NEWS

Upendra: `ಎ’ ಸಿನಿಮಾದಲ್ಲಿ ನಟಿಸಿದ್ದ ಬಾಲಕ ಈಗ ಹೇಗಿದ್ದಾರೆ ಗೊತ್ತಾ? ನೋಡಿ ಶಾಕ್‌ ಆದ ಉಪ್ಪಿ!

ರಿಯಲ್‌ ಸ್ಟಾರ್‌ ಉಪೇಂದ್ರ (Real Star Upendra) ಅವರು ಯುಐ ಸಿನಿಮಾ (UI Cinema) ಅದ್ಧೂರಿಯಾಗಿ ತೆರೆ ಕಂಡಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಯುಐ ಅಬ್ಬರ ಜೋರಾಗಿದೆ. ಸಪ್ತ ಸಾಗರದಾಚೆಗೂ ಯುಐ ಹವಾ ಜೋರಾಗಿದೆ. ನಾಯಕಿಯಾಗಿ ರೀಷ್ಮಾ ನಾಣಯ್ಯ (Reeshma Nanaiah) ಉಪ್ಪಿ ಜೊತೆ ತೆರೆ ಹಂಚಿಕೊಂಡಿದ್ದಾರೆ. ಉಪೇಂದ್ರ ತಮ್ಮ ಯುಐ ಚಿತ್ರದಲ್ಲಿ ಸಾಕಷ್ಟು ವಿಷಯಗಳನ್ನ ಇಟ್ಟಿದ್ದಾರೆ. ಇದರ ಬೆನ್ನಲ್ಲೇ ಇದೀಗ ಹೊಸ ವಿಡಿಯೋವೊಂದು (new Video Viral) ಸಖತ್‌ ವೈರಲ್‌ ಆಗುತ್ತಿದೆ. ಎ ಸಿನಿಮಾದಲ್ಲಿ ನಟಿಸಿದ್ದ ಬಾಲಕ ಏಕಾಏಕಿ ಉಪ್ಪಿ ಮುಂದೆ ಪ್ರತ್ಯಕ್ಷನಾಗಿದ್ದಾನೆ. ನೋಡಿ ಉಪ್ಪಿ ಶಾಕ್‌ ಆಗಿದ್ದಾರೆ. UI ಸಿನಿಮಾ ಪ್ರಚಾರದ ವೇಳೆ, ಉಪ್ಪಿಗೆ ಸರ್‌ಪ್ರೈಸ್‌ ಕಾದಿತ್ತು‘ಎ’ ಚಿತ್ರದಲ್ಲಿ ಬಾಲಕನ ಪಾತ್ರ ಮಾಡಿದ್ದ ಹುಡುಗ ಉಪೇಂದ್ರ ಅವರ ಮುಂದೆ ಬಂದಿದ್ದಾರೆ. ‘ಎ’ ಸಿನಿಮಾದಲ್ಲಿ ಕೆಲಸಕ್ಕೆ ಬಾರದ ವ್ಯಕ್ತಿಗಳನ್ನು ಉಪೇಂದ್ರ ಸಾಯಿಸೋ ದೃಶ್ಯ ಇದೆ. ಅದರಲ್ಲಿ ಈ ಬಾಲಕನಿಗೆ ಉಪ್ಪಿ ತೆವಲಿಗೆ ನಿನ್ನ ಹುಟ್ಟಿಸಿದ್ದಾರೆ. ಜಾಸ್ತಿ ಯೋಚನೆ ಮಾಡಿದ್ರೆ ನೀನು ನನ್ನ ರೀತಿ ಆಗ್ಬಿಡ್ತೀಯಾ ಅಂತ ರಗಡ್‌ ಆಗಿಯೇ ಡೈಲಾಗ್‌ ಹೊಡೆದಿದ್ದಾರೆ. ಆ ಪುಟ್ಟ ಬಾಲಕನೇ ಈಗ ಉಪ್ಪಿ ಮುಂದೆ ಬಂದಿದ್ದಾರೆ. ಸಿನಿಮಾದಲ್ಲಿ ಬಾಲಕ ಉಪ್ಪಿ ನೋಡಿ ಹೆದರಿ ಓಡಿ ಹೋಗುತ್ತಾನೆ. ಇದೀಗ ಈ ಹುಡುಗ ಉಪ್ಪಿ ಅವರ ಬಳಿ ಪರಿಚಯ ಮಾಡಿಕೊಳ್ಳುತ್ತಿದ್ದಂತೆ ಉಪೇಂದ್ರ ಅವರು ಅಲ್ಲಿ ಓಡಿ ಹೋದ ನೀವು, ಈಗ ಬಂದಿದ್ದೀರಾ ಎಂದು ತಮಾಷೆ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ. ಇದನ್ನೂ ಓದಿ: Nooru Janmaku Serial: ನೂರು ಜನ್ಮಕೂ ಧಾರಾವಾಹಿಗೆ ಕೌಂಟ್‌ಡೌನ್ ಶುರು; ಸದ್ಯದಲ್ಲೇ ಮುಕ್ತಾಯವಾಗಲಿದೆಯಾ ಜನಮೆಚ್ಚುಗೆ ಪಡೆದಿದ್ದ ಈ ಸೀರಿಯಲ್? ಯುಐ ಸಿನಿಮಾಗೆ ಭರ್ಜರಿ ವೆಲ್‌ಕಮ್‌ ಉಪೇಂದ್ರ ತಮ್ಮ ಯುಐ ಚಿತ್ರದಲ್ಲಿ ಸಾಕಷ್ಟು ವಿಷಯಗಳನ್ನ ಇಟ್ಟಿದ್ದಾರೆ. ಅದನ್ನ ಅಷ್ಟೆ ವಿಶೇಷವಾಗಿಯೇ ಪ್ರಸೆಂಟ್ ಮಾಡಿದ್ದಾರೆ. ಅದರ ಝಲಕ್‌ ಟೀಸರ್ ಮತ್ತು ವಾರ್ನರ್‌ನಲ್ಲಿ ಕಾಣುತ್ತಿದೆ. ಹಾಡಿನಲ್ಲೂ ಉಪ್ಪಿ ಸಾಕಷ್ಟು ವಿಷಯ ಹೇಳಿಕೊಂಡಿದ್ದಾರೆ. ಚಿತ್ರದ ಕೊನೆಯ ದೃಶ್ಯವನ್ನು ಡಿಕೋಡ್ ಮಾಡೋ ಅವಶ್ಯಕತೆ ಇದೆ. ಅಲ್ಲೂ ಉಪ್ಪಿ ಎಲ್ಲರ ಮೆದುಳಿಗೆ ಕೆಲಸ ಕೊಟ್ಟಿದ್ದಾರೆ. ಅದನ್ನ ನೋಡಿದ ಜನ ಡಿಕೋಡ್ ಮಾಡಬಹುದು. ಇದನ್ನೂ ಓದಿ: UI Movie: ಯುಐ ಸಿನಿಮಾಗೆ ಭರ್ಜರಿ ವೆಲ್‌ಕಮ್‌‌‌‌, ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದ ಫ್ಯಾನ್ಸ್‌! ಮೂವಿ ಶುರುವಾಗುತ್ತಿದ್ದಂತೆ ನೀವು ಬುದ್ಧಿವಂತರಾಗಿದ್ದರೆ ಈಗಲೇ ಎದ್ದು ಹೋಗಿ, ದಡ್ಡರಾಗಿದ್ದರೆ ಸಿನಿಮಾ ನೋಡಿ ಎನ್ನುತ್ತಾರೆ ಉಪ್ಪಿ. ಇಷ್ಟೇ ಅಲ್ಲದೆ ಬುದ್ಧಿವಂತರು ದಡ್ಡರಂತೆ ಇರುತ್ತಾರೆ, ದಡ್ಡರು ಬುದ್ಧಿವಂತರಂತೆ ಆಡ್ತಾರೆ ಎನ್ನುವುದನ್ನೂ ಹೇಳ್ತಾರೆ. ಇಂಥದ್ದೊಂದು ಪಂಚ್ ಸ್ಟೈಲ್ ಮೂಲಕ ಉಪ್ಪಿ ನಾವು ಬುದ್ಧಿವಂತರೋ ದಡ್ಡರೋ ಅಂತ ನಮ್ಮನ್ನೇ ಅವಲೋಕಿಸುವಂತೆ ಮಾಡಿ ಸಿನಿಮಾ ಶುರು ಮಾಡುತ್ತಾರೆ. ಇಂದು ಬೆಳಗ್ಗೆ 6.30ರಿಂದಲೇ ಪ್ರದರ್ಶನ ಆರಂಭವಾಗಿದೆ. ನಗರದ ವೀರೇಶ್ ಥಿಯೇಟರ್ ನಲ್ಲಿ 6.30ಕ್ಕೆ ಪ್ರದರ್ಶನ ಆರಂಭ ಆಗಿದೆ. ವೀರೇಶ್ ಥಿಯೇಟರ್ ನಲ್ಲಿ ಬೆಳಗಿನ 6.30ರ ಶೋ ಹಾಗೂ 10 ಗಂಟೆ ಮಾರ್ನಿಂಗ್ ಶೋ ಹೌಸ್ ಫುಲ್ ಆಗಿವೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.