NEWS

Darshan: 3ನೇ ವ್ಯಕ್ತಿಗಳ ಮಾತು ಕೇಳೋದು ಜಾಸ್ತಿ! ಚಿಂಗಾರಿ ಪ್ರೊಡ್ಯೂಸರ್ ಜೊತೆಗೂ ದರ್ಶನ್ ಜಗಳ?

ದರ್ಶನ್ ರೇಣುಕಾಸ್ವಾಮಿ (Renukaswamy) ಪ್ರಕರಣ ಹೆಚ್ಚು ಸುದ್ದಿಯಾಗುತ್ತಿರುವಂತೆ ಬೇರೆ ಬೇರೆ ವಿಚಾರಗಳು ಹೊರಗೆ ಬರುತ್ತಿವೆ. ಇದೀಗ ಈ ಒಂದು ಘಟನೆ ಬಗ್ಗೆ ದರ್ಶನ್ (Darshan) ಅವರ ಹಿಟ್ ಮೂವಿ ಚಿಂಗಾರಿ (Chingari) ನಿರ್ಮಾಪಕರು ಕೂಡಾ ಪ್ರತಿಕ್ರಿಯಿಸಿದ್ದಾರೆ. ಚಿಂಗಾರಿ ಸಿನಿಮಾದ ಸಮಯದಲ್ಲಿ ಹಣ ಬಂದರೂ ನನಗೆ ಮನಸ್ಸಿಗೆ ನೆಮ್ಮದಿ ಇರಲಿಲ್ಲ. ಪಬ್ಲಿಸಿಟಿ ವಿಚಾರವಾಗಿ ದರ್ಶ‌ನ್ ನನ್ನ ಜೊತೆ ಜಗಳ ಮಾಡಿದ್ದರು ಎನ್ನುವುದನ್ನು ಚಿಂಗಾರಿ ನಿರ್ಮಾಪಕ ಮಹದೇವ್ (Producer Mahadev) ಹೇಳಿದ್ದಾರೆ. ನಟ ದರ್ಶನ್ ಬಗ್ಗೆ ನ್ಯೂಸ್ 18 ಜೊತೆ ಮಾತನಾಡಿದ ಚಿಂಗಾರಿ ನಿರ್ಮಾಪಕ ಮಹದೇವ್ ಅವರು, ಸಿನಿಮಾ ಸಂದರ್ಭದಲ್ಲಿ ದರ್ಶನ್ ನಮ್ಮ ಜೊತೆ ಚೆನ್ನಾಗಿದ್ದರು. ರಿಲೀಸ್ ವೇಳೆ ಯಾರದೋ ಮಾತು ಕೇಳಿ ಪಬ್ಲಿಸಿಟಿ ವಿಚಾರವಾಗಿ ಜಗಳ ಮಾಡಿದ್ದಾರೆ ಎಂದಿದ್ದಾರೆ. ಮೂರನೇ ವ್ಯಕ್ತಿಗಳ ಮಾತು ಜಾಸ್ತಿ ಕೇಳ್ತಾರಾ? ದರ್ಶನ್ ಮೂರನೇ ವ್ಯಕ್ತಿಗಳ ಮಾತು ಕೇಳೊದು ಜಾಸ್ತಿ. ನಮ್ಮ ಸಿನಿಮಾ ವೇಳೆ ದರ್ಶನ್ ಜೊತೆ ಈಗ ಇರುವವರು ಇರಲಿಲ್ಲ. ಆಗ ನಾವು ದರ್ಶನ್ ಏನಾದರೂ ಮಾಡಿದರೆ ಅದು ಸರಿ ಇಲ್ಲ ಅಂತ ಬುದ್ದಿ ಮಾತು ಹೇಳುತ್ತಿದ್ದೆವು. ಈಗ ಯಾರು ಅವರ ತಪ್ಪಿನ‌ ಬಗ್ಗೆ ಹೇಳುವವರಿಲ್ಲ.ಅದಕ್ಕೆ ಹೀಗಾಗಿದೆ ಎಂದಿದ್ದಾರೆ. ದರ್ಶನ್ ತಪ್ಪು ಮಾಡಿಲ್ಲ ಅಂದರೆ ಕಪ್ಪುಚುಕ್ಕಿ ಕಳಂಕ ಕಳೆದು ಕೊಳ್ಳಲಿ. ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲಿ. ಆ ಹೆಣ್ಣು ಮಗಳಿಗೆ ನ್ಯಾಯ ಸಿಗಲಿ. ಚಿಂಗಾರಿ ವೇಳೆ ಪವಿತ್ರಗೌಡ ಬಗ್ಗೆ ನಮಗೆ ಗೊತ್ತಿರಲಿಲ್ಲ. ಪವಿತ್ರಗೌಡ ಬಗ್ಗೆ ನಮಗೆ ಈಗ ಗೊತ್ತಾಗುತ್ತಿದೆ. ಒಂದು ಹೆಣ್ಣಾಗಿ ಮದುವೆ ಆಗಿರೋರ ಬಾಳಿಗೆ ಆಕೆ ಬರಬಾರದಿತ್ತು ಎಂದಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹಾಗೂ ಗ್ಯಾಂಗ್ ವಿಚಾರಣೆ ಕೊನೆಯ ಹಂತದಲ್ಲಿದೆ. ಆದರೆ ಇಷ್ಟೆಲ್ಲ ಆದರೂ ಪ್ರಮುಖ ಸಾಕ್ಷಿಯೊಂದು ಮಿಸ್ ಆಗಿದೆಯಾ? ರೇಣುಕಾಸ್ವಾಮಿ ಮೊಬೈಲ್ ಪತ್ತೆಗಾಗಿ ಪೊಲೀಸರು ಅಗ್ನಿಶಾಮಕ ದಳ ಅಧಿಕಾರಿಗಳ ಮೊರೆ ಹೋಗಿದ್ದರು. ಸತತ 11 ದಿನಗಳಿಂದ ಮೃತ ರೇಣುಕಾಸ್ವಾಮಿ ಮೊಬೈಲ್ ಗಾಗಿ ತೀರ್ವ ಹುಡುಕಾಟ ನಡೆದಿದೆ. ಜೂನ್ 9 ರ ಮುಂಜಾನೆ ಆರೋಪಿ ಪ್ರದೂಶ್ ಮೃತ ರೇಣುಕಾಸ್ವಾಮಿ ಮೊಬೈಲ್ ನ್ನ ಪಡೆದು ಬಿಸಾಡಿದ್ದರು. ಇದು ತನಿಖೆಯಲ್ಲಿ ದೊಡ್ಡ ಸಾಕ್ಷಿಯಾಗುತ್ತಿತ್ತಾ? ಮಿಸ್ ಆಗಿಬಿಡ್ತಾ? ಸುಮನಹಳ್ಳಿಯ ರಾಜಕಾಲುವೆ ಬಳಿ ಮೊಬೈಲ್ ಬಿಸಾಡಿದ್ದಾಗಿ ಆರೋಪಿ ಪ್ರದೂಶ್ ಹೇಳಿಕೆ ನೀಡಿದ್ದ. ಪಟ್ಟಣಗೆರೆ ಶೆಡ್ ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ವೇಳೆ ಮೊಬೈಲ್ ನಲ್ಲಿ ವಿಡಿಯೋ ಚಿತ್ರಿಕರಿಸಿದ್ದ ಮಾಹಿತಿ ಇದ್ದು ಇದು ಸಿಗದಿದ್ದರೆ ದೊಡ್ಡ ಸಾಕ್ಷಿ ಮಿಸ್ ಆಗಲಿದೆ ಎನ್ನಲಾಗುತ್ತಿದೆ. ಪ್ರದೂಶ್ ಮೊಬೈಲ್ ಬಿಸಾಡಿದ್ದ ಸುಮನಹಳ್ಳಿ ರಾಜಕಾಲುವೆಯ ಬಳಿ ಪೊಲೀಸರು ಮಹಜರ್ ನಡೆಸಿದ್ದಾರೆ. ಬಿಬಿಎಂಪಿ ಪೌರ ಕಾರ್ಮಿಕರ ಸಹಾಯದಿಂದ ರಾಜಕಾಲುವೆಯಲ್ಲಿ ಮೊಬೈಲ್ ಹುಡುಕಾಡಿಸಿದ್ದ ಪೋಲಿಸರಿಗೆ ಮೊಬೈಲ್ ಮಾತ್ರ ಸಿಕ್ಕಿಲ್ಲ. ಸುಮನಹಳ್ಳಿ ರಾಜಕಾಲುವೆಯಲ್ಲಿ ಎಷ್ಟು ಹುಡುಕಿದರೂ ರೇಣುಕಾಸ್ವಾಮಿ ಮೊಬೈಲ್ ಮಾತ್ರ ಸಿಕ್ಕಿಲ್ಲ. ಸದ್ಯ ಮೊಬೈಲ್ ಪತ್ತೆ ಮಾಡಿಕೊಡುವಂತೆ ರಾಜಾಜಿನಗರ ಅಗ್ನಿಶಾಮಕ ಠಾಣೆ ಅಧಿಕಾರಿಗಳಿಗೆ ಪೊಲೀಸರು ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ರೇಣುಕಾಸ್ವಾಮಿ ಮೊಬೈಲ್ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಲಿದೆ. ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ಸ್ಯಾಂಡಲ್​ವುಡ್ ನಟ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿ ಒಂಭತ್ತು ದಿನ ಕಳೆದಿದ್ದಾರೆ. ಜೂನ್ 11 ಮಂಗಳವಾರದಂದು ನಟನನ್ನು ಅರೆಸ್ಟ್ ಮಾಡಲಾಗಿತ್ತು. ಜೂನ್ 11 ರಿಂದ ಇಂದಿನವರೆಗೂ ನಟ, ಪವಿತ್ರಾ ಗೌಡ ಹಾಗೂ ಗ್ಯಾಂಗ್ ಜೊತೆ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಸಿನಿಮಾ, ಶೂಟಿಂಗ್ ಅಂತಾ ಓಡಾಡುತ್ತಿದ್ದ ನಟನಿಗೆ ಈಗ ಪೊಲೀಸ್ ಠಾಣೆಯಲ್ಲಿ ವಾಸಿಸಬೇಕಾಗಿ ಬಂದಿದೆ. ಜೂನ್ 20ರಂದು ನಾಳೆ ದರ್ಶನ್ ಆಂಡ್ ಗ್ಯಾಂಗ್ ಪೊಲೀಸ್ ಕಸ್ಟಡಿಗೆ ಅಂತ್ಯವಾಗಲಿದೆ. ವರದಿ : ಸತೀಶ್, ಕನಕಪುರ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.