NEWS

India China: ಕೆನಡಾ-ಅಮೆರಿಕಕ್ಕೆ ದೂರಾ, ಚೀನಾಕ್ಕೆ ಹತ್ತಿರ! ಗೇಮ್ ಚೇಂಜರ್ ಆಗುತ್ತಾ ಭಾರತ?

ಕೆನಡಾ-ಅಮೆರಿಕಕ್ಕೆ ದೂರಾ, ಚೀನಾಕ್ಕೆ ಹತ್ತಿರ ಒಂದೆಡೆ ಭಾರತದೊಂದಿಗೆ ಕೆನಡಾ ರಾಜತಾಂತ್ರಿಕ ಸಂಬಂಧಗಳನ್ನು (Diplomatic Relations) ಹದಗೆಡುತ್ತಿದೆ. ಈ ರಾಜತಾಂತ್ರಿಕ ವಿವಾದ ಎಷ್ಟು ಉಲ್ಬಣಗೊಂಡಿದೆ ಎಂದರೆ, ಭಾರತವು (India) ತನ್ನ ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳುವುರೊಂದಿಗೆ ಕೆನಡಾದ (Canada) ರಾಜತಾಂತ್ರಿಕರನ್ನು ಹೊರಹಾಕಿದೆ. ಇದರೊಂದಿಗೆ ಅಮೆರಿಕವು (America) ಕೆನಡಾದ ನಿರಾಧಾರ ಆರೋಪಗಳನ್ನು ಸಮರ್ಥಿಸಿಕೊಳ್ಳುತ್ತಾ ಭಾರತದೊಂದಿಗಿನ ಸಂಬಂಧವನ್ನು ತಾನೇ ಕೈಯಾರೆ ಹಾಳು ಮಾಡಿಕೊಳ್ಳುತ್ತಿದೆ. ಆದರೆ, ಇನ್ನೊಂದೆಡೆ ಭಾರತದೊಂದಿಗೆ ಅದರ ಹಳೆ ಸ್ನೇಹಿತ ರಷ್ಯಾದ (Russia) ಮತ್ತಷ್ಟು ಗಟ್ಟಿಗೊಳ್ಳುತ್ತಿದೆ. ಜೊತೆಗೆ ನೆರೆಯ ಚೀನಾ (China)ದೇಶವು ಭಾರತದೊಂದಿಗಿನ ಸಂಬಂಧಗಳನ್ನು ಸುಧಾರಿಸುತ್ತಾ ಹಿಂದಿ ಚೀನೀ ಭಾಯಿ ಭಾಯಿ ಎನ್ನುತ್ತಿದ್ದಾರೆ. ಈ ಎಲ್ಲ ಘಟನೆಗಳು ವಿಶ್ವ ರಾಜಕೀಯದಲ್ಲಿ (World politics) ಹಲವು ಪಲ್ಲಟಗಳಿಗೆ ಕಾರಣವಾಗಬಹುದು ಎನ್ನಲಾಗಿದೆ. ಕೆನಡಾದಿಂದ ಭಾರತದ ವಿರುದ್ದ ನಿರಾಧಾರ ಆರೋಪ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತವನ್ನು ಕೆನಡಾದ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಇಂಡೋ ಪೆಸಿಫಿಕ್ ಭಾಗದಲ್ಲಿ ಚೀನಾ ದೇಶದ ವಿರುದ್ದ ನಿರ್ಣಾಯಕ ಪ್ರತಿರೂಪವಾಗಿ ನೋಡುತ್ತಿದೆ. ಆದರೆ, ಈ ಸಮಯದಲ್ಲಿ, ಖಲಿಸ್ತಾನಿ ಬೆಂಬಲಿಗ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತದ ವಿರುದ್ದ ನಿರಾಧಾರ ಆರೋಪಗಳನ್ನು ಮಾಡುತ್ತಿರುವ ಸಂದರ್ಭ ಪ್ರತಿರೋಧಿಸದೆ ಸುಮ್ಮನಿವೆ. ಇದರ ನಡುವೆ ಐದು ಐಸ್ ಕೂಟದ ದೇಶಗಳಾದ ಅಮೆರಿಕ ಹಾಗೂ ಬ್ರಿಟನ್ ಭಾರತದ ವಿರೋಧಿ ನೀತಿಯನ್ನು ತಾಳಿದರೆ, ಸಂಘಟನೆಯ ಇತರೆ ಎರಡು ರಾಷ್ಟ್ರಗಳಾದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳು ಆರೋಪಗಳ ಕುರಿತು ಪ್ರಕ್ರಿಯೆ ನೀಡುವುದಿಲ್ಲ ಎನ್ನುವ ಮೂಲಕ ಮೌನ ತಾಳಿವೆ. ಭಾರತ ಪಾಕಿಸ್ತಾನಕ್ಕಿಂತ ಹೆಚ್ಚಾಗಿ ಹಳಸಿದ ಭಾರತ ಕೆನಡಾ ಸಂಬಂಧ ವಿಶ್ವದ ವಿವಿಧ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿರುವ ಈ ಸಂದರ್ಭದಲ್ಲಿ ಭಾರತ ಹಾಗೂ ಕೆನಡಾದ ನಡುವೆ ಸಂಬಂಧ ದಿನದಿಂದ ದಿನಕ್ಕೆ ಹಳಸುತ್ತಿದೆ. ಅದು ಎಷ್ಟರಮಟ್ಟಿಗೆ ಎಂದರೆ ಭಾರತ ಪಾಕಿಸ್ತಾನಕ್ಕಿಂತ ಹೆಚ್ಚಾಗಿ ಹಳಸುತ್ತಿದೆ. ಈ ಎಲ್ಲ ಬೆಳವಣಿಗೆಯ ಹಿಂದಿನ ಕಾರಣ ರಾಜಕೀಯ. ಹೌದು ಕೆವಲ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ವೋಟ್ಬ್ಯಾಂಕ್ ರಾಜಕೀಯದ ಕಾರಣದಿಂದ ಎರಡು ದೇಶಗಳ ನಡುವೆ ಸಮಸ್ಯೆಗಳು ಉದ್ಭವಿಸುತ್ತಿವೆ. ಯಾಕೆಂದರೆ, ಕೆನಡಾದಲ್ಲಿ ಸಿಖ್ ಸಮುದಾಯಕ್ಕೆ ಸೇರಿದ 770,000 ಜನ ಇದ್ದಾರೆ. ಇವರುಗಳಿಗೆ ಪ್ರತ್ಯೇಕ ಖಾಲಿಸ್ಥಾನದ ಆಸೆಗೆ ತುಪ್ಪ ಸುರಿಯುತ್ತಿದ್ದಾನೆ. ಇದೇ ಸಂದರ್ಭದಲ್ಲಿ ಕೆನಡಾವು ಭಾರತವನ್ನು ರಷ್ಯಾ ದೇಶಕ್ಕೆ ಹೋಲಿಕೆ ಮಾಡಿದೆ. ಯೂರಪ್ ರಾಷ್ಟ್ರಗಳಾದ ಜರ್ಮನಿ ಮತ್ತು ಯುಕೆಯಲ್ಲಿ ನಡೆದ ಕೆಲವು ಹತ್ಯೆಗಳ ಹಿಂದೆ ರಷ್ಯಾ ಮಾಡಿದೆ ಎನ್ನಲಾಗುತ್ತಿರುವ ಕೃತ್ಯಕ್ಕೆ ಭಾರತವನ್ನು ಹೋಲಿಕೆ ಮಾಡುವ ಕೆಲಸ ಮಾಡಿದೆ. ಇದು ಎರಡು ರಾಷ್ಟ್ರಗಳ ನಡುವೆ ಮತ್ತಷ್ಟು, ಮಗದಷ್ಟು ಸಂಬಂಧಗಳು ಹಳಸುತ್ತಿವೆ. ಇದನ್ನೂ ಓದಿ: ಪಾಕಿಸ್ತಾನದ ಹಾದಿಯಲ್ಲಿ ಕೆನಡಾ? ವೋಟ್​ ಬ್ಯಾಂಕ್​ಗಾಗಿ ಭಾರತ ವಿರೋಧಿ ನೀತಿ? ಬಾಂಗ್ಲಾದೇಶದಲ್ಲಿ ಉಲ್ಬಣಗೊಂಡಿರುವ ಅರಾಜಕತೆಯ ಹಿಂದೆ ಅಮೆರಿಕ ಇನ್ನೊಂದೆಡೆ ಭಾರತದ ನೆರೆಯ ದೇಶವಾದ ಬಾಂಗ್ಲಾದೇಶದಲ್ಲಿ ಉಲ್ಬಣಗೊಂಡಿರುವ ಅರಾಜಕತೆಯ ಹಿಂದೆ ಅಮೆರಿಕ ದೇಶದ ಕೈವಾಡವಿದೆ ಎನ್ನಲಾಗಿದೆ. ಬಂಗಾಳ ಕೊಲ್ಲಿಯ ಈಶಾನ್ಯ ಭಾಗದಲ್ಲಿರುವ ಬಾಂಗ್ಲಾದ ಸೇಂಟ್ ಮಾರ್ಟಿನ್ ದ್ವೀಪದ ಮೇಲೆ ಕಣ್ಣಿಟಿರುವ ಅಮೆರಿಕವು ನೆಲೆ ಸ್ಥಾಪಿಸಲು ಮುಂದಾಗಿತ್ತು. ಆದರೆ ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಪ್ರಧಾನಿ ಶೇಖ್ ಹಸೀನಾ ಅವರನ್ನು ದೇಶದಿಂದಲೇ ಓಡಿಸಲಾಯಿತು. ಇದು ಬಾಂಗ್ಲಾ ದೇಶದ ಮುಖ್ಯ ಭೂಮಿಯಿಂದ ಸುಮಾರು 9 ಕಿ. ಮೀ. ದೂರದಲಿದ್ದು, ಇಲ್ಲಿ ಸೇನಾ ನೆಲೆ ಸ್ಥಾಪಿಸಿವುದರೊಂದಿಗೆ ಹಿಂದೂ ಮಹಾಸಾಗರದ ಪ್ರದೇಶದಲ್ಲಿ ಅಮೆರಿಕ ಖಾಯಂ ಆಗಿ ನೆಲ ಹೊರಬಹುದು. ಈ ದ್ವೀಪವಿರುವ ಆಯಕಟ್ಟಿನ ಸ್ಥಳದಲ್ಲಿ ಏನಾದರೂ ಅಮೆರಿಕ ಸೇನಾ ನೆಲೆ ಸ್ಥಾಪಿಸಿದರೆ, ಭಾರತ ಮತ್ತು ಚೀನಾ ಹಾಗೂ ಇನ್ನಿತರ ರಾಷ್ಟ್ರಗಳ ಸಾರ್ವಭೌಮತ್ವಕ್ಕೆ ದಕ್ಕೆಯಾಗಲಿದೆ. ಇದನ್ನು ಅರಿತು ಅಂದಿನ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರು ವಿರೊಧಿಸಿದ್ದರು. ಆದರೆ ಈಗಿರುವ ಹಂಗಾಮಿ ಪ್ರಧಾನಿ ಮುಹಮ್ಮದ್ ಯೂನಸ್ ಅವರು ಭಾರತ ಹಾಗೂ ಚೀನಾ ರಾಷ್ಟ್ರಗಳಿಗಿಂತಲೂ ಅಮೆರಿಕದೊಂದಿಗೆ ಸಂಬಂಧ ಸುಧಾರಿಸುವತ್ತ ಸಾಗುತ್ತಿದ್ದಾರೆ. ಇದು ಭಾರತ ಹಾಗೂ ಚೀನಾ ಎರಡು ರಾಷ್ಟ್ರಗಳಿಗೆ ಒಂದಲ್ಲ ಒಂದು ದಿನ ಅಪಾಯವೇ. ಭಾರತದ ಸಾರ್ವಕಾಲಿಕ ಆಪ್ತಮಿತ್ರ ರಷ್ಯಾ ಈ ಎಲ್ಲ ಘಟನೆಗಳ ನಡುವೆ ಭಾರತದ ಸಾರ್ವಕಾಲಿಕ ಆಪ್ತಮಿತ್ರ ಎನಿಸಿಕೊಂಡಿರುವ ರಷ್ಯಾ ದೇಶವು ಭಾರತದೊಂದಿಗೆ ತನ್ನ ಸಂಬಂಧವನ್ನು ಸುದಾರಿಸುತ್ತಾ ಮತ್ತಷ್ಟು ಹತ್ತಿರವಾಗುತ್ತಿದೆ. ಶೀತಲ ಸಮರದ ಸಮಯದಲ್ಲಿ ಎರಡೂ ಮಹಾಶಕ್ತಿಗಳೊಂದಿಗೆ ಅಲಿಪ್ತ ಸ್ಥಾನಮಾನ ಮತ್ತು ಕೌಶಲ್ಯಪೂರ್ಣ ನಿಶ್ಚಿತಾರ್ಥದ ಹೊರತಾಗಿಯೂ ಸೋವಿಯತ್ ರಷ್ಯಾ ಒಕ್ಕೂಟದೊಂದಿಗೆ ಭಾರತವನ್ನು ಬಂಧಿಸಿದ ಸಂಬಂಧಗಳು ಹಲವು. ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಸಂಬಂಧಗಳ ಮಸುಕಾದ ನೆರಳನ್ನು ಹೊಂದಿರುವ ಭಾರತದ ಎಲ್ಲ ಯುದ್ಧಗಳಲ್ಲಿ ಬೆನ್ನೆಲುಬಾಗಿ ನಿಂತ ರಷ್ಯಾವು, ತನ್ನ ಉಕ್ರೇನ್ ನಡುವಿನ ಸಂಧಾನಕಾರನಾಗಿ, ಶಾಂತಿ ಸ್ಥಾಪನೆಗಾಗಿ ಕೇಳಿ ಕೊಂಡಿರುವುದರೊಂದಿಗೆ ಭಾರತದ ಪ್ರಧಾನಿ ಮೋದಿಯನ್ನು ಆತ್ಮಿಯ ಸ್ನೆಹಿತ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಸಂಭೋದಿಸಿರುವುದು ಇದು ಸಾಕ್ಷಿಯಾಗಿದೆ. ಇದನ್ನೂ ಓದಿ: ನರೇಂದ್ರ ಮೋದಿ ಬರಬೇಕಿತ್ತು ಎಂದ ನವಾಜ್ ಷರೀಫ್! ಭಾರತದ ಪರ ಪಾಕ್ ಸ್ನೇಹಗೀತೆ ಹಾಡುತ್ತಿರೋದೇಕೆ? ಹಿಂದಿ ಚೀನೀ ಭಾಯಿ ಭಾಯಿ ಈ ಎಲ್ಲ ಘಟನೆಗಳ ನಡುವೆ ಭಾರತದೊಂದಿಗೆ ಸದಾ ಒಂದಿಲ್ಲೊಂದು ವಿಷಯಗಳಿಗೆ ಕಿರಿಕ್ ಮಾಡಿಕೊಳ್ಳುವ ಚೀನಾ ದೇಶವು ಹಿಂದಿ ಚೀನೀ ಭಾಯಿ ಭಾಯಿ ಎನ್ನುತ್ತಿದ್ದಾರೆ. 2020 ರಲ್ಲಿ ಮೇ ತಿಂಗಳಲ್ಲಿ ಪ್ರಾರಂಭವಾದ ಗಡಿ ಉದ್ವಿಗ್ನತೆಯು ಶಮನವಾಗಿದೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಪೂರ್ವ ಲಡಾಖ್ನ ಎಲ್ಎಸಿಯ ಉದ್ದಕ್ಕೂ ಉಳಿದಿರುವ ಘರ್ಷಣೆಯ ಸ್ಥಳಗಳಲ್ಲಿ ಗಸ್ತು ವ್ಯವಸ್ಥೆಗಳ ಕುರಿತು ಹೊಸದಿಲ್ಲಿ ಮತ್ತು ಬೀಜಿಂಗ್ ಒಪ್ಪಂದಕ್ಕೆ ಬಂದಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಅವರು ತಿಳಿಸಿದ್ದಾರೆ. ಈ ಘಟನೆಯು ಭಾರತ ಮತ್ತು ಚೀನಾ ದೇಶಗಳ ನಡುವಿನ ಸಮಸ್ಯೆಯನ್ನು ಪರಿಹರಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಇದರೊಂದಿಗೆ ಬೀಜಿಂಗ್ ಭಾರತ ಮತ್ತು ಐದು ಐಸ್ ಕೂಟದ ರಾಷ್ಟ್ರಗಳ ನಡುವಿನ ಬಿಸಿಯಾದ ವಿನಿಮಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಜೂನ್ 2020 ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯ ನಂತರ ಎರಡು ರಾಷ್ಟ್ರಗಳ ನಡುವಿನ ಉದ್ವಿಗ್ನತೆಗಳು ಗಮನಾರ್ಹವಾಗಿ ಉಲ್ಬಣಗೊಂಡವು, ಕಳೆದ ಎರಡು ದಶಕಗಳಲ್ಲಿ ಭಾರತ ಮತ್ತು ಚೀನಾ ರಾಷ್ಟ್ರಗಳ ನಡಿವೆ ನಡೆದ ಅತ್ಯಂತ ತೀವ್ರವಾದ ಮಿಲಿಟರಿ ಸಂಘರ್ಷವಾಗಿದೆ. ಭಾರತದ ರಾಜತಾಂತ್ರಿಕತೆಯ ಮೇಲೆ ಭಾರಿ ಪ್ರಭಾವ ಈ ಎಲ್ಲ ಘಟನೆಗಳು ಮುಂಬರುವ ಬ್ರಿಕ್ಸ್ ಶೃಂಗಸಭೆಯ ಮುನ್ನ ನಡೆಯುತ್ತಿರುವ ಪ್ರಮುಖ ಬೆಳವಣಿಗೆಯಾಗಿದೆ. ಪ್ರಮುಖ ವಿಸ್ತರಣೆಯ ನಂತರ ಮೊದಲ ಬಾರಿಗೆ 22-24 ಅಕ್ಟೋಬರ್ 2024 ರಂದು ರಷ್ಯಾದ ಕಜಾನ್ನಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯ ಮೇಲೆ ವಿಶ್ವದ ಕಣ್ಣಿದೆ. ಇದು ನ್ಯಾಟೊ ಸದಸ್ಯ ರಾಷ್ಟ್ರವಾಗಿರುವ ಟರ್ಕಿ ಮತ್ತು ಇನ್ನೂ 30 ಕ್ಕೂ ಹೆಚ್ಚು ದೇಶಗಳು ಒಕ್ಕೂಟ ಸೇರುವ ಪ್ರಯತ್ನದಲ್ಲಿದೆ. ಈ ಎಲ್ಲಾ ಘಟನೆಗಳು ಭಾರತದ ರಾಜತಾಂತ್ರಿಕತೆಯ ಮೇಲೆ ಭಾರಿ ಪ್ರಭಾವ ಬೀರಲಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.