NEWS

CT Ravi: ಯಾರಾದ್ರೂ ಈ ರೀತಿ ಆರೋಪಗಳನ್ನು ತಮ್ಮ ಮೇಲೆ ತಾವೇ ಮಾಡಿಕೊಳ್ಳೋಕೆ ಸಾಧ್ಯಾನಾ? ಬಿಜೆಪಿ ವಿರುದ್ಧ ಲಾಡ್ ಆಕ್ರೋಶ

ಸಂತೋಷ್‌ ಲಾಡ್‌ ಹುಬ್ಬಳ್ಳಿ: ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ನಿನ್ನೆ ಪರಿಷತ್‌ನಲ್ಲಿ ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದ ಹೇಳಿಕೆಯ ಚರ್ಚೆಯ ಸಂದರ್ಭದಲ್ಲಿ ಗದ್ದಲ ಉಂಟಾಗಿದೆ. ಬೆಜೆಪಿ ಪರಿಷತ್ ಸದಸ್ಯ ಸಿ ಟಿ ರವಿ (CT Ravi) ತಮ್ಮ ವಿರುದ್ಧ ಅವಾಚ್ಯ ಶಬ್ಧಗಳಿಂದ (Unparliamentary) ನಿಂದಿಸಿದ್ದಾರೆ ಎಂದು ಆರೋಪಿಸಿ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಸಚಿವೆ ಹೆಬ್ಬಾಳಕರ್ ಅವರು ದೂರು ದಾಖಲಿಸಿದ್ದರು. ಇದಾದ ಬೆನ್ನಲ್ಲೆ ಸಿಟಿ ರವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸಂತೋಷ್ ಲಾಡ್ (Santhosh Lad) ಪ್ರತಿಕ್ರಿಯೆ ನೀಡಿದ್ದಾರೆ. ಹೆಬ್ಬಾಳ್ಕರ್ ನೊಂದಿದ್ದಾರೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಹೆಬ್ಬಾಳಕರ್ ನೊಂದಿದ್ದಾರೆ, ಈ ರೀತಿಯ ಆರೋಪವನ್ನು ತಮ್ಮ ಮೇಲೆ ತಾವೇ ಮಾಡಿಕೊಳ್ಳೋಕೆ ಸಾಧ್ಯವಾ? ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದರು. ಹೆಬ್ಬಾಳಕರ್ ವಿರುದ್ಧ ಸಿಟಿ ರವಿ ಪದ ಬಳಕೆ ಖಂಡಿಸ್ತೇನೆ. ಭಾರತ ಸಂಸ್ಕೃತಿಯಲ್ಲಿ ಈ ರೀತಿಯ ಪದ ಬಳಕೆ ಶೋಭೆ ತರಲ್ಲ ಎಂದು ಅಸಮಾಧಾನ ಹೊರಹಾಕಿದರು. ಬಿಜೆಪಿಗೆ ನೈತಿಕತೆ ಇಲ್ಲ ಸಭಾಪತಿಗಳ ರೂಲಿಂಗ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಯಾರೂ ಈ ರೀತಿಯ ಆರೋಪಗಳನ್ನು ತಮ್ಮ ಮೇಲೆ ತಾವೇ ಮಾಡಿಕೊಳ್ಳಲ್ಲ, ಒಬ್ಬ ಮಹಿಳೆ ಮಾಡಿರೋ ಆರೋಪದ ವಿರುದ್ಧ ಬಿಜೆಪಿ ಹೋರಾಟ ಮಾಡ್ತಿದೆ, ಬಿಜೆಪಿ ಪಕ್ಷದ ನೈತಿಕತೆ ಇಲ್ಲಿ ಎದ್ದು ಕಾಣುತ್ತದೆ ಎಂದರು. ಆರ್ ಅಶೋಕ್‌ಗೆ ಟಾಂಗ್ ಕರ್ನಾಟಕ ಗೂಂಡಾ ರಾಜ್ಯ, ಪಾಕಿಸ್ತಾನ ಆಗಿದೆ ಎಂಬ ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪಾಕಿಸ್ತಾನಕ್ಕೆ ಹೋಗಿ ಕೇಕ್ ತಿಂದು ಬಂದವರು ಯಾರು..? ಮುಸಲ್ಮಾನ, ಪಾಕಿಸ್ತಾನ, ಅಫ್ಘಾನಿಸ್ತಾನ ಬಿಟ್ಟರೆ ಇವರಿಗೆ ಬೇರೇನು ಗೊತ್ತಿದೆ ಎಂದು ಅಶೋಕ್ ವಿರುದ್ಧ ಕಿಡಿಕಾರಿದರು. ಸಿಟಿ ರವಿ ವಿರುದ್ಧ ಕಿಡಿಕಾರಿದರು ತಮ್ಮ ವಿರುದ್ಧ ಕೊಲೆ ಪಿತೂರಿ ಎಂಬ ಸಿಟಿ ರವಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಈ ರೀತಿಯ ಮಾತನ್ನು ಮೊದಲು ಏಕೆ ಹೇಳಲಿಲ್ಲ. ಅವಾಚ್ಯ ಶಬ್ದಗಳಿಂದ ಬೈದಾಗ ಜನ ಆಕ್ರೋಶ ವ್ಯಕ್ತಪಡಿಸ್ತಾರೆ, ಕಾನೂನಿದೆ, ದೂರು ಕೊಡಲಿ. ಆರ್‌ಎಸ್ಎಸ್ ಮತ್ತು ಬಿಜೆಪಿ ಯಾವ ಮಹಿಳೆ ಬಗ್ಗೆ ಗೌರವ ಇಟ್ಟಿದೆ..? ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಎಲ್ಲಿಗಾದರೂ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದಾರಾ..? ಪಾರ್ಲಿಮೆಂಟ್ ನೂತನ ಕಟ್ಟಡಕ್ಕೆ ರಾಷ್ಟ್ರಪತಿಗಳನ್ನು ಏಕೆ ಕರೆದುಕೊಂಡು ಹೋಗಲಿಲ್ಲ..? ಎಂದು ಪ್ರಶ್ನಿಸಿದರು. ಇದನ್ನೂ ಓದಿ: DK Shivakumar: ಸಿ ಟಿ ರವಿ ಕೇಸ್, ಕೊಲೆಗೆ ಯತ್ನ ಸ್ವಾಭಾವಿಕ ಎಂದ ನೀನು ರಾಜಕಾರಣಿಯೋ? ರೌಡಿಯೋ? ಡಿಕೆಶಿಗೆ JDS ಖಾರವಾದ ಪ್ರಶ್ನೆ! ಬಿಜೆಪಿ ಯಾವತ್ತೂ ಮಹಿಳೆ ಪರವಾಗಿಲ್ಲ ರಾಮ ಮಂದಿರ ಪೂಜೆ ಮಾಡೋಕೆ ಮೋದಿ ಅವರಿಗೆ ಹೇಗೆ ಬಿಟ್ಟರು..?, ಅನುಕೂಲಕ್ಕೆ ತಕ್ಕಂತೆ ಬಿಜೆಪಿ ನಾಯಕರು ಮಾತನಾಡುತ್ತಾರೆ. ಬಿಜೆಪಿಯವರು ಯಾವತ್ತೂ ಮಹಿಳೆಯರ ಪರವಾಗಿಲ್ಲ ಎಂದು ಹುಬ್ಬಳ್ಳಿಯಲ್ಲಿ ಸಂತೋಷ್ ಲಾಡ್ ಆಕ್ರೋಶ ಹೊರಹಾಕಿದರು. ಕೋವಿಡ್ ಸಾವಿಗೆ ಮೋದಿ ಕಾರಣಾನಾ? ಬಳ್ಳಾರಿ ಬಾಣಂತಿಯರ ಸಾವು ಪ್ರಕರಣಕ್ಕೆ ಸರ್ಕಾರವೇ ಕಾರಣ ಎಂಬ ಬಿಜೆಪಿ ಆರೋಪಕ್ಕೆ ಕಿಡಿಕಾರಿದ ಅವರು, ಕೋವಿಡ್ ವೇಳೆ ದೇಶದಲ್ಲಿ 45 ಲಕ್ಷ ಜನ ಸತ್ತರು ಇದರ ಜವಾಬ್ದಾರಿಯನ್ನು ಮೋದಿ ಹೊತ್ತುಕೊಳ್ತಾರಾ..? ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದರು. ಎರಡೂ ಸದನಗಳಲ್ಲಿ ಸುದೀರ್ಘ ಚರ್ಚೆಯಾಗಿದೆ, ಬಾಣಂತಿಯರ ಸಾವಿನ ಬಗ್ಗೆ ಆರೋಗ್ಯ ಸಚಿವರು ಸಮರ್ಪಕ ಉತ್ತರ ಕೊಟ್ಟಿದ್ದಾರೆ. ಆದರೆ ನೀವೇ ಕಾರಣ, ನೀವೇ ಕೊಲೆಗಾರರು ಎಂದು ಬಿಜೆಪಿ ಶಾಸಕರು ಆರೋಪಿಸಿದ್ದಾರೆ, ಹಾಗಿದ್ರೆ ಕೋವಿಡ್ ಸಂದರ್ಭದಲ್ಲಿನ ಸಾವುಗಳಿಗೆ ಮೋದಿ ಕಾರಣ ಹೊರುತ್ತಾರಾ..? ಎಂದು ಕಿಡಿಕಾರಿದರು. ಕೋವಿಡ್ ಸಾವುಗಳ ಬಗ್ಗೆ ಒಂದು ದಿನವೂ ಚರ್ಚೆಯಾಗಲಿಲ್ಲ, ಕಾಂಗ್ರೆಸ್ ಅಧಿಕಾರದಲ್ಲಿರೋ ಕಡೆ ಒಂದ ಸಣ್ಣ ಘಟನೆ ನಡೆದರೂ ಮುಗಿಬಿದ್ದು ಬೈಯುತ್ತಾರೆ. ಇದು ಬಿಟ್ಟರೆ ಬಿಜೆಪಿಯವರಿಗೆ ಬೇರೇನು ಗೊತ್ತಿಲ್ಲ ಎಂದು ಬಿಜೆಪಿ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದರು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.