NEWS

YouTube: ಯೂಟ್ಯೂಬ್ ನೋಡಿ ಬೈಕ್‌ ಕಳ್ಳತನ ಟ್ರೈನಿಂಗ್! 13 ಲಕ್ಷದ 20 ಬೈಕ್‌ ಕಳವು! ಕೊನೆಗೂ ಖಾಕಿ ಕೈಗೆ ತಗ್ಲಾಕ್ಕೊಂಡ ಖದೀಮರು!

ಬೆಂಗಳೂರು: ಯುಟ್ಯೂಬ್ (YouTube) ಮೂಲಕ ಜಗತ್ತಿನ ಯಾವ ವಿದ್ಯೆ ಬೇಕಿದ್ದರೂ ಕಲಿಯಬಹುದು. ಹಾಗಂತ ಯಾರಾದ್ರೂ ಕಳ್ಳತನ (Robbery) ಮಾಡುವ ವಿದ್ಯೆ ಕಲಿತಾರಾ? ಹೌದು ನಗರದಲ್ಲಿ ಇಬ್ಬರು ಯುವಕರು ಯೂಟ್ಯೂಬ್ ಮೂಲಕ ಬೈಕ್ ಕಳವು ತರಬೇತಿ (Bike Theft Training) ಪಡೆದು ಕಳ್ಳತನಕ್ಕಿಳಿದ್ದಾರೆ. ಇದೀಗ ಪೊಲೀಸರ (Police) ಕೈಗೆ ತಗ್ಲಾಕೊಂಡಿದ್ದಾರೆ. ಬಂಧಿತರಿಂದ 13 ಲಕ್ಷ ಮೌಲ್ಯದ 20 ಬೈಕ್ ಗಳು ವಶಕ್ಕೆ ಯೂಟ್ಯೂಬ್ ಮೂಲಕ ಬೈಕ್ ಕಳವು ತರಬೇತಿ ಪಡೆದು ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 13 ಲಕ್ಷ ಮೌಲ್ಯದ 20 ಬೈಕ್ ಗಳು ವಶಕ್ಕೆ ಪಡೆದಿದ್ದಾರೆ. ಯೂಟ್ಯೂಬ್‌ನಲ್ಲಿ ಬೈಕ್ ಕೀ ಮುರಿಯೋದು, ಸ್ಟಾರ್ಟ್ ಮಾಡೋದು ಕಲಿತಿದ್ದಾರೆ ಯೂಟ್ಯೂಬ್ ನಲ್ಲಿ ಬೈಕ್ ಕೀ ಮುರಿಯೋದು, ಅದನ್ನು ಸ್ಟಾರ್ಟ್ ಮಾಡೋದು ಹೇಗೆ ಅನ್ನೋದನ್ನು ಕಲಿತಿದ್ದಾರೆ. ಆ ನಂತರ ನಗರದ ಹಲವು ಕಡೆಗಳಲ್ಲಿ ಈ ಆರೋಪಿಗಳು ಬೈಕ್ ಕಳವು ಮಾಡಿದ್ದಾರೆ. ಇದನ್ನೂ ಓದಿ: Lakshmi Hebbalkar: ಹೆಬ್ಬಾಳ್ಕರ್ ಕಣ್ಣೀರು! ನಾನು ಕೊಲೆಗಡುಕ ಅಂದಿದ್ದು ನಿಜ; ಆದ್ರೆ ಅವರು ಬಳಸಿದ ಪದ ಸರಿನಾ? ನಗರದಲ್ಲಿ ನಿರಂತರವಾಗಿ ಬೈಕ್ ಕಳ್ಳತನ ಪ್ರಕರಣಗಳು ದಾಖಲು ನಗರದಲ್ಲಿ ನಿರಂತರವಾಗಿ ಬೈಕ್ ಕಳ್ಳತನ ಪ್ರಕರಣಗಳು ದಾಖಲಾಗ್ತಾ ಇದ್ದಿದ್ದರಿಂದ ಪೊಲೀಸರು ವಿಶೇಷ ತಂಡ ರಚನೆ ಮಾಡಿದ್ದರು. ಸದ್ಯ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಇದುವರೆಗೂ 20 ಕ್ಕೂ ಹೆಚ್ಚು ಬೈಕ್ ಗಳು ಸೀಜ್ ಮಾಡಲಾಗಿದೆ. ಇನ್ನು ಹಲವು ಬೈಕ್ ಗಳನ್ನು ಕಳವು