NEWS

UI Fans Decode: ಪ್ರೇಕ್ಷಕರು ಕಂಡ ಯುಐ! ಏನಿಲ್ಲಾ, ಏನೇನಿಲ್ಲ ಅನ್ನೋದೇ ಕನ್ಫೂಸ್‌ ಎಂದ ಅಭಿಮಾನಿ!

ಪ್ರೇಕ್ಷಕರು ಕಂಡ ಯುಐ ಉಪೇಂದ್ರ(Upendra) ನಿರ್ದೇಶನದ ಸಿನಿಮಾಗಳೇ ಹಾಗೇ ಒಮ್ಮೆ ನೋಡಿದ್ರೆ ಸಂಪೂರ್ಣ ಅರ್ಥವಾಗೋದಿಲ್ಲ ಅನ್ನೋದು ಪ್ರೇಕ್ಷಕರ ಮಾತು. ಯುಐ ಸಿನಿಮಾದ ಕ್ಲೈಮ್ಯಾಕ್ಸ್‌ (UI Movie Climax) ಕೂಡ ಹಾಗೇ ಅಂತಿದ್ದಾರೆ ಅಭಿಮಾನಿಗಳು. ನೀವು ನಿರೀಕ್ಷೆ ಮಾಡಿದಂತೆ ಖಂಡಿತ ಸಿನಿಮಾ ಇರೋಲ್ಲ. ನೀವು ಸಿನಿಮಾ ನೋಡಿ ಅಂತ ಉಪೇಂದ್ರ ಹೇಳಿದ್ದರು. ಅದ್ರಂತೆ ಯುಐ ಸಿನಿಮಾ ಇದೆ. ಜನರಿಗೆ ಕನ್ನಡಿ (Mirror) ಹಿಡಿದು ರಿಯಾಲಿಟಿ (Reality) ತೋರಿಸಿದ್ದಾರೆ ಉಪೇಂದ್ರ. ಇನ್ನೂ ಅಭಿಮಾನಿಗಳು ಯುಐ ಸಿನಿಮಾ ನೋಡಿ ಬೇರೆ ಬೇರೆ ರೀತಿಯಲ್ಲಿ ಡಿಕೋಡ್ ಮಾಡುತ್ತಿದ್ದಾರೆ. U&I ಅಂದ್ರೆ “ಉಪೇಂದ್ರ ಮತ್ತು ಪ್ರೇಕ್ಷಕರು”! ಶಿವಮೊಗ್ಗದ ಶ್ರೀಧರ್‌ ಎಂಬುವವರು ಯುಐಗೆ ಬೇರೆ ಅರ್ಥ ನೀಡಿದ್ದಾರೆ. ಯುಐ ಅಂದ್ರೆ ಉಪೇಂದ್ರ ಮತ್ತು ಪ್ರೇಕ್ಷಕರು ಎಂದಿದ್ದಾರೆ. ಭಾರೀ ಕುತೂಹಲದಿಂದ ಯುಐ ಸಿನಿಮಾ ನೋಡಿದ್ದಾರೆ ಶ್ರೀಧರ್‌. ಅನೇಕ ಹೆಸರಾಂತ ನಿರ್ದೇಶಕರು, ದೊಡ್ಡ ದೊಡ್ಡ ವ್ಯಕ್ತಿಗಳು ಸಾಮಾನ್ಯ ಪ್ರೇಕ್ಷಕರ ರೀತಿ, ಉಪೇಂದ್ರ ಅವರು ಏನ್‌ ಮಾಡಿರಬಹುದು ಅಂತ ಯುಐ ಸಿನಿಮಾ ನೋಡಿದ್ರು ಅಂತ ಹೇಳಿದ್ದಾರೆ. ಯುಐ ಸಿನಿಮಾ ಟೈಟಲ್‌ ಸಿಕ್ಕಾಪಟ್ಟೆ ವಿಶೇಷ! ಇನ್ನೂ ಶ್ರೀಧರ್‌ ಅವರು ಯುಐ ಟೈಟಕ್‌ ಕಾರ್ಡ್ ಸಿಕ್ಕಾಪಟ್ಟೆ ಥ್ರಿಲ್‌ ಕೊಡ್ತು ಅಂದಿದ್ದಾರೆ. ಆದ್ರೆ ಸಿನಿಮಾದ ಕಥೆ-ಕವನ-ವಚನ-ಛಾಯಾಗ್ರಹಣ-ಸಂಕಲನ ಟೋಟಲ್‌ ಆಗಿ ಯುಐ ಸಿನಿಮಾದಲ್ಲಿ ಏನಿಲ್ಲಾ ಏನೇನಿಲ್ಲ ಅನ್ನೋದೇ ಕನ್ಫೂಸ್‌ ಎಂದಿದ್ದಾರೆ. “ಗೊತ್ತಾದ್ರು ಒಂಥರ ಗೊತ್ತಾಗಲ್ಲ. ಒಂದು ನಲವತ್ತು ಪರ್ಸೆಂಟ್‌‌ ಎಂಟರ್‌‌ಟೈನ್ಮೆಂಟ್‌, ಉಳಿದ ಆರವತ್ತು ಪರ್ಸೆಂಟ್‌ ಫಿಲಾಸಫಿ. ಕೆಲವರಿಗೆ ರಂಜನೆ ಎಂದೆನಿಸಬಹುದು, ಇನ್ನೂ ಕೆಲವರಿಗೆ ಭೋದನೆ ಅನ್ನಿಸಬಹುದು. UI ನೋಡಲು ಪ್ರೇಕ್ಷಕರಿಗೆ ಫೋಕಸ್ ಬೇಕು.. ಅದನ್ನೇ ಬುದ್ಧಿವಂತ ಉಪ್ಪಿ ಸರ್ ಈ ಚಿತ್ರ ಶುರುವಿನಲ್ಲೆ ಫೋಕಸ್ ಮಾಡಿ ನೋಡಿ ಅಂತಾರೆ” ಎಂದಿದ್ದಾರೆ ಶ್ರೀಧರ್‌. “ಗೊತ್ತಿದ್ದು ಗೊತ್ತಿಲ್ಲದ ಹಾಗೇ ಇದ್ದೀರಾ” “ಇವತ್ತಿನ ಸಮಾಜ ಹೆಂಗಾಗಿದೆ ಅನ್ನೊದು ನಿಮಗೆ ಗೊತ್ತು. ಆದ್ರೂ ನಿಮಗೆ ಗೊತ್ತಾಗಿಲ್ದಂಗೆ ಇದ್ದಿರಾ ಅಂತಾರೆ. ಈ ಹಿಂದೆ ಸ್ಕ್ರೀನ್ ಮೇಲೆ ರಿಯಲ್ ಲೈಫ್ ಸ್ಟೋರಿನಾ ರೀಲ್ ರೂಪದಲ್ಲಿ ನೋಡಿದ್ದೀರಾ. ರೀಲ್‌ನಲ್ಲಿ ಬಂದಿದ್ದನ್ನ ರಿಯಲ್ ಆಗಿಯೂ ನೋಡಿರ್ತಿರಾ. ಆದ್ರೆ UI ಬಂದ ನಂತರ ಫ್ಯೂಚರ್ ಹೆಂಗಿರುತ್ತೆ ಅನ್ನೋದನ್ನಈ ಚಿತ್ರದ ಮೂಲಕ ತೋರಿಸಿದ್ದೇನೆ ಅನ್ನೋದು ಉಪೇಂದ್ರ ಅವರ ಯೊಚನೆ ಪ್ಲಸ್ ಪ್ರಜಾಕೀಯ ಯೋಜನೆ” ಅಂತಾರೆ ಶ್ರೀಧರ್‌. ಇದನ್ನೂ ಓದಿ: ಯುಐ ಸಿನಿಮಾ ನೋಡಿ ಟೈಟಲ್‌ ಡಿಕೋಡ್ ಮಾಡಿದ ಅಭಿಮಾನಿ! ಹೇಳಿದ್ದೇನು? ಕೊಂಬು ಇರೋ ಕಪ್ಪು ಕುದುರೆಯ ಮೇಲೆ ಬರೋ ಕಲ್ಕಿ ಭಗವಾನ್, ಅಹಿಂಸೆ ತತ್ವ ಸಾರೋ ಶಾಂತಿ ಸಂದೇಶದ ಸತ್ಯ. ಕಲ್ಕಿ ಮತ್ತು