NEWS

CP Yogeshwar: ಯೋಗೇಶ್ವರ್ ನಮ್ಮ ಸೈನಿಕ, ನಮ್ಮ ಹೀರೋ! ಮುಕ್ತ ಕಂಠದಿಂದ ಕಾಂಗ್ರೆಸ್‌ಗೆ ಸ್ವಾಗತಿಸಿದ ಸಚಿವ ಲಾಡ್

ಸಂತೋಷ್ ಲಾಡ್ ಹುಬ್ಬಳ್ಳಿ: ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಂದಾಗಿ ತೆರವಾಗಿದ್ದ ಚನ್ನಪಟ್ಟಣ ಕ್ಷೇತ್ರಕ್ಕೆ ಉಪಚುನಾವಣೆ ದಿನಾಂಕ ಘೋಷಣೆಯಾಗಿದೆ. ಇನ್ನೊಂದೆಡೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿಪಿ ಯೋಗೇಶ್ವರ್ ಅವರಿಗೆ ಬಿಜೆಪಿ ಟಿಕೆಟ್ ಸಿಗುವುದು ಬಹುತೇಕ ಅನುಮಾನ ಎನ್ನಲಾಗಿದೆ. ಇದರ ನಡುವೆ ಕಾಂಗ್ರೆಸ್‌ನಿಂದ ಕೂಡ ಸಿಪಿವೈ ಸೆಳೆಯಲು ಕಸರತ್ತು ನಡೆಸಲಾಗಿದೆ ಎಂದು ಹೇಳಲಾಗಿದೆ. ಈ ನಡುವೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಸಿಪಿ ಯೋಗೇಶ್ವರ್ ನಮ್ಮ ಹೀರೋ ಎನ್ನುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ. ದಳಪತಿ ಕುಮಾರಸ್ವಾಮಿಗೆ ಸೈನಿಕ ಬಿಗ್ ಶಾಕ್ ಸಿಪಿ ಯೋಗೇಶ್ವರ್ ಅವರು ಚನ್ನಪಟ್ಟಣ ಕ್ಷೇತ್ರದಿಂದ ಬಿಜೆಪಿ ಚಿನ್ಹೆಯಲ್ಲಿ ಟಿಕೆಟ್ ಬೇಡಿಕೆ ಇಟ್ಟಿದ್ದರು. ಕುಮಾರಸ್ವಾಮಿ ಅವರು ಬಿಜೆಪಿಗೆ ಕ್ಷೇತ್ರ ಬಿಟ್ಟುಕೊಡಲು ಸಿದ್ಧರಿಲ್ಲದೇ ಇದ್ದಾಗ ಯೋಗೇಶ್ವರ್ ಅವರು ಚುನಾವಣೆ ಸ್ಪರ್ಧಿಸುವುದಾಗಿ ಖಚಿತಪಡಿಸಿದ್ದಾರೆ. ಮಾತ್ರವಲ್ಲ ಈ ಹಿನ್ನೆಲೆಯಲ್ಲಿ ಅವರು ಇಂದು ಹುಬ್ಬಳ್ಳಿಯ ಬಸವರಾಜ್ ಹೊರಟ್ಟಿ ನಿವಾಸಕ್ಕೆ ತೆರಳಿ ಬಿಜೆಪಿ ನಿವಾಸಕ್ಕೆ ತೆರಳಿ ತಮ್ಮ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆ ಮೂಲಕ ದಳಪತಿ ಕುಮಾರಸ್ವಾಮಿ ಅವರಿಗೆ ಬಿಗ್ ಶಾಕ್ ನೀಡಿದ್ದಾರೆ. ಸಿಪಿವೈ ಬಂದ್ರೆ ಮುಕ್ತ ಆಹ್ವಾನ ಚನ್ನಪಟ್ಟಣ ಉಪ ಚುನಾವಣೆಗೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಸಂತೋಷ್ ಲಾಡ್, ಸಿಪಿ ಯೋಗೇಶ್ವರ್ ನಮ್ಮ ಸೈನಿಕ ಹೀರೊ ಅವರು ಕಾಂಗ್ರೆಸ್‌ಗೆ ಬರ್ತಾರೆ ಅಂದ್ರೆ ಸ್ವಾಗತ ಮಾಡ್ತೇನೆ. ಸಿಪಿ ಯೋಗೇಶ್ವರ್‌ಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕೋ ಬೇಡವೋ ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತೆ, ಸಿಪಿ ಯೋಗೇಶ್ವರ್ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಆಗ್ತಾರೆ ಅನ್ನೋ ಸುದ್ದಿ ಇದೆ. ಯೋಗೇಶ್ವರ್ ಬಂದ್ರೆ ಹೈಕಮಾಂಡ್, ನಮ್ಮ ಪಕ್ಷದ ಮುಖಂಡರು ಹಾಗೂ ನಾನು ವ್ಯಯಕ್ತಿಕವಾಗಿ ಸ್ವಾಗತ ಮಾಡ್ತೇನೆ ಎಂದರು. ನಮ್ಮ ಸೈನಿಕ ನಮ್ಮ ಹೀರೋ ಸಿಪಿ ಯೋಗೇಶ್ವರ್ ಅವರು ನಮ್ಮ ಪಕ್ಷಕ್ಕೆ ಬಂದ್ರೆ ಅನುಕೂಲ ಆಗುತ್ತೆ, ಅವರು ನಮ್ಮ ಸೈನಿಕ ಹೀರೋ, ಪಕ್ಷದ ನಾಯಕರು ಅವರನ್ನು ಸಂಪರ್ಕ ಮಾಡಿದ್ದಾರೋ ಇಲ್ವೋ ಗೊತ್ತಿಲ್ಲ. ಪಕ್ಷಕ್ಕೆ ಸೇರ್ಪಡೆಯಾದ್ರೆ ಚನ್ನಪಟ್ಟಣದಿಂದ ಕಾಂಗ್ರೆಸ್ ಟಿಕೆಟ್ ನೀಡೋ ವಿಚಾರ, ಅದು ನನಗೆ ಗೊತ್ತಿಲ್ಲ. ಕೆಪಿಸಿಸಿ ಅಧ್ಯಕ್ಷರು ಹಾಗೂ ಅಲ್ಲಿನ ಮುಖಂಡರು ತೀರ್ಮಾನ ಮಾಡ್ತಾರೆ. ನಮ್ಮ ಪಕ್ಷದ ನಾಯಕರು ಸಿಪಿ ಯೋಗೇಶ್ವರ್ ಅವರೊಂದಿಗೆ ಚರ್ಚೆ ಮಾಡಿದ್ರು ಮಾಡಿರಬಹುದು, ಆದ್ರೆ ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಸಿಪಿವೈ ಪ್ರಬಲ ಅಭ್ಯರ್ಥಿ ಅವರು ಪ್ರಬಲ ಅಭ್ಯರ್ಥಿ ಇದ್ದಾರೆ. ಚನ್ನಪಟ್ಟಣದಲ್ಲಿ ಸಾಕಷ್ಟು ಜನಪ್ರಿಯ ಇದ್ದಾರೆ. ಅವರಿಗೆ ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ಕೊಡಬೇಕೋ ಬೇಡವೋ ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತೆ. ವೈಯಕ್ತಿಕವಾಗಿ ನಾನು ಅವರನ್ನ ಸ್ವಾಗತ ಮಾಡ್ತೇನೆ ಎಂದು ಸಂತೋಷ್ ಲಾಡ್ ಮುಕ್ತ ಕಂಠದಿಂದ ಸಿಪಿ ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಆಹ್ವಾನಿಸಿದರು. (ವರದಿ: ಶಿವರಾಮ ಅಸುಂಡಿ, ನ್ಯೂಸ್18 ಕನ್ನಡ) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.