ಮಾಡಿರೋ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಕೇರ್ ಟೇಕರ್ ನೆಪದಲ್ಲಿ ಮಾಲೀಕರ ಮನೆಗೆ ಕನ್ನ ಹಾಕಿದ ಮಹಿಳೆ! ಬೆಂಗಳೂರು: ಕೇರ್‌ ಟೇಕರ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು ಮಾಲೀಕರ ಮನೆಯಲ್ಲಿಯೇ ಕಳ್ಳತನ ಮಾಡಿರುವ ಆರೋಪ ಕೇಳಿ ಬಂದಿರು ಘಟನೆ ಬೈಯಪ್ಪನಹಳ್ಳಿ ಬಳಿಯ ಭುವನೇಶ್ವರಿ ನಗರದಲ್ಲಿ ನಡೆದಿದೆ. ಇದನ್ನೂ ಓದಿ: Siddaramaiah: ಹೆಣ್ಣುಮಕ್ಕಳು ಸುಳ್ಳು ದೂರು ಕೊಡಲ್ಲ! ಸಿಟಿ ರವಿ ವಿರುದ್ಧ ಸಿದ್ದರಾಮಯ್ಯ ಗರಂ ಬೈಯಪ್ಪನಹಳ್ಳಿಯಲ್ಲಿ‌ ಕೆಲಸ ಬಿಟ್ಟ ನಂತರ ಕೋಣನಕುಂಟೆಯಲ್ಲಿ ಕೇರ್ ಟೇಕರ್ ಆಗಿದ್ದಳು ಬೈಯಪ್ಪನಹಳ್ಳಿ ನಲ್ಲಿ ಕೆಲಸ ಮಾಡುತ್ತಿದ್ದ ಈ ಮಹಿಳೆ ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದಳು ನಂತರ ಅನಾರೋಗ್ಯದ ನೆಪದಲ್ಲಿ ಕೆಲಸ ಬಿಟ್ಟಿದ್ದಳು. ಬೈಯಪ್ಪನಹಳ್ಳಿಯಲ್ಲಿ‌ ಕೆಲಸ ಬಿಟ್ಟ ನಂತರ ಕೋಣನಕುಂಟೆಯಲ್ಲಿ ಮತ್ತೊಬ್ಬರ ಮನೆಯಲ್ಲಿ ಕೇರ್ ಟೇಕರ್ ಆಗಿದ್ದಳು. ಅಲ್ಲೂ ಕೂಡ ಚಿನ್ನಾಭರಣ ಕಳವು ಮಾಡಿ ಸಿಕ್ಕಿಬಿದ್ದಿದ್ದಾಳೆ. ಪೊಲೀಸರ ತನಿಖೆ ವೇಳೆ ಬೈಯಪ್ಪನಹಳ್ಳಿ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆಯಿಂದ ಸುಮಾರು 11.50 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಸಧ್ಯ ಆ ಮಹಿಳೆಯಿಂದ ಸುಮಾರು 11.50 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆಸಿದ್ದಾರೆ. ಕೋರ್ಟ್ ಮುಂದೆ ಹಾಜರು ಪಡಿಸಿ ಆರು ದಿನಗಳ ಕಾಲ ಮಹಿಳೆಯನ್ನು ವಶಕ್ಕೆ ಪಡೆದು‌ ವಿಚಾರಣೆ ನಡೆಸುತ್ತಿದ್ದಾರೆ. (ವರದಿ: ಮಂಜುನಾಥ್ ನ್ಯೂಸ್ 18 ಕನ್ನಡ, ಬೆಂಗಳೂರು) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.