NEWS

TN Seetharam: ಪರಮೇಶ್ವರ್ ಗುಂಡ್ಕಲ್ ಧಾರಾವಾಹಿ ಮೂಲಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಡ್ತಾರಾ ಟಿ ಎನ್‌ ಸೀತಾರಾಮ್‌? ಪಾತ್ರ ಯಾವುದು ಗೊತ್ತಾ?

ಟಿ ಎನ್ ಸೀತಾರಾಮ್ (TN Seetharam) ಅವರ ಮುಕ್ತ ಮುಕ್ತ (Muktha Muktha) ಧಾರಾವಾಹಿಗಳು ಇಂದೂ ಕಿರುತೆರೆ ಪ್ರೇಕ್ಷಕರ ಮನಸಿನಲ್ಲಿ ಹಾಗೇ ಉಳಿದಿದೆ. ಈ ಧಾರಾವಾಹಿಯಲ್ಲಿ (Serials) ಸೀತಾರಾಮ್‌ ಅವರು ಲಾಯರ್ CSP (Lawyer) ಆಗಿ ಮಿಂಚಿದವರು. ಮತ್ತೆ ಸೀತಾರಾಮ್‌ ಅವರು ಕಿರುತೆರೆಯಲ್ಲಿ ಕಾಣಬೇಕು ಎಂಬ ಹಂಬಲ ಅವರ ಅಭಿಮಾನಿಗಳಲ್ಲಿತ್ತು (Fans). ಇದೀಗ ಸೀತಾರಾಮ್‌ ಅವರು ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಅವರ ಫೇಸ್‌ ಬುಕ್‌ ಪೋಸ್ಟ್‌ (Facebook Psot) ಸಖತ್‌ ವೈರಲ್‌ ಆಗಿದೆ. ಪರಮೇಶ್ವರ್ ಗುಂಡ್ಕಲ್ ಅವರು ಕೆಲವು ದಿನಗಳ ಹಿಂದೆ ಫೋನ್ ಮಾಡಿ ನನ್ನದೇ ಆದ ಧಾರಾವಾಹಿಯನ್ನು ಪ್ರಾರಂಭಿಸುತ್ತಿದ್ದೇನೆ.. ನೀವು ಒಂದು ಪಾತ್ರವನ್ನು ನಿರ್ವಹಿಸಬೇಕು ಎಂದು ಹೇಳಿದ್ದರಂತೆ. ಕಥೆ ಯಾವುದು? ಪಾತ್ರ ಹೇಗಿರುತ್ತದೆ ಎಂದೆಲ್ಲ ಪ್ರಶ್ನೆ ಮಾಡಿದ್ದರಂತೆ. ಈ ಬಗ್ಗೆ ಸೀತಾರಮ್‌‌ ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ: OTT Shows For Music: ಮ್ಯೂಸಿಕ್​ ಲವರ್ಸ್​ಗೆ OTTಯಲ್ಲಿ ಕಾದಿದೆ ಭರ್ಜರಿ ಶೋಗಳು; ಇನ್ನೇಕೆ ತಡ ಈ ಒಟಿಟಿ ಫ್ಲ್ಯಾಟ್‌‌‌ಫಾರ್ಮ್‌‌‌ನಲ್ಲಿ ನೋಡಿ! ಪೋಸ್ಟ್‌ನಲ್ಲಿ ಏನಿದೆ? ಪ್ರೀತಿಯ ಗೆಳೆಯ ಪರಮ್ ಕೆಲದಿನಗಳ ಹಿಂದೆ ಫೋನ್ ಮಾಡಿ ನನ್ನ ಸ್ವಂತ ಧಾರಾವಾಹಿ ಶುರು ಮಾಡುತ್ತಿದ್ದೇನೆ..ನೀವು ಪಾತ್ರ ಮಾಡಬೇಕು ಎಂದರು.. ಏನು ಕಥೆ, ಏನು ಪಾತ್ರ ಎಂದೆ ಕೋರ್ಟ್ ಕಥೆ. ನಿಮ್ಮದು ಸಿ.ಎಸ್.ಪಿ. .ಪಾತ್ರ ಎಂದರು ಒಂದು ಕ್ಷಣ ನನ್ನ ಮನಸ್ಸು ಆಕಾಶದಲ್ಲಿ ಹಾರಿ ವಾಪಸ್ ಬಂತು. ನನ್ನ ಇಷ್ಟದ ಪಾತ್ರ, ತಿಂಗಳಗೊಮ್ಮೆ ಕನಸಿನಲ್ಲಿ ಬರುವ ಪಾತ್ರ.ಎರಡು ತಿಂಗಳಿಗೊಮ್ಮೆ ಕನಸಿನಲ್ಲಿ ಪಾಟೀಸವಾಲು ಬರುತ್ತದೆ ಅರ್ಧ ಸೆಕೆಂಡಿನಲ್ಲಿ ಹೂ ಎಂದೆ. ಮೊನ್ನೆ ಗುರುವಾರ ಪ್ರೊಮೋ ಶೂಟಿಂಗ್ ಆಗಿಯೇ ಹೋಯಿತು. ಎಷ್ಟು ದಿನ ಬರುತ್ತಾರೆ ಎಂದು ಗೊತ್ತಿಲ್ಲ. ಕೆಲವು ದಿನವಾದರೂ ಸೀ.ಎಸ್.ಪಿ ನಿಮ್ಮ ಮುಂದೆ ಬರುತ್ತಾನೆ ಈ ಸಂಗತಿ ಇಷ್ಟ ವಾದರೆ ಹೇಳಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: Bigg Boss Kannada: ಗೇಲಿ ಮಾಡಿದ ಸ್ಪರ್ಧಿಗಳನ್ನು ಸೀಕ್ರೆಟ್‌ ರೂಮ್‌ನಲ್ಲಿ ನೋಡಿ ಬಿಕ್ಕಿ ಬಿಕ್ಕಿ ಅತ್ತ ಚೈತ್ರಾ; ಮನೆಯಿಂದ ಹೊರ ಬರೋದು ಇವರೇನಾ?! ಈ ಪೋಸ್ಟ್‌ಗೆ ಸಾಕಷ್ಟು ಜನ ಸಂತಸ ವ್ಯಕ್ತಪಡಿಸಿದ್ದಾರೆ. ‘ಮಾಯಾಮೃಗ’ ಧಾರಾವಾಹಿ ಮೂಲಕ ನಿರ್ದೇಶಕ ಟಿ ಎನ್ ಸೀತಾರಾಮ ಅವರು ಕಿರುತೆರೆ ನಿರ್ದೇಶಕನಾಗಿ ವೃತ್ತಿ ಆರಂಭಿಸಿದರು. ಹಿರಿಯ ಕಲಾವಿದರಾದ ದತ್ತಣ್ಣ, ವೈಶಾಲಿ ಕಾಸರವಳ್ಳಿ, ಲಕ್ಷ್ಮಿ ಚಂದ್ರಶೇಖರ್, ಎಸ್. ಎನ್ ಸೇತುರಾಮ್ ಸೇರಿದಂತೆ, ನಟರಾದ ಮಾಳವಿಕಾ, ಅವಿನಾಶ್, ರಾಜೇಶ್ ನಟರಂಗ, ಸುಂದರ್, ವೀಣಾ ಸುಂದರ್, ಜಯಶ್ರೀ, ಮಂಜು ಭಾಷಿಣಿ ಇದ್ದಾರೆ. ‘ಮಿಂಚು’, ‘ಮುಕ್ತ’, ‘ಮುಕ್ತ ಮುಕ್ತ’, ‘ಮಹಾಪರ್ವ’, ‘ಮಗಳು ಜಾನಕಿ’, ‘ಮತ್ತೆ ಮಾಯಾಮೃಗ’ ಧಾರಾವಾಹಿಗಳನ್ನು ನೀಡಿದ್ದಾರೆ. ‘ಮುಕ್ತ’ ಹಾಗೂ ‘ಮಿಂಚು’ ಧಾರಾವಾಹಿಗಳು ಇವರದ್ದೇ ಭೂಮಿಕಾ ಟಾಕೀಸ್ ಎಂಬ ಯುಟ್ಯೂಬ್ ಚಾನೆಲ್‌ನಲ್ಲಿ ಪ್ರತಿದಿನ ಪ್ರಸಾರವಾಗುತ್ತಿದ್ದು, ಇಂದಿಗೂ ಅಷ್ಟೇ ಪಾಪುಲಾರಿಟಿಯಿಂದ ಜನ ವೀಕ್ಷಣೆ ಪಡೆಯುತ್ತಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.