NEWS

Agriculture Subsidy: ಕೃಷಿಕರೇ ಗಮನಿಸಿ, ಸಹಾಯಧನಕ್ಕಾಗಿ ಈಗಲೇ ಹೀಗೆ ಅರ್ಜಿ ಸಲ್ಲಿಸಿ

ಸಾಂದರ್ಭಿಕ ಚಿತ್ರ ಹುಬ್ಬಳ್ಳಿ: ಸಂಬಾರು ಬೆಳೆಗಾರರಿಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 2024 - 25 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ವತಿಯಿಂದ ಸಂಬಾರು ಬೆಳೆಗಾರರಿಂದ ಈ ಅರ್ಜಿಯನ್ನು ಆಹ್ವಾನಿಸಲಾಗಿದೆ. ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯ ತೋಟಗಾರಿಕೆ ನಿಗಮ ಮತ್ತು ಮಂಡಳಿಗಳಿಗೆ ಸಹಾಯಧನ ಉಪಯೋಜನೆಯಡಿ ಯಾಂತ್ರೀಕರಣ ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಅನುಮೋದಿತ ಸರಬರಾಜುದಾರರು, ಕಂಪನಿಗಳಿಂದ ರೈತರು ಖರೀದಿಸುವ ಅನುಮೋದಿತ ಯಂತ್ರೋಪಕರಣಗಳಿಗೆ ಹಾಗೂ ಸಂಬಾರು ಬೆಳೆಗಳ ಪ್ರಾಥಮಿಕ ಸಂಸ್ಕರಣಾ ಘಟಕ, ಸೌರ ಶಾಖ ಘಟಕಗಳಿಗೆ ಇಲಾಖಾ ಮಾರ್ಗಸೂಚಿಗಳನ್ವಯ ರಾಜ್ಯದ ಆಸಕ್ತ ಸಂಬಾರು ಬೆಳೆಗಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವುದು ಹೇಗೆ? ರೈತರು ಮಂಡಳಿಯ ಜಾಲತಾಣದ ಮೂಲಕ ಅರ್ಜಿಗಳನ್ನು ಪಡೆಯಬಹುದು. ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ. ಆಸಕ್ತಿಯುಳ್ಳ ಸಂಬಾರು ಬೆಳೆಗಾರರು ಸಹಾಯಧನಕ್ಕಾಗಿ ಮಂಡಳಿಗೆ ಜುಲೈ 20 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಮೊದಲು ಬಂದವರಿಗೆ ನಿಯಮಾನುಸಾರ ಮೊದಲ ಆದ್ಯತೆ ನೀಡುವ ಮೂಲಕ ನಿಗದಿಪಡಿಸಿದ ಆರ್ಥಿಕ ಹಾಗೂ ಭೌತಿಕ ಗುರಿಗಳ ಮಿತಿಯಲ್ಲಿ ಸಹಾಯಧನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಗೆ ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ, ನೇಕಾರ ಭವನ, ವಿದ್ಯಾನಗರ, ಹುಬ್ಬಳ್ಳಿ ಕಾರ್ಯಾಲಯ ಅಥವಾ ದೂರವಾಣಿ ಸಂಖ್ಯೆ 0836-2375030 ಸಂಪರ್ಕಿಸುವಂತೆ ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯ ಪ್ರಧಾನ ವ್ಯವಸ್ಥಾಪಕರು ಮಾಹಿತಿ ನೀಡಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಹಣ ಬಿಡುಗಡೆ ಜೂನ್ 18 ರಂದು ಪ್ರಧಾನಿ ನರೇಂದ್ರ ಮೋದಿ 9.3 ಕೋಟಿ ರೈತರಿಗೆ ಪ್ರಯೋಜನವಾಗಲು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ 17 ನೇ ಹಂತದ ಹಣವನ್ನು ಬಿಡುಗಡೆ ಮಾಡಿದ್ದಾರೆ. ಈ ಉದ್ದೇಶಕ್ಕಾಗಿ ರೂ.20,000 ಕೋಟಿಗಳ ಬಜೆಟ್ ಅನ್ನು ನಿಗದಿಪಡಿಸಲಾಗಿದೆ. ಇದನ್ನೂ ಓದಿ: Yediyur Elephant: ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿ ದೇಗುಲದ ಆನೆ ಗಂಗಾಶ್ರೀ ನಿಧನ; ಭಕ್ತರ ಕಂಬನಿ! ಪ್ರಧಾನ ಮಂತ್ರಿ ಕಿಸಾನ್ ಯೋಜನೆಯು ಕೇಂದ್ರ ಸರ್ಕಾರವು ರೈತರ ಅನುಕೂಲಕ್ಕಾಗಿ ಪ್ರಾರಂಭಿಸಿರುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ರೈತರನ್ನು ಆರ್ಥಿಕವಾಗಿ ಬೆಂಬಲಿಸುವ ಮುಖ್ಯ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಿದ ನಂತರ ಪ್ರತಿ ವರ್ಷ ರೈತರ ಖಾತೆಗೆ 6,000 ಜಮಾ ಮಾಡಲಾಗುತ್ತದೆ. ಈ ಯೋಜನೆಯನ್ನು ಫೆಬ್ರವರಿ 2019 ರಲ್ಲಿ ಜಾರಿಗೆ ತರಲಾಯಿತು. ಅಂದಿನಿಂದ ರೈತರಿಗೆ ಅವರ ಬೆಳೆಗಳಿಗೆ ಸಹಾಯ ಮಾಡಲಾಗುತ್ತಿದೆ. ವಾರ್ಷಿಕ 6,000 ರೂಪಾಯಿಗಳನ್ನು ಮೂರು ಕಂತುಗಳಲ್ಲಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. ಕೇಂದ್ರವು ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್, ಡಿಸೆಂಬರ್-ಮಾರ್ಚ್ ಅವಧಿಯಲ್ಲಿ ಪ್ರತಿ ಕಂತಿನಲ್ಲಿ ಎಕರೆಗೆ 2 ಸಾವಿರದಂತೆ ಈ ಆರ್ಥಿಕ ಸಹಾಯವನ್ನು ನೀಡುತ್ತಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.