NEWS

Bigg Boss 11: ಚೆಂಡಿನ ಆಟದಿಂದ ದೂರಾದ ದೋಸ್ತಿಗಳು, ಮಂಜಣ್ಣ, ಗೌತಮಿ, ಮೋಕ್ಷಿತಾ ಮನಸು ಚೂರು ಚೂರು!

ಚೆಂಡಿನ ಆಟದಿಂದ ದೂರಾದ ದೋಸ್ತಿಗಳು; ಮಂಜಣ್ಣ-ಗೌತಮಿ-ಮೋಕ್ಷಿತಾ ಮನಸು ಚೂರು ಚೂರು! ಬಿಗ್ ಬಾಸ್ (Bigg Boss) ಮನೆಯಲ್ಲಿ ಬುದ್ಧಿವಂತಿಕೆಯಿಂದಲೇ ಆಡಲಾಗುತ್ತಿದೆ. ಇದರಿಂದ ಮನೆಯಲ್ಲಿರೋ ಗೆಳೆತನಕ್ಕೆ ಪೂರ್ಣ ವಿರಾಮ ಬೀಳ್ತಾ ಇದೆ. ಚೆಂಡಿನ ಆಟದಿಂದ ಮಂಜಣ್ಣ, ಮೋಕ್ಷಿತಾ, ಗೌತಮಿ (Gouthami) ನಡುವಿನ ಸ್ನೇಹಕ್ಕೆ ಸರಿಯಾಗಿಯೇ ಕತ್ತರಿ ಬಿದ್ದಿದೆ. ಉಗ್ರಂ ಮಂಜಣ್ಣನ ಆಟದಿಂದ ಗೌತಮಿ ಬೇಸರಗೊಂಡಿದ್ದಾರೆ. ಮೋಕ್ಷಿತಾ ಪೈ (Mokshitha Pai) ತಮ್ಮ ವಿಶ್ಲೇಷಣೆ ಮುಂದುವರೆಸಿದ್ದಾರೆ. ಎರಡು ದಿನಗಳಿಂದಲೂ ಮಂಜಣ್ಣ ಬದಲಾಗಿದ್ದಾರೆ. ನಾವು ನೋಡಿರೋ ಮಂಜಣ್ಣ ಇವರಲ್ಲ ಅನಿಸುತ್ತಿದೆ. ಈ ಮೂಲಕ ಉಗ್ರಂ ಮಂಜು (Ugramm Manju) ಮನೆಯ ಶಕುನಿ ಅನ್ನೋ ವಿಚಾರ ಇದೀಗ ನಿಧಾನಕ್ಕೆ ಸಾಬೀತಾಗುತ್ತಿದೆ ಅನಿಸುತ್ತಿದೆ. ಇದರ ಒಂದು ಝಲಕ್ ಇದೀಗ ದಿನದ ಎರಡನೇ ಪ್ರೋಮೋದಲ್ಲಿಯೇ ರಿವೀಲ್ ಆಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಆಟದ ಮುಂದೆ ಗೆಳತನ ಏನೂ ಅಲ್ಲ ಹೌದು, ಈ ಒಂದು ಮಾತನ್ನ ಬಿಗ್ ಬಾಸ್ ಸ್ಪರ್ಧಿಗಳ ನಿಜ ಮಾಡುತ್ತಿದ್ದಾರೆ. ಆರಂಭದ ಒಂದು ವಾರ ಬಿಟ್ರೆ, ಎರಡನೇ ವಾರದಿಂದಲೇ ಉಗ್ರಂ ಮಂಜು, ಮೋಕ್ಷಿತಾ ಪೈ, ಗೌತಮಿ ಜಾದವ್ ನುಡುವೆ ಒಳ್ಳೆ ಸ್ನೇಹವೇ ಬಿಲ್ಡ್ ಆಗಿತ್ತು. ಅದು ಚೆಂಡಿನ ಆಟ ಶುರು ಆಗೋ ಎರಡು ದಿನದ ಮುಂಚೇನೆ ಚೆನ್ನಾಗಿತ್ತು. ಆದರೆ, ಮೋಕ್ಷಿತಾ ಪೈ ಗಮನಿಸಿರೋವಂತೆ, ಮಂಜಣ್ಣನ ವರ್ತನೆಯಲ್ಲಿ ಕಳೆದ ಎರಡು ದಿನಗಳಿಂದಲೂ ಏನೋ ಒಂದು ಬದಲಾವಣೆ ಕಾಣಿಸುತ್ತಿದೆ. ಅದನ್ನ ಸೂಕ್ಷ್ಮವಾಗಿಯೇ ಮೋಕ್ಷಿತಾ ಪೈ ಗಮನಿಸಿದ್ದಾರೆ. ಅದರಿಂದ ಒಂದಷ್ಟು ಡೌಟ್ ಕೂಡ ಬಂದಿದ್ದೆ. ಆದರೆ, ಅದು ಇದೀಗ ಚೆಂಡಿನ ಆಟದಲ್ಲಿ ಬ್ಲಾಸ್ಟ್ ಆಗಿದೆ. ಮಂಜಣ್ಣ ಬದಲಾಗಿ ಹೋದ ಉಗ್ರಂ ಮಂಜು ಬದಲಾಗಿದ್ದಾರೆ. ಯಾಕೆ ಅನ್ನೋ ಪ್ರಶ್ನೆಗೆ ಬಹುಶಃ ಮಂಜಣ್ಣ ಕಡೆಗೂ ಉತ್ತರ ಇಲ್ಲ ಅನಿಸುತ್ತದೆ. ಆದರೆ, ಆ ಒಂದು ಉತ್ತರವನ್ನ ಮೋಕ್ಷಿತಾ ತಮ್ಮದೇ ರೀತಿಯಲ್ಲಿ ಹುಡುಕಿದ್ದಾರೆ. ಅದನ್ನ ಚೆಂಡಿನ ಆಟದ ಬಳಿಕ ಹೇಳಿಯೇ ಬಿಟ್ಟಿದ್ದಾರೆ. ಮಂಜಣ್ಣ ಕಂಪ್ಲೀಟ್ ಬದಲಾಗಿದ್ದಾರೆ. ಕಳೆದ ಎರಡು ದಿನಗಳಿಂದಲೂ ಮಂಜಣ್ಣನ ವರ್ತನೆ ಚೇಂಜ್ ಆಗಿದೆ ಅಂತಲೂ ಮೋಕ್ಷಿತಾ ಹೇಳಿದ್ದಾರೆ. ಇದನ್ನೂ ಓದಿ: Bairathi Ranagal: ಭೈರತಿ ರಣಗಲ್ ರಣ ರೋಚಕ ಟ್ರೈಲರ್ ರಿಲೀಸ್! ಶಿವಣ್ಣನ ಪಾತ್ರದ ಅಸಲಿ ಖದರ್ ರಿವೀಲ್ ಗೌತಮಿ ಜಾದವ್ ಅಂತೂ ಫುಲ್ ರಾಂಗ್ ಆಗಿದ್ದಾರೆ. ಆಟದಲ್ಲಿ ನಾನು ಇನ್ಮುಂದೆ ಗೆಳೆತನ ನೋಡೋದೇ ಇಲ್ಲ ಅಂತಲೇ ನೇರವಾಗಿ ಉಗ್ರಂ ಮಂಜುಗೆ ಹೇಳಿದ್ದಾರೆ. ಇದರಿಂದ ಉಗ್ರಂ ಮಂಜು ಆಗ ಏನೂ ರಿಯಾಕ್ಟ್ ಮಾಡೋಕೆ ಹೋಗಿಲ್ಲ ಬಿಡಿ. ಆದರೆ, ಆಟ ಮುಗಿದ ಕೂಡಲೇ ಒಂದು ಮಾತು ಹೇಳಿದ್ದಾರೆ ನೋಡಿ. ಬುದ್ಧಿವಂತಿಕೆಯಿಂದ ಆಡಿದ್ದೇನೆ ನಾನು ಆಟವನ್ನ ಆಡಿದ್ದೇನೆ. ಆದರೆ, ಅದು ಬುದ್ಧಿವಂತಿಕೆಯ ಆಟವೇ ಆಗಿದೆ ಅಂತಲೂ ಹೇಳಿದ್ದಾರೆ. ಇದನ್ನ ಕೇಳಿದ ಗೌತಮಿ ಹಾಗೂ ಮೋಕ್ಷಿತಾ ಪೈ ಬೇಸರದಿಂದಲೇ ರಿಯ್ಯಾಕ್ಟ್ ಮಾಡಿದ್ದಾರೆ. ಅದೇ ಬೇಸರದಲ್ಲಿಯೇ ಸ್ಲೋ ಆಗಿಯೇ ಚೆಪ್ಪಾಳೆ ಕೂಡ ಹೊಡೆದು ತಮ್ಮ ಬೇಸರವನ್ನ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಯಾರಿಗೂ ಯಾರೂ ಇಲ್ಲ ಅನ್ನೋದು ಸತ್ಯವೇ ಆಗಿದೆ. ಸುದೀಪ್ ಕೂಡ ಈ ಒಂದು ಮಾತನ್ನ ಈ ಹಿಂದೇನೆ ಹೇಳಿದ್ದಾರೆ. ಎಲ್ಲರೂ ಇಲ್ಲಿ ಆಟವಾಡೋಕೆ ಬಂದಿದ್ದೀರಿ, ಹಾಗಾಗಿಯೇ ಆ ಒಂದು ಆಟವನ್ನ ಆಡಿ ಅನ್ನೋ ಅರ್ಥದಲ್ಲಿಯೇ ಈ ಮೊದಲೇ ಹೇಳಿದ್ದಾರೆ. ಚೆಂಡಿನ ಆಟ ತಂದ ನೋವು ಚೆಂಡಿನ ಆಟ ಎಲ್ಲರಿಗೂ ನೋವು ತರುತ್ತಿದೆ. ಚೈತ್ರಾ ಕುಂದಾಪುರ ಬೇಸರಗೊಂಡಿದ್ದಾರೆ. ಅನ್ಯಾಯದ ಆಟವನ್ನೆ ಇಲ್ಲಿ ಆಡಲಾಗುತ್ತಿದೆ ಅಂತಲೇ ಕೂಗಿ ಹೇಳಿದ್ದಾರೆ. ಈ ಸಮಯದಲ್ಲಿ ಗೌತಮಿ ಕೂಡ ಬೇಸರ ವ್ಯಕ್ತಪಡಿಸಿರೋದು ಇದೆ. ಹನುಮಂತನ ಕ್ಯಾಪ್ಟನ್ಶಿಯಲ್ಲಿಯೇ ಈ ಎಲ್ಲ ಅನ್ಯಾಯದ ಆಟ ನಡೆಯುತ್ತಿದೆ ಅಂತಲೇ ಚೈತ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಒಂದು ಪರಿಸ್ಥಿತಿಯಲ್ಲಿ ಕ್ಯಾಪ್ಟನ್ ಹನುಮಂತ ಏನು ಮಾಡ್ತಾರೆ? ಇಡೀ ಸ್ಥಿತಿಯನ್ನ ಹೇಗೆ ಹ್ಯಾಂಡಲ್ ಮಾಡ್ತಾರೆ ಅನ್ನೋ ಪ್ರಶ್ನೆ ಕೂಡ ಇದೆ ಅಂತಲೇ ಹೇಳಬಹುದು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.