NEWS

Oldest Countries: ವಿಶ್ವದ ಅತ್ಯಂತ ಹಳೆಯ ದೇಶಗಳು ಇವು! ಭಾರತ ಎಷ್ಟು ಪುರಾತನವಾದ ದೇಶ ಗೊತ್ತಾ?

ಸಾಂದರ್ಭಿಕ ಚಿತ್ರ ಭೂಮಿ ಮೇಲೆ ಮಾನವರು ವಿಕಸನಗೊಂಡ ನಂತರ ಜಗತ್ತು ಅನೇಕ ಬದಲಾವಣೆ, ನಾಗರಿಕತೆ, ಇತಿಹಾಸಗಳಿಗೆ ಸಾಕ್ಷಿಯಾಗಿದೆ. ಬೇರೆ ಬೇರೆ ಸಂಸ್ಕೃತಿ, ಪರಂಪರೆ, ಸಂಪ್ರದಾಯಗಳನ್ನು ಈ ನೆಲ ಕಂಡಿದೆ. ನಾವು ಹುಟ್ಟಿ ಇಷ್ಟು ವರ್ಷ ಆಗಿದೆ ಎನ್ನುವ ನಮಗೆ ನಾವಿರುವ ನಮ್ಮ ನೆಲ, ನಮ್ಮ ದೇಶ ಎಷ್ಟು ಹಳೆಯದ್ದಾಗಿದೆ ಎಂಬುದರ ಬಗ್ಗೆ ಗೊತ್ತೇ ಇಲ್ಲ. ವಿಶ್ವಕ್ಕೂ ಶತಕೋಟಿ ವರ್ಷಗಳಷ್ಟು ಆಯಸ್ಸಾಗಿದೆ. ಹಾಗಿದ್ರೆ ಬನ್ನಿ ವಿಶ್ವದ ಅತ್ಯಂತ ಪುರಾತನವಾದ ದೇಶಗಳು ಯಾವುವು ಅಂತಾ ತಿಳಿಯೋಣ. ವಿಶ್ವದ ಅತ್ಯಂತ ಪುರಾತನವಾದ ದೇಶಗಳು ಇರಾನ್ - 3200 BCE ಹಿಂದೆ ಪರ್ಶಿಯಾ ಎನ್ನಲಾಗುತ್ತಿದ್ದ ಇರಾನ್‌ ದೇಶ ವಿಶ್ವದ ಪ್ರಾಚೀನವಾದ ದೇಶಗಳಲ್ಲಿ ಒಂದು. ಇರಾನ್‌ನ ಇತಿಹಾಸವು ಹತ್ತಾರು ಸಾವಿರ ವರ್ಷಗಳ ಹಿಂದಿನದು. ಮೊದಲ ನಗರ ಸುಸಾವನ್ನು ಸುಮಾರು 3200 BCE ನಲ್ಲಿ ನಿರ್ಮಿಸಲಾಯಿತು, ಇರಾನ್ ಸಾಮ್ರಾಜ್ಯವು ಕಬ್ಬಿಣದ ಯುಗದಲ್ಲಿ ಪ್ರಾರಂಭವಾಯಿತು. ಅಕೆಮೆನಿಡ್ ಸಾಮ್ರಾಜ್ಯವನ್ನು ಸೈರಸ್ ದಿ ಗ್ರೇಟ್ ಸ್ಥಾಪಿಸಿದರು ಮತ್ತು ಆ ಸಮಯದಲ್ಲಿ ಇದು ವಿಶ್ವದ ಅತಿದೊಡ್ಡ ಸಾಮ್ರಾಜ್ಯವಾಗಿತ್ತು. ಈಜಿಪ್ಟ್ - 3100 BCE ನೈಲ್‌ ನದಿಯ ಉದ್ದಕ್ಕೂ ನೆಲೆಯಾಗಿದ್ದ ಈಜಿಪ್ಟಿನ ನಾಗರಿಕತೆಯು 3100 BC ಯಷ್ಟು ಹಿಂದಿನದು. ಈಜಿಪ್ಟ್‌ ಆ ಕಾಲದಲ್ಲಿಯೇ ಅತ್ಯಂತ ಶಕ್ತಿಶಾಲಿ ಮತ್ತು ಪ್ರಭಾವಶಾಲಿ ನಾಗತಿಕತೆಗಳಲ್ಲಿ ಒಂದಾಗಿತ್ತು. ಈ ನಾಗರಿಕತೆಯು ಸುಮಾರು 3000 ವರ್ಷಗಳ ಕಾಲ ಮೆಡಿಟರೇನಿಯನ್ ಅನ್ನು ಮುನ್ನಡೆಸಿತು. ವಿಯೆಟ್ನಾಂ - 2879 BCE ವಿಯೆಟ್ನಾಂನ ಇತಿಹಾಸವು 20,000 ವರ್ಷಗಳ ಹಿಂದಿನದು. ಈ ಪ್ರದೇಶದಲ್ಲಿ ನೆಲೆಸಿದ ಮೊದಲ ಮಾನವರು ಹೋಬಿನ್ಹಿಯನ್ನರು. ವಿಯೆಟ್ನಾಂನ ಮೊದಲ ರಾಜ್ಯಗಳನ್ನು ಸುಮಾರು 2879 BC ಯಲ್ಲಿ ರಚಿಸಲಾಯಿತು. ಅರ್ಮೇನಿಯಾ - 2492 BCE ಯುರೋಪ್‌ ಮತ್ತು ಏಷ್ಯಾದ ಕವಲು ದಾರಿಯಲ್ಲಿ ನೆಲೆಗೊಂಡಿರುವ ಈ ದೇಶವು ಅರ್ಮೇನಿಯಾ ತನ್ನ ಪ್ರಾಚೀನ ಸಾಮ್ರಾಜ್ಯ, ಇತಿಹಾಸಕ್ಕೆ ಹೆಸರಾಗಿದೆ. ಲೋವರ್ ಪ್ಯಾಲಿಯೊಲಿಥಿಕ್ ಅವಧಿಯಲ್ಲಿ ಅರ್ಮೇನಿಯನ್ ಹೈಲ್ಯಾಂಡ್ಸ್‌ನಲ್ಲಿ ಅತ್ಯಂತ ಪ್ರಾಚೀನ ಮಾನವ ಉಪಸ್ಥಿತಿಯನ್ನು ಹೊಂದಿದೆ. ಉತ್ತರ ಕೊರಿಯಾ - 2333 BCE ಉತ್ತರ ಕೊರಿಯಾದ ಮೊದಲ ಪ್ರಾಚೀನ ಸಾಮ್ರಾಜ್ಯವನ್ನು 2333 BCE ನಲ್ಲಿ ಟಂಗುನ್ ಸ್ಥಾಪಿಸಿದರು ಎನ್ನಲಾಗಿದೆ. ಈ ದಿನಾಂಕವನ್ನು ʻಗೇಚಿಯೊಂಜಿಯೋಲ್ʼ ಎಂದು ರಾಷ್ಟ್ರೀಯ ಸಂಸ್ಥಾಪನಾ ದಿನವಾಗಿ ಆಚರಿಸಲಾಗುತ್ತದೆ. ಚೀನಾ - 2070 BCE ಪ್ರಪಂಚದ ನಿರಂತರ ನಾಗರಿಕತೆಗಳಲ್ಲಿ ಒಂದನ್ನು ಹೊಂದಿರುವ 4000 ವರ್ಷಗಳಷ್ಟು ಹಳೆಯದು ಚೀನಾ ದೇಶ. ನಾಗರಿಕತೆಯ ಚಿಹ್ನೆಗಳು 5,800 ವರ್ಷಗಳ ಹಿಂದಿನದು ಎಂದು ಕೆಲವರು ಹೇಳುತ್ತಾರೆ. ಚೀನಾವನ್ನು ಮೊಟ್ಟಮೊದಲು ಆಳ್ವಿಕೆ ನಡೆಸಿದ ರಾಜವಂಶವೆಂದರೆ ಅದು ಕ್ಸಿಯಾ ರಾಜವಂಶವಾಗಿದೆ. ಕ್ಸಿಯಾ ನಂತರ ಶಾಂಗ್ ಮತ್ತು ಝೌ ರಾಜವಂಶಗಳು ಚೀನಾವನ್ನು ಆಳಿವೆ. ಇದನ್ನೂ ಓದಿ: ಈ ದೇಶದಲ್ಲಿ ನಾಯಿ, ಬೆಕ್ಕುಗಳು ಕೆಲಸಕ್ಕೆ ಹೋಗುತ್ತೆ; ಸಂಬಳವನ್ನೂ ಪಡೆಯುತ್ತೆ! ಭಾರತ - 2000 BCE ಭಾರತವು 5000 ವರ್ಷಗಳಷ್ಟು ಹಳೆಯದಾದ ದೇಶವಾಗಿದೆ. ಸಿಂಧೂ ಕಣಿವೆ ನಾಗರೀಕತೆಯ ಮೊದಲ ಮುಂದುವರಿದ ಸಮಾಜವನ್ನು ಹೊಂದಿರುವ ಭಾರತ ಸುಮಾರು 3000 BCE ಯಲ್ಲಿ ಹೊರಹೊಮ್ಮಿತು. 70.000 ರಿಂದ 50,000 BCE ಯಲ್ಲಿ, ಮೊದಲ ಮಾನವರು ಭಾರತಕ್ಕೆ ವಲಸೆ ಬಂದರು. ಅದರ ನಂತರ, ಹರಪ್ಪಾ ಸಿಂಧೂ ಕಣಿವೆ ನಾಗರಿಕತೆಯಲ್ಲಿ 3300-1600 BCE ವರೆಗೆ ಮತ್ತು ದಕ್ಷಿಣ ಭಾರತದಲ್ಲಿ 1000-300 BCE ವರೆಗೆ ಕಬ್ಬಿಣಯುಗ ಸಂಸ್ಕೃತಿ ಇತ್ತು. ಜಾರ್ಜಿಯಾ - 1300 BCE ಜಾರ್ಜಿಯಾವನ್ನು 1300 BCE ಹಳೆಯ ದೇಶ ಎಂದು ಪರಿಗಣಿಸಲಾಗಿದೆ. ಪರ್ಶಿಯಾ, ಬೈಜಾಂಟಿಯಮ್‌ ಮತ್ತು ರಷ್ಯಾದ ಪ್ರಭಾವಗಳು ಈ ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಕೊಡುಗೆ ನೀಡಿವೆ. ಇಸ್ರೇಲ್ - 1200 BCE ಇಸ್ರೇಲ್ ಅಂದಾಜು 1200 BCE ಗೆ ಹಿಂದಿನ ಪುರಾತನ ದೇಶವಾಗಿದೆ. ಅಲೆಮಾರಿ ಮತ್ತು ಬುಡಕಟ್ಟು ಜನರು ಈ ಸಮಯದಲ್ಲಿ ಕೆನಾನ್‌ನಲ್ಲಿ ನೆಲೆಸಿದ್ದರು. ಸುಡಾನ್ - 1070 BCE ಈ ದೇಶ ಕೂಡ ಹಳೆಯ ದೇಶಗಳಲ್ಲಿ ಒಂದಾಗಿದೆ ಮತ್ತು ಮೆಸೊಲಿಥಿಕ್ ಯುಗದಲ್ಲಿ ಸುಡಾನ್ ಪ್ರದೇಶದ ಮೊದಲ ನಿವಾಸಿಗಳು ಖಾರ್ಟೂಮ್ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುತ್ತಿದ್ದರು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.