NEWS

IND vs NZ: ನಾಳೆಯಿಂದ ಭಾರತ vs ನ್ಯೂಜಿಲ್ಯಾಂಡ್ ಟೆಸ್ಟ್ ಸರಣಿ! ಹೆಡ್​ ಟು ಹೆಡ್ ರೆಕಾರ್ಡ್, ಲೈವ್ ಸ್ಟ್ರೀಮಿಂಗ್, ಸ್ಥಳ, ಸಮಯದ ವಿವರ ಇಲ್ಲಿದೆ

ಭಾರತ vs ನ್ಯೂಜಿಲ್ಯಾಂಡ್ ನವದೆಹಲಿ: ಬಾಂಗ್ಲಾದೇಶ ವಿರುದ್ಧ ಭಾರತ (India vs Bangladesh) ಕ್ರಿಕೆಟ್ ತಂಡ ತನ್ನ ಮುಂದಿನ ಸರಣಿಗೆ ಸಜ್ಜಾಗಿದೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಹಾಗೂ ಟಿ20 ಸರಣಿ ಗೆದ್ದ ಬಳಿಕ ಟೀಂ ಇಂಡಿಯಾ (Team India) ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. ಟೆಸ್ಟ್ ಸರಣಿ (Test Series) ಅಕ್ಟೋಬರ್ 16 ರಿಂದ ಪ್ರಾರಂಭವಾಗಲಿದ್ದು, ಕೊನೆಯ ಪಂದ್ಯ ನವೆಂಬರ್ 5 ರಂದು ನಡೆಯಲಿದೆ. ಮುಂದಿನ 21 ದಿನಗಳಲ್ಲಿ, ಭಾರತ ಮತ್ತು ನ್ಯೂಜಿಲೆಂಡ್ ತಂಡದ ನಡುವೆ ಟೆಸ್ಟ್ 3 ಪಂದ್ಯಗಳು ನಡೆಯಲಿವೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯನ್ನು ಗೆಲ್ಲುವ ಮೂಲಕ ಭಾರತವು ತವರಿನಲ್ಲಿ ಸತತ 18 ನೇ ಟೆಸ್ಟ್ ಗೆಲುವು ದಾಖಲಿಸಿದೆ. ಟೀಮ್ ಇಂಡಿಯಾ ತನ್ನ ಹೆಸರಿನಲ್ಲಿಯೇ ಇರುವ ದಾಖಲೆಯನ್ನು ಮತ್ತಷ್ಟು ಉತ್ತಮಪಡಿಸಿಕೊಳ್ಳಲಿದೆ. ಭಾರತವು ಕಿವೀಸ್ ವಿರುದ್ಧವೂ ತನ್ನ ಗೆಲುವಿನ ಲಯವನ್ನು ಕಾಪಾಡಿಕೊಳ್ಳಲು ಬಯಸುತ್ತಿದೆ. ಟೆಸ್ಟ್ ಸರಣಿಯ ಮೊದಲ ಪಂದ್ಯ ಅಕ್ಟೋಬರ್ 16 ರಿಂದ ಪ್ರಾರಂಭವಾಗಲಿದ್ದು, ಕೊನೆಯ ಪಂದ್ಯ ನವೆಂಬರ್ 1 ರಿಂದ ಪ್ರಾರಂಭವಾಗಲಿದೆ. ಭಾರತ-ನ್ಯೂಜಿಲೆಂಡ್ ಸರಣಿ ವೇಳಾಪಟ್ಟಿ ಅಕ್ಟೋಬರ್ 16 ರಿಂದ 20 ರವರೆಗೆ ಬೆಂಗಳೂರಿನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿದೆ. ಎರಡನೇ ಟೆಸ್ಟ್ ಪಂದ್ಯ ಅಕ್ಟೋಬರ್ 24 ರಿಂದ 28 ರವರೆಗೆ ಪುಣೆಯಲ್ಲಿ ನಡೆಯಲಿದೆ. ಸರಣಿಯ ಮೂರನೇ ಮತ್ತು ಅಂತಿಮ ಟೆಸ್ಟ್ ನವೆಂಬರ್ 1 ರಿಂದ ನವೆಂಬರ್ 5 ರವರೆಗೆ ಮುಂಬೈನಲ್ಲಿ ನಡೆಯಲಿದೆ. ಟೆಸ್ಟ್ ಪಂದ್ಯದ ದಿನದಾಟವು ಭಾರತೀಯ ಕಾಲಮಾನ ಬೆಳಿಗ್ಗೆ 9.30 ಕ್ಕೆ ಪ್ರಾರಂಭವಾಗಬೇಕಿತ್ತು, ಅದು ನ್ಯೂಜಿಲೆಂಡ್ ಸಮಯದ ಪ್ರಕಾರ ಸಂಜೆ 5 ಗಂಟೆಗೆ ಇರಲಿದೆ. ಇದನ್ನೂ ಓದಿ: India vs New Zealand: ಕಿವೀಸ್ ವಿರುದ್ದ ಕೇವಲ 53 ರನ್​ಗಳಿಸಿದ್ರೆ ಸಾಕು, ಕೊಹ್ಲಿ ಮುಡಿ ಸೇರುತ್ತೇ ಮತ್ತೊಂದು ಕಿರೀಟ! ನೇರಪ್ರಸಾರ ಯಾವ ಚಾನೆಲ್​? ಪಂದ್ಯದ ನೇರ ಪ್ರಸಾರವನ್ನು ಸ್ಪೋರ್ಟ್ಸ್ 18 ನೆಟ್​ವರ್ಕ್​ ಚಾನೆಲ್​ಗಳಲ್ಲಿ ನೋಡಬಹುದು. ಇದರ ಲೈವ್ ಸ್ಟ್ರೀಮಿಂಗ್ ಜಿಯೋ ಸಿನೆಮಾ ಆ್ಯಪ್​ನಲ್ಲೂ ವೀಕ್ಷಿಸಬಹುದಾಗಿದೆ. ಹೆಡ್​ ಟು ಹೆಡ್​ ಭಾರತ -ಕಿವೀಸ್ ಇದುವರೆಗೆ 62 ಟೆಸ್ಟ್​ ಪಂದ್ಯಗಳನ್ನಾಡಿದ್ದು, ಭಾರತ 22ರಲ್ಲಿ, ನ್ಯೂಜಿಲ್ಯಾಂಡ್ 13 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 27 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿದೆ. ಭಾರತ ತಂಡ ತವರಿನಲ್ಲಿ ನಡೆದಿರುವ 17 ಪಂದ್ಯಗಳಲ್ಲಿ 10ರಲ್ಲಿ ಜಯ ಸಾಧಿಸಿ,2ರಲ್ಲಿ ಸೋಲು ಕಂಡಿದೆ. ವಿದೇಶದಲ್ಲಿ ನಡೆದ ಪಂದ್ಯಗಳಲ್ಲಿ 5 ಜಯ ಸಾಧಿಸಿ 7ರಲ್ಲಿ ಸೋಲು ಕಂಡಿದೆ. ತಟಸ್ಥ ಸ್ಥಳದಲ್ಲಿ ನಡೆದ ಒಂದು ಒಂದ್ಯದಲ್ಲಿ ಕಿವೀಸ್​ ಜಯ ಸಾಧಿಸಿದೆ. ನ್ಯೂಜಿಲೆಂಡ್ ಸರಣಿಗೆ ಭಾರತ ತಂಡ ಪ್ರಕಟ ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್. ಮೀಸಲು ಆಟಗಾರರು: ಹರ್ಷಿತ್ ರಾಣಾ, ಮಯಾಂಕ್ ಯಾದವ್, ಪ್ರಸಿದ್ಧ್ ಕೃಷ್ಣ, ನಿತೀಶ್ ಕುಮಾರ್ ರೆಡ್ಡಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.