NEWS

Mohan Bhagwat: ರಾಮಮಂದಿರದಂತಹ ವಿವಾದಗಳನ್ನು ಎಲ್ಲೆಂದರಲ್ಲಿ ಸೃಷ್ಟಿಸಬೇಡಿ, ಇದರಿಂದ ಸೌಹಾರ್ದತೆಗೆ ಪೆಟ್ಟು: ಆರೆಸ್ಸೆಸ್ ಮುಖ್ಯಸ್ಥ

ಮೋಹನ್ ಭಾಗವತ್ ಪುಣೆ: ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಮಂದಿರ ಮಸೀದಿ (Mandir Mosque Row) ವಿವಾದ ಪದೇ ಪದೇ ಮುನ್ನೆಲೆಗೆ ಬರುತ್ತಿರುವ ಸಮಯದಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಹೊಸದಾಗಿ ಮಂದಿರ-ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ತೀವ್ರ ಪರವಿರೋಧ ಚರ್ಚೆಗಳು ನಡೆಯುತ್ತಿರುವ ಸಮಯದಲ್ಲೇ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು, ರಾಮಮಂದಿರದಂತಹ ವಿವಾದಗಳನ್ನು ಎಲ್ಲೆಂದರಲ್ಲಿ ಹುಟ್ಟುಹಾಕಬೇಡಿ. ಈ ಹೊಸ ವಿವಾದಗಳು ಸ್ವೀಕಾರಾರ್ಹವಲ್ಲ ಎಂದು ಹೇಳುವ ಮೂಲಕ ಮಹತ್ವದ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: Road Accident: ಭೀಕರ ಅಪಘಾತದಲ್ಲಿ ಗ್ಯಾಸ್ ಟ್ಯಾಂಕರ್ ಸ್ಫೋಟ! 5 ಸಾವು, 35 ಮಂದಿ ಸುಟ್ಟು ಕರಕಲು, 40 ವಾಹನಗಳು ಭಸ್ಮ! ಆಗಿದ್ದೇನು? ಪುಣೆಯಲ್ಲಿ ಹಿಂದೂ ಸೇವಾ ಮಹಾವತ್ ಆಯೋಜಿಸಿದ್ದ ‘ವಿಶ್ವಗುರು ಭಾರತ’ ಎಂಬ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು, ಭಾರತೀಯರು ಹಿಂದಿನ ತಪ್ಪುಗಳಿಂದ ಪಾಠ ಕಲಿಯಬೇಕು. ವಿವಾದವನ್ನು ತಪ್ಪಿಸುವ ಮೂಲಕ ತಮ್ಮ ದೇಶವನ್ನು ಜಗತ್ತಿಗೆ ಮಾದರಿಯನ್ನಾಗಿ ಮಾಡಲು ಶ್ರಮಿಸಬೇಕು. ರಾಮ ಮಂದಿರವು ನಂಬಿಕೆಯ ವಿಷಯವಾಗಿದೆ ಹೀಗಾಗಿ ಹಿಂದೂಗಳು ಅದನ್ನು ನಿರ್ಮಿಸಬೇಕು ಎಂದು ಬಯಸಿದ್ದರು. ಆದರೆ ದ್ವೇಷದಿಂದ ಕೆಲವು ಧಾರ್ಮಿಕ ಕೇಂದ್ರಗಳಲ್ಲಿ ಹೊಸದಾಗಿ ವಿವಾದವು ಭುಗಿಲೆದ್ದಿರುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದ ಸಂಭಾಲ್‌ನ ಶಾಹಿ ಜಾಮಾ ಮಸೀದಿ ಮತ್ತು ರಾಜಸ್ಥಾನದ ಅಜ್ಮೀರ್ ಷರೀಫ್‌ನಂತಹ ಧಾರ್ಮಿಕ ಸ್ಥಳಗಳ ಬಗ್ಗೆ ಇತ್ತೀಚೆಗೆ ವಿವಾದ ಭುಗಿಲೇಳುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿದ ಮೋಹನ್ ಭಾಗವತ್ ಅವರು, ರಾಮ ಮಂದಿರ ನಿರ್ಮಾಣದ ನಂತರ ಕೆಲವರು ಹೊಸ ಜಾಗಗಳಲ್ಲಿ ಉದ್ದೇಶಪೂರ್ವಕವಾಗಿ ಇಂತಹುದೇ ವಿಚಾರಗಳನ್ನು ಮುಂದಿಟ್ಟುಕೊಂಡು ವಿವಾದ ಎಬ್ಬಿಸಿ ಹಿಂದೂಗಳ ನಾಯಕರಾಗಬಹುದು ಎಂದು