NEWS

Slowest Train: ಈ ರೈಲು 111 ನಿಲ್ದಾಣಗಳಲ್ಲಿ ನಿಲ್ಲುತ್ತೆ! ದೇಶದ ಅತ್ಯಂತ ನಿಧಾನದ ಟ್ರೇನ್ ಕೂಡ ಇದೇ!

ಸಂಗ್ರಹ ಚಿತ್ರ ಭಾರತೀಯ ರೈಲ್ವೇಯು (Indian Railway) ತನ್ನ ಅನನ್ಯ ಸೇವೆ ಹಾಗೂ ವಿಫುಲ ಪ್ರಯಾಣಿಕ ಬೇಡಿಕೆಯಿಂದ ಗುರುತಿಸಿಕೊಂಡ ಸೇವೆಯಾಗಿದೆ. ಸಾಕಷ್ಟು ಜನರು ತಮ್ಮ ದಿನನಿತ್ಯದ ಪ್ರಯಾಣಕ್ಕೆ ರೈಲ್ವೇಯನ್ನೇ ಆಧರಿಸಿದ್ದಾರೆ. ಮುಖ್ಯವಾಗಿ ಊರಿಂದೂರಿಗೆ ಸಂಚಾರ, ಕಚೇರಿ, ಶಾಲಾ ಕಾಲೇಜು, ಸಂಸ್ಥೆಗಳಿಗೆ ಓಡಾಟ ಹೀಗೆ ಕೆಲವೊಂದು ಸ್ಥಳಗಳಿಗೆ ರೈಲು ಸೇವೆಯೇ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಪ್ರಯಾಣಿಕರಿಗೆ ಉತ್ತಮ ಮಟ್ಟದ ಸೌಕರ್ಯ ಹಾಗೂ ಸೌಲಭ್ಯಗಳನ್ನೊದಗಿಸಲು ಭಾರತೀಯ ರೈಲ್ವೇಯು ಬದ್ಧವಾಗಿದ್ದು, ಸಾರಿಗೆ ವಲಯದಲ್ಲಿ ರೈಲ್ವೇ ಪ್ರಯಾಣವು ಪ್ರಮುಖ ಮೈಲಿಗಲ್ಲನ್ನು ಸೃಷ್ಟಿಸಿದೆ. ರೈಲ್ವೇ ಸೇವೆಯಲ್ಲಿ ಕೂಡ ದೇಶ ಅನೇಕ ಅಭಿವೃದ್ಧಿಗಳನ್ನು ಮಾಡಿದ್ದು, ಪ್ರಯಾಣಿಕರಿಗೆ ಅತ್ಯುನ್ನತ ಮಟ್ಟದ ಸೇವೆಯನ್ನೊದಗಿಸುವಲ್ಲಿ ರೈಲ್ವೇ ಇಲಾಖೆ ಹೆಸರು ಮಾಡಿದೆ. ಮೂಲೆ ಮೂಲೆಯನ್ನು ಸಂಪರ್ಕಿಸುವ ಇಲಾಖೆ ಭಾರತೀಯ ರೈಲ್ವೇಯು ದೇಶದ ಪ್ರತಿಯೊಂದು ಮೂಲೆಯನ್ನು ಸಂಪರ್ಕಿಸುತ್ತದೆ, ಪರ್ವತಗಳಿಂದ ಮರುಭೂಮಿಗಳಿಗೆ, ಕರಾವಳಿ ಪ್ರದೇಶಗಳಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಯಾಣಿಕರನ್ನು ಸಾಗಿಸುತ್ತದೆ. ದೇಶದ ರೈಲು ಸೇವೆಯು ದೂರದ ಸ್ಥಳಗಳಿಂದ ಕಡಿಮೆ ದೂರ ಸ್ಥಳಗಳವರೆಗೂ ವ್ಯಾಪಿಸಿವೆ. ಇದನ್ನೂ ಓದಿ: ವಿಶ್ವದ ಅತ್ಯಂತ ಹಳೆಯ ದೇಶಗಳು ಇವು! ಭಾರತ ಎಷ್ಟು ಪುರಾತನವಾದ ದೇಶ ಗೊತ್ತಾ? 