NEWS

Waqf Dispute: ವಕ್ಫ್‌ ವಿರುದ್ಧವೇ ಕಿಡಿಕಾರಿದ ಮುಸ್ಲಿಂ ಮುಖಂಡ! ಯತ್ನಾಳ್‌ ಹೋರಾಟಕ್ಕೆ ಬೆಂಬಲ

ಬಸನಗೌಡ ಪಾಟೀಲ್‌ ಯತ್ನಾಳ್‌ ವಿಜಯಪುರ: ರಾಜ್ಯದಲ್ಲಿ ವಕ್ಫ್‌ ವಿವಾದಕ್ಕೆ (Waqf Dispute) ಸಂಬಂಧಿಸಿ ಕಾಂಗ್ರೆಸ್‌ (Congress) ಹಾಗೂ ಬಿಜೆಪಿ (BJP) ನಡುವೆ ವಾದ ಪ್ರತಿವಾದ ನಡೆಯುತ್ತಿದೆ. ಇನ್ನು ವಕ್ಫ್‌ ಸಂಬಂಧ ರೈತರಿಗೆ ನೋಟಿಸ್‌ ನೀಡಲಾಗಿತ್ತು. ಆದರೆ ಇದೀಗ ವಕ್ಪ್ ನೋಟಿಸ್‌ ಸುಳಿಯಲ್ಲಿ ಸಿಲುಕಿದ್ದ ರೈತರು ಇದೀಗ ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ. ರೈತರಿಗೆ ನೀಡಿದ್ದ ವಕ್ಫ್‌ ನೋಟಿಸ್ ಕೂಡಲೇ ಹಿಂಪಡೆಯುವಂತೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ. ಇದರ ಮಧ್ಯೆ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ನೇತೃತ್ವದಲ್ಲಿ ಧರಣಿ ಸತ್ಯಾಗೃಹ ನಡೆಯುತ್ತಿದ್ದು, ಯತ್ನಾಳ್‌ ಧರಣಿಗೆ ಮುಸ್ಲಿಂ ಮುಖಂಡರಿಂದ ಬೆಂಬಲ ದೊರೆತಿದೆ. ವಕ್ಫ ವಿರುದ್ಧದ ಹೋರಾಟಕ್ಕೆ ಮುಸ್ಲಿಂ ಮುಖಂಡರ ಬೆಂಬಲ! ಯತ್ನಾಳ್‌ ಮುಂದಾಳತ್ವದಲ್ಲಿ ವಿಜಯಪುರ ಡಿಸಿ ಕಚೇರಿ ಎದುರು ವಕ್ಫ್‌ ವಿರುದ್ಧ ಹೋರಾಟ ನಡೆಯುತ್ತಿದೆ. ಯತ್ನಾಳ್ ನೇತೃತ್ವದ ಧರಣಿ ಸತ್ಯಾಗ್ರಹದಲ್ಲಿ ಮುಸ್ಲಿಂ ಮುಖಂಡರು ಪಾಲ್ಗೊಂಡಿದ್ದು, ಯತ್ನಾಳ್‌ ಹೋರಾಟಕ್ಕೆ ಸಾಥ್‌ ನೀಡಿದ್ದಾರೆ. ಈ ಸಂದರ್ಭದಲ್ಲಿ ಮುಸ್ಲಿಂ ಮುಖಂಡ ಎಂ ಎ ಭಕ್ಷಿ ಆಕ್ರೋಶ ಹೊರಹಾಕಿದ್ದು, ವಕ್ಫ್‌ ಎಂದರೆ ಬರಿ ಹಣ ಹೊಡೆಯೋದು. ವಕ್ಫ್‌ನಲ್ಲಿ ಕೊಳ್ಳೆ ಹೊಡೆದು ಕಾರಲ್ಲಿ ಅಡ್ಡಾಡ್ತಿದ್ದಾರೆ ಎಂದು ವಕ್ಫ್‌ ವಿರುದ್ಧವೇ ಮುಸ್ಲಿಂ ಮುಖಂಡ ಭಕ್ಷಿ ಸಿಡಿದೆದ್ದಿದ್ದಾರೆ. ಇನ್ನು ವಕ್ಫ್‌ನಿಂದ ಒಬ್ಬ ಬಡ ಮುಸ್ಲಿಂನಿಗೆ ಉಪಯೋಗವಾಗಿದ್ರೆ ನನ್ನ ಮುಂದೆ ಬಂದು ಹೇಳಲಿ. ವಕ್ಫ್‌ನಿಂದ ಯಾವ ಬಡ ಮುಸ್ಲಿಂರಿಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮುಸ್ಲಿಂ ಮುಖಂಡ ಭಕ್ಷಿ ವಕ್ಫ್‌ ವಿರುದ್ಧವೇ ಕಿಡಿಕಾರಿದ್ದಾರೆ. ಜಮೀರ್‌ ವಿರುದ್ಧ ದೂರು ಇನ್ನು ರಾಜ್ಯದಲ್ಲಿ ವಕ್ಫ್ ವಿವಾದ ದೊಡ್ಡದಾಗ್ತಿರುವ ಹಿನ್ನೆಲೆ ಸಚಿವ ಜಮೀರ್ ವಿರುದ್ಧ ಹೈಕಮಾಂಡ್‌ಗೆ ಕಾಂಗ್ರೆಸ್‌ನ ಕೆಲವು ಸಚಿವರು ಹಾಗೂ ಹಿರಿಯ ನಾಯಕರುಗಳು ದೂರು ನೀಡಿದ್ದಾರೆ. ವಕ್ಫ್‌ ವಿವಾದವನ್ನು ಬಿಜೆಪಿ ರಾಜಕಾರಣದಲ್ಲಿ ಪ್ರಯೋಜನಕ್ಕೆ ಪಡೆಯುತ್ತಿದೆ. ಪ್ರತಿಪಕ್ಷ ಬಿಜೆಪಿ ನಾಯಕರು ಅದನ್ನೇ ದೊಡ್ಡದು ಮಾಡ್ತಿದೆ, ಇದರಿಂದ ಸರ್ಕಾರ, ಪಕ್ಷಕ್ಕೆ ತೀವ್ರ ಮುಜುಗರ ಎದುರಾಗಿದೆ ಹಾಗಾಗಿ ಜಮೀರ್ ವಿರುದ್ದ ಶಿಸ್ತು ಕ್ರಮ‌ ಕೈಗೊಳ್ಳಿ ಇಲ್ಲವಾದರೆ ವಿವಾದ ಮುಗಿಯುವವರೆಗೆ ಸಂಪುಟದಿಂದ ಕೆಳಗಿಳಿಸಿ ಪಕ್ಷ ಹಾಗೂ ಸರ್ಕಾರದ ಮಾನವನ್ನು ಉಳಿಸಿ ಎಂದು ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: Siddaramaiah: ನಾಳೆ ‘ಲೋಕಾ’ ವಿಚಾರಣೆ, ಇಂದು ಸಿಎಂ ಟೆಂಪಲ್ ರನ್! ತಾಯಮ್ಮ ದೇವಿ ಮೊರೆ ಹೋದ ಸಿದ್ದರಾಮಯ್ಯ ಬಿಜೆಪಿ ಪ್ರತಿಭಟನೆ ವಕ್ಫ್‌ ಸಂಬಂಧ ರಾಜ್ಯದ ಹಲವು ಕಡೆಗಳಲ್ಲಿ ಬಿಜೆಪಿ ಪ್ರತಿಭನಟನೆ ನಡೆಸುತ್ತಿದೆ. ಈ ಸಂಬಂಧ ನಿನ್ನೆ ವಿಜಯಪುರ, ಬೀದರ್, ಕೋಲಾರ, ಬಳ್ಳಾರಿ, ಧಾರವಾಡ, ರಾಯಚೂರು, ಹಾಸನ ಹಾಗೂ ಮಂಡ್ಯ ಜಿಲ್ಲೆಯಲ್ಲಿ ರೈತರ ಜಮೀನಿನಲ್ಲಿರುವ ವಕ್ಫ್ ಹೆಸರು ತೆಗೆದು ಹಾಕುವಂತೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ ನಡೆಸಿದೆ. ತಹಶೀಲ್ದಾರ ಕಚೇರಿಗೆ ಮುತ್ತಿಗೆ ಹಾಕಲು ಬಿಜೆಪಿ ನಾಯಕರು ಯತ್ನಿಸಿದ್ದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ಪೊಲೀಸರು ಬ್ಯಾರಿಕೇಡ್ ಹಾಕಿ ಪ್ರತಿಭಟನಾಕಾರರನ್ನ ತಡೆದರು. ತಹಶೀಲ್ದಾರರನ್ನ ಗೇಟ್ ಹೊರಗೆ ಕರೆದು‌ ಮನವಿ ಸಲ್ಲಿಸಿದ್ದರು. ಇನ್ನು ಪ್ರತಿಭಟನೆ ವೇಳೆ ನಗರಸಭೆ ಸದಸ್ಯರೊಬ್ಬರು, ವಕ್ಫ್ ಸಚಿವ ಜಮ್ಮಿರ್ ಅಹಮ್ಮದ್, ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಸಚಿವ ರಹೀಂಖಾನ್‌ಗೆ ಚಪ್ಪಲಿಯಿಂದ ಹೊಡೆಯಿರಿ ಎಂದ ವಿವಾದಾತ್ಮಕ ಹೇಳಿಕೆ ನೀಡಿದರು. ಈ ಮಂತ್ರಿಗಳನ್ನು ಗ್ರಾಮಕ್ಕೆ ಬರಲು ಬಿಡಬೇಡಿ, ಬಂದಾಗ ಸಚಿವರಿಗೆ ಚಪ್ಪಲಿಯಿಂದ ಹೊಡೆಯಿರಿ‌ ಎಂದ ಬಿಜೆಪಿ ಮುಖಂಡ ಶಶಿ ಹೊಸಳ್ಳಿ ಕಿಡಿಕಾರಿದರು. (ವರದಿ: ಗುರುರಾಜ್‌, ನ್ಯೂಸ್‌ 18 ಕನ್ನಡ, ವಿಜಯಪುರ) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.