ಭಾವಿಸುತ್ತಿದ್ದಾರೆ. ಆದರೆ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು. ನಮ್ಮ ದೇಶ ಸೌಹಾರ್ದಯುತವಾಗಿ ಬದುಕಬಲ್ಲದು ಎಂಬುದನ್ನು ಜಗತ್ತಿಗೆ ಸಾರುವ ಅಗತ್ಯವಿದೆ ಎಂದು ಹೇಳಿದ ಮೋಹನ್ ಭಾಗವತ್, ರಾಮಕೃಷ್ಣ ಮಿಷನ್‌ನಲ್ಲಿ ಕ್ರಿಸ್ ಮಸ್ ಆಚರಿಸಲಾಗುತ್ತದೆ. ನಾವು ಹಿಂದೂಗಳಾಗಿರುವುದರಿಂದ ಮಾತ್ರ ಇದನ್ನು ಮಾಡಲು ಸಾಧ್ಯ. ನಾವು ಬಹಳ ಹಿಂದಿನಿಂದಲೂ ಸಾಮರಸ್ಯದಿಂದ ಬದುಕುತ್ತಿದ್ದೇವೆ. ಈ ಸದ್ಭಾವನೆಯನ್ನು ನಾವು ಜಗತ್ತಿಗೆ ಒದಗಿಸಬೇಕಾದರೆ, ನಾವು ಅದನ್ನು ಮಾದರಿಯಾಗಿಟ್ಟುಕೊಳ್ಳಬೇಕು. ಪ್ರತಿದಿನ ಹೊಸ ಪ್ರಕರಣದ ವಿವಾದಗಳು ಹುಟ್ಟಿಕೊಳ್ಳುತ್ತಿದೆ. ಅದನ್ನು ಬಿಟ್ಟು ನಾವು ಒಟ್ಟಿಗೆ ಬಾಳಬಹುದು ಎಂಬುದನ್ನು ಜಗತ್ತಿಗೆ ತೋರಿಸಬೇಕಾಗಿದೆ ಎಂದರು. ಇದನ್ನೂ ಓದಿ: Cancer Vaccine: ಗುಡ್‌ನ್ಯೂಸ್! ಕೊನೆಗೂ ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಗೆ ಬಂತು ಔಷಧ; ಕ್ಯಾನ್ಸರ್ ಲಸಿಕೆ ಕಂಡುಹಿಡಿದ ರಷ್ಯಾ! ದೇವಾಲಯದ ಅವಶೇಷ ಹುಡುಕುವ ನೆಪದಲ್ಲಿ ಅಸ್ತಿತ್ವದಲ್ಲಿರುವ ಮಸೀದಿಗಳ ಉತ್ಖನನ ನಡೆಸಬೇಕೆಂಬ ಬೇಡಿಕೆಗೆ ಆರ್‌ಎಸ್‌ಎಸ್‌ ಸಮ್ಮತಿಯಿಲ್ಲ. ಸಂಘವು ಸಾಮಾಜಿಕ ಸ್ಥಿರತೆಗಾಗಿ ಹೆಚ್ಚಿನ ಒತ್ತು ನೀಡುತ್ತದೆಯೇ ಹೊರತು, ಇತಿಹಾಸದಲ್ಲಿ ಹುದುಗಿ ಹೋದ ವಿವಾದಗಳನ್ನು ಕೆದಕುವ ಗೋಜಿಗೆ ಹೋಗುವುದಿಲ್ಲ ಎಂದು ಹೇಳಿದ ಭಾಗವತ್‌, ಸಮಾಜದಲ್ಲಿನ ಘರ್ಷಣೆಯನ್ನು ಕಡಿಮೆ ಮಾಡಲು ಪ್ರಾಚೀನ ಸಂಸ್ಕೃತಿಗೆ ಮರಳುವುದು ಪರಿಹಾರವಾಗಿದೆ. ಉಗ್ರವಾದ, ಆಕ್ರಮಣಶೀಲತೆ, ಬಲವಂತಿಕೆ ಮತ್ತು ಇತರರ ದೇವರುಗಳನ್ನು ಅವಮಾನಿಸುವುದು ನಮ್ಮ ಸಂಸ್ಕೃತಿಯಲ್ಲ. ಇಲ್ಲಿ ಬಹುಸಂಖ್ಯಾತರು ಅಥವಾ ಅಲ್ಪಸಂಖ್ಯಾತರು ಎಂಬುವುದಿಲ್ಲ, ನಾವೆಲ್ಲರೂ ಒಂದು. ಪ್ರತಿಯೊಬ್ಬರೂ ಈ ದೇಶದಲ್ಲಿ ತಮ್ಮ ಆರಾಧನೆಗಳನ್ನು ಮಾಡಬಹುದು ಎಂದರು. ದೇಶದಲ್ಲಿ ಯುಗಯುಗಾಂತರಗಳಿಂದ ವಿವಿಧ ಧರ್ಮ, ಜಾತಿ, ಮತ, ಮತ, ಸಿದ್ಧಾಂತಗಳ ಜನರು ಸೌಹಾರ್ದತೆಯಿಂದ ಬಾಳುತ್ತಿದ್ದಾರೆ ಎಂದು ಹೇಳಿದ ಭಾಗವತ್‌, ಅದಕ್ಕಾಗಿಯೇ ನಾವು ವಿಭಜನೆಯ ಭಾಷೆಯನ್ನು ಬಿಟ್ಟು, ಅಲ್ಪಸಂಖ್ಯಾತ-ಬಹುಸಂಖ್ಯಾತ ತಾರತಮ್ಯ ಮರೆತು ಹೋರಾಡಬೇಕು. ನಮ್ಮ ಬಹುತ್ವದ ಸಂಸ್ಕೃತಿಯ ಅಡಿಯಲ್ಲಿ ನಾವು ಒಂದಾಗಬೇಕು ಎಂದು ಕರೆ ನೀಡಿದರು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.