NEWS

Toxic Movie: ಟಾಕ್ಸಿಕ್ ಟೈಟಲ್‌ ಅನೌನ್ಸ್‌ಗೆ ಒಂದು ವರ್ಷ ಪೂರ್ಣ; ಹೊಸ ಅಪ್‌ಡೇಟ್ ನಿರೀಕ್ಷೆಯಲ್ಲಿ ರಾಕಿ ಭಾಯ್ ಫ್ಯಾನ್ಸ್ !

ಟಾಕ್ಸಿಕ್ ಟೈಟಲ್‌ ಅನೌನ್ಸ್‌ಗೆ ಒಂದು ವರ್ಷ ಪೂರ್ಣ; ಹೊಸ ಅಪ್‌ಡೇಟ್ ನಿರೀಕ್ಷೆಯಲ್ಲಿ ರಾಕಿ ಭಾಯ್ ಫ್ಯಾನ್ಸ್ ! ಸ್ಯಾಂಡಲ್‌ನ ಟಾಕ್ಸಿಕ್ ಚಿತ್ರದ (Toxic Movie) ಟೈಟಲ್ ಅನೌನ್ಸ್ (Title Announce) ಆಗಿ ಒಂದು ವರ್ಷ ಆಗಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿಯೇ ಈ ಟೈಟಲ್ ಅನೌನ್ಸ್ ಆಗಿದೆ. ಅದಕ್ಕೂ ಮೊದಲ ಸಿನಿಮಾ ಶುರು ಆಗುತ್ತದೆ ಅನ್ನುವ ಮಾತುಗಳೇ ಕೇಳಿ ಬಂದಿದ್ದವು. ಡೈರೆಕ್ಟರ್ ಗೀತು ಮೋಹನದಾಸ್ (Geethu Mohandas) ಕಥೆಯನ್ನ ಯಶ್ ಕೇಳಿದ್ದಾರೆ ಅನ್ನುವ ಮಾತುಗಳೇ ಕೇಳಿ ಬಂದಿದ್ದವು. ಇದರ ನಡುವೆ ಯಶ್ ಮುಂದಿನ ಸಿನಿಮಾವನ್ನ ನರ್ತನ್ ಡೈರೆಕ್ಷನ್ ಮಾಡ್ತಾರೆ ಅನ್ನುವ ಸುದ್ದಿಗಳೂ ವೈರಲ್ ಆಗಿದ್ದವು. ಆದರೆ, ಒಂದು ಸರಿಯಾದ ಟೈಮ್ ನೋಡಿಕೊಂಡೇ ಯಶ್ ತಮ್ಮ ಈ ಚಿತ್ರವನ್ನ ಅನೌನ್ಸ್ ಮಾಡಿದರು. ಈ ಮೂಲಕ ಟಾಕ್ಸಿಕ್ ನಮ್ಮ ಚಿತ್ರದ ಟೈಟಲ್ (Title) ಅನ್ನೋದನ್ನ ಹೇಳಿಕೊಂಡಿದ್ದರು. ಹಾಗೆ ಈ ಟೈಟಲ್ ಅನೌನ್ಸ್ ಆಗಿ ಇದೀಗ ಒಂದು ವರ್ಷ ಕಳೆದಿದೆ.. ಒಂದು ವರ್ಷದ ಹಿಂದೆ ಟೈಟಲ್ ಅನೌನ್ಸ್ ರಾಕಿಂಗ್ ಸ್ಟಾರ್ ಯಶ್ ಚಿತ್ರ ಜೀವನದಲ್ಲಿ ಡಿಸೆಂಬರ್ ಲಕ್ಕಿ ಆಗಿದೆ. ಈ ಲಕ್ಕಿ ಡೇ ಅನ್ನ ಗಮನದಲ್ಲಿಟ್ಟುಕೊಂಡೇ ಯಶ್ ತಮ್ಮ ಚಿತ್ರದ ಟೈಟಲ್ ಅನೌನ್ಸ್ ಮಾಡಿದ್ದರು. ಅದು ಕಳೆದ ವರ್ಷ ೨೦೨೩, ಡಿಸೆಂಬರ್-೮ ರಂದು ಅನ್ನೋದು ಅಷ್ಟೇ ವಿಶೇಷವೇ ಆಗಿತ್ತು. ಇದರ ಜೊತೆಗೆ ತಮ್ಮ ನಿರ್ಮಾಣ ಸಂಸ್ಥೆಯ ಮೊದಲ ಚಿತ್ರ ಅನ್ನೋದನ್ನು ಕೂಡ ಹೇಳಿಕೊಂಡಿದ್ದರು. ಹಾಗೆ ಈ ಒಂದು ಟೈಟಲ್ ಅನೌನ್ಸ್ ಆಗಿ ಒಂದು ವರ್ಷ ಆಗಿದೆ. ಆದರೆ, ಟೈಟಲ್ ಅನೌನ್ಸ್ ಆದ್ಮೇಲೆ ಪೋಸ್ಟರ್‌ಗಳೂ ವೈರಲ್ ಆದವು. ಯಶ್ ಲುಕ್ ಬಗ್ಗೆ ಭಾರೀ ಕುತೂಹಲ ಮೂಡಿತ್ತು. ಟಾಕ್ಸಿಕ್ ಅಂದ್ರೆ ಏನು ಅನ್ನೋದನ್ನ ಎಲ್ಲರೂ ಕೇಳಿಕೊಂಡರು. ಹೋಗ್ತಾ ಹೋಗ್ತಾ ಇದು ಅರ್ಥ ಆಗ್ತಾನೇ ಬಂತು