ಬಳಿ ಇದೆ ಅಲ್ವಾ? ನಿಮ್ಮ ಹತ್ತಿರ ಇಲ್ಲ ಅಂದರೆ ನಾನು ಬಿಡುಗಡೆ ಮಾಡುತ್ತೇನೆ. ವಿಡಿಯೋನ ನಾನೇ ಬೇಕಿದ್ರೆ ರಿಲೀಸ್‌ ಮಾಡುತ್ತೇನೆ. ಪೊಲೀಸರು ಕಾನೂನು ಕ್ರಮ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು. ಸಿ ಟಿ ರವಿ ಕೊಲೆ ಯತ್ನ ಆಪಾದನೆ ಎಲ್ಲಾ ಸುಳ್ಳು, ಪೊಲೀಸರು ಸೌಜನ್ಯದಿಂದ ನಡೆದುಕೊಂಡಿದ್ದಾರೆ ಎಂದರು. ಪರಿಷತ್‌ ಸಭಾಪತಿ ವಿಚಾರ ಸರಿಯಿಲ್ಲ, ಅವರು ಚರ್ಚೆಗೆ ಅವಕಾಶ ನೀಡಬೇಕಾಗಿತ್ತು. ಪರಿಶೀಲನೆ ಮಾಡಬೇಕಾಗಿತ್ತು. ಲಕ್ಷ್ಮಿ ಹೆಬ್ಬಾಳ್ಕರ್ ತಪ್ಪಿದ್ದರೆ ಕ್ರಮ ತೆಗೆದುಕೊಳ್ಳಲಿ. ಏಕಾಏಕಿ ಇಬ್ಬರತ್ರನೂ ಮಾತನಾಡಿ ಸದನವನ್ನು ಮುಂದೂಡಿದ್ದು ಸರಿಯಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.