NEWS

Home Remedies: ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದೀರಾ? ಹಾಗಾದರೆ ಈ ಮನೆ ಮದ್ದುಗಳನ್ನೊಮ್ಮೆ ಟ್ರೈ ಮಾಡಿ!

ಸಾಂದರ್ಭಿಕ ಚಿತ್ರ ಬೆನ್ನು ನೋವು ಸಹಿಸಲಾಸಾಧ್ಯ ನೋವಾಗಿ ಮಾರ್ಪಟ್ಟಾಗ ನಾವು ಆದಷ್ಟು ಮನೆ ಮದ್ದುಗಳ ಮೊರೆ ಹೋಗುತ್ತೇವೆ. ವ್ಯಾಯಾಮ ಮಾಡುವ ಸಮಯದಲ್ಲಿ, ರಾತ್ರಿ ಮಲಗಿ ಬೆಳಗ್ಗೆ ಏಳುವ ಸಮಯದಲ್ಲಿ, ಇಲ್ಲವೇ ಭಾರವಾದ ವಸ್ತು, ಸಾಮಾಗ್ರಿಗಳನ್ನು ಎತ್ತುವಾಗ ಬೆನ್ನು ನೋವು ಕಾಣಿಸಿಕೊಳ್ಳಬಹುದು. ಬೆನ್ನು ನೋವು ತುಂಬಾ ತೀವ್ರವಾಗಿದ್ದರೆ ನೀವು ವೈದ್ಯರನ್ನು ಕಾಣಲೇಬೇಕು, ಇಲ್ಲದಿದ್ದರೆ ಸರಳವಾದ ಮನೆ ಮದ್ದಿನಿಂದಲೇ ನೋವಿಗೆ ಉಪಶಮನ ಕಂಡುಕೊಳ್ಳಬಹುದು. ಹೆಚ್ಚಿನವರಲ್ಲಿ ಬೆನ್ನು ನೋವು ಸಾಮಾನ್ಯವಾಗಿದ್ದು ಸುಮಾರು 82% ದಷ್ಟು ಜನರು ಬೆನ್ನಿನ ಕೆಳಭಾಗದಲ್ಲಿ ವಿಪರೀತ ನೋವು ಅನುಭವಿಸುತ್ತಾರೆ ಎಂಬುದು ತಿಳಿದು ಬಂದಿದೆ. ಬೆನ್ನು ನೋವು ಯಾವ ತರಹದ್ದಾದರೂ ಅದಕ್ಕೆ ಪರಿಹಾರವಿದ್ದು ಅದನ್ನು ನೀವು ಒಮ್ಮೆ ಟ್ರೈ ಮಾಡಲೇಬೇಕು. ಬೆನ್ನು ನೋವಿಗೆ ಮನೆ ಮದ್ದುಗಳು ನಿಮ್ಮ ಭಂಗಿಯನ್ನು ಸರಿಪಡಿಸಿ ಬೆನ್ನು ನೋವು ವಿಪರೀತವಾಗಿದ್ದರೆ ಒಮ್ಮೆ ನೀವು ನಡೆಯುವ, ಕುಳಿತುಕೊಳ್ಳುವ ಭಂಗಿಯ ಮೇಲೆ ಯೋಚಿಸಿ. ಆದಷ್ಟು ಕುಳಿತುಕೊಳ್ಳುವಾಗ ಬೆನ್ನಿಗೆ ಆಧಾರವಾಗಿರುವ ಕುರ್ಚಿಯ ಮೇಲೆ ಆಸೀನರಾಗಿ, ಆದಷ್ಟು ಕುತ್ತಿಗೆಯನ್ನು ಮೇಲ್ಮುಖವಾಗಿ ಇರಿಸಿ ಕೆಳಮುಖವಾಗಿ ಇರಿಸಿಕೊಳ್ಳದಿರಿ. ಇದನ್ನೂ ಓದಿ: Vitamin D ಪಡೆಯಲು ಸೂರ್ಯನಡಿಯಲ್ಲಿ ನಿಲ್ಲಲು ಈ ಸಮಯ ಸೂಕ್ತ! ಡೆಸ್ಕ್‌ನಲ್ಲಿ ವರ್ಕ್ ಮಾಡುವವರು ನಿವಾಗಿದ್ದರೆ ನಿಮ್ಮ ಮೊಣಕೈ ಡೆಸ್ಕ್‌ನ ಎತ್ತರದಲ್ಲಿರಬೇಕು ಹಾಗೂ ಡೆಸ್ಕ್‌ನ ಕೆಳಭಾಗಕ್ಕೆ ನಿಮ್ಮ ಚೇರ್ ಅನ್ನು ಇರಿಸಿ. ಬೆನ್ನಿಗೆ ಬೆಂಬಲವಾಗಿ ತಲೆದಿಂಬು ಅಥವಾ ಟವೆಲ್ ರೋಲ್ ಅನ್ನು ಇರಿಸಿಕೊಳ್ಳಿ. ಚಾಲನೆ ಮಾಡುವಾಗ, ಆಗಾಗ್ಗೆ ವಿರಾಮಗಳನ್ನು ಕೈಗೊಳ್ಳಿ. ಫೋಮ್ ರೋಲರ್ಸ್ ಬೆನ್ನಿನ ಹಿಂಭಾಗದ ಸ್ನಾಯುಗಳಿಗೆ ವಿಶ್ರಾಂತಿ ನೀಡುವಾಗ ಫೋಲ್ ರೋಲರ್ ಉತ್ತಮ ಆಯ್ಕೆಯಾಗಿದೆ. ಇದು ಮಸಾಜರ್‌ನಂತೆ ಕೆಲಸ ಮಾಡಿ ಬೆನ್ನಿಗೆ ಉತ್ತಮ ಪರಿಹಾರ ನೀಡುತ್ತದೆ. ಫೋಮ್ ರೋಲರ್ ಬಳಸಿ ವಿವಿಧ ವ್ಯಾಯಾಮಗಳನ್ನು ಮಾಡಬಹುದಾಗಿದ್ದು, ಯೂಟ್ಯೂಬ್‌ನಲ್ಲಿ ನಿಮಗೆ ಬೇರೆ ಬೇರೆ ವ್ಯಾಯಾಮ ವಿಧಗಳು ದೊರೆಯಲಿವೆ. ಒಂದು ವ್ಯಾಯಾಮದ ಕುರಿತು ಹೇಳುವುದಾದರೆ ಹಿಂಭಾಗದಲ್ಲಿ ಮಲಗಿ ಹಾಗೂ ಮೊಣಕಾಲುಗಳನ್ನು ಮಡಚಿ. ನಿಮ್ಮ ಬೆನ್ನಿನ ಕೆಳಗೆ ಟೆನ್ನೀಸ್ ಬಾಲ್ ಅನ್ನು ಇರಿಸಿಕೊಳ್ಳಿ ಹಾಗೂ 20 ರಿಂದ 30 ಸೆಕೆಂಡ್‌ಗಳ ಕಾಲ ಹಾಗೆಯೇ ಇದನ್ನಿರಿಸಿಕೊಳ್ಳಿ. ಇನ್ನಷ್ಟು ಒತ್ತಡ ಸೃಷ್ಟಿಸಲು, ಟೆನ್ನೀಸ್ ಬಾಲ್ ಮೇಲೆ ಮಲಗುತ್ತಲೇ ನಿಮ್ಮ ದೇಹವನ್ನು ಅತ್ತಿತ್ತ ತಿರುಗಿಸಿ. ಒಂದು ಮೊಣಕಾಲಿನ ವಿರುದ್ಧವಾಗಿ ಹಿಮ್ಮಡಿಯನ್ನು ಓರೆಯಾಗಿಸಿಕೊಂಡು ನೀವು ಬೆನ್ನಿಗೆ ಒತ್ತಡ ನೀಡಬಹುದು. ಹೀಟ್ ಟ್ರೀಟ್‌ಮೆಂಟ್ ಬೆನ್ನಿಗೆ ಬೆಚ್ಚಗಿನ ಮಸಾಜ್ ನೀಡುವುದು ಕೂಡ ಬೆನ್ನು ನೋವನ್ನು ಶಮನ ಮಾಡುತ್ತದೆ. ಹಾಟ್ ಬಾಟಲ್ ಅನ್ನು ನೋವಿರುವ ಸ್ಥಳದಲ್ಲಿ ಇರಿಸಿ ಹಾಗೂ ಇದು ಬೆನ್ನು ನೋವಿಗೆ ತಕ್ಷಣದ ಪರಿಹಾರ ನೀಡುತ್ತದೆ. ನಿಮ್ಮ ಆಹಾರದ ಕಡೆಗೆ ಗಮನ ಹರಿಸಿ ಆದಷ್ಟು ಸಮತೋಲನಕರ ಊಟ ತಿಂಡಿ ಮಾಡುವುದು ಕೂಡ ಬೆನ್ನು ನೋವನ್ನು ಶಮನ ಮಾಡುತ್ತದೆ. ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ನೀಡುವತ್ತ ಗಮನ ಹರಿಸಿ ಇದು ಬೆನ್ನಿಗೆ ಸಾಕಷ್ಟು ಶಕ್ತಿ ನೀಡಿ ತನ್ನಷ್ಟಕ್ಕೆ ನೋವನ್ನು ಪರಿಹರಿಸುತ್ತದೆ ನೀವು ಅಧಿಕ ತೂಕ ಎತ್ತಿದರೆ ಕೂಡ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಹಾಗಾಗ್ಗಿ ಒಮ್ಮೆಗೆ ಹೆಚ್ಚಿನ ಭಾರ ಎತ್ತಲು ಮುಂದಾಗದಿರಿ. ಮಲಗುವ ಭಂಗಿಯನ್ನು ಸರಿಪಡಿಸಿ ರಾತ್ರಿ ಮಲಗುವ ಸಮಯದಲ್ಲಿ ನೀವು ಬಳಸುವ ಹಾಸಿಗೆ ದಿಂಬಿನ ಬಗ್ಗೆ ಗಮನ ಹರಿಸಿ. ನಿಮ್ಮ ದೇಹಕ್ಕೆ ಬೆಂಬಲ ನೀಡುವ ಕುಶನ್‌ಗಳನ್ನು ಮಾತ್ರ ಬಳಸಿ. ಆದಷ್ಟು ನೇರವಾಗಿ ಮಲಗಲು ಪ್ರಯತ್ನಿಸಿ ಹೆಚ್ಚು ದಿಂಬುಗಳನ್ನು ಬಳಸದಿರಿ ವ್ಯಾಯಾಮ ಆದಷ್ಟು ಬೆನ್ನಿನ ಸ್ನಾಯುಗಳಿಗೆ ಚಲನೆ ನೀಡುವ ವ್ಯಾಯಾಮಗಳನ್ನು ಪ್ರಯತ್ನಿಸಿ. ಈ ವ್ಯಾಯಾಮಗಳು ಬೆನ್ನು ನೋವಿನಿಂದ ಪರಿಹಾರ ನೀಡುತ್ತದೆ. ಆದಷ್ಟು ನೋವಿರುವಾಗ ಕೂಡ ವಿಪರೀತವಾಗಿ ದೇಹವನ್ನು ಬಗ್ಗಿಸುವುದು, ದಂಡಿಸುವುದು ಮಾಡದಿರಿ. ಬೆನ್ನು ನೋವಿಗೆ ಕೆಲವೊಂದು ವ್ಯಾಯಾಮಗಳು ಬ್ಯಾಕ್ ಫ್ಲೆಕ್ಸ್ ಮ್ಯಾಟ್ ಮೇಲೆ ಮಲಗಿ ಹಾಗೂ ನಿಮ್ಮೆರಡು ಕಾಲುಗಳನ್ನು ಎದೆಯ ಸಮೀಪ ತನ್ನಿ. ತಲೆಯನ್ನು ಕಾಲುಗಳ ಸಮೀಪ ತಂದು ನಿಮಗೆ ಆರಾಮ ನೀಡುವಷ್ಟು ಸಮಯ ಈ ಭಂಗಿಯಲ್ಲಿರಿ. 20-30 ಸೆಕೆಂಡ್ ಹೀಗೆಯೇ ಇರಿ. ಇದನ್ನೇ 5-10 ಬಾರಿ ಪುನರಾವರ್ತಿಸಿ. ನೀ ಟು ಚೆಸ್ಟ್ ವ್ಯಾಯಾಮ ನಿಮ್ಮ ಮೊಣಕಾಲನ್ನು ಬಗ್ಗಿಸಿ ಕೆಳಮುಖವಾಗಿ ಮಲಗಿ ಹಾಗೂ ಎರಡು ಕೈಗಳನ್ನು ಮೊಣಕಾಲಿನ ಹಿಂದೆ ಇರಿಸಿ ಹಾಗೂ ಎದೆಗೆ ಸಾಧ್ಯವಾದಷ್ಟು ಸಮೀಪ ತನ್ನಿ. ಇದೇ ಭಂಗಿಯಲ್ಲಿ 20-30 ಸೆಕೆಂಡ್ ಹಾಗೆಯೇ ಇರಿ. ಪ್ರತಿ ಕಾಲಿಗೆ 5-10 ಬಾರಿ ಹೀಗೆ ಮಾಡಿ ಬರ್ಡ್ ಡಾಗ್ ಮೊಣಕಾಲ ಮೇಲೆ ನಿಲ್ಲಿ. ಒಂದು ಕಾಲನ್ನು ಹಿಂದಕ್ಕೆ ಎಳೆದು ಇನ್ನೊಂದು ಬದಿಯ ಕೈಯನ್ನು ಮುಂದಕ್ಕೆ ವಿಸ್ತರಿಸಿ. ಇದೇ ಭಂಗಿಯನ್ನು 10 ಸೆಕೆಂಡ್ ಹೋಲ್ಡ್ ಮಾಡಿ. ಇನ್ನೊಂದು ಕಾಲಿಗೂ ಇದೇ ವ್ಯಾಯಾಮವನ್ನು ಪುನರಾವರ್ತಿಸಿ. ಪ್ರತಿ ಕಾಲಿಗೂ 10 ಬಾರಿ ವ್ಯಾಯಾಮ ಪುನರಾವರ್ತಿಸಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.