NEWS

Max Movie: ಮ್ಯಾಕ್ಸ್ ಫ್ಯಾನ್ಸ್‌ಗಾಗಿ ಮಾಡಿರೋ ಸಿನಿಮಾ ಅಲ್ಲ, ಆದ್ರೆ.. ಕಿಚ್ಚ ಹೀಗೆ ಹೇಳಿದ್ಯಾಕೆ?

ಮ್ಯಾಕ್ಸ್ ಫ್ಯಾನ್ಸ್‌ಗಾಗಿ ಮಾಡಿರೋ ಸಿನಿಮಾ ಅಲ್ಲ; ಫ್ಯಾನ್ಸ್‌ಗೆ ಖುಷಿಕೊಡೋ ಸಿನಿಮಾ! ಕಿಚ್ಚ ಹೀಗೆ ಹೇಳಿದ್ಯಾಕೆ? ಮ್ಯಾಕ್ಸ್ ಚಿತ್ರ (Max Movie) ಒಂದು ಸಿಂಪಲ್ ಕಥೆ (Simple Story) ಇರೋ ಚಿತ್ರ. ಒಂದು ರಾತ್ರಿಯಲ್ಲಿ ಇಡೀ ಕಥೆ ನಡೆಯುತ್ತದೆ. ಈ ಕಥೆಯನ್ನ ಡೈರೆಕ್ಟರ್ ವಿಜಯ್ ಕಾರ್ತಿಕೇಯ ಒಂದೇ ದಿನದಲ್ಲಿ ಒಪ್ಪಿಸಿದ್ದಾರೆ. ಆದರೆ, ಅದನ್ನ ಇಪ್ರೂ ವೈಸ್ ಮಾಡೋಕೆ 8 ದಿನ ಟೈಮ್ ಹೋಗಿದೆ. ಹೆಚ್ಚು ಕಡಿಮೆ 8 ತಿಂಗಳು ಇದರ ಸ್ಕ್ರಿಪ್ಟ್ ವರ್ಕ್ ಆಗಿದೆ. ಹಾಗೆ ಈ ಒಂದು ಚಿತ್ರ ಫ್ಯಾನ್ಸ್‌ಗಾಗಿಯೇ ಮಾಡಿರೋ ಚಿತ್ರ ಅಲ್ವೇ ಅಲ್ಲ. ಆದರೆ, ಇದು ಅಭಿಮಾನಿಗಳಿಗೆ ಖುಷಿಯನ್ನ ಕೊಡುವ ಚಿತ್ರವೇ ಆಗಿದೆ. ಇದನ್ನ ನೋಡಿದ ಫ್ಯಾನ್ಸ್ (Fans) ಖುಷಿ ಪಡ್ತಾರೆ. ಇಂತಹ ಒಂದು ಕಥೆಯ ಚಿತ್ರ ಮಾಡ್ಬೇಕು ಅಂತ ಆಸೆ ಇತ್ತು. ಅದು ಈ ಒಂದು ಮ್ಯಾಕ್ಸ್ ಚಿತ್ರದ ಮೂಲಕವೆ ಆಗುತ್ತಿದೆ. ಹೀಗೆ ಕಿಚ್ಚ ಸುದೀಪ್ ತಮ್ಮ ಮ್ಯಾಕ್ಸ್ ಚಿತ್ರದ (Max Movie) ಬಗ್ಗೆ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಒಟ್ಟು ಚಿತ್ರಣ ಇಲ್ಲಿದೆ ಓದಿ. ಮ್ಯಾಕ್ಸ್ ಕನ್ನಡ ಸಿನಿಮಾ ಮ್ಯಾಕ್ಸ್ ಕನ್ನಡ ಸಿನಿಮಾನೇ ಆಗಿದೆ. ಇದರಲ್ಲಿ ಬಹುತೇಕ ಕನ್ನಡಿಗರೇ ಇದ್ದಾರೆ. ಕನ್ನಡದಲ್ಲಿಯೇ ಈ ಚಿತ್ರವನ್ನ ಹೆಚ್ಚು ಪ್ರಚಾರ ಮಾಡುತ್ತಿದ್ದೇವೆ. ಬೇರೆ ಭಾಷೆಯಲ್ಲೂ ಈ ಚಿತ್ರ ಪ್ರಚಾರ ಮಾಡೋ ಪ್ಲಾನ್ ಇದೆ. ತಮಿಳು ಮತ್ತು ತೆಲುಗು ಭಾಷೆಯಲ್ಲಿ ಈ ಚಿತ್ರವನ್ನ ಪ್ರಚಾರ ಮಾಡುತ್ತೇವೆ. ಆ ಒಂದು ಪ್ಲಾನ್ ಕೂಡ ನಡೆಯುತ್ತಿದೆ. ಕನ್ನಡದ ಚಿತ್ರವನ್ನ ಕನ್ನಡದಲ್ಲಿಯೇ ಮೊದಲ ಪ್ರಚಾರ ಮಾಡುತ್ತೇವೆ. ಆ ಮೇಲೆ ಬೇರೆ ಭಾಷೆಯಲ್ಲಿ ಪ್ರಮೋಟ್ ಮಾಡುತ್ತೇವೆ. ವಿಶೇಷವೆಂದ್ರೆ ಈ ಚಿತ್ರದಲ್ಲಿ ಕೊಲಾಬ್ರೇಷನ್ ಇದೆ. ಕನ್ನಡ ಮತ್ತು ಕಾಲಿವುಡ್‌ ಟೆಕ್ನಿಷನ್ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇದರಿಂದ ಆಯಾ ಭಾಷೆಯ ಸಿನಿಮಾಗಳು ಬೆಳೆಯುತ್ತವೆ. ಇದನ್ನೂ ಓದಿ: UI Movie: ಪ್ರೇಕ್ಷಕರ ತಲೆಗೆ ಹುಳ ಬಿಡ್ತಾ UI ಸಿನಿಮಾ? ಎರಡು ಸಲ ನೋಡ್ಬೇಕು ಅಂತ ಹೇಳ್ತಿರೋದು ಯಾಕೆ? ಮ್ಯಾಕ್ಸ್ ಬುಧವಾರ ಬರ್ತಿದೆ ಸುದೀಪ್ ಚಿತ್ರ ಜೀವನದಲ್ಲಿ ಯಾವುದೇ ಚಿತ್ರ ಬುಧವಾರ ಬಂದಿಲ್ಲ. ಮ್ಯಾಕ್ಸ್ ಆ ಒಂದು ಟ್ರೆಂಡ್ ಹುಟ್ಟುಹಾಕುತ್ತಿದೆ. ಕ್ರಿಸ್ಮಸ್ ಇರೋದ್ರಿಂದ ರಜೆಗಳೂ ಇವೆ. ಇದರಿಂದ ನಿರ್ಮಾಪಕರಿಗೆ ಒಳ್ಳೆಯದಾಗುತ್ತದೆ. ಇದು ಕ್ಲಿಕ್ ಆದ್ರೆ, ಬೇರೆ ಸಿನಿಮಾಗಳು ಬುಧವಾರವೇ ಬರಬಹುದು ಅನಿಸುತ್ತದೆ. ಮ್ಯಾಕ್ಸ್ ಸಿನಿಮಾ ಒಂದು ರಾತ್ರಿ ನಡೆಯೋ ಒಂದು ಕಥೆ ಆಗಿದೆ. ತುಂಬಾನೆ ಸಿಂಪಲ್ ಕಥೆ ಆಗಿದೆ. ಈ ಕಥೆಯನ್ನ ನಿರ್ದೇಶಕ ವಿಜಯ್ ಕಾರ್ತಿಕೇಯ ಒಂದು