NEWS

HD Deve Gowda-Siddaramaiah: ಮುಖ್ಯಮಂತ್ರಿಗಿರುವ ಗರ್ವದ ಸೊಕ್ಕನ್ನು ಮುರಿಯಬೇಕು! ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟಿದ ದೇವೇಗೌಡರು

ಸಿಎಂ ವಿರುದ್ಧ ದೇವೇಗೌಡರ ಆಕ್ರೋಶ ರಾಮನಗರ: ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು (HD Deve Gowda) ಗುಡುಗಿದ್ದಾರೆ. ಚನ್ನಪಟ್ಟಣದ (Channapatna) ಜೆ. ಬ್ಯಾಡರಹಳ್ಳಿಯಲ್ಲಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಪರ ಭರ್ಜರಿ ಪ್ರಚಾರ ನಡೆಸಿದ ದೇವೇಗೌಡರು, ಬಹಿರಂಗ ಸಭೆ ನಡೆಸಿದ್ರು. ಈ ವೇಳೆ ಮಾತನಾಡಿದ ದೇವೇಗೌಡರು, ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಮುಖ್ಯಮಂತ್ರಿಗಳಿಗಿರುವ ಗರ್ವದ ಸೊಕ್ಕನ್ನು ಮುರಿಯಬೇಕು ಅಂತ ಆಕ್ರೋಶ ವ್ಯಕ್ತಪಡಿಸಿದ್ರು. ಯೋಗೇಶ್ವರ್ ವಿರುದ್ಧ ದೇವೇಗೌಡರ ಆಕ್ರೋಶ ಯಾರು ಕಾಂಗ್ರೆಸ್‌ನಿಂದ ನಿಂತಿದ್ದಾರೋ ಅವರನ್ನು ಕೂಡ ಬೇಡಪ್ಪ ನೀನು ಜೆಡಿಎಸ್‌ನಿಂದ ನಿಂತ್ಕೋ ಅಂತ ಹೇಳಿದ್ವಿ. ಅಲ್ಲದೇ ಬಿಜೆಪಿ ಪಕ್ಷದ ಅಧ್ಯಕ್ಷ ನಡ್ಡಾ ಅವ್ರು ಕೂಡ ಬಿಜೆಪಿಯಿಂದ ಸ್ಪರ್ಧೆಗೆ ಸೂಚಿಸಿದ್ರು. ಯಾವ ಮನುಷ್ಯನನ್ನು ಹಾಲಿ ವಿಧಾನ ಪರಿಷತ್ ಸದಸ್ಯರಾಗಿರುವ ಕಾಂಗ್ರೆಸ್ ನಲ್ಲಿ ಕನ್ವರ್ಟರ್ಡ್ ಆಗಿದ್ದಾರೋ ನೀನು ಪಕ್ಷಕ್ಕೆ ದ್ರೋಹ ಮಾಡಬೇಡ, ನೀನು ಪಕ್ಷದಿಂದಲೇ ನಿಲ್ಲುವಂತೆ ನಡ್ಡಾ ಹೇಳಿದ್ರು. ಆದರೆ ಅದನ್ನು ತಿರಸ್ಕಾರ ಮಾಡಿದ್ರು. ಅವರು ಬಾರಿ ದೊಡ್ಡವರು ಅಂತ ಯೋಗೇಶ್ವರ್ ವಿರುದ್ಧ ಪರೋಕ್ಷವಾಗಿ ಗೌಡರು ಕುಟುಕಿದ್ರು. ಈ ರಾಜ್ಯದ ಮುಖ್ಯಮಂತ್ರಿಗೆ ಗರ್ವ ಇದೆ ಚನ್ನಪಟ್ಟಣಕ್ಕೆ ಆಂಬ್ಯುಲೆನ್ಸ್ನಿಂದ ವೆಂಟಿಲೇಟರ್‌ನಲ್ಲಿ ಪ್ರಚಾರಕ್ಕೆ ಬರ್ತಾರೆ ಅಂತಾ ಒಬ್ಬ ಬಹಳ ದೊಡ್ಡ ನಾಯಕ ಹೇಳಿದ್ದಾರೆ ಅಂತ ಡಿಕೆ ಸುರೇಶ್ ವಿರುದ್ಧವೂ ಗೌಡಗು ಗುಡುಗಿದ್ರು. ನಿಮ್ಮಗಳ ಆಶೀರ್ವಾದದಿಂದ ನನಗೆ ಎಷ್ಟು ಪ್ರೀತಿ ತುಂಬಿದ್ದೀರಿ. ರಾಜ್ಯದಲ್ಲಿ ಕೈಗಾರಿಕಾ ಕಾರ್ಖಾನೆಗೆ ಕುಮಾರಸ್ವಾಮಿ ಜಮೀನು ಕೇಳಿದ್ರೆ ಕುಮಾರಸ್ವಾಮಿ ಕೇಳುವ ಜಮೀನು ಕೊಡಲ್ಲ ಎಂದು ಹೇಳುವ ಗರ್ವ ಈ ರಾಜ್ಯದ ಒಬ್ಬ ಮುಖ್ಯಮಂತ್ರಿಗಿದೆ ಅಂತ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಇದನ್ನೂ ಓದಿ: HD Deve Gowda-Channapatna: ‘ಅಪೂರ್ವ ಸಹೋದರರು’, ‘ಕನ್ವರ್ಟೆಡ್ ಕಾಂಗ್ರೆಸ್ ಜೆಂಟಲ್‌ಮೆನ್’! ಚನ್ನಪಟ್ಟಣ ರಣಕಣದಲ್ಲಿ ಗೌಡರ ಗುಡುಗು ಗರ್ವದ ಸೊಕ್ಕನ್ನು ಮುರಿಯುವ ಶಕ್ತಿ ಕೊಡಿ ಅವರು ಆಡುವ ಗರ್ವದ ಮಾತನ್ನು ಅರ್ಥ ಮಾಡಿಕೊಳ್ಳಬೇಕು. ಇಂತಹ ಸರ್ಕಾರ ಇರಬೇಕೋ, ಬೇಡ್ವೋ ತೀರ್ಪು ನಿಮ್ಮದು. ಗರ್ವದ ಸೊಕ್ಕನ್ನು ಮುರಿಯುವ ಶಕ್ತಿ ಕೊಡಬೇಕು ಅಂತ ಮತದಾರರಲ್ಲಿ ದೇವೇಗೌಡರು ಮನವಿ ಮಾಡಿದ್ರು. ಇಗ್ಗಲೂರು ಅಣೆಕಟ್ಟು ಕಟ್ಟಿದ್ದೇನೆ ನಾನು ಹಿಂದೆ ಒಮ್ಮೆ ನಿಮ್ಮ ಗ್ರಾಮಕ್ಕೆ ಭೇಟಿ ಕೊಟ್ಟಿದ್ನೋ ಏನೋ ಗೊತ್ತಿಲ್ಲ. ಇಗ್ಗಲೂರು ಅಣೆಕಟ್ಟು ಕಟ್ಟಿದ್ದೇನೆ, ನಾನು 1983ರಲ್ಲಿ ನೀರಾವರಿ ಮಂತ್ರಿ ಆಗಿದ್ದಾಗ ಎಲ್ಲಿ ನಮ್ಮ ರೈತರಿಗೆ ನೀರು ಕೊಡೋಕೋ ಸಾಧ್ಯ ಇದೆಯೋ ಅಲ್ಲಿ ಉಸ್ತುವಾರಿ ಗಳ ಜೊತೆ ಬಂದು ರೈತರಿಗೆ ನೀರು ಕೊಡುವ ಪ್ರಯತ್ನ ಮಾಡಿದ್ದೇನೆ ಅಂತ ದೇವೇಗೌಡರು ಹೇಳಿದ್ರು. ನನಗೆ ಈಗ ಅಧಿಕಾರ ಇಲ್ಲ ನನಗೆ ಈವಾಗ ಯಾವುದೇ ಅಧಿಕಾರ ಇಲ್ಲ, ನಾನು ಎಲ್ಲವನ್ನೂ ಈವಾಗ ಕಳೆದುಕೊಂಡಿದ್ದೇನೆ. ನಾನು ಈಗ ಸಾಮಾನ್ಯ ರೈತನ ಮಗ, ನಿಮಗೆ ಏನೋ ಕೊಡೋಕೆ ಸಾಧ್ಯ? ನಾನು ಈ ಊರಿಗೆ ಬರುವಾಗ ದಾರಿ ಮಧ್ಯದಲ್ಲಿ ಜನ ಇಲ್ಲದಿರುವುದನ್ನು ಕಂಡು ಮನಸ್ಸಿಗೆ ಸ್ವಲ್ಪ ಕಳಂಕ ಆಗಿತ್ತು. ನಾನು ಸಾಮಾನ್ಯ ರೈತರ ಮಗನಾಗಿ ಹುಟ್ಟಿ ದೇಶ ಆಳಿದ್ದೇನೆ. ಯಾರ ಯಾರ ಹಣೆಯಲ್ಲಿ ಏನೇನು ಬರೆದಿರುತ್ತೋ ಗೊತ್ತಿಲ್ಲ ಅಂತ ಗೌಡರು ಮಾರ್ಮಿಕವಾಗಿ ನುಡಿದ್ರು. ನಾನು ತಪ್ಪು ಮಾಡಿದ್ದೇನೆ ಎನ್ನುವ ಯೋಗ್ಯತೆ ಇಲ್ಲ ಈ ಜಗತ್ತಿನಲ್ಲಿ ಜಾತಿ ಮುಖ್ಯ ಅಲ್ಲ, ನನ್ನ ಜೀವನದಲ್ಲಿ ಒಂದು ಸಣ್ಣ ತಪ್ಪಿಲ್ಲ. ಪ್ರಧಾನಿಯಾಗಿ, ಸಿಎಂ ಆಗಿ, ವಿರೋಧ ಪಕ್ಷದ ನಾಯಕನಾಗಿ ನಾನು ಒಂದು ತಪ್ಪು ಮಾಡಿದ್ದೇನೆ ಅಂತಾ ಹೇಳೋಕೆ ಯಾವ ಒಬ್ಬನಿಗೂ ಯೋಗ್ಯತೆ ಇಲ್ಲ ಅಂತ ದೇವೇಗೌಡರು ಗರ್ಜಿಸಿದ್ರು. (ವರದಿ: ಕೃಷ್ಣ ಜಿ.ವಿ., ನ್ಯೂಸ್ 18 ಕನ್ನಡ) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.