111 ನಿಲ್ದಾಣಗಳಲ್ಲಿ ನಿಲ್ಲುವ ರೈಲು ಕೆಲವು ರೈಲುಗಳು ತಡೆರಹಿತವಾಗಿ ಚಲಿಸಿದರೆ, ಇನ್ನು ಕೆಲವು ರೈಲುಗಳು ಪ್ರತಿಯೊಂದು ನಿಲ್ದಾಣದಲ್ಲಿ ನಿಲ್ಲುತ್ತವೆ. ಇಂದಿನ ಲೇಖನಲ್ಲಿ ಭಾರತದಲ್ಲಿ ಹೆಚ್ಚು ನಿಲುಗಡೆಗಳನ್ನು ಹೊಂದಿರುವ ಒಂದು ವಿಶೇಷ ರೈಲಿನ ಬಗ್ಗೆ ತಿಳಿದುಕೊಳ್ಳಲಿದ್ದೇವೆ. ಈ ರೈಲು ತನ್ನ 37-ಗಂಟೆಗಳ ಪ್ರಯಾಣದಲ್ಲಿ 111 ನಿಲ್ದಾಣಗಳಲ್ಲಿ ನಿಲ್ಲುತ್ತದೆ, ಈ ಮೂಲಕ ಪ್ರಯಾಣಿಕರು ವಿವಿಧ ನಿಲ್ದಾಣಗಳಲ್ಲಿ ರೈಲನ್ನೇರಲು ಮತ್ತು ಇಳಿಯಲು ಅನುಕೂಲ ಮಾಡಿಕೊಡುತ್ತದೆ. ಹೆಚ್ಚಿನ ಸಂಖ್ಯೆಯ ನಿಲುಗಡೆಗನ್ನೊಳಗೊಂಡಿರುವ ರೈಲು ದೇಶದಲ್ಲಿ ಅತಿ ಹೆಚ್ಚು ನಿಲುಗಡೆಗಳನ್ನು ಹೊಂದಿರುವ ರೈಲು ಹೌರಾ-ಅಮೃತಸರ ಮೇಲ್ ಆಗಿದೆ, ಇದು ಪಶ್ಚಿಮ ಬಂಗಾಳದ ಹೌರಾ ಮತ್ತು ಪಂಜಾಬ್‌ನ ಅಮೃತಸರ ನಡುವೆ ಪ್ರಯಾಣಿಸುತ್ತದೆ. ಸಾಮಾನ್ಯವಾಗಿ ಹೆಚ್ಚಿನ ರೈಲುಗಳು 10, 20, 30 ನಿಲ್ದಾಣಗಳಲ್ಲಿ ನಿಲ್ಲುವುದು ಸಾಮಾನ್ಯವಾಗಿದೆ, ಆದರೆ ಈ ರೈಲು ಮಾತ್ರ ವಿಶೇಷವಾಗಿ 111 ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಹೌರಾದಿಂದ ಅಮೃತಸರಕ್ಕೆ 1,910 ಕಿಲೋಮೀಟರ್ ದೂರವನ್ನು ಕ್ರಮಿಸುವ ಈ ರೈಲು 37 ಗಂಟೆಗಳಲ್ಲಿ ತನ್ನ ಪ್ರಯಾಣವನ್ನು ಪೂರ್ಣಗೊಳಿಸುತ್ತದೆ, ಪ್ರಯಾಣಿಕರಿಗೆ ರೈಲನ್ನೇರಲು ಮತ್ತು ಇಳಿಯಲು ವಿವಿಧ ನಿಲ್ದಾಣಗಳಲ್ಲಿ ನಿಲುಗಡೆಯಾಗುತ್ತದೆ. ಹೌರಾ-ಅಮೃತಸರ ಮೇಲ್ ಸ್ಟೇಶನ್, ವೇಳಾಪಟ್ಟಿ ಹೌರಾ-ಅಮೃತಸರ ಮೇಲ್ ಐದು ರಾಜ್ಯಗಳಲ್ಲಿ ಸಂಚರಿಸುತ್ತದೆ: ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ಹರಿಯಾಣ ಮತ್ತು ಪಂಜಾಬ್. ಅಸನ್ಸೋಲ್, ಪಾಟ್ನಾ, ವಾರಣಾಸಿ, ಲಕ್ನೋ, ಬರೇಲಿ, ಅಂಬಾಲಾ, ಲುಧಿಯಾನ ಮತ್ತು ಜಲಂಧರ್‌ನಂತಹ ಪ್ರಮುಖ ನಿಲ್ದಾಣಗಳಲ್ಲಿ ಈ ರೈಲು ಕೊಂಚ ಸಯದವರೆಗೆ ನಿಲುಗಡೆಗೊಳ್ಳುತ್ತದೆ. ಈ ನಿಲ್ದಾಣಗಳು ಅತ್ಯಂತ ವಿಶಾಲವಾಗಿವೆ, ಇದರಿಂದ ಪ್ರಯಾಣಿಕರಿಗೆ ರೈಲನ್ನೇರಲು ಹಾಗೂ ಇಳಿಯಲು ಅನುಕೂಲವಾಗುತ್ತದೆ. ಆದರೆ ಸಣ್ಣ ನಿಲ್ದಾಣಗಳಲ್ಲಿ, ಇದರ ನಿಲುಗಡೆ ಕೇವಲ 1 ರಿಂದ 2 ನಿಮಿಷಗಳವರೆಗೆ ಇರುತ್ತದೆ. ಹೌರಾ-ಅಮೃತಸರ ಮೇಲ್‌ನ ವೇಳಾಪಟ್ಟಿಯನ್ನು ಗರಿಷ್ಠ ಸಂಖ್ಯೆಯ ಪ್ರಯಾಣಿಕರಿಗೆ ಸರಿಹೊಂದಿಸಲು ವಿನ್ಯಾಸಗೊಳಿಸಲಾಗಿದೆ. ರೈಲು ಹೌರಾ ನಿಲ್ದಾಣದಿಂದ ಸಂಜೆ 7:15 ಕ್ಕೆ ಹೊರಡುತ್ತದೆ ಮತ್ತು ಮೂರನೇ ದಿನ ಬೆಳಗ್ಗಿನ ಸಮಯ 8:40 ಕ್ಕೆ ಅಮೃತಸರ ತಲುಪುತ್ತದೆ. ವ್ಯತಿರಿಕ್ತವಾಗಿ, ಇದು ಅಮೃತಸರದಿಂದ ಸಂಜೆ 6:25 ಕ್ಕೆ ಹೊರಡುತ್ತದೆ ಮತ್ತು ಮೂರನೇ ದಿನದಂದು ಬೆಳಗ್ಗೆ 7:30 ಕ್ಕೆ ಹೌರಾ ನಿಲ್ದಾಣವನ್ನು ತಲುಪುತ್ತದೆ. ವ್ಯಾಪಕವಾಗಿ ನಿಲ್ಲುವ ಈ ರೈಲಿನ ದರವೂ ಸಾಕಷ್ಟು ಸಮಂಜಸವಾಗಿದೆ. ಹೌರಾ-ಅಮೃತಸರ ಮೇಲ್‌ಗೆ ಟಿಕೆಟ್ ದರಗಳು ಈ ಕೆಳಗಿನಂತಿವೆ: ಸ್ಲೀಪರ್ ಕ್ಲಾಸ್‌ಗೆ ರೂ 695, ಥರ್ಡ್ ಎಸಿಗೆ ರೂ 1,870, ಸೆಕೆಂಡ್ ಎಸಿಗೆ ರೂ 2,755, ಮತ್ತು ಮೊದಲ ಎಸಿಗೆ ರೂ 4,835 ಎಂದು ದರ ನಿಗದಿಪಡಿಸಲಾಗಿದೆ. ಎಲ್ಲಾ ನಿಲ್ದಾಣಗಳಲ್ಲಿ ನಿಲ್ಲುವ ಕಾರಣ ಈ ರೈಲು ನಿಧಾನವಾಗಿ ಚಲಿಸುವ ರೈಲು ಎಂಬ ಹೆಸರನ್ನೂ ಪಡೆದುಕೊಂಡಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.