NEWS

Kichcha Sudeep: ಐವರು ಹೀರೋಗಳಿಂದ ಕನ್ನಡ ಸಿನಿಮಾ ಇಂಡಸ್ಟ್ರಿ ಬೆಳೆಯೋದಿಲ್ಲ ಎಂದ ಕಿಚ್ಚ! ಈ ಮಾತೇಕೆ ಬಂತು?

ಕನ್ನಡದವರೇ ಕನ್ನಡದ ಸಿನಿಮಾ ನೋಡ್ತಿಲ್ಲ; ಐವರು ಹೀರೋಗಳಿಂದ ಇಂಡಸ್ಟ್ರಿ ಬೆಳೆಯೋದಿಲ್ಲ! ಕಿಚ್ಚ ಹೀಗ್ಯಾಕ್ ಹೇಳಿರೋದು? ಸ್ಯಾಂಡಲ್‌ವುಡ್‌ನ ಕಿಚ್ಚ ಸುದೀಪ್ (Sudeep) ಒಂದು ಬೇಸರ ವ್ಯಕ್ತಪಡಿಸಿದ್ದಾರೆ. ಕನ್ನಡದವ್ರು ಕನ್ನಡದ (Kannada) ಹೊಸಬರ ಚಿತ್ರ ನೋಡೋದಿಲ್ಲ. ಬೇರೆ ರಾಜ್ಯದ ಹೊಸಬರ ಚಿತ್ರಗಳು (Newcomer Movie) ಕನ್ನಡದಲ್ಲಿ ಬಂದ್ರೆ ಅವುಗಳನ್ನ ನೋಡೋಕೆ ಥಿಯೇಟರ್‌ಗೆ ಹೋಗುತ್ತಾರೆ. ಈ ಮೂಲಕ ಅವರ ಚಿತ್ರಗಳನ್ನ ಗೆಲ್ಲಿಸುತ್ತಾರೆ. ನಮ್ಮಲ್ಲೂ ಒಳ್ಳೆ ಸಿನಿಮಾಗಳು ಬಂದಿವೆ. ಆದರೆ, ಆಯಾ ಚಿತ್ರಗಳನ್ನ ಕನ್ನಡದವ್ರು ನೋಡೋದೇ ಇಲ್ಲ. ಇದರಿಂದ ಸಿನಿಮಾಗಳು (Movies) ಸೋತು ಹೋಗುತ್ತವೆ. ಮನೆಯಲ್ಲಿರೋ ಥಿಯೇಟರ್‌ನಲ್ಲಿ ನಮ್ಮವರ ಆ ಒಳ್ಳೆ ಸಿನಿಮಾಗಳನ್ನ ನೋಡಿರುತ್ತೇವೆ. ಆದರೆ, ಅವುಗಳು ಗೆಲ್ಲದೇ ಹೋದಾಗ ಬೇಸರ ಆಗುತ್ತದೆ ಅಂತಲೇ ಸುದೀಪ್ ಹೇಳಿಕೊಂಡಿದ್ದಾರೆ. ಇವರ ಈ ಮಾತುಗಳ ಸಂಪೂರ್ಣ ವಿವರ ಇಲ್ಲಿದೆ ಓದಿ. ನಮ್ಮವರ ಸಿನಿಮಾಗಳು ಓಡ್ಬೇಕು ನಮ್ಮಲ್ಲೂ ಅದ್ಭುತ ಚಿತ್ರಗಳು ಇವೆ. ಅದ್ಭುತ ರೈಟರ್ಸ್ ಇದ್ದಾರೆ. ಆದರೆ, ಹೊಸಬರ ಚಿತ್ರಗಳು ಅಂತ ಸೋತು ಹೋಗುತ್ತೆ. ಅದೆಷ್ಟೋ ಹೊಸ ಸಿನಿಮಾಗಳ ಟೀಸರ್‌, ಟ್ರೈಲರ್ ನೋಡಿ ಖುಷಿಪಡುತ್ತೇನೆ. ಹಾಗೆ ಹೊಸಬರು ತೋರೋ ಈ ಎಲ್ಲ ಟೀಸರ್ ಮತ್ತು ಟ್ರೈಲರ್‌ಗಳು ಚೆನ್ನಾಗಿರುತ್ತವೆ. ಆಯಾ ಟೀಮ್‌ಗಳ ಮೊಗದಲ್ಲಿ ಹೊಸ ಹೊಸ ಕನಸುಗಳನ್ನೂ ಕಾಣುತ್ತೇನೆ. ಆದರೆ, ಅಂತಹ ಒಳ್ಳೆ ಸಿನಿಮಾಗಳು ಥಿಯೇಟರ್‌ಗೆ ಬಂದಾಗ ಓಡೋದೇ ಇಲ್ಲ. ಯಾಕೆ ಓಡೋದಿಲ್ಲ ಅಂತ ಯೋಚನೆ ಮಾಡಿದ್ರೆ, ಅಲ್ಲಿ ಜನ ಬರಲೇ ಇಲ್ಲ ಅನ್ನೋ ಮಾತು ಕೇಳಿ ಬರುತ್ತದೆ. ಆಗ ಅದನ್ನ ಕೇಳಿ ತುಂಬಾನೆ ಬೇಸರ ಆಗುತ್ತದೆ. ಆದರೆ, ಇನ್ನೂ ಬೇಸರ ಆಗೋದು ಯಾವಾಗ ಗೊತ್ತಾ? ಬೇರೆಯವರ ಚಿತ್ರಗಳು ಗೆಲ್ಲುತ್ತವೆ ನಮ್ಮಲ್ಲಿ ಬೇರೆ ಭಾಷೆಯ ಚಿತ್ರಗಳು ಬರುತ್ತವೆ. ಅವು ಹೊಸಬರ ಚಿತ್ರಗಳೇ ಆಗಿರುತ್ತವೆ. ಅಂತಹ ಚಿತ್ರಗಳನ್ನ ಕನ್ನಡಿಗರೇ ನೋಡುತ್ತಾರೆ. ನೋಡಿ ಗೆಲ್ಲಿಸುತ್ತಾರೆ. ಇಂತಹ ವಿಷಯ ತಿಳಿದುಕೊಂಡಾಗ ಬೇಸರ ಆಗುತ್ತದೆ. ಒಂದು ಪ್ರಶ್ನೆ ಕೂಡ ಹುಟ್ಟಿಕೊಳ್ಳುತ್ತದೆ. ಇದನ್ನೂ ಓದಿ: Max Movie: ಮ್ಯಾಕ್ಸ್ ಫ್ಯಾನ್ಸ್‌ಗಾಗಿ ಮಾಡಿರೋ ಸಿನಿಮಾ ಅಲ್ಲ, ಆದ್ರೆ.. ಕಿಚ್ಚ ಹೀಗೆ ಹೇಳಿದ್ಯಾಕೆ? ಯಾಕೆ ಹೀಗೆ.? ನಮ್ಮವರ ಸಿನಿಮಾಗಳನ್ನ ಗೆಲ್ಲಿಸದೇ ಅದೇ ಕನ್ನಡಿಗರು, ಪರ ಭಾಷೆಯ ಹೊಸಬರ ಚಿತ್ರಗಳನ್ನ ಗೆಲ್ಲಿಸುತ್ತಾರೆ. ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಅಲ್ವೇ ಅಲ್ಲ. ಇದರಿಂದ ಕನ್ನಡ ಇಂಡಸ್ಟ್ರಿ ಬೆಳೆಯೋದಿಲ್ಲ ಅಂತಲೇ ಕಿಚ್ಚ ಸುದೀಪ್ ಹೇಳಿಕೊಂಡಿದ್ದಾರೆ. 5 ಹೀರೋಗಳಿಂದ ಇಂಡಸ್ಟ್ರಿ ಬೆಳೆಯೋದಿಲ್ಲ ಕನ್ನಡದಲ್ಲಿರೋ ಐದಾರು ಹೀರೋಗಳಿಂದ ಇಡೀ ಇಂಡಸ್ಟ್ರಿ ಬೆಳೆಯೋದಿಲ್ಲ. ಹೊಸಬರು ಬರಬೇಕು. ಹೊಸ ಪ್ರತಿಭೆಗಳ ಚಿತ್ರಗಳು ಗೆಲ್ಲಬೇಕು. ಆಗಲೇ ಇಂಡಸ್ಟ್ರಿ ಬೆಳೆಯುತ್ತದೆ. ಐದಾರು ಹೀರೋಗಳಂತೆ, ಐದಾರು ನಿರ್ಮಾಪಕರಿದ್ದರೂ ಏನೂ ಕೆಲಸ ಆಗೋದಿಲ್ಲ. ನಿರ್ಮಾಪಕರು ಜಾಸ್ತಿ ಆಗಬೇಕಿದೆ. ಹೀರೋಗಳು, ಡೈರೆಕ್ಟರ್‌ಗಳು ಹೆಚ್ಚಾಗ ಆಗಬೇಕಿದೆ. ಕನ್ನಡ ಸಿನಿಮಾ ಪ್ರೇಮಿಗಳೇ ಹೊಸಬರ ಕನ್ನಡ ಸಿನಿಮಾಗಳನ್ನ ನೋಡದೇ ಇದ್ರೆ ಹೇಗೆ? ಅವರೆಲ್ಲ ಬೇರೆ ಇಂಡಸ್ಟ್ರಿಗೆ ಹೋಗುತ್ತಾರೆ. ಅಲ್ಲಿಯೇ ಒಳ್ಳೆ ಕಥೆಗಳನ್ನ ಬರೆಯೋಕೆ ಶುರು ಮಾಡುತ್ತಾರೆ. ಹಾಗಾಗಿ ಕನ್ನಡದವ್ರು ಕನ್ನಡ ಸಿನಿಮಾಗಳನ್ನ ನೋಡ್ಬೇಕಿದೆ. ಬೆಳಸಬೇಕಿದೆ ಅಂತಲೂ ಸುದೀಪ್ ಹೇಳಿಕೊಂಡಿದ್ದಾರೆ. ಮ್ಯಾಕ್ಸ್ ಪ್ರಚಾರ ಸಂದರ್ಶನದಲ್ಲಿ ಮಾತು ಮ್ಯಾಕ್ಸ್ ಸಿನಿಮಾ ಇದೇ ತಿಂಗಳು 25 ರಂದು ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಪ್ರಚಾರವೂ ಜೋರಾಗಿಯೇ ಇದೆ. ಕನ್ನಡ ಮತ್ತು ತಮಿಳು ಭಾಷೆಯಲ್ಲಿಯೂ ಈ ಚಿತ್ರ ರಿಲೀಸ್ ಆಗುತ್ತಿದೆ. ಬಹು ಭಾಷೆಯಲ್ಲಿ ಬರ್ತಿರೋ ಈ ಚಿತ್ರದ ಪ್ರಚಾರವನ್ನ ಸುದೀಪ್ ಮಾಡುತ್ತಿದ್ದಾರೆ. ಕನ್ನಡ ಮಾಧ್ಯಮಗಳಿಗೂ ಸಂದರ್ಶನ ಕೊಟ್ಟಿದ್ದಾರೆ. ಯುಟ್ಯೂಬ್‌ ಚಾನೆಲ್‌ನ ಸಂದರ್ಶನದಲ್ಲಿಯೇ ಇಂಡಸ್ಟ್ರಿಯ ಸದ್ಯದ ಬೆಳವಣಿಗೆ ಬಗ್ಗೆ ಸುದೀಪ್ ತಮ್ಮ ಬೇಸರವನ್ನ ವ್ಯಕ್ತಪಡಿಸಿದ್ದಾರೆ. ಕನ್ನಡದ ಹೊಸಬರ ಸಿನಿಮಾಗಳನ್ನ ಕನ್ನಡಿಗರು ನೋಡಿ ಗೆಲ್ಲಿಸಬೇಕಿದೆ ಅಂತೂ ಒತ್ತಿ ಹೇಳಿದ್ದಾರೆ ಅಂತಲೇ ಹೇಳಬಹುದು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.