ಸತ್ಯನ ಜೊತೆಗೆ ನಮ್ಮ ನೆಚ್ಚಿನ ನಿರ್ದೇಶಕ ಉಪೇಂದ್ರ. ಇನ್ನೂ ಉಳಿದಂತೆ ಇತ್ಯಾದಿ ಪಾತ್ರಗಳು ಇರೋ ಸಿನಿಮಾನೇ ಯುಐ ಎಂದಿದ್ದಾರೆ. ಸಿನಿಮಾ ಹೇಗಿದೆ ಅಂತ ಹೇಳೋದು ಕಷ್ಟ ಎಂದಿದ್ದಾರೆ ಶ್ರೀಧರ್‌. ಯುಐ ಸಿನಿಮಾ ಸೂಪರ್‌ ಹಾಗೂ ಉಪ್ಪಿ-2 ಸಿನಿಮಾಗಳ ಸಮಾಗಮ ಅಂತ ಹೇಳಬಹುದು ಎಂದಿದ್ದಾರೆ. ಇದು ಅವರವರ ಭಾವಕ್ಕೆ ತಕ್ಕಂತೆ. ಬುದ್ಧಿವಂತ ಪ್ರೇಕ್ಷಕರು ನೀವು ನೋಡಬೇಕು.ನೀವು ನೋಡಿ ತೀರ್ಪು ಕೊಟ್ರೆನೇ ಅದಕ್ಕೊಂದು ಬೆಲೆ, ಕಳೆ ಎಂದಿದ್ದಾರೆ ಶ್ರೀಧರ್‌. ಕ್ಲೈಮ್ಯಾಕ್ಸ್‌ನಲ್ಲಿ ಉಪ್ಪಿ ಹೇಳಿದ್ದೇನು? ಉಪೇಂದ್ರ ಕ್ಲೈಮ್ಯಾಕ್ಸ್‌‌ನಲ್ಲಿ ಜನರು ಏನು ಮಾಡುತ್ತಾರೋ ಅದನ್ನೇ ತೋರಿಸಿದ್ದಾರೆ. ಲಾಸ್ಟ್‌‌ನಲ್ಲಿ UI ಅಂತ ಲೆಟರ್ಸ್‌ ತೋರಿಸಿದ್ದಾರೆ. ಆ ಲೆಟರ್ಸ್‌ ಒಳಗಡೆ ಇನ್ಸ್‌‌ಸ್ಟಾಗ್ರಾಂ ರೀಲ್ಸ್‌, ಫೇಸ್‌ಬುಕ್‌, ಯೂಟ್ಯೂಬ್‌ ಮಾಧ್ಯಮದ ಚಿತ್ರಣಗಳನ್ನು ತಂದಿದ್ದಾರೆ. ಸೂಪರ್‌ ಸಿನಿಮಾದಲ್ಲಿ ಪ್ರಜೆಗಳನ್ನು ಸತ್‌ಪ್ರಜೆಗಳು ಅಂತ ಉಪೇಂದ್ರ ಹೇಳಿದ್ದರು. ಇಲ್ಲೂ ಕೂಡ ಏನೇ ಹೇಳಿದ್ರೂ ನೀವು ಕೇಳಲ್ಲ. ಜನ ಬದಲಾಗಲ್ಲ. ಸಿನಿಮಾ ನೋಡಿದ ಮೇಲೆ ಮೊಬೈಲ್‌ ಹಿಡಿದುಕೊಂಡು ಸೋಷಿಯಲ್‌ ಮೀಡಿಯಾ ನೋಡಿಕೊಂಡು ಕಾಲ ಹರಣ ಮಾಡ್ತೀರಾ ಅನ್ನೋ ಅರ್ಥದಲ್ಲಿ ಹೇಳಿದ್ದಾರೆ ಅಂತಿದ್ದಾರೆ ಅಭಿಮಾನಿಗಳು. (ವಿಶೇಷ ಬರಹ: ಶ್ರೀಧರ್ ಶಿವಮೊಗ್ಗ- ಮಾಜಿ ಪತ್ರಕರ್ತರು ಹಾಗೂ ಉಪೇಂದ್ರ ಅಭಿಮಾನಿ) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.