ಸಿಟಿ ರವಿ ಚಳಿಗಾಲದ ಅಧಿವೇಶನದ (Winter Session) ಕೊನೆಯ ದಿನವಾದ ನಿನ್ನೆ ಪರಿಷತ್‌ನಲ್ಲಿ ಅಂಬೇಡ್ಕರ್ (Ambedkar) ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದ ಹೇಳಿಕೆಯ ಚರ್ಚೆಯ ಸಂದರ್ಭದಲ್ಲಿ ಗದ್ದಲ ಉಂಟಾಗಿದೆ. ಬೆಜೆಪಿ ಪರಿಷತ್ ಸದಸ್ಯ ಸಿ ಟಿ ರವಿ (CT Ravi) ತಮ್ಮ ವಿರುದ್ಧ ಅವಾಚ್ಯ ಶಬ್ಧಗಳಿಂದ (Unparliamentary) ನಿಂದಿಸಿದ್ದಾರೆ ಎಂದು ಆರೋಪಿಸಿ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಸಚಿವೆ ಹೆಬ್ಬಾಳಕರ್ ಅವರು ದೂರು ದಾಖಲಿಸಿದ್ದರು. ಈ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಿಟಿ ರವಿ ಅವರು ನಿಮ್ಮ ಸರ್ವಾಧಿಕಾರಿ ಧೋರಣೆ ಕೊನೆಗೊಳ್ಳಲೇಬೇಕು, ಇದು ಎಷ್ಟು ದಿನ ನಡೆಯುತ್ತೆ ಎಂದು ಆಕ್ರೋಶ ಹೊರಹಾಕಿದರು. ಸರ್ವಾಧಿಕಾರ ಧೋರಣೆ ಕೊನೆಗೊಳ್ಳಲೇಬೇಕು ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಸಿಟಿ ರವಿ ಅವರು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಸರ್ಕಾರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ಅತ್ತೆಗೂ ಒಂದು ಕಾಲ, ಸೊಸೆಗೂ ಒಂದು ಕಾಲ, ಸರ್ವಾಧಿಕಾರ ಧೋರಣೆ ಕೊನೆಯಾಗಲಿದೆ, ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ. ನಮಗೂ ಕಾಲ ಬರುತ್ತೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: CT Ravi: ಸಿಟಿ ರವಿ ಕೇಸ್ ಬೆಳಗಾವಿಯಿಂದ ಬೆಂಗಳೂರಿಗೆ ಶಿಫ್ಟ್! ವಿಚಾರಣೆ ಆರಂಭ; ಜೈಲಾ? ಬೇಲಾ? ಇಂದೇ ನಿರ್ಧಾರ ಸತ್ಯಮೇವ ಜಯತೆ ಕೋರ್ಟ್ ಮೇಲೆ, ನ್ಯಾಯಾಂಗ ವ್ಯವಸ್ಥೆ ಮೇಲೆ ನಮಗೆ ನಂಬಿಕೆ ಇದೆ, ಸತ್ಯಮೇವ ಜಯತೆ ಎಂದು ಕಿಡಿಕಾರಿದರು. ಜೊತೆಗೆ ನಿಂತಿರುವ ಬಿಜೆಪಿ ನಾಯಕರಿಗೆ ಧನ್ಯವಾದಗಳು ಇನ್ನೂ ಈ ಕುರಿತು ಎಕ್ಸ್ ಮೂಲಕ ಪ್ರತಿಕ್ರಿಯೆ ನೀಡಿರುವ ಅವರು, ಇಂದು ನನ್ನ ಮೇಲೆ ದಾಖಲಾದ ಸುಳ್ಳು ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ ನನ್ನ ಜೊತೆಗಿದ್ದು ಧೈರ್ಯ ತುಂಬಿದ ನನ್ನ ನೆಚ್ಚಿನ ಬೆಜೆಪಿ ಕಾರ್ಯಕರ್ತ ಬಂಧುಗಳಿಗೆ, ಜೊತೆಗೆ ನಿಂತ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರಿಗೆ ಹಾಗೂ ಎಲ್ಲಾ ರಾಷ್ಟೀಯ ನಾಯಕರು, ವಿರೋಧ ಪಕ್ಷದ ನಾಯಕರಾದ ಆರ್ ಅಶೋಕೆ ಅವರಿಗೆ ಧನ್ಯವಾದಗಳು. ಶಾಸಕರು ವಿಧಾನ ಪರಿಷತ್, ವಿಧಾನಸಭೆ ಶಾಸಕರು, ಸಂಸದರು, ಮಾಜಿ ಸಚಿವರು, ಹಿರಿಯ ನಾಯಕರು, ಸ್ನೇಹಿತರು, ಮಾಧ್ಯಮದ ಮಿತ್ರರಿಗೆ ಧನ್ಯವಾದಗಳು ಎಂದರು. ಕರ್ನಾಟಕವನ್ನು “ಗೂಂಡಾ ರಿಪಬ್ಲಿಕ್” ಮಾಡಲು ಅವಕಾಶ ಕೊಡುವುದಿಲ್ಲ ರಾಜ್ಯಾದ್ಯಂತ ತುಘಲಕ್ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ ನನ್ನ ಕಾರ್ಯಕರ್ತ ಬಂಧುಗಳೆ, ನಿಮ್ಮೆಲ್ಲರ ಬೆಂಬಲ ನನ್ನ ಶಕ್ತಿಯನ್ನು ಮತ್ತಷ್ಟು ಇಮ್ಮುಡಿಗೊಳಿಸಿದೆ, ದುಷ್ಟ ಶಕ್ತಿಗಳ ವಿರುದ್ಧ ಇನ್ನೂ ಹೆಚ್ಚಾಗಿ ಹೋರಾಡಲು ಶಕ್ತಿ ತುಂಬಿದೆ. ಭಾರತೀಯ ಜನತಾ ಪಾರ್ಟಿಯ ನಾವೆಲ್ಲರೂ ಒಂದಾಗಿ ಕರ್ನಾಟಕವನ್ನು “ಗೂಂಡಾ ರಿಪಬ್ಲಿಕ್” ಮಾಡಲು ಅವಕಾಶ ಕೊಡುವುದಿಲ್ಲ ಎಂದು ಎಕ್ಸ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. None
Popular Tags:
Share This Post:
Chaithra Kundapur: ಚೈತ್ರಾ ಕಣ್ಣೀರಿಗೆ ದೊಡ್ಮನೆ ದೇವರು ಸ್ಪಂದಿಸಿದ್ರಾ? ಬಲಗಡೆಯಿಂದ ಹೂ ಬಿದ್ದೇ ಬಿಡ್ತು
December 24, 2024What’s New
Spotlight
Today’s Hot
CT Ravi Release: ಸಿ.ಟಿ. ರವಿ ರಿಲೀಸ್! ಹೈಕೋರ್ಟ್ ಆದೇಶದ ಬಳಿಕ ಬಿಡುಗಡೆ ಮಾಡಿದ ಪೊಲೀಸರು
- By Sarkai Info
- December 20, 2024
Featured News
Latest From This Week
Subscribe To Our Newsletter
No spam, notifications only about new products, updates.