NEWS

IND vs NZ: ಭಾರತೀಯ ಅಭಿಮಾನಿಗಳಿಗೆ ನಿರಾಶೆ! ಕಿವೀಸ್ ಮೊದಲ ದಿನಾದಾಟ ಮಳೆಗೆ ರದ್ದು! ಪಂದ್ಯ ನಡೆಯೋದು ಡೌಟು?

ಬೆಂಗಳೂರು ಟೆಸ್ಟ್​ ಪಂದ್ಯ ಮೊದಲ ದಿನ ಮಳೆಗಾಹುತಿ ಬೆಂಗಳೂರು: ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ತಂಡಗಳ ನಡುವಿನ ಮೂರು ಟೆಸ್ಟ್ ಪಂದ್ಯಗಳ ಸರಣಿಯ (Test Series) ಭಾಗವಾಗಿ, ಮೊದಲ ಪಂದ್ಯ ಬುಧವಾರ ಬೆಂಗಳೂರಿನ ಚೀನಾಸ್ವಾಮಿ ಕ್ರೀಡಾಂಗಣದಲ್ಲಿ ( M.Chinnaswamy Stadium) ಆರಂಭವಾಗಬೇಕಿತ್ತು. ಆದರೆ ನಿರಂತರ ಮಳೆ ಕಾರಣ ಪಂದ್ಯದ ಮೊದಲ ದಿನ ಒಂದು ಎಸೆತ ಕಾಣದೆ ರದ್ಧಾಗಿದೆ. ವರುಣನ ಅಬ್ಬರಕ್ಕೆ ಟಾಸ್ ಕೂಡ ಸಾಧ್ಯವಾಗಲಿಲ್ಲ. ಮಧ್ಯಾಹ್ನ 2:30ರ ಸುಮಾರಿಗೆ ಮೊದಲ ದಿನದ ಆಟವನ್ನು ರದ್ದುಗೊಳಿಸುವುದಾಗಿ ಅಂಪೈರ್‌ಗಳು ಘೋಷಿಸಿದರು. ಬೆಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಕವರ್​ಗಳನ್ನು ಕೂಡ ತೆರೆದಿಲ್ಲ. ಇನ್ನೂ ಎರಡು ದಿನ ಇದೇ ವಾತಾವರಣೆ ಇರಲಿದ್ದು, ಪಂದ್ಯದಲ್ಲಿ ಫಲಿತಾಂಶ ಪಡೆಯುವುದು ಅಸಾಧ್ಯ ಎನ್ನಲಾಗುತ್ತಿದೆ. ಪಂದ್ಯ ನಡೆಯೋದೇ ಡೌಟ್ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಭಾರೀ ಮಳೆಯಿಂದಾಗಿ ಶಾಲೆಗಳಿಗೂ ರಜೆ ನೀಡಲಾಗಿದೆ. ಮಳೆ ಕಾರಣದಿಂದಾಗಿ ಮಂಗಳವಾರ ರೋಹಿತ್ ಪಡೆಯ ಅಭ್ಯಾಸ ಸೆಷನ್ ಕೂಡ ಸ್ಥಗಿತಗೊಂಡಿತ್ತು. ಆದರೆ, ಪಂದ್ಯ ನಡೆಯುವ ಸ್ಥಳವಾದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉತ್ತಮ ಒಳಚರಂಡಿ ವ್ಯವಸ್ಥೆ ಇರುವುದರಿಂದ ಮಳೆ ಕಡಿಮೆಯಾದ ಬಳಿಕ ಪಂದ್ಯ ಆರಂಭವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಬೆಂಗಳೂರಿನಲ್ಲಿ ಎರಡು ದಿನ ನಿರಂತರ ಮಳೆಯಾಗಲಿದೆ. ಹಾಗೆ ನಡೆದರೆ ಇಂದು ಮತ್ತು ನಾಳೆ ಪಂದ್ಯ ನಡೆಯುವ ಸಾಧ್ಯತೆ ಕಡಿಮೆ ಎಂದೇ ಹೇಳಬಹುದು. ಭಾರತದಲ್ಲಿ ಸರಣಿಯನ್ನೇ ಗೆದ್ದಿಲ್ಲ ಟೆಸ್ಟ್ ಮಾದರಿಯಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದೆ. ಭಾರತ ತಂಡ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 12 ಟೆಸ್ಟ್ ಸರಣಿಗಳನ್ನು ಆಡಿದೆ. ಭಾರತ ಹತ್ತು ಸರಣಿಗಳನ್ನು ಗೆದ್ದಿದೆ. ಎರಡು ಡ್ರಾನಲ್ಲಿ ಅಂತ್ಯವಾಗಿವೆ. ವಿಶೇಷವೆಂದರೆ ಕಿವೀಸ್ ಭಾರತದ ನೆಲದಲ್ಲಿ ಇದುವರೆಗೂ ಟೆಸ್ಟ್ ಸರಣಿ ಗೆದ್ದಿಲ್ಲ. ಇದನ್ನೂ ಓದಿ: ಆ ಒಂದು ನಿರ್ಧಾರದಿಂದ ಕೊಹ್ಲಿ, ಸಚಿನ್, ಧೋನಿಯನ್ನೇ ಹಿಂದಿಕ್ಕಿ 1450 ಕೋಟಿ ಒಡೆಯನಾದ ಮಾಜಿ ಕ್ರಿಕೆಟರ್ ಕಿವೀಸ್ ಮಣಿಸಿದ್ರೆ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಕ್ಕಾ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ತವರು ನೆಲದಲ್ಲಿ 36 ಟೆಸ್ಟ್ ಪಂದ್ಯಗಳನ್ನು ಆಡಿದೆ. 17 ಪಂದ್ಯಗಳನ್ನು ಗೆದ್ದು ಎರಡು ಪಂದ್ಯಗಳಲ್ಲಿ ಸೋತಿದೆ. 17 ಪಂದ್ಯಗಳು ಡ್ರಾ ಆಗಿವೆ. ಒಟ್ಟಿನಲ್ಲಿ ನ್ಯೂಜಿಲೆಂಡ್ ತಂಡ ಭಾರತದಲ್ಲಿ ಭಾರತ ತಂಡದ ವಿರುದ್ಧ ಒಂದೇ ಒಂದು ಟೆಸ್ಟ್ ಸರಣಿಯನ್ನ ಗೆದ್ದಿಲ್ಲ. ಆದರೆ, ಈ ಬಾರಿ ನ್ಯೂಜಿಲೆಂಡ್ ತಂಡ ಭಾರತವನ್ನು ಟೆಸ್ಟ್ ಪಂದ್ಯದಲ್ಲಿ ಸೋಲಿಸುವ ಸಂಕಲ್ಪ ತೊಟ್ಟಿದೆ. ಆದರೆ, ಬಲಿಷ್ಠ ಭಾರತ ತಂಡ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಶ್ರೀಲಂಕಾ ವಿರುದ್ಧ ಸೋತು ಸುಣ್ಣವಾಗಿರುವ ಕಿವೀಸ್ ಆಟಗಾರರನ್ನು ಬಗ್ಗಬಡಿದು ವಿಶ್ವಟೆಸ್ಟ್​ ಚಾಂಪಿಯನ್​ಶಿಪ್​ಗೆ ಎಂಟ್ರಿಕೊಡಲು ಸಿದ್ಧವಾಗುತ್ತಿದೆ. 8 ಪಂದ್ಯದಲ್ಲಿ 5 ಗೆದ್ರೆ WTC ಫೈನಲ್ ಚಾನ್ಸ್ ಸುಲಭ ಭಾರತ ತಂಡ ಡಬ್ಲ್ಯುಟಿಸಿ ಫೈನಲ್‌ನ ಮೇಲೆ ಕಣ್ಣಿಟ್ಟಿದೆ. ಟೀಂ ಇಂಡಿಯಾ ಇನ್ನೂ ಎಂಟು ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ. ಅದರಲ್ಲಿ ನ್ಯೂಜಿಲೆಂಡ್ ವಿರುದ್ಧ ಮೂರು ಹಾಗೂ ಆಸ್ಟ್ರೇಲಿಯಾ ವಿರುದ್ಧ ಐದು ಟೆಸ್ಟ್ ಪಂದ್ಯಗಳು ನಡೆಯಲಿವೆ. ಈ ಎಂಟು ಟೆಸ್ಟ್ ಪಂದ್ಯಗಳಲ್ಲಿ ರೋಹಿತ್ ಸೇನೆ ಐದು ಪಂದ್ಯಗಳನ್ನು ಗೆದ್ದರೆ, ಯಾವುದೇ ಅನುಮಾನವಿಲ್ಲದೆ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಕಿವೀಸ್​ ವಿರುದ್ಧ ತವರಿನಲ್ಲಿ ನಡೆಯುವುದರಿಂದ ಮೂರು ಟೆಸ್ಟ್ ಪಂದ್ಯಗಳನ್ನು ಗೆದ್ದು ಕ್ಲೀನ್ ಸ್ವೀಪ್ ಮಾಡುವ ಮೂಲಕ ಟೀಮ್ ಇಂಡಿಯಾ ಡಬ್ಲ್ಯುಟಿಸಿ ಫೈನಲ್ ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಕಿವೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ (ಅಕ್ಟೋಬರ್ 24-28) ಪುಣೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ 2ನೇ ಟೆಸ್ಟ್ ಹಾಗೂ ವಾಂಖೆಡೆಯಲ್ಲಿ 3ನೇ ಟೆಸ್ಟ್ ನವೆಂಬರ್​ 1ರಿಂದ 5ರವರೆಗೆ ನಡೆಯಲಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.