ದಿನದಲ್ಲಿಯೇ ನನಗೆ ಒಪ್ಪಿಸಿದ್ದಾರೆ. ಆದರೆ, ಅದನ್ನ ಇಪ್ರೂ ವೈಸ್ ಮಾಡೋಕೆ 8 ದಿನಗಳೇ ಕಳೆದಿವೆ. ಇಡೀ ಚಿತ್ರವನ್ನ 8 ತಿಂಗಳು ಬರೆದಿದ್ದೇವೆ. ಮ್ಯಾಕ್ಸ್ ಕಥೆ ಬೇರೆ ರೀತಿನೂ ನೋಡಬಹುದು ಮ್ಯಾಕ್ಸ್ ಚಿತ್ರದ ಕಥೆಯನ್ನ ಬೇರೆ ರೀತಿನ ನೋಡಬಹುದು. ಬೇರೆ ರೀತಿನೂ ಬರೆಯಬಹುದು. ಆದರೆ, ಈಗಿರೋದು ಕೂಡ ಚೆನ್ನಾಗಿಯೇ ಇದೆ. ಫ್ಯಾನ್ಸ್‌ಗೆ ಇದು ಖುಷಿಪಡಿಸುತ್ತದೆ. ಆದರೆ, ಫ್ಯಾನ್ಸ್‌ಗಾಗಿಯೇ ಮಾಡಿರೋ ಚಿತ್ರ ಇದಲ್ಲ ಬಿಡಿ. ಮ್ಯಾಕ್ಸ್‌ ಚಿತ್ರದಲ್ಲಿ ನಾಯಕಿ ಇಲ್ವೇ ಇಲ್ಲ. ರೋಮ್ಯಾನ್ಸ್ ಅವಶ್ಯಕತೆನೂ ಇಲ್ಲ. ಸಂಯುಕ್ತಾ ಹೊರನಾಡ, ಸುಕೃತಾ ವಾಗ್ಲೆ, ವರಲಕ್ಷ್ಮಿ ಶರತ್‌ಕುಮಾರ್ ಇದ್ದಾರೆ. ಇವರೆಲ್ಲ ಈ ಚಿತ್ರದಲ್ಲಿ ರೋಮ್ಯಾನ್ಸ್ ಹಾಕುವ ಅಗತ್ಯ ಬೀಳಲೇ ಇಲ್ಲ. ಹಾಗಾಗಿಯೇ ಮ್ಯಾಕ್ಸ್ ಚಿತ್ರದಲ್ಲಿ ನೋ ರೋಮ್ಯಾನ್ಸ್ ಅಂತಲೇ ಸುದೀಪ್ ಹೇಳಿಕೊಂಡಿದ್ದಾರೆ. ಮ್ಯಾಕ್ಸ್ ಚಿತ್ರದ ಸಂಭಾವನೆ ಮ್ಯಾಟರ್ ಸುದೀಪ್ ಈ ಚಿತ್ರಕ್ಕೆ ಸಂಭಾವನೆ ಪಡೆದುಕೊಂಡಿಲ್ಲ. ಬದಲಾಗಿ ಶೇರ್ ತೆಗೆದುಕೊಳ್ಳುತ್ತಿದ್ದಾರೆ. ಕಿಚ್ಚ ಕ್ರಿಯೇಷನ್ಸ್ ಮತ್ತು ಕಲೈಪುಲಿ ಎಸ್ ಥನು ಅವರ ಜಂಟಿ ನಿರ್ಮಾಣದಲ್ಲಿ ಮ್ಯಾಕ್ಸ್ ಚಿತ್ರವನ್ನ ನಿರ್ಮಾಣ ಆಗಿದೆ. ಹಾಗೇನೆ ಈ ಚಿತ್ರವನ್ನ ಕಿಚ್ಚ ಸುದೀಪ್ ಎಲ್ಲೆಡೆ ಪ್ರಚಾರ ಕೂಡ ಮಾಡುತ್ತಿದ್ದಾರೆ ಅಂತಲೂ ಹೇಳಬಹುದು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.