NEWS

Excise Scam: ಆರ್‌ಬಿ ತಿಮ್ಮಾಪುರ್ ಬ್ರಹ್ಮಾಂಡ ಭ್ರಷ್ಟಾಚಾರದ ಪಿತಾಮಹ! ಮದ್ಯ ಮಾರಾಟ ಸಂಘದ ಅಧ್ಯಕ್ಷರ ಗಂಭೀರ ಆರೋಪ

ಸಚಿವ ಆರ್‌ಬಿ ತಿಮ್ಮಾಪುರ ಮೈಸೂರು: ವಾಲ್ಮೀಕಿ ನಿಗಮ (Vvalmiki Nigama Scam) ಹಾಗೂ ಮುಡಾ ಹಗರಣ (Muda Scam) ಬೆನ್ನಲ್ಲೆ ಇದೀಗ ರಾಜ್ಯ ಸರ್ಕಾರದ (State Government) ವಿರುದ್ಧ ಮತ್ತೊಂದು ಗಂಭೀರ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಅಬಕಾರಿ ಇಲಾಖೆಯಲ್ಲಿ (Excise Department) ಭ್ರಷ್ಟಾಚಾರವಿದೆ. ಅಬಕಾರಿ ಸಚಿವರೇ ಕೋಟಿ ಕೋಟಿ ಹಣ ಲಂಚ ಕೇಳ್ತಾರೆ. ಈ ಬಗ್ಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ನಮ್ಮ ಮುಂದೆ ಹೇಳಿದ್ದಾರೆ ಎಂದು ಮದ್ಯ ಮಾರಾಟಗಾರ ಸಂಘದ ಉಪಾಧ್ಯಕ್ಷ ಕರುಣಾಕರ ಹೆಗಡೆ ಆರೋಪಿಸಿದ್ದಾರೆ. ಈ ಕುರಿತು ಮದ್ಯ ಮಾರಾಟ ಸಂಘದ ರಾಜ್ಯಾಧ್ಯಕ್ಷ ಗುರುಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ನೂರಾರು ಕೋಟಿ ಅವ್ಯವಹಾರ ನ್ಯೂಸ್18 ಕನ್ನಡದ ಜೊತೆಗೆ ಮೈಸೂರಿನಲ್ಲಿ ಮಾತನಾಡಿದ ರಾಜ್ಯ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಗುರುಸ್ವಾಮಿ, ಅಬಕಾರಿ ಇಲಾಖೆಯಲ್ಲಿ ಕೇವಲ 18-20 ಕೋಟಿ ಅವ್ಯವಹಾರ ನಡೆದಿಲ್ಲ. ಇಲ್ಲಿ ನೂರಾರು ಕೋಟಿ ರೂಪಾಯಿ ಮೌಲ್ಯದ ಅವ್ಯವಹಾರ ನಡೆದಿದೆ. ಅಬಕಾರಿ ಇಲಾಖೆ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಇದಕ್ಕೆಲ್ಲ ಸಚಿವ ಆರ್‌ಬಿ ತಿಮ್ಮಾಪೂರ್ ಅವರೇ ನೇರ ಕಾರಣ ಎಂದು ಕರ್ನಾಟಕ ರಾಜ್ಯ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಗುರುಸ್ವಾಮಿ ಸಚಿವ ತಿಮ್ಮಾಪೂರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಒಂದು ಲೈಸನ್ಸ್‌ ಪಡೆಯಲು 30-90 ಲಕ್ಷ ಲಂಚ! ಒಂದು ಲೈಸನ್ಸ್ ಪಡೆಯಬೇಕದರೆ 30 ಲಕ್ಷದಿಂದ 90 ಲಕ್ಷದವರೆಗೆ ಲಂಚ ಕೊಡಬೇಕು. ಅಬಕಾರಿ ಸಚಿವರಿಗೆ ಇದರಲ್ಲಿ ಪಾಲು ಹೋಗುತ್ತದೆ, ಜೊತೆಗೆ ಸಚಿವರ ವರ್ಗವೇ ಬೇರೆಯಾಗಿದೆ. ಇಲಾಖೆ ಆಯುಕ್ತರು ಸೇರಿದಂತೆ ಅಧಿಕಾರಿಗಳೇ ಈ ವಿಚಾರ ಹೇಳುತ್ತಾರೆ. ಸಚಿವರಿಗೆ ಲಂಚ ಕೊಟ್ಟು ಬಂದಿದ್ದೇವೆ ಅಂತ ಅವರೇ ನೇರವಾಗಿ ಹೇಳುತ್ತಿದ್ದಾರೆ ಎಂದರು. ಸಚಿವರಿಗೆ, ಆಯುಕ್ತರಿಗೆ, ಸೂಪರಿಂಟೆಂಡೆಂಟ್, ಸ್ಕ್ವಾಡ್, ಸಿಬ್ಬಂದಿಗೆ ಇಂತಿಷ್ಟು ಅಂತ ಅವರೇ ಫಿಕ್ಸ್ ಮಾಡಿಕೊಂಡಿದ್ದಾರೆ. ಇದೆಲ್ಲದರ ಪರಿಣಾಮ ಲೈಸೆನ್ಸ್‌ದಾರನಿಗೆ ತೊಂದರೆ ಎದುರಾಗಿದೆ ಎಂದರು. ಸಿಎಂ ಗಮನಕ್ಕೆ ಈ ವಿಚಾರ ಬಂದಿಲ್ಲ ಇಷ್ಟೆಲ್ಲಾ ನಡೆದರೂ ಸಿಎಂ ಸಿದ್ದರಾಮಯ್ಯನವರ ಗಮನಕ್ಕೆ ಬಂದಿಲ್ವ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಬಹುಶಃ ಈ ವಿಚಾರ ಸಿಎಂ ಸಿದ್ದರಾಮಯ್ಯನವರ ಗಮನಕ್ಕೆ ಬಂದಿರಲು ಸಾಧ್ಯವಿಲ್ಲ. ಮಂತ್ರಿಗಳು ನಮ್ಮನ್ನು ಸಿಎಂ ಭೇಟಿಗೆ ಕರೆದುಕೊಂಡು ಹೋಗಿಲ್ಲ. ಒಂದುವೇಳೆ ಸಿಎಂ ಹತ್ರ ನಮ್ಮನ್ನು ಕರೆದುಕೊಂಡು ಹೋದ್ರೆ ಅವರ ಬಂಡವಾಳ ಬಯಲಾಗುತ್ತೆ ಎಂದು ಸಿಎಂ ಹತ್ರ ನಮ್ಮನ್ನು ಕರೆದುಕೊಂಡು ಹೋಗಿಲ್ಲ. ಹಾಗಾಗಿ ಈ ವಿಚಾರ ಸಿಎಂ ಸಿದ್ದರಾಮಯ್ಯ ಅವರಿಗೆ ತಿಳಿದಿಲ್ಲ ಎಂದರು. ಇದನ್ನೂ ಓದಿ: Siddaramaiah-Muda Scam: 14 ಸೈಟ್ ಗಾಗಿ ರಾಜಕಾರಣ ಮಾಡಬೇಕಾ? ನಾನೇನೂ ತಪ್ಪು ಮಾಡಿಲ್ಲ ಎಂದ ಸಿದ್ದರಾಮಯ್ಯ ಸಚಿವರ ಪಿಎ, ಪಿಎಸ್‌ಗಳು ಭಾಗಿ ಕೆಲವು ಪ್ರಕರಣಗಳಲ್ಲಿ ಅವರು ಅಧಿಕಾರಿಗಳ ವರ್ಗಾವಣೆ ತಪ್ಪಿಸಿದ್ದಾರೆ. ಅಬಕಾರಿ ಹಗರಣದಲ್ಲಿ ಸಚಿವರ ಪಿಎ, ಪಿಎಸ್‌ಗಳೂ ಇದ್ದಾರೆ. ಎಲ್ಲರೂ ಒಂದೇ ಕಡೆ ಸೇರಿಕೊಂಡು ಇದನ್ನು ನಡೆಸುತ್ತಿದ್ದಾರೆ, ಇಲಾಖೆ ಭ್ರಷ್ಟಾಚಾರದ ಬಗ್ಗೆ ಅಜಿತ್ ಎಂಬುವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಅವರು ದೂರು ನೀಡಿದ್ದಾರೆ ಎಂದರೆ ಎಷ್ಟರ ಮಟ್ಟಿಗೆ ನೋವಾಗಿರಬಹುದು ಹೇಳಿ, ಅಬಕಾರಿ ಇಲಾಖೆಯ ಭ್ರಷ್ಟಾಚಾರದ ಮೂಲ ಪುರುಷ ಸಚಿವರೇ ಎಂದು ಆರೋಪಿಸಿದರು. ಅಧಿಕಾರಿಗಳು ನೇರವಾಗಿ ಲಂಚ ಪಡೆಯುತ್ತಿದ್ದಾರೆ ಅವರು ಲಂಚ ಪಡೆದ ಪರಿಣಾಮ ಅಧಿಕಾರಿಗಳು ನೇರವಾಗಿ ಅವರ ಹೆಸರು ಹೇಳಿಕೊಂಡು ಲಂಚ ಪಡೆಯುತ್ತಿದ್ದಾರೆ. ಇದನ್ನು ಪ್ರಶ್ನೆ ಮಾಡಿದ್ರೆ ಲೈಸೆನ್ಸ್ ವಿಚಾರದಲ್ಲಿ, ಸ್ಟಾಕ್ ವಿಚಾತರದಲ್ಲಿ ತೊಂದರೆ ನೀಡುತ್ತಾರೆ ಸಿಎಂ ಸಿದ್ದರಾಮಯ್ಯ ಗಮನಕ್ಕೆ ಈ ವಿಷಯ ಬಂದಿರಲ್ಲ ಅನ್ನಿಸುತ್ತೆ, ನಾವು ಕೂಡ ಅವರನ್ನು ಸಂಪರ್ಕ ಮಾಡಲು ಪ್ರಯತ್ನ ಮಾಡಿದ್ದೇವೆ. ಅಬಕಾರಿ ಭ್ರಷ್ಟಾಚಾರ ಕುರಿತು ಸಿಎಂ ಸಿದ್ದರಾಮಯ್ಯ ಅವರಿಗೂ ದೂರು ಕೊಡ್ತೀವಿ. ರಾಜ್ಯಪಾಲರು, ಸಿಬಿಐಗೂ ಕೂಡ ದೂರು ಕೊಡ್ತೀವಿ. ಇದೇ ತಿಂಗಳ 20ನೆ ತಾರೀಖು ಬಂದ್ ಗೆ ಕರೆ ಕೊಟ್ಟಿದ್ದೇವೆ ಎಂದು ಅವರು ಹೇಳಿದರು. (ವರದಿ: ಆನಂದ, ನ್ಯೂಸ್18 ಕನ್ನಡ, ಮೈಸೂರು) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.