ಬಿಡಿ. ಇದನ್ನೂ ಓದಿ: Milana-Krishna Love: ಮಿಲನ-ಕೃಷ್ಣ ಮಧ್ಯೆ ಲವ್ ಶುರುವಾಗಿದ್ದು ಹೇಗೆ? ಇಲ್ಲಿದೆ ಡಾರ್ಲಿಂಗ್ ಜೋಡಿಯ ಇಂಟ್ರೆಸ್ಟಿಂಗ್ ಲವ್​ಸ್ಟೋರಿ ಈ ವರ್ಷ ಈ ದಿನ ಏನ್ ಅಪ್‌ಡೇಟ್ಸ್ ಹೌದು, ಈ ಒಂದು ಪ್ರಶ್ನೆ ಈಗಲೇ ಹುಟ್ಟಿದೆ. ಈ ಡಿಸೆಂಬರ್-೮ ರಂದು ಚಿತ್ರದ ಟೈಟಲ್ ಅನೌನ್ಸ್ ಆಗಿ ಒಂದು ವರ್ಷ ಆಗುತ್ತದೆ. ಈ ಹಿನ್ನೆಲೆಯಲ್ಲಿ ಚಿತ್ರದ ಹೊಸ ಅಪ್‌ಡೇಟ್ ಏನಾದ್ರೂ ಸಿಗುತ್ತಾ ಅನ್ನುವ ಕುತೂಹಲ ಕೂಡ ಇದೆ. ಹಾಗೆ ಈಗಾಗಲೇ ಚಿತ್ರದ ಶೂಟಿಂಗ್ ಶುರು ಆಗಿದೆ. ಮುಂಬೈಯಲ್ಲಿಯೇ ಟಾಕ್ಸಿಕ್ ಚಿತ್ರದ ಶೂಟಿಂಗ್ ಶುರು ಆಗಿದೆ. ಬಾಲಿವುಡ್ ನಾಯಕಿ ಕಿಯಾರಾ ಅಡ್ವಾಣಿ ಇಲ್ಲಿ ರಾಕಿ ಭಾಯ್‌ಗೆ ಜೋಡಿ ಆಗಿದ್ದಾರೆ. ಚಿತ್ರದ ಪ್ರಮುಖ ದೃಶ್ಯಗಳನ್ನ ಈಗ ತೆಗೆಯುತ್ತಿದ್ದಾರೆ. ಇಡೀ ಟೀಮ್ ಸದ್ಯ ಮುಂಬೈಯಲ್ಲಿಯೇ ಇದೆ ಅಂತಲೂ ಹೇಳಬಹುದು. ಟಾಕ್ಸಿಕ್ ವಿಡಿಯೋ ವೈರಲ್ ಟಾಕ್ಸಿಕ್ ಚಿತ್ರದ ಒಂದು ವಿಡಿಯೋ ಹೆಚ್ಚು ಗಮನ ಸೆಳೆಯುತ್ತಿದೆ. ಈ ಒಂದು ವಿಡಿಯೋದಲ್ಲಿ ಶೂಟಿಂಗ್‌ನ ಮೇಕಿಂಗ್ ವಿಡಿಯೋ ಇದೆ. ಆದರೆ, ಇದು ಟಾಕ್ಸಿಕ್ ಚಿತ್ರದ್ದೇನಾ ಅನ್ನೋ ಪ್ರಶ್ನೆ ಕೂಡ ಇದೆ. ಆದರೆ, ಸಿನಿಮಾ ತಂಡ ಈ ತರದ ವಿಡಿಯೋ ಹೊರಗೆ ಬಿಡದಂತೆ ನೋಡಿಕೊಂಡಿದೆ. ಹಾಗಾಗಿಯೇ ಇದು ಮೇಕಿಂಗ್ ವಿಡಿಯೋ ಆಗಿರಲಿಕ್ಕಿಲ್ಲ ಅನ್ನಬಹುದು. ಟಾಕ್ಸಿಕ್ ಚಿತ್ರದಲ್ಲಿ ಮಹಿಳಾ ಪಾತ್ರಗಳ ಜಾಸ್ತಿ ಇವೆ. ಬಾಲಿವುಡ್, ಕಾಲಿವುಡ್‌ನ ನಟಿಯರು ಈ ಪಾತ್ರಗಳನ್ನ ಮಾಡಿದ್ದಾರೆ. ಹಾಗೆ ಹುಮಾ ಕುರೇಷಿ, ಶೃತಿ ಹಾಸನ್, ನಯನತಾರಾ ಸೇರಿದಂತೆ ಇನ್ನು ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ ಅನ್ನುವ ಮಾಹಿತಿ ಕೂಡ ಇದೆ. ಆದರೆ, ಅಧಿಕೃತವಾಗಿ ಸಿನಿಮಾ ತಂಡವವೇ ಇದನ್ನ ಹೇಳಬೇಕಿದೆ. ಇನ್ನುಳಿದಂತೆ ಚಿತ್ರದ ಟೈಟಲ್ ಅನೌನ್ಸ್ ಆಗಿ ಒಂದು ವರ್ಷ ಆಗಿದೆ. ಹಾಗಾಗಿಯೇ ಈ ಡಿಸೆಂಬರ್-೮ ಕ್ಕೆ ಹೊಸ ಅಪ್‌ಡೇಟ್ ಸಿಗಬಹುದು ಅನ್ನುವ ನಿರೀಕ್ಷೆಯಲ್ಲೂ ಫ್ಯಾನ್ಸ್ ಇದ್ದಾರೆ ಅಂತಲೂ ಹೇಳಬಹುದು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.