NEWS

Accident: ಶಾಸಕ ದಿನಕರ ಶೆಟ್ಟಿ ಕಾರು ಅಪಘಾತ! ಬೈಕ್‌ ಸವಾರನಿಗೆ ಗಂಭೀರ ಗಾಯ!

ಅಪಘಾತ ನಡೆದ ಸ್ಥಳ ಕಾರವಾರ: ಬಿಜೆಪಿ (BJP) ಶಾಸಕ ದಿನಕರ ಶೆಟ್ಟಿ (Dinakar Shetty) ಕಾರು ಮತ್ತು ಬೈಕ್ ನಡುವೆ ಅಪಘಾತ (Accident) ಸಂಭವಿಸಿದೆ. ಹೊನ್ನಾವರ (Honnavara) ತಾಲೂಕಿನ ಕರ್ಕಿ ಸಮೀಪ ರಾಷ್ಟ್ರೀಯ ಹೆದ್ದಾರಿ ‌66ರಲ್ಲಿ ಈ ಘಟನೆ ಸಂಭವಿಸಿದೆ. ಈ ರಸ್ತೆ ಅಪಘಾತದಲ್ಲಿ ಬೈಕ್‌ ಸವಾರನಿಗೆ ಗಂಭೀರ ಗಾಯವಾಗಿದೆ. ಶಾಸಕರ ಕಾರು ಅಪಘಾತ ಕುಮಟಾ ಕ್ಷೇತ್ರದ ಬಿಜೆಪಿ ಶಾಸಕ ದಿನಕರ ಶೆಟ್ಟಿ ಅವರು ಹೊನ್ನಾವರದಿಂದ ಕುಮಟಾಕ್ಕೆ ಬರುತ್ತಿದ್ದ ವೇಳೆ ಅಪಘಾತ ನಡೆದಿದೆ. ಹೊನ್ನಾವರದಲ್ಲಿ ಖಾಸಗಿ ಕಾರ್ಯಕ್ರಮ ಮುಗಿಸಿ ವಾಪಸ್ ಕುಮಟಾದ ತಮ್ಮ ‌ನಿವಾಸಕ್ಕೆ ಬರುತ್ತಿದ್ದ ವೇಳೆ ಈ ದುರ್ಘಟನೆ ಆಗಿದೆ. ಅಪಘಾತದಲ್ಲಿ ಬೈಕ್ ಸವಾರ ನಾಗಪ್ಪ ಗೌಡ ಎಂಬಾತನಿಗೆ ಗಂಭೀರ ಗಾಯವಾಗಿದೆ. ಗಾಯಾಳು ನಾಗಪ್ಪ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿಗಳಿದ್ದ ಬಸ್‌ ಪಲ್ಟಿ! ಜೋಯಿಡಾ ತಾಲೂಕಿನ ಗಣೇಶಗುಡಿ ಹತ್ತಿರ ಖಾಸಗಿ ಬಸ್ ಪಲ್ಟಿ ಆಗಿದೆ. ಈ ದುರ್ಘಟನೆಯಲ್ಲಿ 40ಕ್ಕೂಹೆಚ್ಚು ವಿಧ್ಯಾರ್ಥಿಗಳಿಗೆ ಗಾಯವಾಗಿದೆ. ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆ ಬಂದ ವೇಳೆ ಈ ಅಪಘಾತ ಸಂಭವಿಸಿದೆ. ಇವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗಾ ಸೇಂಟ್ ಅಂತೋನಿ ಪ್ರೌಢ ಶಾಲೆಯ ವಿಧ್ಯಾರ್ಥಿಗಳಾಗಿದ್ದು, ಶಾಲಾ ಶಿಕ್ಷಕ ಸಿಬ್ಬಂದಿ ಜೊತೆ ಶೈಕ್ಷಣಿಕ ಪ್ರವಾಸಕ್ಕೆಂದು ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಇನ್ನು ಈ ಬಸ್ಸಿನಲ್ಲಿ ಸುಮಾರು 60ವಿಧ್ಯಾರ್ಥಿಗಳು ಇದ್ದರು. ಇನ್ನ ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಜೋಯಿಡಾ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: kidney Disease: ನೀವು ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಅಪ್ಪಿತಪ್ಪಿಯೂ ಈ ಆಹಾರಗಳನ್ನು ಮುಟ್ಟಲೇಬೇಡಿ! ಕೆರೆಗೆ ಲಾರಿ ಪಲ್ಟಿ ದೇವನಹಳ್ಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಕೆರೆಗೆ ಉರುಳಿದೆ. ಅದೃಷ್ಟವಶಾತ್ ಚಾಲಕ ಮತ್ತು ಕ್ಲೀನರ್ ಜೀವಾಪಾಯದಿಂದ ಪಾರಾಗಿದ್ದಾರೆ. ದೇವನಹಳ್ಳಿ ತಾಲೂಕಿನ ಗುಡುವನಹಳ್ಳಿ ಕೆರೆ ಏರಿ ಮೇಲೆ ಈ ಘಟನೆ ಸಂಭವಿಸಿದೆ. ವಿಜಯಪುರದಿಂದ ದೇವನಹಳ್ಳಿ ಕಡೆ ಬರ್ತಿದ್ದ ಲಾರಿ, ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಪಲ್ಟಿಯಾಗಿದೆ. ಕೆರೆಗೆ ಲಾರಿ ಪಲ್ಟಿಯಾಗ್ತಿದ್ದಂತೆ ಸ್ಥಳೀಯರು ಲಾರಿಯಲ್ಲಿದ್ದವರ ರಕ್ಷಣೆಗೆ ದಾವಿಸಿದ್ದಾರೆ. ಈ ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಚಾಲಕ ಮತ್ತು ಕ್ಲೀನರ್ ಪಾರಾಗಿದ್ದಾರೆ. ಇನ್ನು ಕೆರೆಗೆ ಬಿದ್ದ ಲಾರಿ ನೋಡಲು ಜನ ಸೇರಿದ್ದು, ಇದರಿಂದ ಕೆಲಕಾಲ ಕೆರೆ ಏರಿ ಮೇಲೆ ಟ್ರಾಫಿಕ್ ಜಾಮ್ ಆಗಿದೆ. ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಗ್ಯಾಸ್‌ ಸಿಲೆಂಡರ್‌ ಸ್ಪೋಟ! ಮಂಗಳೂರು: ದ.ಕ ಜಿಲ್ಲೆಯ ಉಳ್ಳಾಲ ತಾಲೂಕಿನ ಮಂಜನಾಡಿಯ ಖಂಡಿಕ ಎಂಬಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಈ ಅವಗಢದಿಂದ ಮನೆಯಲ್ಲಿದ್ದ ತಾಯಿ ಹಾಗೂ ಮೂವರು ಮಕ್ಕಳಿಗೆ ಗಾಯವಾಗಿದೆ. ಇನ್ನು ಗಾಯಾಳುಗಳಿಗೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಖಂಡಿಕ ನಿವಾಸಿ ಮುತ್ತಲಿಬ್ ಎಂಬವರ ಮನೆಯಲ್ಲಿ ಘಟನೆ ಸಂಭವಿಸಿದೆ. ತಾಯಿ ಮತ್ತು ಮೂವರು ಮಕ್ಕಳು ಒಂದೇ ಕೊಠಡಿಯಲ್ಲಿ ಮಲಗಿದ್ದರು. ಮಧ್ಯರಾತ್ರಿ ವೇಳೆ ಮನೆಯಲ್ಲಿ ದೊಡ್ಡ ಸದ್ದು ಕೇಳಿಸಿದೆ. ಈ ಘಟನೆಯಲ್ಲಿ ಮನೆಯ ಮೇಲ್ಛಾವಣಿ ಸಂಪೂರ್ಣ ಹಾರಿ ಹೋಗಿದೆ. ಕಿಟಕಿ, ಮಲಗಿದ ಕೊಠಡಿ ಸಂಪೂರ್ಣ ಹಾನಿಯಾಗಿದೆ. ತಾಯಿ ಮಕ್ಕಳು ಮಲಗಿದ ಮಂಚ ಸಂಪೂರ್ಣ ಸುಟ್ಟು ಕರಕಲಾಗಿವೆ. ಸ್ಪೋಟದ ವೇಳೆ ತಾಯಿ ಜೊತೆ ಮಲಗಿದ್ದ ದೊಡ್ಡ ಮಗಳು ಬಾಗಿಲು ತೆರೆದಿದ್ದಾಳೆ. ಇನ್ನು ಗಾಯಗೊಂಡ ತಾಯಿ ಹಾಗೂ ಮೂವರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ಯಾಸ್ ಸ್ಫೋಟ ಹಿನ್ನೆಲೆ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಪುಟ್ಟರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ (ವರದಿ: ದರ್ಶನ್‌ ನಾಯ್ಕ್, ನ್ಯೂಸ್ 18 ಕನ್ನಡ, ಕಾರವಾರ) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.