NEWS

BGT 2024-25: ಎರಡೂ ಇನ್ನಿಂಗ್ಸ್​ನಲ್ಲೂ ಗರಿಷ್ಠ ಸ್ಕೋರ್! ಮೊದಲ ಸರಣಿಯಲ್ಲೇ ವಿಶೇಷ ದಾಖಲೆ ಬರೆದ ನಿತೀಶ್​

ನಿತೀಶ್ ಕುಮಾರ್ ರೆಡ್ಡಿ ಐದು ಟೆಸ್ಟ್‌ಗಳ ಬಾರ್ಡರ್ ಗವಾಸ್ಕರ್ ಟ್ರೋಫಿಯ (Border Gavaskar Trophy) ಭಾಗವಾಗಿ ಅಡಿಲೇಡ್‌ನಲ್ಲಿ (Adelaide Test) ನಡೆದ ಎರಡನೇ ಟೆಸ್ಟ್‌ನಲ್ಲಿ ಭಾರತ 10 ವಿಕೆಟ್‌ಗಳಿಂದ ಆಸ್ಟ್ರೇಲಿಯಾ (Australia) ವಿರುದ್ಧ ಹೀನಾಯ ಸೋಲು ಅನುಭವಿಸಿತು. ಇದೀಗ ಟೆಸ್ಟ್ ಸರಣಿ 1-1ರಲ್ಲಿ ಸಮಬಲವಾಗಿದೆ. ಭಾರತ ನೀಡಿದ19 ರನ್ ಗಳ ಅಲ್ಪ ಗುರಿ ಬೆನ್ನಟ್ಟಿದ ಆಸೀಸ್ 3.2 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಚೇಸಿಂಗ್ ಪೂರ್ಣಗೊಳಿಸಿತು. ನೇಥನ್ ಮೆಕ್‌ಸ್ವೀನಿ (ಔಟಾಗದೆ 10) ಮತ್ತು ಉಸ್ಮಾನ್ ಖವಾಜಾ (ಅಜೇಯ 9) ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಎರಡೂ ಇನ್ನಿಂಗ್ಸ್​ನಲ್ಲೂ ಮಿಂಚಿದ ನಿತೀಶ್ ಇದಕ್ಕೂ ಮುನ್ನ 128/5 ಓವರ್‌ನೈಟ್ ಸ್ಕೋರ್‌ನೊಂದಿಗೆ ಮೂರನೇ ದಿನದ ಆಟವನ್ನು ಪುನರಾರಂಭಿಸಿದ ಭಾರತ ಎರಡನೇ ಇನಿಂಗ್ಸ್‌ನಲ್ಲಿ 36.5 ಓವರ್‌ಗಳಲ್ಲಿ 175 ರನ್‌ಗಳಿಗೆ ಕುಸಿಯಿತು. ಭಾರತದ ಪರ ನಿತೀಶ್ ಕುಮಾರ್ ರೆಡ್ಡಿ 42 ರನ್​ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಆಸ್ಟ್ರೇಲಿಯಾದ ಬೌಲರ್‌ಗಳಲ್ಲಿ ಪ್ಯಾಟ್ ಕಮಿನ್ಸ್ (5/57) ಐದು ವಿಕೆಟ್, ಸ್ಕಾಟ್ ಬೋಲ್ಯಾಂಡ್ (3/51) ಮೂರು ವಿಕೆಟ್ ಮತ್ತು ಮಿಚೆಲ್ ಸ್ಟಾರ್ಕ್ (2/60) ಎರಡು ವಿಕೆಟ್ ಪಡೆದರು. ಇದಕ್ಕೂ ಮುನ್ನ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 180 ರನ್ ಗಳಿಸಿತ್ತು. ಮೊದಲ ಇನಿಂಗ್ಸ್‌ನಲ್ಲೂ ನಿತೀಶ್ ರೆಡ್ಡಿ 42 ರನ್​ಗಳಿಸಿ ತಂಡ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ಆಸ್ಟ್ರೇಲಿಯಾ 337 ರನ್ ಗಳಿಸಿ 157ರನ್​ಗಳ ಮುನ್ನಡೆ ಪಡೆದುಕೊಂಡಿತ್ತು. ಟ್ರಾವಿಸ್ ಹೆಡ್ 140 ಹಾಗೂ ಲಾಬುಶೇನ್ 64 ರನ್​ಗಳಿಸಿ ಗರಿಷ್ಠ ಸ್ಕೋರರ್​ ಎನಿಸಿಕೊಂಡಿದ್ದರು. ಇದನ್ನೂ ಓದಿ: ಒಂದೇ ದಿನ ಭಾರತ-ನ್ಯೂಜಿಲ್ಯಾಂಡ್​ ತಂಡಗಳಿಗೆ ಸೋಲು! ಈಗ ಹೇಗಿದೆ WTC ಫೈನಲ್ ಲೆಕ್ಕಾಚಾರ! ಎರಡೂ ಇನ್ನಿಂಗ್ಸ್​ನಲ್ಲಿ ಗರಿಷ್ಠ ಸ್ಕೋರ್ ದಾಖಲೆ ಈ ಪಂದ್ಯದಲ್ಲಿ ಭಾರತ ಸೋಲು ಕಂಡರು ಯುವ ಆಲ್​ರೌಂಡರ್ ನಿತೀಶ್​ ರೆಡ್ಡಿ ಅಪರೂಪದ ಸಾಧನೆ ಮಾಡಿದ್ದಾರೆ. ತಮ್ಮ ಮೊದಲ ಟೆಸ್ಟ್ ಸರಣಿಯಲ್ಲೇ ಗಮನಾರ್ಹ ಬ್ಯಾಟಿಂಗ್ ಪ್ರದರ್ಶನ ತೋರಿರುವ ನಿತೀಶ್​ ಭಾರತದ ಪರ ಎರಡೂ ಇನ್ನಿಂಗ್ಸ್ ಗಳಲ್ಲಿ ಏಳನೇ ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಬಂದು ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ನಾಲ್ಕನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಈ ಹಿಂದೆ ಕೇವಲ ಮೂವರು ಭಾರತೀಯ ಕ್ರಿಕೆಟಿಗರು ಮಾತ್ರ ಈ ಸಾಧನೆ ಮಾಡಿದ್ದರು. 1961-62ರಲ್ಲಿ ಕೋಲ್ಕತ್ತಾದಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಚಂದು ಬೋರ್ಡೆ, 2011 ರಲ್ಲಿ ಇಂಗ್ಲೆಂಡ್ ವಿರುದ್ಧ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಎಂಎಸ್ ಧೋನಿ ಮತ್ತು 2018 ರಲ್ಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ರವಿಚಂದ್ರನ್ ಅಶ್ವಿನ್ ಈ ಸಾಧನೆ ಮಾಡಿದ್ದರು. ಇದನ್ನೂ ಓದಿ: Border Gavaskar Trophy: ಆಸೀಸ್​ ವಿರುದ್ಧ 2ನೇ ಟೆಸ್ಟ್​ನಲ್ಲಿ ಭಾರತದ ಸೋಲಿಗೆ 4 ಪ್ರಮುಖ ಕಾರಣಗಳಿವು! ಸಿಕ್ಸರ್​ನಲ್ಲೂ ಹೊಸ ದಾಖಲೆ ನಿತೀಶ್​ ಕುಮಾರ್ ಆಸ್ಟ್ರೇಲಿಯಾ ವಿರುದ್ಧ ನಡೆದ ಒಂದೇ ಸರಣಿಯಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡರು. ನಿತೀಶ್​ ರೆಡ್ಡಿ 7 ಸಿಕ್ಸರ್ ಸಿಡಿಸಿ ಸೆಹ್ವಾಗ್ ದಾಖಲೆ ಮುರಿದರು. ವೀರೇಂದ್ರ ಸೆಹ್ವಾಗ್ 2003ರ ಸರಣಿಯಲ್ಲಿ 6 ಸಿಕ್ಸರ್ ಸಿಡಿಸಿದ್ದರು. ಮುರಳಿ ವಿಜಯ್ 2014ರಲ್ಲಿ 6, ಸಚಿನ್ ತೆಂಡೂಲ್ಕರ್​ 2007ರಲ್ಲಿ 5, ರೋಹಿತ್ ಶರ್ಮಾ 2014ರಲ್ಲಿ 5, ಮಯಾಂಕ್ ಅಗರ್ವಾಲ್ 2018ರಲ್ಲಿ 5, ರಿಷಭ್ ಪಂಥ್ 2018ರಲ್ಲಿ 5 ಸಿಕ್ಸರ್ ಸಿಡಿಸಿದ್ದರು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.